ಭಾರತ ಒಕ್ಕೂಟದಲ್ಲಿ ಎಲ್ಲ ರಾಜ್ಯಗಳೂ ತಮ್ಮ ನುಡಿಗಳನ್ನು ಪೊರೆಯುವ, ಬೆಳೆಸುವ ಹೊಣೆಗಾರಿಕೆಯನ್ನು ಹೊಂದಿವೆ. ಇದಕ್ಕೆ ಅಡ್ಡ ಬರುವವರು ಭಾರತದ ನುಡಿವೈವಿಧ್ಯದ ವಿರೋಧಿಗಳು. ಒಂದೆರಡು ನುಡಿಗಳಿಗೆ ಹೊರತಾಗಿ ಎಲ್ಲ ನುಡಿಗಳೂ ನಾಶವಾಗಬೇಕೆಂದು ಬಯಸುವವರು. ಇಂಥವರ ವಿರುದ್ಧ ನಾವು ಒಗ್ಗಟ್ಟಾಗಬೇಕಿದೆ.
#ಸಂಸ್ಕೃತವಿವಿಬೇಡ#SayNoToSanskrit
ಕನ್ನಡದ ವಿರುದ್ಧ ಕೋರ್ಟಿಗೆ ಹೋದವರನ್ನು ಸರ್ಕಾರದ ಮುಖ್ಯಸ್ಥರು ಕರೆದು ಮಾತನಾಡಿ, ಸಮಸ್ಯೆ ಬಗೆಹರಿಸಬಹುದಿತ್ತು. ಕೋರ್ಟಿಗೆ ಹೋದವರೆಲ್ಲ ಸರ್ಕಾರ ನಡೆಸುತ್ತಿರುವ ಪಕ್ಷದ ಜತೆ ಕರುಳುಬಳ್ಳಿ ನಂಟು ಹೊಂದಿದವರು. ಹೀಗಾಗಿ ಸರ್ಕಾರವೇ ಈ ಪಿತೂರಿಯ ಭಾಗವಾಗಿದೆ ಎಂಬ ಅನುಮಾನ ನಮ್ಮದು.
#ಸಂಸ್ಕೃತವಿವಿಬೇಡ#SayNoToSanskrit
ಸರ್ಕಾರಿ ದುಡ್ಡಲ್ಲಿ ಸಂಸ್ಕೃತ ವಿಶ್ವವಿದ್ಯಾಲಯದ ಅವಶ್ಯಕತೆಯೇನಿದೆ?
ಈಗಿರುವ ಕನ್ನಡ ಶಾಲೆ ಕಾಲೇಜುಗಳಿಗೆ ಕರ್ನಾಟಕದ ನೆಲದ ಭಾಷೆಗಳೇ ಆದ ತುಳು ಕೊಡವದಂತಹ ಭ���ಷೆಗಳಿಗೆ ಪ್ರೋತ್ಸಾಹ ನೀಡದೆ ಸತ್ತಿರುವ ಸಂಸ್ಕೃತದ ವಿವಿ ಮಾಡಿ ಎನು ಸಾಧಿಸಬೇಕೋ?
ಇದರ ಪರ ನಿಂತಿರುವ ಸ್ಥಳೀಯ ಶಾಸಕರು ಕೂಡ ತಮ್ಮ ನಿರ್ಧಾರ ಬದಲಾಯಿಸಲಿ🙏
#ಸಂಸ್ಕೃತವಿವಿಬೇಡ
ಸಂಸ್ಕೃತ ಅಧ್ಯಾಪಕರುಗಳಿಗೆ ಕನ್ನಡ ನುಡಿಯ ಮೇಲೆ ಯಾಕಿಷ್ಟು ದ್ವೇಷ? ಯಾಕೆ ಇವರು ಕನ್ನಡ ನುಡಿಯನ್ನು ಕನ್ನಡದ ಮಕ್ಕಳಿಗೆ ಕಲಿಸಬಾರದು ಎಂದು ಹಠ ಹಿಡಿದಿದ್ದಾರೆ? ಇದು ದೊಡ್ಡ ಸಂಚಿನ ಭಾಗ. ಕನ್ನಡದ ಜಾಗದಲ್ಲಿ ಸಂಸ್ಕೃತವನ್ನು ತಂದು ತುರುಕುವ ಪಿತೂರಿ. ಕನ್ನಡಿಗರು ಈಗ ಎದ್ದುನಿಲ್ಲಲೇಬೇಕಾದ ಕಾಲ.
#ಸಂಸ್ಕೃತವಿವಿಬೇಡ#SayNoToSanskrit
ಜಗತ್ತಿನ ಒಂದೇ ಕನ್ನಡ ವಿವಿಯಾಗಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ ಕೊಡಲು ಸರ್ಕಾರದ ಬಳಿ ಹಣವಿಲ್ಲ. ಸಿಬ್ಬಂದಿಗೆ ಸಂಬಳ ಕೊಡಲೂ ಹಣವಿಲ್ಲ. ಕರವೇ ದೊಡ್ಡ ಅಭಿಯಾನ ನಡೆಸಿ, ಅನುದ��ನ ಕೊಡುವಂತೆ ಒತ್ತಾಯಿಸಿದ ಮೇಲೆ ಒಂದಷ್ಟು ದುಡ್ಡು ಕೊಡಲಾಯಿತು. ಇದು ಸರ್ಕಾರಕ್ಕೆ ಕನ್ನಡದ ಮೇಲಿರುವ ಕಾಳಜಿ!
#ಸಂಸ್ಕೃತವಿವಿಬೇಡ #SayNoToSanskrit
ಕನ್ನಡದ ಶತ್ರುಗಳೆಲ್ಲ ನಮ್ಮ ಶತ್ರುಗಳು. ಕನ್ನಡವನ್ನು ಕತ್ತುಹಿಸುಕುವ ಶಕ್ತಿಗಳನ್ನು ನಾವು ಸಹಿಸುವುದಿಲ್ಲ. ಇಂಥವರಿಗೆ ಕಳೆದ ಇಪ್ಪತ್ತಮೂರು ವರ್ಷಗಳಲ್ಲಿ ಹಲವು ರೀತಿಯಲ್ಲಿ ಪಾಠ ಕಲಿಸಿದ್ದೇವೆ. ಕನ್ನಡ ನಾಡಿನಲ್ಲಿದ್ದುಕೊಂಡು ಕನ್ನಡಕ್ಕೆ ದ್ರೋಹ ಎಸಗುವವರು ಮೈಮೇಲೆ ಪ್ರಜ್ಞೆ ಇಟ್ಟುಕೊಂಡಿರಲಿ. (7/8) #ಸಂಸ್ಕೃತವಿವಿಬೇಡ#SayNoToSanskrit
ಇಡೀ ಜಗತ್ತಲ್ಲಿ ಸಂಸ್ಕೃತ ಮಾತೃಭಾಷೆ ಉಳ್ಳವರ ಸಂಖ್ಯೆ ಅಧಿಕೃತವಾಗಿ 24,000 ಮಾತ್ರ. ಇಂಡಿಯಾದಲ್ಲಿ ಒಟ್ಟು ಹದಿನಾರು ಸಂಸ್ಕೃತ ವಿಶ್ವವಿದ್ಯಾಲಯಗಳು! ಯಾರಿಗಾಗಿ? ಯಾಕಾಗಿ? ಸಂಸ್ಕೃತ ವಿವಿಗಳಲ್ಲಿ ಶೇ.50ರಷ್ಟು ಕೂಡ ದಾಖಲಾತಿ ಆಗುತ್ತಿಲ್ಲ. ಆದರೂ ಕರ್ನಾಟಕದಲ್ಲಿ ಇನ್ನೊಂದು ಸಂಸ್ಕೃತ ವಿವಿ. ಅದಕ್ಕೆ ನೂರು ಎಕರೆ ಜಮೀನು,
#ಸಂಸ್ಕೃತವಿವಿಬೇಡ
ಕನ್ನಡಿಗರೆಲ್ಲರ ಅಧಿಕೃತ ಬೆಂಬಲದ ಠಸ್ಸೆ ಬಿದ್ದಿರುವ ಕನ್ನಡ ಬಾವುಟ ನಮ್ಮ ಘನತೆ, ಗೌರವ ಮತ್ತು ಅಸ್ಮಿತೆಯ ಸಂಕೇತ.
ಕನ್ನಡ ಧ್ವಜಕ್ಕೆ ಮಾಡುವ ಅವಮಾನ ಕನ್ನಡಿಗರಿಗೆ ಮಾತ್ರವಲ್ಲ, ಕರ್ನಾಟಕಕ್ಕೆ ಮಾಡುವ ಅವಮಾನ.
ಕನ್ನಡ ಧ್ವಜವನ್ನು ಸುಟ್ಟು ಅವಮಾನಿಸಿದ ಕನ್ನಡ ದ್ರೋಹಿ ದುರುಳರನ್ನು ತಕ್ಷಣ ಬಂಧಿಸಿ, ಸೂಕ್ತ ಕ್ರಮಕೈಗೊಳ್ಳಿ @CMOMaharashtra .
#ಕನ್ನಡದಲ್ಲಿUPSC#UPSCInKannada
ಕರ್ನಾಟಕದ ಲ್ಲಿ ಕನ್ನಡಿಗರು ಪ್ರತಿಯೊಂದನ್ನ ಭಿಕ್ಷೆ ಬೇಡಿಯೇ ಪಡೆದು ಕೊಳ್ಳಬೇಕಾ?
ನಿಜವಾಗಿಯೂ ಕನ್ನಡಿಗರಿಗೆ ಸ್ವಾತಂತ್ರ್ಯ ಸಿಕ್ಕಿದೆಯಾ?
ಕರ್ನಾಟಕದ ಲ್ಲಿ ಕನ್ನಡಿಗನಿಗೆ ಬೆಲೆ ಇಲ್ವಾ?
��ನ್ನಡದಲ್ಲಿ ಬರೆದು IAS ಪಾಸ್ ಮಾಡಿದ್ದಾರೆಂದರೆ ಪ್ರಶ್ನೆ ಪತ್ರಿಕೆ ಕನ್ನಡದಲ್ಲಿದೆ ಎಂತಲ್ಲ! prelims ಮ��ದಲ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಬರಿ ಹಿಂದಿ ಇಂಗ್ಲಿಷ್ ಅಲ್ಲಿ ಮಾತ್ರ ಇರುತ್ತೆ ಕನ್ನಡದಲ್ಲಿ ಅಲ್ಲ.
#UPSCInKannada #ಕನ್ನಡದಲ್ಲಿUPSC #ಕರವೇ
ಬ್ರಿಟಿಷರ ಕಾಲದ ಸಾಮ್ರಾಜ್ಯಶಾಹಿ ನೀತಿಗಳನ್ನೇ ಭಾರತ ಒಕ್ಕೂಟ ಸರ್ಕಾರ ಈಗಲೂ ಮುಂದುವರೆಸುತ್ತಿದೆ. ಇದರಿಂದಾಗಿ ಭಾರತದ ಹಿಂದಿಯೇತರು ಎರಡನೇ ದರ್ಜೆ ಪ್ರಜೆಗಳಂತೆ ಬದುಕುವಂತಾಗಿದೆ. ಹಿಂದೆ ನಾವು ಬ್ರಿಟಿಷರ ಗುಲಾಮರಾಗಿದ್ದೆವು. ಈಗ ಬ್ರಿಟಿಷರ ಜಾಗ��ಲ್ಲಿ ಹಿಂದಿ ಸಾಮ್ರಾಜ್ಯಶಾಹಿಗಳು ಕುಳಿತಿದ್ದಾರೆ.
#UPSCInKannada #ಕನ್ನಡದಲ್ಲಿUPSC
ಐಎಎಸ್, ಐಪಿಎಸ್ ಅಧಿಕಾರಿಗಳಾಗಲು ಹಿಂದಿ ಭಾಷಿಕರಿಗೆ ಎಷ್ಟು ಹಕ್ಕಿದೆಯೋ ಕನ್ನಡ, ತಮಿಳು, ತೆಲುಗು, ಬಂಗಾಳಿ, ಮಲಯಾಳಂ, ಪಂಜಾಬಿ, ಒರಿಯಾ, ಮರಾಠಿ, ಕಾಶ್ಮೀರಿ, ಅಸ್ಸಾಮಿ ಇತ್ಯಾದಿ ಭಾಷಿಕರಿಗೂ ಅಷ್ಟೇ ಹಕ್ಕಿದೆ. ಹೀಗಿರುವಾಗ ಹಿಂದಿಯನ್ನರಿಗೆ ಮಾತ್ರ ಅವರ ನುಡಿಯಲ್ಲಿ ಪರೀಕ್ಷೆ ಬರೆಸುವ ಮೋಸ ಯಾಕೆ?
#UPSCInKannada#ಕನ್ನಡದಲ್ಲಿUPSC
ಸಾವಿರಾರು ಮಂದಿ ಕೆಪಿಎಸ್ ಸಿ ಪರೀಕ್ಷೆಗಳನ್ನು ಕನ್ನಡದಲ್ಲೇ ಬರೆಯುತ್ತಾರೆ. ಇವರಿಗೆ ಯುಪಿಎಸ್ ಸಿ ಪರೀಕ್ಷೆ ಕನ್ನಡದಲ್ಲೇ ಬರೆಯಲು ಅವಕಾಶ ಇಲ್ಲ. ಇದರ ಅರ್ಥ ಕನ್ನಡಿಗರನ್ನು ಒಕ್ಕೂಟ ಸರ್ಕಾರ ಎರಡನೇ ದರ್ಜೆ ಪ್ರಜೆಗಳಂತೆ ನೋಡುತ್ತಿದೆ ಎಂದಾಗುವುದಿಲ್ಲವೇ? ಈ ಅನ್ಯಾಯ ಇನ್ನೆಷ್ಟು ದಿನ ಸಹಿಸುವುದು?
#UPSCInKannada#ಕನ್ನಡದಲ್ಲಿUPSC
ಸ���ಟಾಫ್ ಸೆಲೆಕ್ಷನ್ ಕಮಿಷನ್ ಮತ್ತು ಸೇನಾ ನೇಮಕಾತಿಗಳ ಎಲ್ಲ ಪರೀಕ್ಷೆಗಳಲ್ಲೂ ಕನ್ನಡಕ್ಕೆ ಸ್ಥಾನವೇ ಇಲ್ಲ. ಎಲ್ಲ ಪರೀಕ್ಷೆಗಳೂ ಹಿಂದಿ, ಇಂಗ್ಲಿಷ್ ಗಳಲ್ಲೇ ನಡೆಯುತ್ತವೆ. ಇದರ ಉದ್ದೇಶವದರೂ ಏನು? ಕನ್ನಡಿಗರಿಗೆ ಉದ್ಯೋಗ ನಿರಾಕರಣೆಯ ಹಿಂದಿನ ಕುತಂತ್ರವಾದರೂ ಯಾಕೆ?
#UPSCInKannada #ಕನ್ನಡದಲ್ಲಿUPSC
ಯುಪಿಎಸ್ ಸಿ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಅವಕಾಶವಿಲ್ಲದಂತಾಗಿರುವಾಗ ಯುಪಿಎಸ್ ಸಿ ಪರೀಕ್ಷೆಗಳೇ ಯಾಕೆ ಬೇಕು ಎಂದು ನಾವು ಕೇಳಬೇಕಾಗುತ್ತೆ. ನಮ್ಮ ರಾಜ್ಯದ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಕೆಪಿಎಸ್ ಸಿ ಮೂಲಕವೇ ನೇಮಕ ಮಾಡಬೇಕು ಎಂಬ ಹಕ್ಕೊತ್ತಾಯ ಮಂಡಿಸುವ ಕಾಲ ಬಂದಿದೆ.
#UPSCInKannada#ಕನ್ನಡದಲ್ಲಿUPSC
ಯುಪಿಎಸ್ ಸಿ ಮಾತ್ರವಲ್ಲ, ಒಕ್ಕೂಟ ಸರ್ಕಾರದ ಅಡಿಯಲ್ಲಿ ನಡೆಯುವ ಎಲ್ಲ ಉದ್ಯೋಗಗಳ ಎಲ್ಲ ಹಂತದ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸಬೇಕು. ಇದು ನಮ್ಮ ಸಂವಿಧಾನಬದ್ಧ ಹಕ್ಕು. ಇದನ್ನು ನಿರಾಕರಿಸುವ ಯಾವುದೇ ಶಕ್ತಿಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟ ಮುಂದುವರೆಸಲಿದೆ.
#UPSCInKannada#ಕನ್ನಡದಲ್ಲಿUPSC
ಯುಪಿಎಸ್ ಸಿ ಪ್ರಿಲಿಮ್ಸ್ ಪರೀಕ್ಷೆಗಳಲ್ಲಿ ಕನ್ನಡದಲ್ಲಿ ಪ್ರಶ್ನೆ ಪತ್ರಿಕೆಯ��� ಇಲ್ಲ, ಕನ್ನಡದಲ್ಲಿ ಬರೆಯುವ ಅವಕಾಶವೂ ಇಲ್ಲ. ಪ್ರಿಲಿಮ್ಸ್ ಆದರಷ್ಟೇ ಮುಖ್ಯ ಪರೀಕ್ಷೆ ಬರೆಯುವ ಅವಕಾಶ. ಅಲ್ಲೂ ಪ್ರಶ್ನೆ ಪತ್ರಿಕೆ ಕೇವಲ ಇಂಗ್ಲಿಷ್ ಹಿಂದಿಯಲ್ಲಿರುತ್ತದೆ. ಕನ್ನಡಿಗರ ಹಕ್ಕುಗಳನ್ನು ಮೊಟಕುಗೊಳಿಸಿದಂತಲ್ಲವೇ?
#UPSCInKannada #ಕನ್ನಡದಲ್ಲಿUPSC