ಕನ್ನಡದ ಆರಾಧ್ಯ ದೈವ, ಅಣ್ಣಾವ್ರಿಗೆ...
ಕನ್ನಡ ಕುಲ ತಿಲಕ, ತಾಯಿ ಸರಸ್ವತಿಯ ಮಾನಸ ಪುತ್ರ, ಕಲಾ ಕೌಸ್ತುಭ... ನಮ್ಮ ಪ್ರೀತಿಯ ಮುತ್ತುರಾಜರಿಗೆ ಜನ್ಮದಿನದ ಸಾಷ್ಟಾಂಗ ನಮನಗಳು.
ಅಣ್ಣಾವ್ರೇ, ಇವತ್ತು ಎಲ್ಲೆಡೆ ನಿಮ್ಮ ಜನ್ಮದಿನದ ಸಂಭ್ರಮ. ಆದ್ರೆ ಈ ಸಂಭ್ರಮದ ನಡುವೆಯೂ ಮನಸಿನ ಒಂದು ಮೂಲೆಯಲ್ಲಿ ಅದೇನೋ ಒಂದು ಭಾರ. ನೀವು ಇನ್ನು ಇರಬೇಕಿತ್ತು... ಈ ನಾಡು ಸಂಕಷ್ಟದಲ್ಲಿದ್ದಾಗ ಧೈರ್ಯ ತುಂಬಲು ನೀವು ಇರಬೇಕಿತ್ತು, ಕನ್ನಡದ ಕಂಪು ಎಲ್ಲೆಡೆ ಪಸರಿಸುವಾಗ ನಮ್ಮ ಜೊತೆಗೂಡಿ ನಗಲು ನೀವು ಇರಬೇಕಿತ್ತು. ಅಪ್ಪ ಅಮ್ಮನನ್ನು ಕಳೆದುಕೊಂಡ ಮನೆಯ ಸ್ಥಿತಿ ಹೇಗಿರುತ್ತದೆಯೋ, ನೀವು ಹೋದ ಮೇಲೆ ನಮಗೂ ಹಾಗೆಯೇ ಅನಿಸುತ್ತಿದೆ.
ನೀವು ಕಲಿಸಿಕೊಟ್ಟ ಆ 'ಅಭಿಮಾನವೇ ದೇವರು' ಅನ್ನೋ ಮಾತು, ಆ ವಿನಯವಂತಿಕೆ ಇವತ್ತಿಗೂ ನಮ್ಮ ಬದುಕಿನ ದಾರಿ. ನೀವು ನಮ್ಮನ್ನು ಅಗಲಿದ್ದರೂ, ಪ್ರತಿ ಕನ್ನಡಿಗನ ಉಸಿರಿನಲ್ಲಿ, ಮನೆಯ ದೇವರ ಕೋಣೆಯಲ್ಲಿ ನೀವು ಎಂದಿಗೂ ಅಳಿಯದ ಮುತ್ತು.
ನಿಮ್ಮ ನೆನಪೇ ನಮ್ಮ ಬದುಕಿನ ಶಕ್ತಿ. ಮರಳಿ ಹುಟ್ಟಿ ಬನ್ನಿ ಅಪ್ಪಾಜಿ…
- ನಿಮ್ಮನ್ನ ಸದಾ ಆರಾಧಿಸುವ,
ನಿಮ್ಮ ಮನೆಯ ಮಗ
IPSಅಧಿಕಾರಿಗೆ ಈ ಗತಿಯಾದ್ರೆ ಸಾಮಾನ್ಯರ ಪರಿಸ್ಥಿತಿ ಹೇಗೆ? ಜಾತಿ ತಾರತಮ್ಯಕ್ಕೆ 9ಪುಟಗಳ ಡೆತ್ ನೋಟ್ ಬರೆದು ಪೂರಣ್ ಕುಮಾರ್ ಕೆಲ ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಅವ್ರಿಗಾದ ಅವಮಾನ,ನೋವು ಮಾತ್ರ ಅಲ್ಲ, ಇಡೀ ಸಮಾಜಕ್ಕೆ ಅವಮಾನ ಮತ್ತು ಜಾತಿಯನ್ನ ಪೋಷಿಸಿಕೊಂಡು ಬರ್ತ್ತಿರೊ ಪ್ರತಿಯೊಬ್ಬರಿಗೂ ನಾಚಿಕೆಯ ಸಂಗತಿ!
#PuranKumar
'ಬಾಳಿನ ಬೆನ್ನು ಹತ್ತಿ.. ನೂರಾರು ಊರು ಸುತ್ತಿ..
ಏನೇನೋ ಕಂಡ ಮೇಲೂ.. ನಮ್ಮೂರೇ ನಮಗೆ ಮೇಲೂ..'
ನಮ್ಮೂರ ಮಂದಾರ ಹೂವೆ ನಂತರ ಮತ್ತೆ ನನ್ನ ಯಾಣ ಭೇಟಿ 29 ವರ್ಷಗಳ ಬಳಿಕ.
#NammooraMandaraHoove