#BBK10 ವಿನ್ನರ್ ಕಾರ್ತಿಕ್ ಮಹೇಶ್!
ಜಿದ್ದಾಜಿದ್ದು, ಜೋರು ಸದ್ದು:
ಕಟ್ಟುಮಸ್ತು ಮೈಕಟ್ಟು, ಪುಟ್ಟ ಮಗುವಿನಂಥ ಮನಸ್ಸು, ಮಗುವಿನ ಹಟ, ಜಿದ್ದು, ಕಿರುಚಾಟ, ಯಾರನ್ನಾದರೂ ಥಟ್ಟನೆ ಹಚ್ಚಿಕೊಳ್ಳುವ, ಹಚ್ಚಿಕೊಂಡವರಿಂದ ಬಿಡಿಸಿಕೊಳ್ಳಲಾಗದೆ ಒದ್ದಾಡುವ ಅಪ್ಪಟ ಭಾವುಕತೆ… ಇದು ಬಿಗ್ಬಾಸ್ 10ನೇ ಸೀಸನ್ನ ಟಾಪ್ 6 ಸ್ಪರ್ಧಿಗಳಲ್ಲಿ ಒಬ್ಬರಾಗಿರುವ ಕಾರ್ತಿಕ್ ಮಹೇಶ್ ಅವರ ವ್ಯಕ್ತಿತ್ವದ ತುಣುಕುಚಿತ್ರಗಳು. ಹತ್ತಾರು ಧಾರವಾಹಿ, ನಾಯಕನಾಗಿ ನಟಿಸಿದ್ದ ‘ಡೊಳ್ಳು’ ಎಂಬ ಸಿನಿಮಾಗೆ ಸಿಕ್ಕ ರಾಷ್ಟ್ರಪ್ರಶಸ್ತಿಯ ಮಾನ್ಯತೆ ಜೊತೆಗಿಟ್ಟುಕೊಂಡು ಬಿಗ್ಬಾಸ್ ಗ್ರ್ಯಾಂಡ್ ಪ್ರೀಮಿಯರ್ ವೇದಿಕೆ ಏರಿದ್ದ ಕಾರ್ತಿಕ್ ಮನಸ್ಸಲ್ಲಿ, ‘ಮುಂದೇನು?’ ಎಂಬ ಪ್ರಶ್ನೆ ಎದ್ದುನಿಂತಿತ್ತು. ಪ್ರೇಕ್ಷಕರ ವೋಟಿಂಗ್ನಲ್ಲಿನಲ್ಲಿ ಪಾಸ್ ಆಗದೆ ‘ಹೋಲ್ಡ್’ ಸೀಟ್ನಲ್ಲಿ ಕೂತಾಗಲೂ ಅವರ ಮನಸ್ಸಲ್ಲಿ ಇದ್ದಿದ್ದು ಒಂದೇ ಪ್ರಶ್ನೆ, ‘ಮುಂದೇನು?’. ನಂತರ ‘ಅಸಮರ್ಥ’ರ ಪಟ್ಟ ಹೊತ್ತು ಮನೆಯೊಳಗೆ ಹೊಕ್ಕ ಕ್ಷಣದಿಂದ ಪ್ರತಿದಿನವೂ ಅವರು ‘ಮುಂದೇನು ಎಂಬ ಪ್ರಶ್ನೆಯನ್ನು ಎದುರಿಸುತ್ತಲೇ ಬಂದಿದ್ದಾರೆ.
ಆ ಪ್ರಶ್ನೆಗೆ ಉತ್ತರ ಹುಡುಕುತ್ತಲೇ ತಮ್ಮ ಜಿದ್ದಿನ ಆಟ, ಸ್ನೇಹದ ನಡತೆ, ಆಟ ಎಂದು ಬಂದರೆ ಸ್ನೇಹಿತರನ್ನೂ ಎದುರುಹಾಕಿಕೊಳ್ಳುವ ನಿಷ್ಪಕ್ಷಪಾತಗುಣದಿಂದ ಅವರು ಗಮನಸೆಳೆದಿದ್ದಾರೆ. ಒಂದು ಹಂತದಲ್ಲಿಯಂತೂ ಬಿಗ್ಬಾಸ್ ಮನೆ ಎಂದರೆ ವಿನಯ್ ವರ್ಸಸ್ ಕಾರ್ತಿಕ್ ಎಂಬ ಮಟ್ಟಿಗೆ ಹೋಗಿದ್ದು ಅವರ ಸಾಮರ್ಥ್ಯಕ್ಕೆ ಸಾಕ್ಷಿ. ಏರಿಳಿತ, ಮನರಂಜನೆ, ನೋವು, ದುಃಖ ಎಲ್ಲ ಭಾವಗಳೂ ತುಂಬಿರುವ ಕಾರ್ತಿಕ್ ಮಹೇಶ್
ಇಂಥ ಹತ್ತುಹಲವು ಸನ್ನಿವೇಶಗಳು ಕಾರ್ತಿಕ್ ಅವರ ಬಿಗ್ಬಾಸ್ ಜರ್ನಿಯಲ್ಲಿ ಇಡಿಕಿರಿದಿವೆ. ಎಮೋಷನಲಿ, ಫಿಜಿಕಲಿ, ಮೆಂಟಲಿ ಎಲ್ಲ ಬಗೆಯಲ್ಲಿಯೂ ಅತ್ಯಂತ ಏರಿಳಿತದ ಹಾದಿಯಲ್ಲಿರುವ ಕಾರ್ತಿಕ್ ಕೊನೆಯ ದಿನಗಳಲ್ಲಿ ಕುಗ್ಗಿದ್ದರು. ಹಿಂದಿನ ಕಾರ್ತಿಕ್ ಇವರೇನಾ ಎನ್ನುವಷ್ಟು ತಣ್ಣಗಾಗಿದ್ದರು. ಕೊನೆಯ ದಿನಗಳಲ್ಲಿ ಮತ್ತೆ ಮೇಲೆದ್ದು ಬರಲು ಶತಪ್ರಯತ್ನ ನಡೆಸಿದರಾದರೂ ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಲಿಲ್ಲ. ಆದರೆ ಬಿಗ್ಬಾಸ್ ಕನ್ನಡದ ಈ ಸೀಸನ್ ಕಾರ್ತೀಕ್ ಮಹೇಶ್ ಅವರಿಲ್ಲದೇ ಇಷ್ಟು ಎಂಟರ್ಟೈನಿಂಗ್ ಆಗಿರುತ್ತಿರಲಿಲ್ಲ ಎಂಬುದಂತೂ ಸತ್ಯ.
#BBKSeason10
@ColorsKannada@JioCinema@KicchaSudeep #BBK10onJioCinema