🐟 Voice of Fishermen – Manjunath Sunagar
A dedicated leader who has consistently fought for the rights and welfare of fishermen across Karnataka.
👉 Nominate Manjunath Sunagar to the Karnataka Legislative Council.
"Let the Voice of Fishermen be heard in the Vidhan Parishad."
🎣 Voice Of Fishermen | A Stronger Voice for Our Community ✊
A dedicated effort for the rights, dignity, and future of fishermen.
Shri Manjunath Sunagar — a voice representing the fishermen community, working for justice, social welfare, and stronger representation.
ಈ ಬಾರಿ ವಿಧಾನ ಪರಿಷತ್ಗೆ
ಮಂಜುನಾಥ ಸುಣಗಾರರಿಗೆ ಅವಕಾಶ ನೀಡಿ!
"ಮೀನುಗಾರರ ಧ್ವನಿ ವಿಧಾನ ಪರಿಷತ್ನಲ್ಲಿ ಮೊಳಗಲಿ"
ಮೀನುಗಾರ ಸಮುದಾಯದ ಹಕ್ಕು, ಗೌರವ ಮತ್ತು ಅಭಿವೃದ್ಧಿಗಾಗಿ
ಮಂಜುನಾಥ ಸುಣಗಾರರವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಬೇಕು ಎಂಬುದು ನಮ್ಮೆಲ್ಲರ ಆಗ್ರಹ.
#ManjunathSunagar#ಮೀನುಗಾರರಧ್ವನಿ#MLCNomination
🌊 ಜನಸೇವೆಗೆ ಬದ್ಧವಾದ ನಾಯಕ — ಮೀನುಗಾರರ ಹಿತ ಕಾಯುವ ನಾಯಕ! 🌊
ಮೀನುಗಾರರ ಸಮಸ್ಯೆಗಳಿಗೆ ಸದಾ ಸ್ಪಂದಿಸಿ, ಸಮಾಜದ ಅಭಿವೃದ್ಧಿಗೆ ಹೋರಾಡುತ್ತಿರುವ
ಶ್ರೀ ಮಂಜುನಾಥ ಬಿ. ಸುಣಗಾರ ಅವರಿಗೆ
ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡಬೇಕೆಂಬುದು
ಬೆಂಗಳೂರಿನ ದಕ್ಷಿಣ ಜಿಲ್ಲೆಯ ಪದಾಧಿಕಾರಿಗಳ ಆಗ್ರಹ.
🐟 ಮೀನುಗಾರರ ಧ್ವನಿ – ಮಂಜುನಾಥ ಸುಣಗಾರ
ನಾಡದೋಣಿ ಮೀನುಗಾರರ ಹಕ್ಕಿಗಾಗಿ ನಿರಂತರ ಹೋರಾಟ ನಡೆಸುತ್ತಿರುವ ಸಮುದಾಯದ ಧ್ವನಿ ✊
ಕೇಂದ್ರದ ಅಂದಿನ ಮೀನುಗಾರಿಕೆ ಸಚಿವರಾದ ಶ್ರೀ ಪರಶೋತ್ತಮ ರೂಪಾಲಾ ಅವರಿಗೆ ಭೇಟಿ ನೀಡಿ,
ಕೇಂದ್ರದಿಂದ ಬಿಡುಗಡೆ ಆಗಬೇಕಿದ್ದ ಸೀಮೆ ಎಣ್ಣೆಯನ್ನು ತಕ್ಷಣ ಬಿಡುಗಡೆ ಮಾಡುವಂತೆ ಆಗ್ರಹಿಸಿ
ಮೀನುಗಾರರ ಪರವಾಗಿ ಗಟ್ಟಿಯಾಗಿ ನಿಂತ ನಾಯಕರು — ಮಂಜುನಾಥ ಸುಣಗಾರ.
ವಿಧಾನ ಪರಿಷತ್ಗೆ ಸಮುದಾಯದಿಂದ ನಮ್ಮೆಲ್ಲರ ಆಯ್ಕೆ
✅ ಜನರ ಮಧ್ಯೆ ಇರುವ ನಾಯಕ
✅ ಮೀನುಗಾರರ ಹಕ್ಕಿಗಾಗಿ ಹೋರಾಟಗಾರ
✅ ಸಮಾಜದ ಶಕ್ತಿಯುತ ಧ್ವನಿ
“ಮೀನುಗಾರರ ಹಕ್ಕು, ನಮ್ಮ ನ್ಯಾಯ – ನಮ್ಮ ಶಕ್ತಿ ಮಂಜುನಾಥ ಸುಣಗಾರ”
#ಮೀನುಗಾರರಧ್ವನಿ#ಮಂಜುನಾಥಸುಣಗಾರ#ವಿಧಾನಪರಿಷತ್
ಡಿ.ದೇವರಾಜ ಅರಸರು ಅವರು ಮುಖ್ಯಮಂತ್ರಿಗಳಾಗಿ ಏಳು ವರ್ಷ ಏಳು ತಿಂಗಳು ಇಪ್ಪತ್ತಮೂರು ದಿನಗಳ ಕಾಲ ಈ ರಾಜ್ಯದ ಜನರ ಸೇವೆ ಮಾಡಿದ್ದಾರೆ. ಅದಕ್ಕಿಂತಲೂ ಹೆಚ್ಚಿನ ಅವಧಿಗೆ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸುವ ಅವಕಾಶವನ್ನು ರಾಜ್ಯದ ಜನತೆ ನನಗೆ ನೀಡಿದ್ದಾರೆ. ಇದನ್ನೆಲ್ಲ ದಾಖಲೆಗಳ ದೃಷ್ಟಿಯಿಂದ ನಾನು ನೋಡುವುದಿಲ್ಲ, ಯಾರೂ ನೋಡಬಾರದು ಕೂಡಾ. ಇದು ಜನರ ಸೇವೆಗೆ ಸಿಕ್ಕಿರುವ ಅವಕಾಶದ ಭಾಗ್ಯ ಎಂದು ತಿಳಿದುಕೊಂಡಿದ್ದೇನೆ.
ನನ್ನ ರಾಜಕೀಯ ಜೀವನಕ್ಕೆ ಹಲವು ಹಿರಿಯರ ಚಿಂತನೆ ಮತ್ತು ಸಾಧನೆಗಳು ಪ್ರೇರಣೆ ಮತ್ತು ಮಾರ್ಗದರ್ಶನ ನೀಡಿವೆ. ಆ ಹಿರಿಯರ ಸಾಲಿನಲ್ಲಿ ದೇವರಾಜ ಅರಸು ಪ್ರಮುಖರು. ನಮ್ಮಿಬ್ಬರ ನಡುವಿನ ಸೈದ್ಧಾಂತಿಕ ಸಹಮತ ಮತ್ತು ನಾನು ಕೂಡಾ ಅವರಂತೆ ಮೈಸೂರಿನ ಮಣ್ಣಿನ ಮಗ ಎನ್ನುವ ಕಾರಣಕ್ಕೆ ನನ್ನ ಹೃದಯದಲ್ಲಿ ಅವರಿಗೆ ವಿಶೇಷವಾದ ಸ್ಥಾನ ಇದೆ.
ಸಾಮಾಜಿಕ ನ್ಯಾಯದ ಬಂಡಿಯ ಪಯಣಕ್ಕೆ ಕರ್ನಾಟಕದಲ್ಲಿ ದೀರ್ಘ ಪರಂಪರೆ ಇದೆ. ಬಸವಣ್ಣನವರಿಂದ ಪ್ರಾರಂಭಗೊಂಡು ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಡಿ.ದೇವರಾಜ ಅರಸು ವರೆಗೆ ಹಲವಾರು ಮಹನೀಯರು ಈ ಬಂಡಿಯನ್ನು ಎಳೆದುಕೊಂಡು ಬಂದಿದ್ದಾರೆ. ಇದನ್ನು ಇನ್ನಷ್ಟು ಮುಂದಕ್ಕೆ ಎಳೆದುಕೊಂಡು ಹೋಗುವ ಅವಕಾಶ ನನಗೆ ಸಿಕ್ಕಿದೆ. ಈ ಅವಕಾಶವನ್ನು ಬದಲಾಗಿರುವ ಸಾಮಾಜಿಕ ಮತ್ತು ರಾಜಕೀಯದ ಸ್ಥಿತ್ಯಂತರಗಳ ಇತಿ-ಮಿತಿಯಲ್ಲಿ ಜವಾಬ್ದಾರಿಯಾಗಿ ನಾನು ಸ್ವೀಕರಿಸಿ, ಮುನ್ನಡೆಯುತ್ತಿದ್ದೇನೆ.
ಅಧಿಕಾರ, ಸಂಪತ್ತು ಮತ್ತು ಅವಕಾಶಗಳ ಹೆಬ್ಬಾಗಿಲನ್ನು ಸರ್ವರಿಗೂ ತೆರೆದು ಸಮಾನವಾಗಿ ಹಂಚಿಕೆ ಮಾಡದ ಹೊರತು ಸುಸ್ಥಿರವಾದ ಅಭಿವೃದ್ದಿಯನ್ನು ಕಾಣಲು ಸಾಧ್ಯ ಇಲ್ಲ ಎನ್ನುವುದು ಅರಸರ ಅಚಲ ನಂಬಿಕೆಯಾಗಿತ್ತು. ಇದಕ್ಕಾಗಿಯೇ ಅವಕಾಶ ವಂಚಿತ ಸಮುದಾಯಗಳಿಗೆ ಸೇರಿರುವ ನಾಯಕರನ್ನು ಗುರುತಿಸಿ ರಾಜಕೀಯವಾಗಿ ಬೆಳೆಸಿದರು. ಭೂಸುಧಾರಣೆಯ ಮೂಲಕ ಸಂಪತ್ತಿನ ಸಮಾನ ಹಂಚಿಕೆಯ ಪ್ರಕ್ರಿಯೆ ಪ್ರಾರಂಭಿಸಿದರು. ಮೀಸಲಾತಿಯ ಮೂಲಕ ವಂಚಿತ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಕೂಡಾ ಹೆಚ್ಚಿನ ಪ್ರಾತಿನಿಧ್ಯ ಸಿಗುವಂತೆ ಮಾಡಿದರು. ಜನಪ್ರತಿನಿಧಿಗಳೆಲ್ಲರಿಗೂ ಈ ಸಾಧನೆ ಪ್ರೇರಣೆಯಾಗಬೇಕು.
ಇಂದಿನ ದಿನದ ವಿಶೇಷ ಸಂದರ್ಭದಲ್ಲಿ ನಮಗೆಲ್ಲ ಪ್ರೇರಣಾದಾಯಿಗಳು ಮತ್ತು ಪೂಜನೀಯರೂ ಆಗಿರುವ ಡಿ.ದೇವರಾಜ ಅರಸು ಅವರಿಗೆ ನಾನು ಗೌರವದ ನಮನಗಳನ್ನು ಸಲ್ಲಿಸುತ್ತೇನೆ.
🌊🐟 ಮೀನುಗಾರರ ಹಕ್ಕಿಗಾಗಿ ನಿರಂತರ ಹೋರಾಟ…
ಸಮುದಾಯದ ಸ್ವಾಭಿಮಾನಕ್ಕಾಗಿ ದಿಟ್ಟ ಧ್ವನಿ…
ಯುವಕರ ಭವಿಷ್ಯಕ್ಕಾಗಿ ಅಹರ್ನಿಶಿ ಶ್ರಮಿಸುವ ನಾಯಕ…
“ವಿಧಾನ ಪರಿಷತ್ನಲ್ಲಿ ನಮ್ಮ ಧ್ವನಿ — ಮಂಜುನಾಥ ಸುಣಗಾರ!” ✊
ಕರಾವಳಿ ಹಾಗೂ ಒಳನಾಡು ಮೀನುಗಾರರ ಸಮಸ್ಯೆಗಳಿಗೆ ನ್ಯಾಯ ದೊರಕಿಸಲು ಸದಾ ಜನರ ಜೊತೆ ನಿಂತ ನಾಯಕತ್ವಕ್ಕೆ ನಿಮ್ಮ ಬೆಂಬಲ ಇರಲಿ.