Happy to share that our Koti Vruksha Abhiyana-a model initiative ideated and executed in Vijayapura-has its inspiring story featured in #TheNewYorkTimes!
An incredible story of a people’s movement: 1.5 crore trees planted, raising forest cover from just 0.17% to 2%.
A true testament to political will, systemic action & the power of collective participation.
Proud that Vijayapura’s green success is inspiring the world!
My heartfelt thanks to all the stakeholders and the people of Vijayapura.
https://t.co/f29PntVljd
ಆಧುನಿಕ ಮೈಸೂರಿನ ಶಿಲ್ಪಿಯಾಗಿ ನಾಡುಕಟ್ಟಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿಯಂದು ಆ ದಿವ್ಯ ಚೇತನಕ್ಕೆ ಗೌರವದ ನಮನಗಳು.
ಶಾಲೆ-ಕಾಲೇಜುಗಳು, ವಾಣಿವಿಲಾಸ ಸಾಗರ-ಕೃಷ್ಣರಾಜ ಸಾಗರ ಅಣೆಕಟ್ಟೆ, ಜಲವಿದ್ಯುತ್ ಕೇಂದ್ರ,ಆಸ್ಪತ್ರೆಗಳು, ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ಬ್ಯಾಂಕ್ ಸ್ಥಾಪನೆ ... ಹೀಗೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದರು.
ರಾಷ್ಟ್ರವೇ ಹೆಮ್ಮೆ ಪಡುವಂತೆ ಮಾಡಿದ ಅನನ್ಯ ಸಾಧಕ ನಾಲ್ವಡಿ ಕೃಷ್ಣರಾಜ ಒಡೆಯರ್.
#nalwadikrishnarajawadiyar
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (KPCC) ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಪಕ್ಷದ ಹಿರಿಯ ನಾಯಕರು ಆತ್ಮೀಯರಾದ ಶ್ರೀ ಬಿ. ಕೆ. ಹರಿಪ್ರಸಾದ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ನಿಮ್ಮ ದೀರ್ಘಕಾಲದ ರಾಜಕೀಯ ಅನುಭವ, ಪಕ್ಷ ನಿಷ್ಠೆ ಮತ್ತು ಹೋರಾಟದ ಬದುಕು ರಾಜ್ಯ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಿಷ್ಠವಾಗಿ ಮುನ್ನಡೆಸಲಿದೆ ಎಂಬ ವಿಶ್ವಾಸವಿದೆ. ನಿಮ್ಮ ನಾಯಕತ್ವದಲ್ಲಿ ಪಕ್ಷವು ಇನ್ನಷ್ಟು ಸಂಘಟಿತವಾಗಿ ಬೆಳೆಯಲಿ, ಹೊಸ ಉತ್ಸಾಹದೊಂದಿಗೆ ಮುನ್ನಡೆಯಲಿ.
@HariprasadBK2@INCKarnataka
ಕರ್ನಾಟಕ ರಾಜ್ಯದ ಸಚಿವನಾಗಿ ನಾಲ್ಕನೇ ಬಾರಿಗೆ ಪ್ರಮಾಣವಚನ ಸ್ವೀಕರಿಸುವ ಸೌಭಾಗ್ಯ ಇಂದು ನನಗೆ ದೊರೆಯಿತು. ಇದರ ಹಿಂದಿರುವ ನಿಜವಾದ ಶಕ್ತಿ ನಮ್ಮ #ಬಬಲೇಶ್ವರ ಮತಕ್ಷೇತ್ರದ ಆತ್ಮೀಯ ಮತದಾರ ಬಂಧುಗಳ ಆಶೀರ್ವಾದ, ಪ್ರೀತಿ ಮತ್ತು ಅಚಲ ವಿಶ್ವಾಸವೇ ಆಗಿದೆ.
ನನ್ನ ರಾಜಕೀಯ ಬದುಕಿನ ಪ್ರತಿಯೊಂದು ಹೆಜ್ಜೆಯಲ್ಲೂ ಕೈಹಿಡಿದು ನಡೆಸಿದ ಕ್ಷೇತ್ರದ ಜನತೆ ನನಗೆ ಕೇವಲ ಮತದಾರರಲ್ಲ, ನನ್ನ ಕುಟುಂಬದ ಸದಸ್ಯರು. ನಿಮ್ಮೆಲ್ಲರ ವಿಶ್ವಾಸವೇ ನನ್ನ ಶಕ್ತಿ, ನಿಮ್ಮ ಪ್ರೋತ್ಸಾಹವೇ ನನ್ನ ಪ್ರೇರಣೆ.
ಅದರ ಜೊತೆಗೆ ಬಸವಾದಿ ಶರಣರ ಆಶೀರ್ವಾದ ಹಾಗೂ ಪರಮಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳವರ ಕೃಪಾಕಟಾಕ್ಷವು ನನ್ನ ಸಾರ್ವಜನಿಕ ಬದುಕಿಗೆ ಸದಾ ಮಾರ್ಗದರ್ಶಕ ಶಕ್ತಿಯಾಗಿ ಬೆನ್ನೆಲುಬಾಗಿ ನಿಂತಿದೆ. ಅವರ ತತ್ವಾದರ್ಶಗಳು ಜನಸೇವೆಯ ಹಾದಿಯಲ್ಲಿ ಇನ್ನಷ್ಟು ಬದ್ಧತೆಯಿಂದ ಕಾರ್ಯನಿರ್ವಹಿಸಲು ನನಗೆ ಸ್ಫೂರ್ತಿ ನೀಡಿವೆ.
ನನ್ನ ಮೇಲೆ ನಿರಂತರವಾಗಿ ನಂಬಿಕೆ ಇಟ್ಟು ಆಶೀರ್ವದಿಸಿದ ಬಬಲೇಶ್ವರ ಕ್ಷೇತ್ರದ ಪ್ರತಿಯೊಬ್ಬ ಹಿರಿಯರಿಗೆ, ತಾಯಂದಿರಿಗೆ, ಯುವಕರಿಗೆ, ರೈತರಿಗೆ, ಕಾರ್ಮಿಕರಿಗೆ ಹಾಗೂ ಎಲ್ಲಾ ಮತದಾರ ಬಂಧುಗಳಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ನೀವು ತೋರಿದ ವಿಶ್ವಾಸಕ್ಕೆ ಚ್ಯುತಿ ಬಾರದಂತೆ, ಕ್ಷೇತ್ರ ಹಾಗೂ ವಿಜಯಪುರ ಜಿಲ್ಲೆ ಸೇರಿದಂತೆ ನಾಡಿನ ಅಭಿವೃದ್ಧಿ ಮತ್ತು ಜನರ ಕಲ್ಯಾಣಕ್ಕಾಗಿ ಇನ್ನಷ್ಟು ಬದ್ಧತೆ, ಪ್ರಾಮಾಣಿಕತೆ ಹಾಗೂ ಶ್ರಮದಿಂದ ಕಾರ್ಯನಿರ್ವಹಿಸುವ ಸಂಕಲ್ಪವನ್ನು ಈ ಸಂದರ್ಭದಲ್ಲಿ ಪುನರುಚ್ಚರಿಸುತ್ತೇನೆ.
ಅಂತೆಯೇ ನನ್ನ ಮೇಲೆ ವಿಶ್ವಾಸವಿರಿಸಿ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಿದ ಎಐಸಿಸಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿಯವರಾದ ಶ್ರೀ ಡಿ.ಕೆ. ಶಿವಕುಮಾರ್, ನಿಕಟಪೂರ್ವ ಮುಖ್ಯಮಂತ್ರಿಯವರಾದ ಶ್ರೀ ಸಿದ್ದರಾಮಯ್ಯ, ಶ್ರೀ ರಾಹುಲ್ ಗಾಂಧಿ, ಶ್ರೀಮತಿ ಸೋನಿಯಾ ಗಾಂಧಿ, ಶ್ರೀ ಕೆ.ಸಿ. ವೇಣುಗೋಪಾಲ್, ಶ್ರೀ ರಣದೀಪ್ ಸಿಂಗ್ ಸುರ್ಜೇವಾಲ ಸೇರಿದಂತೆ ಪಕ್ಷದ ಎಲ್ಲ ಹಿರಿಯ ನಾಯಕರಿಗೂ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ಜನರ ವಿಶ್ವಾಸ, ಬಸವಾದಿ ಶರಣರ ಆಶೀರ್ವಾದ ಮತ್ತು ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳವರ ಮಾರ್ಗದರ್ಶನವೇ ನನ್ನ ಸೇವಾ ಸಂಕಲ್ಪಕ್ಕೆ ಶಕ್ತಿ.
#vishwagurubasavanna #ವಿಶ್ವಗುರುಬಸವಣ್ಣ
#SoniaGandhi @kharge@siddaramaiah@DKShivakumar@RahulGandhi@kcvenugopalmp@rssurjewala@INCKarnataka@INCIndia
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಹಾಗೂ ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಶ್ರೀ @DKShivakumar ಅವರನ್ನು ಸದಾಶಿವನಗರದ ಅವರ ನಿವಾಸದಲ್ಲಿ ಭೇಟಿಮಾಡಿ, ಅಭಿನಂದನೆ ಸಲ್ಲಿಸಿ, ಶುಭಾಶಯತಿಳಿಸಿದೆ.
ನಿಕಟಪೂರ್ವ ಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (CWC) ನೂತನ ಸದಸ್ಯರಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರನ್ನು ಇಂದು ಭೇಟಿಯಾಗಿ ಅಭಿನಂದನೆ ಸಲ್ಲಿಸಿ, ಕೃತಜ್ಞತೆಗಳನ್ನು ವ್ಯಕ್ತಪಡಿಸಿದೆ.
2013ರಿಂದ 2018ರವರೆಗೆ ಜಲಸಂಪನ್ಮೂಲ ಸಚಿವನಾಗಿ ಹಾಗೂ 2023ರಿಂದ ಇಂದಿನವರೆಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವನಾಗಿ ಕರ್ತವ್ಯ ನಿರ್ವಹಿಸುವ ಅವಕಾಶ ದೊರೆತಿದ್ದು, ಅವರ ಮಾರ್ಗದರ್ಶನ ಮತ್ತು ನಾಯಕತ್ವದಲ್ಲಿ ಕಾರ್ಯನಿರ್ವಹಿಸಿರುವುದು ನನ್ನ ರಾಜಕೀಯ ಜೀವನದ ಅತ್ಯಂತ ಸ್ಮರಣೀಯ ಹಾಗೂ ಹೆಮ್ಮೆಯ ಪಯಣವಾಗಿದೆ.
ಅವರ ದೂರದೃಷ್ಟಿಯ ನಾಯಕತ್ವ, ಸಾಮಾಜಿಕ ನ್ಯಾಯದ ಬದ್ಧತೆ ಮತ್ತು ಅಭಿವೃದ್ಧಿ ಪರ ಚಿಂತನೆಗಳು ಮುಂದಿನ ದಿನಗಳಲ್ಲಿಯೂ ನಾಡಿಗೆ ಹಾಗೂ ಪಕ್ಷಕ್ಕೆ ಸ್ಫೂರ್ತಿಯ ಶಕ್ತಿಯಾಗಿ ಮುಂದುವರಿಯಲಿವೆ.
@siddaramaiah
ರಾಜ್ಯ ಸರ್ಕಾರದ ನೂತನ ಸಚಿವ ಸಂಪುಟವನ್ನು ಸೇರುವಂತೆ ಆಹ್ವಾನಿಸಿ, ಶುಭ ಕೋರಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು,ನಿಯೋಜಿತ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.
ಸಚಿವನಾಗಿ ನಾಡಿನಜನತೆಯ ಸೇವೆಮಾಡಲು ಮತ್ತೊಮ್ಮೆ ಅವಕಾಶ ಕಲ್ಪಿಸಿಕೊಟ್ಟ ನಮ್ಮೆಲ್ಲರ ನೆಚ್ಚಿನ ನಾಯಕರಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ, ಶ್ರೀ ಮಲ್ಲಿಕಾರ್ಜುನ ಖರ್ಗೆ, ಶ್ರೀಮತಿ ಸೋನಿಯಾ ಗಾಂಧಿ, ಶ್ರೀ ರಾಹುಲ್ ಗಾಂಧಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಕೆ.ಸಿ. ವೇಣುಗೋಪಾಲ್ ಮತ್ತು ಶ್ರೀ ರಣದೀಪ್ ಸಿಂಗ್ ಸುರ್ಜೆವಾಲ ಸೇರಿದಂತೆ ಎಲ್ಲ ಹಿರಿಯ ನಾಯಕರಿಗೆ ಹೃದಯಪೂರ್ವಕ ಕೃತಜ್ಞತೆಗಳು.
@kharge@siddaramaiah@DKShivakumar@RahulGandhi@kcvenugopalmp@rssurjewala #SoniaGandhi
Heartiest birthday greetings to @INCIndia Gen Secretary, incharge of #KPCC, MP-Rajya Sabha Shri Randeep Singh Surjewala ravaru. Wish you good health, success and happiness.
AICC ಪ್ರಧಾನ ಕಾರ್ಯದರ್ಶಿಗಳು, KPCC ಉಸ್ತುವಾರಿಗಳು, ರಾಜ್ಯಸಭಾ ಸದಸ್ಯರೂ ಆಗಿರುವ ಆತ್ಮೀಯರಾದ ಶ್ರೀ ರಣದೀಪ್ ಸಿಂಗ್ ಸುರ್ಜೇವಾಲ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತನು ನಿಮಗೆ ಉತ್ತಮ ಆರೋಗ್ಯ,ದೀರ್ಘಾಯುಷ್ಯ ಹಾಗೂ ದೇಶಸೇವೆ ಮಾಡಲು ಹೆಚ್ಚಿನ ಶಕ್ತಿ ನೀಡಲಿ ಎಂದು ಹಾರೈಸುತ್ತೇನೆ.
@rssurjewala
ನಮ್ಮ ಕಾಂಗ್ರೆಸ್ ಪಕ್ಷದ ಅತ್ಯುನ್ನತ ನಿರ್ಧಾರ ಕೈಗೊಳ್ಳುವ ವೇದಿಕೆಯಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸದಸ್ಯರಾಗಿ ನೇಮಕಗೊಂಡಿರುವ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಅವರ ಅಪಾರ ಆಡಳಿತಾತ್ಮಕ ಅನುಭವ, ಸಾಮಾಜಿಕ ನ್ಯಾಯದ ಬಗೆಗಿನ ಅಚಲ ಬದ್ಧತೆ ಹಾಗೂ ಪಕ್ಷಕ್ಕಾಗಿ ಸಲ್ಲಿಸಿರುವ ಸಮರ್ಪಿತ ಸೇವೆ ಕಾಂಗ್ರೆಸ್ ಸಂಘಟನೆಗೆ ಮತ್ತಷ್ಟು ಬಲ ತುಂಬಿ, ಪಕ್ಷದ ಧ್ಯೇಯೋದ್ದೇಶಗಳ ಸಾಕಾರಕ್ಕೆ ಹೊಸ ಚೈತನ್ಯ ನೀಡಲಿದೆ.
ಈ ಮಹತ್ವದ ನಿರ್ಧಾರ ಕೈಗೊಂಡ ನಮ್ಮ ಎಐಸಿಸಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ, ಶ್ರೀಮತಿ ಸೋನಿಯಾ ಗಾಂಧಿ, ಶ್ರೀ ರಾಹುಲ್ ಗಾಂಧಿ ಶ್ರೀ ಕೆ.ಸಿ. ವೇಣುಗೋಪಾಲ್ ಹಾಗೂ ಪಕ್ಷದ ಉನ್ನತ ನಾಯಕತ್ವಕ್ಕೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ಶ್ರೀ ಸಿದ್ದರಾಮಯ್ಯ ಅವರು ಮುಂದೆಯೂ ಪಕ್ಷಕ್ಕೆ ಸಮರ್ಥ ಮಾರ್ಗದರ್ಶನ ನೀಡುತ್ತಾ, ಜನಸೇವೆಯಲ್ಲಿ ಇನ್ನಷ್ಟು ಯಶಸ್ಸು ಮತ್ತು ಕೀರ್ತಿಯನ್ನು ಗಳಿಸಲಿ ಎಂದು ಹಾರೈಸುತ್ತೇನೆ.
@INCKarnataka@INCIndia@INCSandesh
Heartiest congratulations to Shri @siddaramaiah ravaru on being appointed as a member of the Congress Working Committee (CWC), the highest decision-making body of the Indian National Congress.
His vast administrative experience, unwavering commitment to social justice, and dedicated service to the party will further strengthen the organization and its mission.
I extend my sincere gratitude to our respected leaders Smt. Sonia Gandhi ravaru , Shri @RahulGandhi ravaru , Shri @kharge ravaru , Shri @kcvenugopalmp ravaru , and the party leadership for this important decision.
Wishing Shri Siddaramaiah ravaru continued success in guiding the party and serving the people.
Heartiest congratulations to Shri @siddaramaiah ravaru on being appointed as a member of the Congress Working Committee (CWC), the highest decision-making body of the Indian National Congress.
His vast administrative experience, unwavering commitment to social justice, and dedicated service to the party will further strengthen the organization and its mission.
I extend my sincere gratitude to our respected leaders Smt. Sonia Gandhi ravaru , Shri @RahulGandhi ravaru , Shri @kharge ravaru , Shri @kcvenugopalmp ravaru , and the party leadership for this important decision.
Wishing Shri Siddaramaiah ravaru continued success in guiding the party and serving the people.
ಶಾಸಕಮಿತ್ರರು, ಆತ್ಮೀಯರಾದ ಶ್ರೀ ಸತೀಶ್ ಜಾರಕಿ ಹೊಳಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ಜನಸೇವೆ ಮಾಡಲು ಹೆಚ್ಚಿನ ಶಕ್ತಿ ನೀಡಲಿ ಎಂದು ಹಾರೈಸುತ್ತೇನೆ.
@JarkiholiSatish
ಶಾಸಕಮಿತ್ರರು, ಆತ್ಮೀಯರಾದ ಶ್ರೀ ಚಲುವರಾಯ ಸ್ವಾಮಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ಜನಸೇವೆ ಮಾಡಲು ಹೆಚ್ಚಿನ ಶಕ್ತಿ ನೀಡಲಿ ಎಂದು ಹಾರೈಸುತ್ತೇನೆ.
@NChaluvarayaS
ಪೂಜ್ಯ ಸಿದ್ದೇಶ್ವರ ಸ್ವಾಮಿಗಳವರ ಚಿಂತನೆಗಳು
ಕುಡುಕ ನಶೆಯಲ್ಲಿದ್ದಾಗ ರಸ್ತೆಯಲ್ಲಿದ್ದರೂ ತಾನೇ ಇಂದ್ರ-ಚಂದ್ರ ಎಂದು ತಿಳಿಯುತ್ತಾನೆ; ಅಲ್ಲದೆ ತಾನಿರುವುದು ಸ್ವರ್ಗದಲ್ಲಿ ಎಂದೇ ಭಾವಿಸುತ್ತಾನೆ! ಕುಡಿತದಿಂದ ಸುಖದ ಸೌಧ ಕಟ್ಟಲು ಸಾಧ್ಯವೇ? ಕುಡಿತವು ಕ್ಷಣಹೊತ್ತು ತಾಪವನ್ನು ಕಡಿಮೆ ಮಾಡಬಹುದೇ ವಿನಃ, ಅದು ಶಾಶ್ವತ ಪರಿಹಾರ ನೀಡಲಾರದು.
-ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳು
#SiddeshwaraSwamiji
ಈ ಸಲನೂ ಕಪ್ ನಮ್ದೇ!
ನಮ್ಮ ಹೆಮ್ಮೆಯ RCB ಆಟಗಾರರು ಸಿಂಹಬಲದೊಂದಿಗೆ ಹೋರಾಡಿ, ಬಲಿಷ್ಠ ಗುಜರಾತ್ ಟೈಟನ್ಸ್ ಪಡೆಯನ್ನು ಅಹ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲೇ ಧೂಳೀಪಟ ಮಾಡಿ ವಿಜಯಲಕ್ಷ್ಮಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಅಪ್ರತಿಮ ಕೌಶಲ್ಯ ಮೆರೆದು ಈ ಮಹಾಸಾಧನೆಗೈದ #RCB ತಂಡದ ಪ್ರತಿಯೊಬ್ಬ ಆಟಗಾರನಿಗೂ ಹಾರ್ದಿಕ ಅಭಿನಂದನೆಗಳು!
#RCB #IPLFinals2026 @RCBTweets #Champions