Happy to share that our Koti Vruksha Abhiyana-a model initiative ideated and executed in Vijayapura-has its inspiring story featured in #TheNewYorkTimes!
An incredible story of a people’s movement: 1.5 crore trees planted, raising forest cover from just 0.17% to 2%.
A true testament to political will, systemic action & the power of collective participation.
Proud that Vijayapura’s green success is inspiring the world!
My heartfelt thanks to all the stakeholders and the people of Vijayapura.
https://t.co/f29PntVljd
ಪೋಲೆಂಡ್ ಕಂಪನಿಗಳ ಹೂಡಿಕೆಗೆ ಕರ್ನಾಟಕದಲ್ಲಿ ವಿಪುಲ ಅವಕಾಶಗಳು!
ಪೋಲೆಂಡ್ ದೇಶದ ಪ್ರಧಾನಮಂತ್ರಿ ಮಾನ್ಯ ಶ್ರೀ ಡೊನಾಲ್ಡ್ ಟಸ್ಕ್ (Donald Franciszek Tusk) ಅವರು ಬೆಂಗಳೂರಿನ ವಿಧಾನಸೌಧಕ್ಕೆ ಆಗಮಿಸಿದ ಸಂದರ್ಭದಲ್ಲಿ, ಮಾನ್ಯ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರೊಂದಿಗೆ ಅವರನ್ನು ಭೇಟಿಯಾಗಿ, ಹಲವು ವಿಷಯಗಳ ಕುರಿತು ವಿಸ್ತೃತ ಚರ್ಚೆ ನಡೆಸಲಾಯಿತು.
ಕರ್ನಾಟಕದಲ್ಲಿ ಪೋಲೆಂಡ್ ದೇಶದ ಕಂಪನಿಗಳು ಹೂಡಿಕೆ ಮಾಡಲು ವಿಪುಲ ಅವಕಾಶಗಳಿವೆ. ಕೈಗಾರಿಕೆ, ತಂತ್ರಜ್ಞಾನ, ನಾವೀನ್ಯತೆ ಹಾಗೂ ಸುಸ್ಥಿರ ಅಭಿವೃದ್ಧಿಯಂತಹ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ವೃದ್ಧಿಸಲು ಉತ್ತಮ ಅವಕಾಶಗಳಿವೆ.
ರಾಜ್ಯದ ಉದ್ಯಮಸ್ನೇಹಿ ವಾತಾವರಣ ಮತ್ತು ಬಲಿಷ್ಠ ಕೈಗಾರಿಕಾ ಪರಿಸರ ವ್ಯವಸ್ಥೆಯ ಸದುಪಯೋಗ ಪಡೆದುಕೊಂಡು, ಹೂಡಿಕೆ ಹಾಗೂ ಉದ್ಯೋಗ ಸೃಷ್ಟಿಯ ಮೂಲಕ ಎರಡೂ ಕಡೆಗಳ ಆರ್ಥಿಕ ಪ್ರಗತಿಗೆ ಕೊಡುಗೆ ನೀಡಲು ವಿಫುಲ ಸಾಧ್ಯತೆಗಳಿವೆ.
ಈ ಸಂದರ್ಭದಲ್ಲಿ ಐಟಿ-ಬಿಟಿ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಹಾಗೂ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
@CMofKarnataka@DKShivakumar@PriyankKharge
It was a pleasure to meet the Hon’ble Prime Minister of Poland, Mr. Donald Tusk, and his delegation, along with the Hon’ble Chief Minister of Karnataka, Shri D. K. Shivakumar.
Karnataka looks forward to building a stronger partnership with Poland, fostering new opportunities for investment, innovation, and shared prosperity.
Together, we look forward to creating new avenues for collaboration and building a brighter future for both Karnataka and Poland.
Minister Shri Priyank Kharge and other senior government officials were also present.
@DKShivakumar@PriyankKharge
Shri M. K. Raghavan, Member of Parliament from the Kozhikode Lok Sabha constituency in Keralam and the Congress Party’s Secretary for Parliamentary Affairs, called on me in Bengaluru today. We discussed various matters, including current affairs.
ಕೇರಳಂ ರಾಜ್ಯದ ಕೋಝಿಕ್ಕೋಡ್ ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಕಾಂಗ್ರೆಸ್ ಪಕ್ಷದ ಸಂಸದೀಯ ವ್ಯವಹಾರಗಳ ಕಾರ್ಯದರ್ಶಿಯವರಾದ ಶ್ರೀ ಎಂ.ಕೆ. ರಾಘವನ್ ಅವರು ಬೆಂಗಳೂರಿನಲ್ಲಿ ಇಂದು ನನ್ನನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಪ್ರಚಲಿತ ವಿದ್ಯಮಾನಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಿದೆವು.
@mkraghavaninc
ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ, ಸ್ವಾತಂತ್ರ್ಯ, ಸ್ವಾಭಿಮಾನ ಹಾಗೂ ಧೈರ್ಯದ ಪ್ರತೀಕವಾಗಿ ಇತಿಹಾಸದಲ್ಲಿ ಅಜರಾಮರರಾದ ಕಿತ್ತೂರು ರಾಣಿ ಚೆನ್ನಮ್ಮ ಅವರ ಜಯಂತಿಯಂದು ಗೌರವದ ನಮನಗಳು.
ನಾಡಿನ ಹೆಮ್ಮೆಯ ವೀರವನಿತೆಯ ಸಾಹಸ, ತ್ಯಾಗ ಹಾಗೂ ಹೋರಾಟದ ಮನೋಭಾವ ಸದಾ ನಮ್ಮೆಲ್ಲರಿಗೂ ಸ್ಫೂರ್ತಿದಾಯಕವಾಗಿದೆ.
#RaniChennamma
ನಾಡಿನ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾದ ಬನ್ನಿ ವಿನಿಮಯವು ಪರಸ್ಪರ ಗೌರವ, ಪ್ರೀತಿ ಮತ್ತು ಸೌಹಾರ್ದವನ್ನು ಸಾರುವ ಸಂಪ್ರದಾಯ. ಇಂತಹ ಆಚರಣೆಗಳು ಜನರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವುದರ ಜೊತೆಗೆ, ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಲು ನೆರವಾಗುತ್ತವೆ.
#ಬನ್ನಿವಿನಿಮಯ
ಪದವೀಧರರು ಹಾಗೂ ಶಿಕ್ಷಕರು ಪ್ರಜಾಪ್ರಭುತ್ವದ ಬಲವಾದ ಅಡಿಪಾಯ. ಅಕ್ಟೋಬರ್ 23ರ ಶುಕ್ರವಾರದಂದು ನಡೆಯಲಿರುವ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಪದವೀಧರರು ಹಾಗೂ ಶಿಕ್ಷಕರು ತಮ್ಮ ಅಮೂಲ್ಯ ಮತ ನೀಡುವ ಮೂಲಕ ಜನಪರ ಧ್ವನಿಯನ್ನು ಬಲಪಡಿಸಬೇಕೆಂದು ವಿನಂತಿಸುತ್ತೇನೆ.
#MLCElections2026@INCKarnataka@HariprasadBK2
ಬನ್ನಿ ವಿನಿಮಯದ ಸಂಭ್ರಮ; ಜನರ ಪ್ರೀತಿ-ಅಭಿಮಾನಕ್ಕೆ ಹೃದಯಪೂರ್ವಕ ನಮನ!
ವಿಜಯದಶಮಿ ಹಬ್ಬದ ಅಂಗವಾಗಿ ಆಯೋಜಿಸಲಾಗಿದ್ದ ಬನ್ನಿಪತ್ರೆ ವಿನಿಮಯ ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲೆ ಹಾಗೂ ಬಬಲೇಶ್ವರ ಮತಕ್ಷೇತ್ರದ ಜನತೆ ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು.
ಅಭಿಮಾನದಿಂದ ಬನ್ನಿ ಹಂಚಿಕೊಂಡು ಶುಭ ಹಾರೈಸಿದ ಪ್ರತಿಯೊಬ್ಬರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು ಹಾಗೂ ವಿಜಯದಶಮಿಯ ಶುಭಾಶಯಗಳು.
ನನ್ನ ಕುಟುಂಬದ ಸದಸ್ಯರೂ ಪಾಲ್ಗೊಂಡು, ಆಗಮಿಸಿದ ಜನರೊಂದಿಗೆ ಆತ್ಮೀಯವಾಗಿ ಬೆರೆತು, ಕುಶಲೋಪರಿ ವಿಚಾರಿಸಿ ಹಬ್ಬದ ಆನಂದವನ್ನು ಹಂಚಿಕೊಂಡರು.
ಬನ್ನಿ ಬಂಗಾರವಾಗಲಿ, ಎಲ್ಲರ ಬದುಕಿನಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ!
#ಬನ್ನಿವಿನಿಮಯ #ವಿಜಯದಶಮಿ
An extraordinary story of love, duty and dedication to the nation!
The first look of 'Belonging: A Journey of Love' by our leader, CPP Chairperson Smt. Sonia Gandhi ravaru, who makes her Instagram debut with it, captures a remarkable life, from personal loss to decades of steadfast service to India.
We have known her through decades of public life. Now we get to discover the person behind that journey, in her own words.
A journey of timeless grace and strength that will inspire generations. Eager to read!
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿಯವರಾದ ಹಾಗೂ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿಯವರು ‘Belonging: A Journey of Love’ ಕೃತಿಯ ಮೊದಲ ನೋಟವನ್ನು ಹಂಚಿಕೊಳ್ಳುವ ಮೂಲಕ ಇನ್ಸ್ಟಾಗ್ರಾಮ್ ಜಗತ್ತಿಗೆ ಪಾದಾರ್ಪಣೆ ಮಾಡಿರುವುದು ಸಂತಸದ ಸಂಗತಿ.
ಪ್ರೀತಿ, ಕರ್ತವ್ಯ, ಅಗಲಿಕೆಯ ನೋವು ಹಾಗೂ ನಮ್ಮದೆನ್ನುವ ನೆಲೆಯನ್ನು ಕಂಡುಕೊಳ್ಳುವ ಹೃದಯಸ್ಪರ್ಶಿ ಪಯಣವನ್ನು ತೆರೆದಿಡುವ ಈ ಕೃತಿಯು ಓದುಗರ ಮನಸ್ಸಿನಲ್ಲಿ ಬಹುಕಾಲ ಉಳಿಯುವ ಭರವಸೆ ಮೂಡಿಸಿದೆ.
ಸಾಮಾಜಿಕ ಮಾಧ್ಯಮದ ಮೂಲಕ ಹೊಸ ರೀತಿಯಲ್ಲಿ ಕಥೆಗಳನ್ನು ಹಂಚಿಕೊಳ್ಳಲು ಮುಂದಾಗಿರುವ ಸೋನಿಯಾ ಗಾಂಧಿಯವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಅವರ ಈ ಹೊಸ ಅಧ್ಯಾಯಕ್ಕೆ ಶುಭ ಹಾರೈಕೆಗಳು!
@INCIndia #SoniaGandhi #Belonging
ಧನ್ನರ್ಗಿ: ಕೊರೆಸಿದ ಬೋರ್ ನಿಂದ ಆಕಾಶದೆತ್ತರಕ್ಕೆ ಚಿಮ್ಮಿದ ನೀರು!
ದೂರದೃಷ್ಟಿಯಿಂದ ರೂಪಿಸಿ, ಅನುಷ್ಠಾನಗೊಳಿಸಿದ ನೀರಾವರಿ ಹಾಗೂ ಕೆರೆ ತುಂಬುವ ಯೋಜನೆಗಳು ನಿರಂತರವಾಗಿ ಫಲ ನೀಡುತ್ತಿದ್ದು, ನಮ್ಮ ರೈತರ ಬದುಕಿನಲ್ಲಿ ಹೊಸ ಭರವಸೆಯನ್ನು ಮೂಡಿಸುತ್ತಿವೆ.
#ಬಬಲೇಶ್ವರ ಮತಕ್ಷೇತ್ರದ #ಧನ್ನರ್ಗಿ ಗ್ರಾಮದ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀ ಕಾಶಿನಾಥ ಲಕ್ಷ್ಮಣ ಸಾವಂತ್ ಅವರ ಹೊಲದಲ್ಲಿ ಕೊರೆಸಿದ ಕೊಳವೆಬಾವಿಯಿಂದ ಆಕಾಶದೆತ್ತರಕ್ಕೆ ನೀರು ಚಿಮ್ಮಿದೆ. ಕೃಷಿಗೆ ಅತ್ಯಗತ್ಯವಾದ ನೀರು ದೊರೆತಿರುವುದರಿಂದ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಜನಪ್ರತಿನಿಧಿಯಾಗಿ ಕೈಗೊಳ್ಳುವ ಪ್ರತಿಯೊಂದು ಅಭಿವೃದ್ಧಿ ಕಾರ್ಯವೂ ಜನರ ಬದುಕನ್ನು ತಲುಪಿ, ಅವರ ಬಾಳಿನಲ್ಲಿ ಸುಧಾರಣೆ ತಂದು, ಬದುಕನ್ನು ಹಸನಾಗಿಸಬೇಕು ಎಂಬುದೇ ನಮ್ಮ ಆಶಯ. ನಮ್ಮ ಯೋಜನೆಗಳು ರೈತರ ಹೊಲಗಳಲ್ಲಿ ಫಲವಾಗಿ, ಅವರ ಮುಖದಲ್ಲಿ ಸಂತಸವಾಗಿ ಮೂಡಿಬಂದಾಗ ನಮ್ಮ ಪ್ರಯತ್ನಗಳಿಗೆ ನಿಜವಾದ ಸಾರ್ಥಕತೆ ದೊರೆಯುತ್ತದೆ.
ಪೋಲೀಸ್ ಸಂಸ್ಮರಣಾ ದಿನದಂದು, ನಮ್ಮ ಪೊಲೀಸರ ಧೈರ್ಯ, ಕರ್ತವ್ಯನಿಷ್ಠೆ ಮತ್ತು ಪ್ರಾಮಾಣಿಕತೆಗೆ ಗೌರವ ಸಲ್ಲಿಸೋಣ. ಸಮಾಜದ ರಕ್ಷಣೆಯಲ್ಲಿಯೇ ಹುತಾತ್ಮರಾದ ಪೊಲೀಸರ ಸೇವೆ, ಶೌರ್ಯ ಸದಾ ಸ್ಮರಣೀಯ.
#PoliceCommemorationDay
ವಿಜಯಪುರ ನಗರದ ಹೈಪರ್ ಮಾರ್ಟ್ ಬಳಿಯ ಬಸವೇಶ್ವರ ನಗರ ಸೇರಿದಂತೆ ಸುತ್ತಮುತ್ತಲಿನ ಆರು ಬಡಾವಣೆಗಳ ನಾಗರಿಕರು ಒಗ್ಗೂಡಿ, ಅನ್ನಪೂರ್ಣೇಶ್ವರಿ ದೇವಸ್ಥಾನ ಸೇವಾ ಸಮಿತಿಯ ವತಿಯಿಂದ ಪ್ರತಿಷ್ಠಾಪಿಸಿರುವ ನಾಡದೇವಿಯ ದರ್ಶನ ಪಡೆದು, ಸರ್ವರ ಒಳಿತು ಬಯಸಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದೆ.
ಈ ಸಂದರ್ಭದಲ್ಲಿ ಶ್ರೀ ಸೋಮನಾಥ ಶಿವಾಚಾರ್ಯರು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕರಾದ ಶ್ರೀ ರಾಜು ಆಲಗೂರ, ಶ್ರೀ ಸಚಿನ್, ಶ್ರೀ ಬಸವರಾಜ ಚಹ್ವಾಣ ಸೇರಿದಂತೆ ಹಲವು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇಂತಹ ಉತ್ಸವಗಳು ಸಮಾಜದ ಎಲ್ಲ ವರ್ಗದ ಜನರನ್ನು ಒಗ್ಗೂಡಿಸಿ, ಪರಸ್ಪರ ಪ್ರೀತಿ, ಸೌಹಾರ್ದ ಹಾಗೂ ಬಾಂಧವ್ಯವನ್ನು ಬೆಸೆಯಲು ಸಹಕಾರಿಯಾಗುತ್ತವೆ.
#ನವರಾತ್ರಿಉತ್ಸವ #ದಸರಾ #ನವರಾತ್ರಿಸಂಭ್ರಮ
ಕೆಡುಕಿನ ವಿರುದ್ಧ ಒಳ್ಳೆಯತನ, ಅಸತ್ಯದ ವಿರುದ್ಧ ಸತ್ಯ ವಿಜಯ ಸಾಧಿಸುವುದೇ ವಿಜಯದಶಮಿಯ ಸಂದೇಶ.
ಈ ಶುಭದಿನವು ಪ್ರತಿಯೊಬ್ಬರ ಬದುಕಿನಲ್ಲಿ ಹೊಸ ಭರವಸೆ, ಯಶಸ್ಸು, ಸುಖ-ಶಾಂತಿ ಹಾಗೂ ಸಮೃದ್ಧಿಯನ್ನು ತರಲಿ. ಸತ್ಯ ಮತ್ತು ಧರ್ಮದ ಹಾದಿಯಲ್ಲಿ ಮುನ್ನಡೆಯುವ ಸಂಕಲ್ಪ ನಮ್ಮೆಲ್ಲರದಾಗಲಿ.
ನಾಡಿನ ಸಮಸ್ತ ಜನತೆಗೆ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು!
#ವಿಜಯದಶಮಿ #ನವರಾತ್ರಿ
ಮಾಜಿ ಸಚಿವರು, ಶಾಸಕರಾದ ಶ್ರೀ ಶಿವಾನಂದ ಪಾಟೀಲರ ಪುತ್ರ ಸತ್ಯಜೀತ್ ಪಾಟೀಲರ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಸೆಮಣೆ ಏರಲಿರುವ ನೂತನ ಜೋಡಿಗೆ ಶುಭ ಹಾರೈಸಿ ಆಶೀರ್ವದಿಸಿದೆ.
ಮಾಜಿ ಶಾಸಕರಾದ ಶ್ರೀ ರಾಜು ಆಲಗೂರ, ಕಾಂಗ್ರೆಸ್ ಮುಖಂಡರಾದ ಶ್ರೀ ಅಬ್ದುಲ್ ಹಮೀದ್ ಮುಶ್ರೀಫ್ ಜೊತೆಗಿದ್ದರು.
ಹೂಡಿಕೆಯಿಂದ ಅನುಷ್ಠಾನದವರೆಗೆ
ಸಮಗ್ರ ಕರ್ನಾಟಕದಲ್ಲಿ ಕೈಗಾರಿಕಾ ವಿಸ್ತರಣೆ
ಕೈಗಾರಿಕಾ ಕರ್ನಾಟಕದ ನಿರ್ಮಾಣದ ನಮ್ಮ ಸರ್ಕಾರದ ಸಂಕಲ್ಪಕ್ಕೆ ಅನುಗುಣವಾಗಿ, ಹೂಡಿಕೆ ಒಡಂಬಡಿಕೆಗಳು ಕೇವಲ ಕಾಗದದ ಮೇಲಿನ ಭರವಸೆಗಳಾಗಿ ಉಳಿಯದೆ, ನೆಲಮಟ್ಟದಲ್ಲಿ ಸಾಕಾರಗೊಳ್ಳುತ್ತಿವೆ. ‘ಜಿಮ್–2025’ರ ₹10.27 ಲಕ್ಷ ಕೋಟಿ ಹೂಡಿಕೆ ಪ್ರಸ್ತಾವನೆಗಳ ಪೈಕಿ ₹5.20 ಲಕ್ಷ ಕೋಟಿಗೂ ಅಧಿಕ ಹೂಡಿಕೆ ಸಾಕಾರವಾಗಿದ್ದು, ಉತ್ಪಾದನಾ ವಲಯದಲ್ಲಿ ಶೇ.65ರಷ್ಟು ಪ್ರಗತಿ ದಾಖಲಾಗಿದೆ. ಹೂಡಿಕೆಗಳಿಗೆ ವೇಗ, ಕೈಗಾರಿಕೆಗಳಿಗೆ ಬಲ ಹಾಗೂ ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ಸಮೃದ್ಧ ಕರ್ನಾಟಕದ ನಿರ್ಮಾಣದತ್ತ ನಮ್ಮ ಸರ್ಕಾರದ ಪಯಣ ನಿರಂತರವಾಗಿದೆ.
#GIM2025 #beyondbengaluru #InvestKarnataka
#ಬಬಲೇಶ್ವರ ತಾಲೂಕಿನ #ಸಂಗಾಪುರ ದಲ್ಲಿ ಇಂದು ನಡೆದ ಗ್ರಾಮ ದೇವತೆ ಶ್ರೀ ದುರ್ಗಾದೇವಿಯ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು, ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದೆ.
ಜಾತ್ರೆಯ ಅಂಗವಾಗಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಅಭಿನಂದಿಸಿದೆ.
ಮೈಸೂರಿನಂತೆ ಸಂಗಾಪುರದಲ್ಲಿಯೂ ದಸರಾ ಉತ್ಸವವು ಭಕ್ತಿಭಾವದಿಂದ ನಡೆಯುತ್ತಿರುವುದು ಸಂತಸದ ಸಂಗತಿ. ತಾಯಿ ದುರ್ಗಾದೇವಿಯು ಎಲ್ಲರಿಗೂ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದೆ.
#ನವರಾತ್ರಿಉತ್ಸವ #ದಸರಾ
ಖ್ಯಾತ ಇತಿಹಾಸಕಾರರಾದ ಡಾ. ಕೃಷ್ಣಾಕೊಲ್ಹಾರ ಕುಲಕರ್ಣಿ ಮನೆತನದ ಐತಿಹಾಸಿಕ ಪರಂಪರೆ;
ಶತಮಾನಗಳ ಭಕ್ತಿಗೆ ಸಾಕ್ಷಿಯಾದ ಶ್ರೀ ವೆಂಕಟೇಶ್ವರ ಸ್ವಾಮಿ ವಿಗ್ರಹಗಳು!
ವಿಜಯಪುರ ಜಿಲ್ಲೆಯ ಕೊಲ್ಹಾರದಲ್ಲಿ ನೆಲೆಸಿರುವ ಸುಪ್ರಸಿದ್ಧ ಇತಿಹಾಸಕಾರರಾದ ಡಾ. ಶ್ರೀ ಕೃಷ್ಣ ಕೊಲ್ಹಾರ ಕುಲಕರ್ಣಿ ಅವರ ಮನೆಗೆ ತೆರಳಿ, ಬಹುಕಾಲದಿಂದ ಭಕ್ತಿಭಾವದಿಂದ ಆರಾಧಿಸಿಕೊಂಡು ಬಂದಿರುವ ಶ್ರೀ ವೆಂಕಟೇಶ್ವರ ಸ್ವಾಮಿ ಹಾಗೂ ಶ್ರೀದೇವಿ ಮತ್ತು ಭೂದೇವಿಯ ವಿಗ್ರಹಗಳ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದೆ. ಈ ಸಂದರ್ಭದಲ್ಲಿ ಅವರು ತಮ್ಮ ಮನೆತನದ ಧಾರ್ಮಿಕ ಪರಂಪರೆ ಹಾಗೂ ಐತಿಹಾಸಿಕ ಹಿನ್ನೆಲೆಯ ಕುರಿತು ವಿವರಗಳನ್ನು ಹಂಚಿಕೊಂಡರು.
ಆಂಧ್ರಪ್ರದೇಶದ ಗುತ್ತಿಯ ಪಾಳೆಯಗಾರರಾಗಿದ್ದ ಈ ಮನೆತನವು ಕ್ರಿ.ಶ. 1565ರಲ್ಲಿ ವಿಜಯನಗರ ಸಾಮ್ರಾಜ್ಯದ ಪತನದ ಬಳಿಕ ವಿಜಯಪುರ ಜಿಲ್ಲೆಯ ಕೊಲ್ಹಾರಕ್ಕೆ ಆಗಮಿಸಿ ನೆಲೆಸಿತು. ಆದಿಲಶಾಹಿಗಳ ಕಾಲದಲ್ಲಿ ಏಳೂರು ಕುಲಕರ್ಣಿಕೆ ಹಕ್ಕನ್ನು ಪಡೆದುಕೊಂಡು ಇಲ್ಲಿ ನೆಲೆಸಿದ ಈ ಮನೆತನವು ತನ್ನ ಐತಿಹಾಸಿಕ ಪರಂಪರೆಯನ್ನು ಇಂದಿಗೂ ಉಳಿಸಿಕೊಂಡು ಬಂದಿದೆ.
ಮನೆತನದ ಕುಲದೇವರಾದ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿಯೊಂದಿಗೆ ಶ್ರೀದೇವಿ ಮತ್ತು ಭೂದೇವಿಯ ವಿಗ್ರಹಗಳನ್ನೂ ಇಲ್ಲಿಗೆ ತರಲಾಗಿತ್ತು ಎಂಬುದು ವಿಶೇಷ. ಈ ವಿಗ್ರಹಗಳು ಸುಮಾರು 700 ವರ್ಷಗಳಷ್ಟು ಪುರಾತನವೆಂದು ಹೇಳಲಾಗುತ್ತಿದ್ದು, ಪ್ರತಿವರ್ಷ ನವರಾತ್ರಿಯ ಸಂದರ್ಭದಲ್ಲಿ ಹತ್ತು ದಿನಗಳ ಕಾಲ ನಂದಾದೀಪದೊಂದಿಗೆ ಭಕ್ತಿಪೂರ್ವಕವಾಗಿ ಆರಾಧಿಸುವ ಸಂಪ್ರದಾಯವನ್ನು ಇಂದಿಗೂ ಮುಂದುವರಿಸಿಕೊಂಡು ಬಂದಿದ್ದಾರೆ.
ಇಂತಹ ಅಪರೂಪದ ಧಾರ್ಮಿಕ ಸಂಪ್ರದಾಯಗಳು ನಮ್ಮ ನಾಡಿನ ಶ್ರೀಮಂತ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಮೂಲ್ಯ ಕೊಂಡಿಗಳಾಗಿವೆ.
ನಮ್ಮ ಬದುಕಿಗೆ ಶಕ್ತಿ, ಭದ್ರತೆ ಮತ್ತು ಯಶಸ್ಸು ನೀಡುವ ಆಯುಧಗಳು, ಉಪಕರಣಗಳು ಹಾಗೂ ನಾವು ಕಾಯಕಕ್ಕಾಗಿ ಬಳಸುವ ಪ್ರತಿಯೊಂದು ಸಾಧನವನ್ನು ಗೌರವಿಸುವ ಪವಿತ್ರ ದಿನವೇ ಆಯುಧಪೂಜೆ.
ಕಾಯಕವೇ ಕೈಲಾಸ ಎಂಬ ಬಸವಣ್ಣನವರ ವಚನದ ಆಶಯದಂತೆ, ನಮ್ಮ ಕಾಯಕದ ಸಾಧನಗಳನ್ನು ಪೂಜಿಸಿ, ಶ್ರಮಕ್ಕೆ ಗೌರವ ಸಲ್ಲಿಸೋಣ.
ತಾಯಿ ದುರ್ಗೆಯ ಕೃಪೆಯಿಂದ ಎಲ್ಲರ ಬದುಕಿನಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಿ, ಪ್ರತಿಯೊಂದು ಪ್ರಯತ್ನದಲ್ಲೂ ಯಶಸ್ಸು ದೊರೆಯಲಿ. ನಾಡಿನೆಲ್ಲೆಡೆ ಒಳಿತಿನ ಬೆಳಕು ಹರಡಲಿ.
ಸರ್ವರಿಗೂ ಮಹಾನವಮಿ ಹಾಗೂ ಆಯುಧಪೂಜೆಯ ಹಾರ್ದಿಕ ಶುಭಾಶಯಗಳು
#ಮಹಾನವಮಿ #ಆಯುಧಪೂಜೆ