ಮುಜರಾಯಿ, ಮೀನುಗಾರಿಕೆ, ಬಂದರು & ಒಳನಾಡು ಜಲಸಾರಿಗೆ ಸಚಿವರ ಕಾರ್ಯಾಲಯ. @kotasbjp
Office of Minister for Muzrai, Fisheries, Ports & Inland Transport, Govt of Karnataka.
ಮನುಕುಲದ ಉಳಿವಿನಲ್ಲಿ ಅರಣ್ಯಗಳ ಪಾತ್ರ ಮಹತ್ವದ್ದಾಗಿದ್ದು, ತಮ್ಮ ಸ್ವಾರ್ಥ ಸಾಧನೆಗಾಗಿ ಅರಣ್ಯ ನಾಶಮಾಡುವವರ ವಿರುದ್ಧ ಅರಣ್ಯ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಬಂದರು, ಮೀನುಗಾರಿಕೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬಹುದಿನಗಳ ಹೋರಾಟ, ಶ್ರಮ ಸಾರ್ಥಕವಾಯಿತು. ಉಡುಪಿ ಜಿಲ್ಲೆಯಲ್ಲಿ ಮರಳು ದಿಬ್ಬ ತೆರವುಗೊಳಿಸಲು 158ಕ್ಕೂ ಹೆಚ್ಚು ಪರವಾನಿಗೆಗಳನ್ನು ನೀಡಲಾಗುತ್ತಿದೆ. ದುಡಿದುಣ್ಣುವ ಕಾರ್ಮಿಕರು ಮತ್ತು ಬಡವರ ಮನೆ, ನಿಂತು ಹೋಗಿರುವ ವಿವಿಧ ಕಾಮಗಾರಿಗಳಿಗೆ ಮರಳು ಸಿಗುವ ಮೂಲಕ ಚಾಲನೆ ಸಿಕ್ಕರೆ ನನಗದು ಖುಷಿ ಮತ್ತು ಸಮಾಧಾನ. ದುಡಿಯುವವರ ಮುಖದಲ್ಲಿ ನಗು ಮೂಡಲಿ.
#KarnatakaCabinet: The 17 ministers who sworn-in to the @BSYBJP-led cabinet today include lone lady minister Jolle Shashikala Annasaheb, an MLC (Kota Shrinivas Poojari), and an independent MLA (H Nagesh) apart from 14 @BJP4Karnataka MLAs. LIVE: https://t.co/HQRkWjFQA3
ಕರಾವಳಿ ಜಿಲ್ಲೆಯಲ್ಲಿ ವರುಣನಾರ್ಭಟ. ವೀಕ್ಷಣೆಗೆ ಬಂದ ಮುಖ್ಯಮಂತ್ರಿ @BSYBJP ಘೋಷಿಸಿದ್ದು, ಮನೆ ಕಳೆದು ಕೊಂಡವರಿಗೆ 5ಲಕ್ಷ ರೂ. ಮನೆಗಳ ರಿಪೇರಿಗೆ 1ಲಕ್ಷ ರೂ. ಸಂತೃಸ್ತ ಶಿಬಿರದಲ್ಲಿರುವ ಕುಟುಂಬಗಳಿಗೆ 10ಸಾವಿರ ರೂ. ಮನೆಗಳ ಪುನರ್ ನಿರ್ಮಾಣದ ತನಕ ಬಾಡಿಗೆ ಮನೆಗಾಗಿ ಮಾಸಿಕ 5ಸಾವಿರ ರೂ. ಈ ಘೋಷಣೆ ರಾಜ್ಯದ 30ಜಿಲ್ಲೆಗಳಿಗೂ ಅನ್ವಯವಾಗುತ್ತದೆ.
ಪ್ರಕೃತಿ ವಿಕೋಪದ ಪರಿಹಾರಾರ್ಥ ಮುಖ್ಯಮಂತ್ರಿ @BSYBJP ಯವರ ಸೂಚನೆಯ ಮೇರೆಗೆ ಉಡುಪಿ ಜಿಲ್ಲಾಧಿಕಾರಿಯವರ ಕಛೇರಿಯಲ್ಲಿ ಪ್ರಗತಿ ಪರಿಶೀಲನೆ ನಡೆಸಲಾಯಿತು. ಶಾಸಕರಾದ @RaghupathiBhat, ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಉಪಸ್ಥಿತರಿದ್ದರು.
@AmitShah@blsanthosh@nalinkateel
ಕರಾವಳಿ ಜಿಲ್ಲೆಗಳನ್ನು ಪ್ರತಿನಿಧಿಸುವ #ಬಂದರು_ಮತ್ತು_ಮೀನುಗಾರಿಕೆ ಖಾತೆಯನ್ನು ನನಗೆ ನೀಡಲಾಗಿದ್ದು, ಸಹಜವಾಗಿಯೇ #ಮುಜರಾಯಿ ಖಾತೆಯನ್ನು ಪ್ರೀತಿಯಿಂದ ಮುಖ್ಯಮಂತ್ರಿ @BSYBJP ಯವರು ನೀಡಿದ್ದಾರೆ. ಪೂರ್ಣ ಪರಿಶ್ರಮ ಹಾಕಿ ಇಲಾಖೆಗಳ ಮೂಲಕ ಸವಲತ್ತು, ಜನಸಾಮಾನ್ಯರಿಗೆ ತಲುಪಿಸುವ ಯತ್ನ ಮಾಡುತ್ತೇನೆ. @blsanthosh@nalinkateel
ವಿಕಾಸ ಸೌಧದಲ್ಲಿ ಮುಜರಾಯಿ ಇಲಾಖೆಯ ಅಧಿಕಾರಿಗಳೊಂದಿಗೆ ದೇವಸ್ಥಾನಗಳಲ್ಲಿ E - ಹುಂಡಿ ಅಳವಡಿಸುವ ಕುರಿತು ಸಮಗ್ರ ಚರ್ಚೆ ನಡಸಲಾಯಿತು ಹಾಗೂ E - ಹುಂಡಿಯ ಕಾರ್ಯನಿರ್ವಹಣೆಯ ಕುರಿತು ಪ್ರಾತ್ಯಕ್ಷಿಕೆಯನ್ನು ನೋಡಲಾಯಿತು. @BSYBJP@blsanthosh@nalinkateel@BJP4Karnataka
ಮಾನ್ಯ ಮುಖ್ಯಮಂತ್ರಿ @BSYBJP ಅವರು ಇಂದು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿರುವ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮ ಉದ್ಘಾಟಿಸಿದರು. @BJP4Karnataka
ದಕ್ಷಿಣ ಕನ್ನಡ ಜಿಲ್ಲಾಡಳಿತ, ದ.ಕ ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ದ.ಕ ಜಿಲ್ಲೆ ಇವರ ವತಿಯಿಂದ ನಡೆದ ವಿಶ್ವಕರ್ಮ ಜಯಂತಿಯಲ್ಲಿಂದು ಪಾಲ್ಗೊಂಡೆ. ಸ್ಥಳೀಯ ಶಾಸಕ ಮಿತ್ರರಾದ @vedavyasbjp ಜೊತೆಗಿದ್ದರು. @BjpMangaluru@BJP4Udupi
"ರಾಷ್ಟ್ರೀಯ ಏಕತಾ ಅಭಿಯಾನ"ದ ಅಂಗವಾಗಿ ಹುಬ್ಬಳಿ-ಧಾರವಾಡ ಹಾಗೂ ಕಾರವಾರ ಜಿಲ್ಲೆಯಲ್ಲಿ " ಒಂದು ದೇಶ ಒಂದು ಸಂವಿಧಾನ " ಎನ್ನುವ ಗೋಷ್ಠಿಯಲ್ಲಿ ಭಾಗವಹಿಸಿದೆ. ಈ ಸಂದರ್ಭ ಸಮಾಜದ ಕೆಲವು ಪ್ರಮುಖರನ್ನು ಭೇಟಿ ಮಾಡಲಾಯಿತು. @nalinkateel@blsanthosh @arunbpbjp
'ಜಾಗತಿಕ ಸ್ಪರ್ಧಾತ್ಮಕತೆಗೆ ಕೌಶಲ್ಯ ಮತ್ತು ಉದ್ಯಮಶೀಲತೆ-ಬದಲಾಗುತ್ತಿರುವ ಭಾರತದ ನಡೆ' ಕುರಿತ #NATCON2019 ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು ಕರ್ನಾಟಕವು ಕೌಶಲ್ಯಾಭಿವೃದ್ಧಿ ನೀತಿ ಜಾರಿಗೆ ತಂದ ಮೊದಲ ರಾಜ್ಯವಾಗಿದ್ದು, ಕೌಶಲ್ಯ, ಉದ್ಯಮಶೀಲತೆ ವೃದ್ಧಿಗೆ ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಕ್ರಮಗಳನ್ನು ವಿವರಿಸಿದರು.
ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಪರ್ಸನಲ್ ಮ್ಯಾನೇಜ್ಮೆಂಟ್ ಇಂದು ಆಯೋಜಿಸಿದ್ದ #NATCON2019 ಗೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಚಾಲನೆ ನೀಡಿದರು. ರಾಜ್ಯಪಾಲ ವಜೂಭಾಯಿ ವಾಲಾ, ಮುಖ್ಯಮಂತ್ರಿ @BSYBJP, ಕೇಂದ್ರ ಸಚಿವ ಸದಾನಂದಗೌಡ ಉಪಸ್ಥಿತರಿದ್ದರು. @VPSecretariat