4 ಸಾವಿರ ಕೊಟ್ಟು internet ಹಾಕಿಸಿಕೊಳ್ಳೋ ಮಟ್ಟಕ್ಕೆ ಜನರ ಪರಿಸ್ಥತಿ ಇಲ್ಲಾ ಬಿಡಿ ೋದಿಯ ಅಚ್ಚೆ ದಿನದಲ್ಲಿ. ಇಂಟರ್ನೆಟ್ ಬೇಕೆ ಬೇಕು ಎನ್ನುವ ಸ್ಥಿತಿ ಇಲ್ಲ ಬಿಡಿ. ಈ ಇಂಟರ್ನೆಟ್ ಕೊಟ್ಟು ಕೆಲಸ ಕಿತ್ತುಕೊಂಡು ಮೊಬೈಲ್ ನೋಡ್ಕೊಂಡು ಕೂತ್ಕೊಳ್ಳೋ ಪರಿಸ್ಥಿತಿಗೆ ತಂದಿದ್ದು ಬಜೆಪಿ ಎಂದರೆ ಸರಿ.
ವರುಣಾ ವಿಧಾನಸಭಾ ಕ್ಷೇತ್ರದ ಲಿಂಗಾಯತ ಮತಬಾಂಧವರು ಈ ವೀಡಿಯೋವನ್ನು ತಪ್ಪದೇ ನೋಡಬೇಕು. ಈ ಬಾರಿ ಮತವನ್ನು #ಬಿಜೆಪಿ ಗೆ ಹಾಕಿದರೆ ಮುಖ್ಯಮಂತ್ರಿಯಾಗುವುದು ಚುನಾವಣೆಗೆ ಸ್ಪರ್ಧಿಸದ RSSನ ಒಬ್ಬ ಬ್ರಾಹ್ಮಣ.
ಸಾಮಾಜಿಕ ನ್ಯಾಯಕ್ಕೆ ಮನ್ನಣೆ ನೀಡಿ ವಿವಿಧ ಜಾತಿಯ ಹಾಗೂ ಧರ್ಮಗಳ ಮಂತ್ರಿಮಂಡಲವನ್ನು ರಚಿಸಿದ ಶ್ರೇಯಸ್ಸು ಶ್ರೀ. @siddaramaiah ನವರಿಗೆ ಸಲ್ಲುತ್ತದೆ.
ಕರ್ನಾಟಕದ ವಿವಿಧ ಜನಾಂಗಗಳ ಸರ್ವೋತೋಮುಖ ಅಭಿವೃದ್ಧಿಗಾಗಿ ನಿಮ್ಮ ಪ್ರಾಶಸ್ತ್ಯ ಮತವನ್ನು #ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಗೂ ಮುಂದಿನ ಮುಖ್ಯಮಂತ್ರಿಯಾಗಲು ಪ್ರಬಲ ಅಭ್ಯರ್ಥಿಯಾಗಿರುವ ಶ್ರೀ. ಸಿದ್ದರಾಮಯ್ಯ ಅವರಿಗೆ ಚಲಾಯಿಸಿ ಅವರನ್ನು ಪ್ರಚಂಡ ಬಹುಮತದಿಂದ ಆರಿಸಿ ತನ್ನಿ ಎಂದು ತಮ್ಮಲ್ಲಿ ಕಳಕಳಿಯಿಂದ ಪ್ರಾರ್ಥಿಸುತ್ತೇನೆ.
ಸುದರ್ಶನ್ ಜಯರಾಮು - ಕರ್ನಾಟಕ ಕಾಂಗ್ರೆಸ್ ಪ್ರಚಾರ ಸಮಿತಿ ಸದಸ್ಯ.
ಕಾನೂನು ಉಲ್ಲಂಘನೆ ಮಾಡುವುದಾದರೆ ಯಾವುದೇ ಸಂಘಟನೆಗಳ ಅವಶ್ಯಕತೆ ಇಲ್ಲ. ಸಂಘಟನೆಗಳ ಮೂಲ ಉದ್ದೇಶವೇ ನಮ್ಮ ದೇಶದ ಆಚಾರ,ವಿಚಾರ,ಕಾನೂನಿನ ಗೌರವ ಇವುಗಳನ್ನು ಜನರಿಗೆ ಅರವು ಮೂಡುವಂತೆ ಮಾಡುವುದು. ಕಾನೂನು ಉಲ್ಲಂಘಿಸುವುದೆಂದರೆ ಅರ್ಥವೇ ಇಲ್ಲ.
ಸಂವಿಧಾನದ ವಿಧಿಗಳನ್ನು ಉಲ್ಲಂಘಿಸುವ ಸಂಘಟನೆಗಳ ವಿರುದ್ದ ನಿಷೇಧವೂ ಸೇರಿದಂತೆ ಬಲವಾದ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದೆ.
ನಿಷೇಧಕ್ಕೆ ಒಳಗಾಗುವುದು ಬೇಡ ಎಂದಾದರೆ ಸಂವಿಧಾನ ವಿಧಿಗಳನ್ನು ಉಲ್ಲಂಘಿಸದೆ ಇದ್ದರೆ ಆಯ್ತಪ್ಪಾ, ಇದಕ್ಕಾಗಿ ಎದೆ ಬಡಿದುಕೊಂಡು ಕೂಗಾಡುವುದು ಯಾಕೆ?
ಬಿಜೆಪಿ ಏನು ಹೇಳಲಿಕ್ಕೆ ಹೊರಟಿದೆ? ಭಜರಂಗದಳ, ಪಿಎಫ್ ಐ ಮೊದಲಾದ ಸಂಘಟನೆಗಳಿಗೆ ಸಂವಿಧಾನವನ್ನು ಉಲ್ಲಂಘಿಸಲು ಅವಕಾಶ ನೀಡಬೇಕೆಂಬುದು ಅಭಿಪ್ರಾಯವೇ?
ಭಜರಂಗ ದಳದ ಸಂವಿಧಾನ ವಿರೋಧಿ ಕೃತ್ಯಗಳಿಗಾಗಿ ಕ್ರಮಕೈಗೊಂಡರೆ ಹನುಮನಿಗೆ ಅವಮಾನ ಮಾಡಿದ ಹಾಗಾಗುತ್ತದೆ ಎಂದು ಬಿಜೆಪಿ ಮತ್ತು ಆರ್ ಎಸ್ ಎಸ್ ನಾಯಕರು ಕೂಗಾಡುತ್ತಿರುವುದೇ ಹಾಸ್ಯಾಸ್ಪದ.
ಗುಜರಾತ್ ಕೋಮುಗಲಭೆಯ ಪ್ರಮುಖ ಆರೋಪಿಯ ಹೆಸರು ಬಾಬು ಬಜರಂಗಿ. ಆತನಿಗೆ ಗುಜರಾತ್ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಹಾಗಿದ್ದರೆ ನ್ಯಾಯಾಲಯ ಹನುಮನಿಗೆ ಅವಮಾನ ಮಾಡಿದ ಹಾಗಾಗುತ್ತಾ?
ದೇವರ ಹೆಸರು ಇಟ್ಟುಕೊಂಡ ಕ್ರಿಮಿನಲ್ ಗಳು ನೂರಾರು ಸಂಖ್ಯೆಯಲ್ಲಿದ್ದಾರೆ. ಅವರ ವಿರುದ್ದ ಕ್ರಮಕೈಗೊಂಡರೆ ದೇವರಿಗೆ ಅವಮಾನ ಮಾಡಿದ ಹಾಗಾಗುತ್ತಾ?
- Dinesh Amin
ಕೊನೆಗೆ ಕರ್ನಾಟಕದಲ್ಲಿ ಮೋದಿನ ನೋಡಿನೂ ಓಟು ಹಾಕಲ್ಲ ಅಂತ ಮೋದಿಗೆ ಗೊತ್ತಾಗೋ ತರ ಮಾಡಿದ ಕಾಂಗ್ರೆಸ್ ಮತ್ತು ಜೆಡಿಎಸ್😂😂😂😂 . ಕಾನೂನಿಗೆ ಬೆಲೆ ಕೊಟ್ರೆ ಯಾವುದೇ ಸಂಘಟನೆಗಳಿಗೂ ತೊಂದರೆ ಇಲ್ಲ. ಸಂವಿಧಾನ ನಮ್ಮ ಮೊದಲ ದೇವರು…
ಬಿಜೆಪಿಯಲ್ಲಿರೋರಿಗೆ ಮುಖ ಇಲ್ಲ ಓಟು ಕೇಳೋಕೆ. ಎಲ್ಲಿ ಹೋದರೂ ಎಷ್ಟೆ ದುಡ್ಡು ಕೊಟ್ಟರೂ ಜನ ಸೇರ್ತಿಲ್ಲ. ಉಗಿತಾರೆ ಸ್ವಲ್ಪ ಉಗಿಯೋದು ಕಡಿಮೆ ಆಗಲಿ, ಹೀರೋ ನೋಡೋಕಾದ್ರೂ ಜನ ಬರ್ಲಿ ಅನ್ನೋ ಹಗಲುಗನಸು
ಈಗ ಹೇಗಾಗಿದೆ ಅಂದ್ರೆ ಏನೇ ತಪ್ರು ಮಾಡಿದರೂ ಧರ್ಮದ ಹೆಸರು ಹೇಳಿಕೊಂಡು ತಪ್ಪಿಸಿಕೊಳ್ಳಬಹುದು ಅನ್ನೋ ರೀತಿ ಆಗಿದೆ. ಉದಾಹರಣೆಗಳು ಸಾಕಾಷ್ಟಿವೆ, ಇಂತಹ ಪುಂಡರು, ದೊಡ್ಡ ರೌಡಿಗಳು ಕಳ್ಳರು,ಸುಳ್ಳರು ಇವರ ಎಲ್ಲರ ಆಯ್ಕೆ ಈಗ ಧರ್ಮ..
"ಹಿಂದೂ ಹೆಣ್ಣುಮಕ್ಕಳನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಈ ಪುನೀತ್ ಕೆರೆಹಳ್ಳಿ, ಹಿಂದೂ ಧರ್ಮದ ರಕ್ಷಕ ಹೇಗಾಗುತ್ತಾನೆ? ಅದೇ ಬಡ ಹಿಂದೂ ಹೆಣ್ಣುಮಕ್ಕಳ ಎದೆಗೆ ಬಟ್ಟೆ ಹಾಕಲು ನಂಬೂದರಿಗಳು ವಿಧಿಸಿದ್ದ ತೆರಿಗೆ ಪದ್ದತಿಯನ್ನು ನಾಶ ಮಾಡಿದ ಟಿಪ್ಪು ಹಿಂದೂ ವಿರೋಧಿ ಹೇಗಾಗುತ್ತಾನೆ?"
ಇಷ್ಟೇ..... ಚಿಂತನೆಗಳಲ್ಲಿ ಬದುಕುವ ನಾನು ಅದನ್ನು ಸಾರ್ವಜನಿಕರ ಮುಂದಿಡುತ್ತೇನೆ. ಪ್ರೀತಿಯನ್ನೇ ಉಸಿರಾಡುವ ನನಗೆ ಆ ಕಾರಣಕ್ಕೆ ಪ್ರೀತಿಯ ಮಿತ್ರರಿದ್ದಾರೆ. ನೆಮ್ಮದಿಯ ಬದುಕಿದೆ. ಸವಾಲೂ ಇದೆ, ಆದರದು ನನ್ನ ದಿನಚರಿಯಾಗಿ ಅಭ್ಯಾಸವಾಗಿದೆ.
Does not matter!
ವ್ಯಾಪಾರಕ್ಕಾಗಿ ದ್ವೇಷವನ್ನೇ ಉಸಿರಾಗಿಸಿಕೊಂಡಿದ್ದ ಈ ಬಡಹುಡುಗ ಪುನೀತ್ ಕೆರೆಹಳ್ಳಿ ಆರಂಭದಲ್ಲಿ ನನಗೆ ಶುದ್ಧ ತರಲೆಯಂತೆ ಕಾಣಿಸಿದ್ದ. ನನ್ನ ಬಗ್ಗೆಯೂ ಒಂದೆರಡು ಬಾರಿ ವಿಡಿಯೋ ಮಾಡಿ ಬಾಯಿ ತುಂಬಾ ಹೇತಿದ್ದನಂತೆ! ಅಪ್ಪಿತಪ್ಪಿಯೂ ನಾನು ಈ ಹೇಲನ್ನು ತುಳಿಯಲಿಲ್ಲ. ಬದಲಿಗೆ ಧರ್ಮದ ನಶೆ ಇಳಿದು ಸುಧಾರಿಸುತ್ತಾನೆ, ಮನುಷ್ಯತ್ವವೇ ಧರ್ಮವೆಂಬ ವಾಸ್ತವ ಅರಿತು ಮನುಷ್ಯನಾಗುತ್ತಾನೆ ಎಂದು ನಿರೀಕ್ಷಿಸಿದ್ದೆ. ಆದರೆ ಈತ ಕೊಲೆ ಮಾಡುವ ಮಟ್ಟಕ್ಕೆ ಹೋಗುತ್ತಾನೆ, ಈ ಮಟ್ಟಿಗೆ ಕ್ರೂರಿಯಾಗಿದ್ದಾನೆ ಎಂದು ಭಾವಿಸಿರಲಿಲ್ಲ. ಕೈಯ್ಯಲ್ಲಿ ದೊಣ್ಣೆ ಹಿಡಿದು ರಸ್ತೆಯಲ್ಲಿ ದರೋಡೆಕೋರನಂತೆ ಓಡಾಡಿಕೊಂಡಿದ್ದ ಒಂದೆರಡು ವಿಡಿಯೋ ಜೊತೆಗೆ ಒಬ್ಬ ಮುಸಲ್ಮಾನ ವ್ಯಕ್ತಿಗೆ ಕರೆಂಟ್ ಶಾಕ್ ಕೊಡುವ ಭಯಾನಕ ವಿಡಿಯೋ ನೋಡಿ ಬೆಚ್ಚಿಬಿದ್ದೆ. ಇವ್ನು Psycho ಆಗುತ್ತಿದ್ದಾನೆ ಎಂದುಕೊಳ್ಳುವಷ್ಟರಲ್ಲಿ ಕೊಲೆಯೇ ಮಾಡಿಬಿಟ್ಟಿದ್ದಾನೆ. Ofcourse ಈಗಿನ್ನೂ ಇವನು ಆರೋಪಿ, ಅಪರಾಧ ಸಾಬೀತಾಗಬೇಕು! ಮಿಕ್ಕಿದ್ದೆಲ್ಲಾ ಆಮೇಲೆ...
ಆದರೆ..
ನಿಮಗೆ ಈ ಕೆರಹಳ್ಳಿ ಸದಾ ಹಿಂದೂ ಧರ್ಮದ ಹೆಸರಲ್ಲಿ ಗೂಗಲ್ ಪೇ ಮೂಲಕ ಭಿಕ್ಷೆ ಬೇಡುತ್ತಿದ್ದ ಸಂಗತಿ ತಿಳಿದಿರಬಹುದು. ಅವನಿಗೆ ಧರ್ಮದ ಹೆಸರಲ್ಲಿ ಹಣ ಹುಟ್ಟುತ್ತದೆ ಎನ್ನುವುದು ಗ್ಯಾರಂಟಿಯಾಗಿತ್ತು. ಶಿವಾಜಿನಗರದ ಕಮರ್ಷಿಯಲ್ ಸ್ಟ್ರೀಟಿನ ರಸ್ತೆ ಬದಿಯ ಇನ್ನೂರೈವತ್ತು ರೂಪಾಯಿಯ ಒಂದು ಜೋಡು ಬಟ್ಟೆ ಖರೀದಿಸಿ ಹಾಕಿಕೊಳ್ಳುತ್ತಿದ್ದವನ ಬಟ್ಟೆ, ವರಸೆ ಕ್ರಮೇಣ ಬದಲಾಗಿತ್ತು. ಯೋಗ್ಯತೆಗೆ ತಕ್ಕಂತೆ ಸುಳ್ಳುಬೆಲೆಯಂತವರ ಸಹವಾಸವೂ ಸಿಕ್ಕಿತು.
ಆದರೆ ಹಿಂದೂ ಹೆಣ್ಣುಮಕ್ಕಳನ್ನು ವೇಶ್ಯಾವಾಟಿಕೆ ನಡೆಸುತ್ತಿದ್ದ ಇವನ ಚರಿತ್ರೆ ಹೊರಬಿದ್ದನಂತರ SOCIAL MEDIAದಲ್ಲಿ ಗೋಗರೆದರೂ ಕವಡೆ ಕಾಸೂ ಹುಟ್ಟುತ್ತಿರಲಿಲ್ಲ. ಬೇರೆ ಯಾರೂ ಕೈಯೆತ್ತಿ ಕೊಡುತ್ತಿರಲಿಲ್ಲ. ಮಿಕ್ಕಂತೆ ಇವನ ಜೊತೆ ಫೋಟೋ ಫ್ರೇಂನಲ್ಲಿ ಕಾಣಿಸಿಕೊಂಡ ರಾಜಕಾರಣಿಗಳು ವಾಸನೆ ಹೊಡೆಯುವವರೆಗೆ ಮಾತ್ರ ಹತ್ತಿರ ಬಿಟ್ಟುಕೊಳ್ಳುತ್ತಾರೆ. ಗಬ್ಬು ನಾರುವ ಸೂಚನೆ ಸಿಕ್ಕಾಗ ALERT ಆಗುತ್ತಾರೆ. ಹೀಗಾಗಿ ಕೆರೆಹಳ್ಳಿ ಅಕ್ಷರಶಃ ತಬ್ಬಲಿಯಾಗಿರಬಹುದು! ಹಣ, ಹೆಂಡಕ್ಕೆ ಒಗ್ಗಿಕೊಂಡಿದ್ದವನು ನಾಗಬನ ಅದು ಇದು ಅಂತ ತಿಪ್ಪರಲಾಗ ಹಾಕಿದರೂ ಬಿಡಿಗಾಸು ಹುಟ್ಟದೆ ಹುಚ್ಚನಂತಾಗಿರಬಹುದು. ಹೀಗಾಗಿ ಗೋರಕ್ಷಣೆಯ ನೆಪದಲ್ಲಿ ರಸ್ತೆ ದರೋಡೆಗಿಳಿದಿರಬಹುದು ಎಂಬ ಅನುಮಾನಕ್ಕೆ ಸಾಕ್ಷಿ ನೀಡುತ್ತದೆ ಈ FIR!!
ಇದ್ರೀಸನ ಹತ್ಯೆಗೆ ಸಂಬಂಧಿಸಿದ ಈ FIR ಓದುತ್ತಿದ್ದಾಗ ಈತ ಗೋರಕ್ಷಣೆಯ ನೆಪದಲ್ಲಿ ದರೋಡೆಗಿಳಿದಿದ್ದ ಎನ್ನುವುದು ಸ್ಪಷ್ಟವಾಗಿದೆ. ಆ ಮುಸಲ್ಮಾನ ಯುವಕರು ಸಂತೆಯಲ್ಲಿ ರೈತರಿಂದ ಅಧಿಕೃತವಾಗಿ ಖರೀದಿಸಿದ್ದ ರಶೀದಿ ತೋರಿಸಿದರೂ ಕೆರೆಹಳ್ಳಿ ಗುಂಪು ಸುಮ್ಮನಾಗಲಿಲ್ಲ. ಎರಡು ಲಕ್ಷ ರೂಪಾಯಿ ಕೊಟ್ಟರೇ ಮಾತ್ರ ಬಿಡುತ್ತೇವೆಂದಿದ್ದಾರೆ. ಅಷ್ಟು ಹಣವಿಲ್ಲ ಎಂದಾಗ ಮಾರಕಾಸ್ತ್ರಗಳಿಂದ ಹೊಡೆಯತೊಡಗಿದ್ದಾರೆ. ಒಂದಿಬ್ಬರು ತಪ್ಪಿಸಿಕೊಂಡು ಓಡಿದ್ದಾರೆ. ಬಡಪಾಯಿ ಇದ್ರಿಸ್ ಅಲ್ಲೇ ಸಮೀಪದ ಪೊದೆಯಲ್ಲಿ ಅವಿತು ಪ್ರಾಣ ಉಳಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಅಲ್ಲಿಗೇ ನುಗ್ಗಿದ ಕೆರೆಹಳ್ಳಿ ಗುಂಪು ದೊಣ್ಣೆಗಳಿಂದ ಥಳಿಸತೊಡಗಿದೆ. ತಲೆ ಕೆಳಗೆ ಮಾಡಿ, ಅಂಗಾಲೂರಿದ ಭಂಗಿಯಲ್ಲೇ ಇದ್ರೀಸನ ಪ್ರಾಣ ಹೊರಟುಹೋಗಿದೆ.
ಇವಿಷ್ಟು... FIR ಪ್ರತಿಯಲ್ಲಿರುವ ದೂರಿನ ಅಂಶಗಳು.
ಈಗ ತುರ್ತಾಗಿ ಈ ರಣಭೀಕರ ಕೆರೆಯ ಸಹವಾಸದಲ್ಲಿದ್ದ ಎಲ್ಲರನ್ನು ಬಂಧಿಸಬೇಕಿದೆ. ಏಕೆಂದರೇ ಇವರೆಲ್ಲರೂ ಒಂದೇ ಪಾಠಶಾಲೆಯಲ್ಲಿ ತರಬೇತಿ ಪಡೆದಿರುವ ವಿದ್ಯಾರ್ಥಿಗಳು. ಈಗಾಗಲೇ ಇನ್ಯಾರನ್ನು ಕೊಚ್ಚಲು ಸಂಚು ರೂಪಿಸಿದ್ದಾರೋ ಗೊತ್ತಿಲ್ಲ?
ಅಂದಹಾಗೇ, ಇಲ್ಲಿಗೆ ಒಂದು ಕೆರೆಯ ಕಥೆ ಹೆಚ್ಚುಕಮ್ಮಿ ಮುಗಿದಂತಾಗುತ್ತದೆ. ಆದರೆ ಇವರನ್ನು ಬಿಟ್ಟು ಕೊಲ್ಲಿಸುವ ಮನಃಸ್ಥಿತಿ ಇನ್ನೂ ನಾಶವಾಗಿಲ್ಲ. ಅದು ಈಗಾಗಲೇ ಇನ್ನೊಬ್ಬ ಕೆರೆಹಳ್ಳಿಯನ್ನು ಅನ್ವೇಷಿಸುತ್ತಿರುತ್ತದೆ. ಮುಗಿಯದ ಕಥೆಯಿದು!
- ರಾ ಚಿಂತನ್