🚨 ಅಕ್ರಮ ಲೋನ್ ಆಪ್ ವಂಚನೆ ಎಚ್ಚರಿಕೆ🚨
ಸಣ್ಣ ಸಾಲದ ಆಮಿಷದಿಂದ ಆರಂಭವಾಗುವ ಈ ವಂಚನೆ, ನಂತರ ಕಿರುಕುಳ, ಬ್ಲ್ಯಾಕ್ಮೇಲ್ ಹಾಗೂ ಆರ್ಥಿಕ ಸಂಕಷ್ಟಕ್ಕೆ ದಾರಿ ಮಾಡಿಕೊಡಬಹುದು. ⚠️
ನಕಲಿ ಲೋನ್ ಆಫ್ಗಳು ಕೇವಲ ಹಣದ ಮೋಸವಲ್ಲ; ನಿಮ್ಮ ವೈಯಕ್ತಿಕ ಮಾಹಿತಿಯನ್ನು ದುರುಪಯೋಗಪಡಿಸಿ ಭಯದ ವಾತಾವರಣ ಸೃಷ್ಟಿಸಿ ಡಿಜಿಟಲ್ ಸುಲಿಗೆಕೋರರಾಗಿರುತ್ತಾರೆ.
❌ ಕೆಲವೊಮ್ಮೆ ಹಣ ಮರುಪಾವತಿಸಿದರೂ, ಆಪ್ನಲ್ಲಿ ಅಪ್ಡೇಟ್ ಮಾಡದೆ “ಪಾವತಿ ಆಗಿಲ್ಲ” ಎಂದು ಮತ್ತೆ ಹಣಕ್ಕೆ ಒತ್ತಾಯಿಸುತ್ತಾರೆ.
💡 ಎಚ್ಚರಿಕೆಯಿಂದಿರಿ:
• RBI ಮಾನ್ಯತೆ ಪಡೆದ ಸಾಲದಾತರನ್ನು ಮಾತ್ರ ಪರಿಶೀಲಿಸಿ ಬಳಸಿ
• ಅನುಮಾನಾಸ್ಪದ ಆಪ್ಗಳನ್ನು ಡೌನ್ಲೋಡ್ ಮಾಡಬೇಡಿ
• ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬೇಡಿ
• ಬೆದರಿಕೆ ಕರೆ/ಸಂದೇಶಗಳಿಗೆ ಮಣಿಯಬೇಡಿ, ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿ ಅಥವಾ 1930 ಗೆ ಕರೆ ಮಾಡಿ ದೂರು ನೀಡಿ
ಜಾಗೃತಿಯೇ ನಿಜವಾದ ರಕ್ಷಣೆ. @DgpKarnataka@BlrCityPolice@jt_cpeastbcp
#LoanAppFraud #CyberCrimeAwareness #StayAlert #DigitalSafety #southeastdivision
ಆಗ್ನೇಯ ವಿಭಾಗದ @hsrlayoutps ತಂಡವು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ, ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ, ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳವಾಗಿದ್ದ ಒಟ್ಟು ₹5.3 ಲಕ್ಷ ಮೌಲ್ಯದ 10 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. 👏 ಈ ಉತ್ತಮ ಕಾರ್ಯಕ್ಕಾಗಿ ಹಿರಿಯ ಅಧಿಕಾರಿಗಳು ಪೊಲೀಸ್ ತಂಡವನ್ನು ಪ್ರಶಂಸಿಸಿದ್ದಾರೆ. 🚔
ನಿಮ್ಮ ಮನೆಯ ಸುತ್ತಮುತ್ತ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಅಥವಾ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಅಥವಾ #112 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿ.
⚠️ ಎಚ್ಚರಿಕೆಯೇ ಅಪರಾಧ ತಡೆಗೆ ಮೊದಲ ಹೆಜ್ಜೆ. @DgpKarnataka@BlrCityPolice@jt_cpeastbcp
#BengaluruCityPolice #CrimePrevention #PublicSafety #StayAlert #VehicleTheft #SouthEastDivision
ಆಗ್ನೇಯ ವಿಭಾಗದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನಿರ್ಜನ ಪ್ರದೇಶಗಳು, ಜನನಿಬಿಡ ಸ್ಥಳಗಳು, ಬಸ್ ನಿಲ್ದಾಣಗಳು ಹಾಗೂ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ನಡೆಸಿ #AreaDomination ಕಾರ್ಯಾಚರಣೆ ನಡೆಸಿ, ಅನುಮಾನಾಸ್ಪದ ವಾಹನಗಳು ಮತ್ತು ವ್ಯಕ್ತಿಗಳ ದಾಖಲೆಗಳನ್ನು ಕೂಲಂಕುಶವಾಗಿ ಪರಿಶೀಲನೆ ನಡೆಸಿ, ಸಾರ್ವಜನಿಕರಲ್ಲಿ ಭದ್ರತಾ ಭಾವನೆ ಮೂಡಿಸುವ ಜೊತೆಗೆ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲಾಯಿತು.
⚠️ ಸಾರ್ವಜನಿಕರ ಸುರಕ್ಷತೆ ನಮ್ಮ ಆದ್ಯತೆ. 🤝 @DgpKarnataka@BlrCityPolice@jt_cpeastbcp
#BengaluruCityPolice #AreaDomination #PublicSafety #PolicePatrolling #StaySafe #CrimePrevention
ಒಂದೇ ಟ್ಯಾಪ್. ತಕ್ಷಣದ ಸಹಾಯ. ಶೀಘ್ರಗತಿಯ ರಕ್ಷಣೆ.
ಈಗ ಓಲಾ (Ola), ಉಬರ್ (Uber) ಮತ್ತು ನಮ್ಮ ಯಾತ್ರಿ (Namma Yatri) ಆಪ್ಗಳೊಂದಿಗೆ ಸಂಯೋಜಿಸಲಾಗಿದೆ - ನೀವು ಸಂಕಷ್ಟದಲ್ಲಿದ್ದಾಗ 'ಡಯಲ್ 112' ನಿಮ್ಮ ಲೊಕೇಶನ್ ಅನ್ನು ಹಂಚಿಕೊಳ್ಳುವ ಮೂಲಕ ನೇರವಾಗಿ ತುರ್ತು ಸಹಾಯ ಮತ್ತು ಪೊಲೀಸರ ತ್ವರಿತ ಸ್ಪಂದನೆಯನ್ನು ಒದಗಿಸುತ್ತದೆ.
ನಿಮ್ಮ ಸುರಕ್ಷತೆ ನಿಮ್ಮ ಪ್ರಯಾಣದ ಜೊತೆಗಿರಲಿ.
One Tap. Instant Help. Faster Protection.
Now integrated with Ola, Uber & Namma Yatri - Dial 112 connects you directly to emergency support with quick location sharing and rapid police response when you need it most.
Your safety travels with you.
#Dial112 #Namma112 #SafeRide #PassengerSafety #KSP #BCP
ರಾಣಿ ಚೆನ್ನಮ್ಮ ಪಡೆಯವರು ಆಗ್ನೇಯ ವಿಭಾಗದ ಪೊಲೀಸ್ ಠಾಣೆಗಳ ವ್ಯಾಪ್ತಿಯ ಬಸ್ ನಿಲ್ದಾಣಗಳಿಗೆ ಭೇಟಿ ನೀಡಿ, ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸಿದರು. ಸಾರ್ವಜನಿಕ ಸ್ಥಳಗಳಲ್ಲಿ ಸರಗಳ್ಳತನ ಹಾಗೂ ಮೊಬೈಲ್ ಕಳ್ಳತನಗಳ ಬಗ್ಗೆ ಎಚ್ಚರಿಕೆಯಿಂದಿರುವಂತೆ ತಿಳಿಸಿ, ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ತುರ್ತು ಸಂದರ್ಭಗಳಲ್ಲಿ ಪೊಲೀಸ್ ಇಲಾಖೆಯ KSP App, #112 ಹಾಗೂ #1930 ಸಹಾಯವಾಣಿ ಸಂಖ್ಯೆಗಳ ಬಳಕೆಯ ಕುರಿತು ಮಾಹಿತಿಯನ್ನು ನೀಡಿದರು. @DgpKarnataka@BlrCityPolice@jt_cpeastbcp #WomenSafety #PublicAwareness #MobileTheftAwareness #StayAlert #southeastdivision
🚦 ರಸ್ತೆ ಜಗಳ (Road Rage) ನಿಮ್ಮ ಆಕ್ರೋಶವನ್ನು ಅಪರಾಧದ ದಾರಿಗೆ ಕೊಂಡೊಯ್ಯಬಹುದು. ತಾಳ್ಮೆಯೇ ಸುರಕ್ಷಿತ ಸಂಚಾರದ ಮೂಲ ಮಂತ್ರ. ⚠️
ನಗರದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಒತ್ತಡದ ನಡುವೆ ವಾಹನ ಚಾಲನೆ ಮಾಡುವಾಗ ಕೋಪ, ಅಸಹನೆ ಹಾಗೂ ವಾಗ್ವಾದಗಳು ಅಪಘಾತಗಳಿಗೆ ಮತ್ತು ಅನಾಹುತಗಳಿಗೆ ಕಾರಣವಾಗುತ್ತಿವೆ.
🚘 ನೆನಪಿರಲಿ:
• ಕ್ಷಣಿಕ ಕೋಪ ಅಪರಾಧವಾಗಿ, ಜೀವಿತಾವಧಿಯ ಪಶ್ಚಾತ್ತಾಪವಾಗಬಹುದು
• ರಸ್ತೆ ಎಲ್ಲರಿಗೂ ಸಾಮಾನ್ಯ ಸ್ಥಳ
• ಪರಸ್ಪರ ಗೌರವ ಮತ್ತು ಶಾಂತ ಮನೋಭಾವವೇ ಉತ್ತಮ ನಾಗರಿಕತೆ
💡 ಸಂಯಮದಿಂದ ಚಾಲನೆ ಮಾಡಿ – ಸುರಕ್ಷಿತ ಪ್ರಯಾಣ ನಿಮ್ಮ ಮತ್ತು ಇತರರ ಜವಾಬ್ದಾರಿ. @DgpKarnataka@KarnatakaCops@jt_cpeastbcp
#RoadSafety #RoadRageAwareness #SafeDriving #TrafficAwareness #southeastdivision
🚨 ಸೈಬರ್ ವಂಚಕರ ಈ ಸಂದೇಶಕ್ಕೆ ಮೋಸ ಹೋಗಬೇಡಿ
“Sir, please install this APK file…”
ಸೈಬರ್ ವಂಚಕರು ಬ್ಯಾಂಕ್ ಅಥವಾ ಕ್ರೆಡಿಟ್ ಕಾರ್ಡ್ ಅಧಿಕಾರಿಗಳಂತೆ ನಟಿಸಿ WhatsApp ಅಥವಾ SMS ಮೂಲಕ .APK ಫೈಲ್ಗಳನ್ನು ಕಳುಹಿಸುತ್ತಾರೆ. ನೀವು ಆ ಫೈಲ್ನ್ನು ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡಿದ ತಕ್ಷಣ, ವಂಚಕರು ನಿಮ್ಮ ಮೊಬೈಲ್ಗೆ ಅನಧಿಕೃತ ಪ್ರವೇಶ ಪಡೆಯಬಹುದು.
ನಂತರ ನಿಮ್ಮ ಫೋನ್ ಡೇಟಾ, ಬ್ಯಾಂಕಿಂಗ್ ಮಾಹಿತಿ, OTP ಹಾಗೂ ವೈಯಕ್ತಿಕ ಮಾಹಿತಿಯನ್ನು ದುರುಪಯೋಗಪಡಿಸಿ ನಿಮ್ಮ ಖಾತೆಯಿಂದ ಹಣ ಕಳವು ಮಾಡಬಹುದು— ನಿಮಗೆ ತಿಳಿಯದೇ. 📱💳
🔒 ಸುರಕ್ಷಿತವಾಗಿರಿ:
• ಅಪರಿಚಿತ APK ಫೈಲ್ಗಳು ಅಥವಾ ಆ್ಯಪ್ಗಳನ್ನು ಎಂದಿಗೂ ಡೌನ್ಲೋಡ್ ಮಾಡಬೇಡಿ
• Google Play Store ಅಥವಾ App Store ಮುಂತಾದ ಅಧಿಕೃತ ಆ್ಯಪ್ ಸ್ಟೋರ್ಗಳಿಂದ ಮಾತ್ರ ಆ್ಯಪ್ಗಳನ್ನು ಇನ್ಸ್ಟಾಲ್ ಮಾಡಿ
• ಪರಿಶೀಲಿಸದ ಲಿಂಕ್, ಫೈಲ್ ಅಥವಾ ಸಂದೇಶಗಳ ಮೇಲೆ ಕ್ಲಿಕ್ ಮಾಡಬೇಡಿ
• ಬ್ಯಾಂಕ್ ಅಥವಾ ಕಸ್ಟಮರ್ ಕೇರ್ ಅಧಿಕಾರಿಗಳೆಂದು ಹೇಳುವ ಕರೆಗಳ ಬಗ್ಗೆ ಎಚ್ಚರಿಕೆಯಿಂದಿರಿ
📞 ಸೈಬರ್ ವಂಚನೆಗೆ ಒಳಗಾದರೆ ತಕ್ಷಣ 1930 ಗೆ ಕರೆ ಮಾಡಿ ಅಥವಾ 🌐 https://t.co/gi1itlrihq ನಲ್ಲಿ ದೂರು ದಾಖಲಿಸಿ @DgpKarnataka@BlrCityPolice@jt_cpeastbcp
#CyberAwareness #CyberSafety #APKScam #WhatsAppScam #OnlineFraud #CyberCrime #StayAlert
@bomanahalli_ps ವ್ಯಾಪ್ತಿಯ ರೂಪೇನ ಅಗ್ರಹಾರ ಗ್ರಾಮದಲ್ಲಿ ನಡೆದ ಬ್ರಹ್ಮ ರಥೋತ್ಸವದ ಪ್ರಯುಕ್ತ ನಡೆದ ರಥೋತ್ಸವ ನಿಮಿತ್ತ ಪ್ರಮುಖ ಸ್ಥಳಗಳಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಟ್ಟುನಿಟ್ಟಿನ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಸಾರ್ವಜನಿಕರ ಸುರಕ್ಷತೆ ಮತ್ತು ಶಾಂತಿ-ಸುವ್ಯವಸ್ಥೆಯನ್ನು ಕಾಪಾಡಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಲಾಗಿದೆ. @KarnatakaCops@BlrCityPolice
#PublicSafety #StaySafe #LawAndOrder #PoliceBandobast #SouthEastDivision
🚨 ನಕಲಿ ಇ-ಮೇಲ್ ವಂಚನೆ ಎಚ್ಚರಿಕೆ 🚨
ಸೈಬರ್ ವಂಚಕರು ನಕಲಿ ಇ-ಮೇಲ್ ಸಂದೇಶಗಳ ಮೂಲಕ ಜನರನ್ನು ಮೋಸಗೊಳಿಸಿ ಹಣ ದೋಚುತ್ತಿದ್ದಾರೆ. ⚠️
ನಿಮಗೆ ಪರಿಚಿತವಾಗಿರುವ ಇ-ಮೇಲ್ ಐಡಿಯಂತೆ ಕಾಣುವ ನಕಲಿ ಇ-ಮೇಲ್ ವಿಳಾಸಗಳನ್ನು ಸೃಷ್ಟಿಸಿ, ಅದರಲ್ಲಿ ಅಪಾಯಕಾರಿ ಲಿಂಕ್ಗಳು ಹಾಗೂ ಅಟ್ಯಾಚ್ಮೆಂಟ್ಗಳನ್ನು ಕಳುಹಿಸಿ ವಂಚನೆ ನಡೆಸಲಾಗುತ್ತಿದೆ.
🔍 ಎಚ್ಚರಿಕೆಯಿಂದಿರಿ:
• ಅಪರಿಚಿತ ಲಿಂಕ್ & ಅಟ್ಯಾಚ್ಮೆಂಟ್ಗಳನ್ನು ಕ್ಲಿಕ್ ಮಾಡಬೇಡಿ ❌
• ಇ-ಮೇಲ್ ಕಳುಹಿಸಿದವರ ವಿಳಾಸವನ್ನು ಸರಿಯಾಗಿ ಪರಿಶೀಲಿಸಿ 📧
• OTP, ಪಾಸ್ವರ್ಡ್, ಬ್ಯಾಂಕ್ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ 🔒
• ಅನುಮಾನಾಸ್ಪದ ಇ-ಮೇಲ್ ಕಂಡರೆ ತಕ್ಷಣ 1930 ಗೆ ವರದಿ ಮಾಡಿ 🚔
💡 ಸುರಕ್ಷಿತವಾಗಿರಿ – ಸೈಬರ್ ವಂಚನೆಗಳಿಂದ ನಿಮ್ಮ ಮಾಹಿತಿಯನ್ನೂ ಹಣವನ್ನೂ ಕಾಪಾಡಿಕೊಳ್ಳಿ. @DgpKarnataka@BlrCityPolice@jt_cpeastbcp
#CyberSafety #EmailFraud #StayAlert #CyberCrimeAwareness #SafeInternet #southeastdivision
🚨 ಆನ್ಲೈನ್ ಬೆಟ್ಟಿಂಗ್ ಎಚ್ಚರಿಕೆ 🚨
ಆನ್ಲೈನ್ ಬೆಟ್ಟಿಂಗ್ ಶಿಕ್ಷಾರ್ಹ ಅಪರಾಧವಾಗಿದೆ. ⚠️
ಆನ್ಲೈನ್ ಗೇಮಿಂಗ್ ಆಪ್ಗಳ ಮೂಲಕ ಆರಂಭದಲ್ಲಿ ಹಣ ದ್ವಿಗುಣ, ಹೆಚ್ಚಿನ ಲಾಭದ ಆಮಿಷವೊಡ್ಡಿ, ಬಳಿಕ ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಿದ ನಂತರ ತಾಂತ್ರಿಕ ವಂಚನೆ ಮೂಲಕ ಹಣ ವಂಚಿಸಲಾಗುತ್ತದೆ. 💸 ವಂಚಕರು ಈ ಹಣವನ್ನು ವಿದೇಶಗಳಿಗೆ ಅಥವಾ ಬೇನಾಮಿ ಖಾತೆಗಳಿಗೆ ವರ್ಗಾಯಿಸುತ್ತಾರೆ. ❌
💡 ಜಾಗರೂಕರಾಗಿರಿ:
• ಸುಲಭ ಹಣದ ಆಮಿಷಕ್ಕೆ ಒಳಗಾಗಬೇಡಿ
• ಅನುಮಾನಾಸ್ಪದ ಗೇಮಿಂಗ್/ಬೆಟ್ಟಿಂಗ್ ಆಪ್ಗಳನ್ನು ಬಳಸಬೇಡಿ
• ನಿಮ್ಮ ವೈಯಕ್ತಿಕ/ಬ್ಯಾಂಕ್ ವಿವರಗಳನ್ನು ಹಂಚಿಕೊಳ್ಳಬೇಡಿ
• ಸೈಬರ್ ವಂಚನೆ ಕಂಡುಬಂದರೆ ತಕ್ಷಣ 1930 ಗೆ ಕರೆ ಮಾಡಿ @DgpKarnataka@BlrCityPolice@jt_cpeastbcp
#CyberSafety #OnlineBetting #StayAlert #CyberCrime #StopOnlineFraud
🚸 ಮಕ್ಕಳ ಸುರಕ್ಷತೆ ಕುರಿತು ಜಾಗೃತಿ ಕಾರ್ಯಕ್ರಮ 🚸
ಆಗ್ನೇಯ ವಿಭಾಗದ ರಾಣಿ ಚೆನ್ನಮ್ಮ ಪಡೆಯ ಸಿಬ್ಬಂದಿಯವರು ಮಕ್ಕಳ ಹಕ್ಕುಗಳು ಹಾಗೂ ಮಕ್ಕಳಿಗೆ ಸಂಬಂಧಿಸಿದ ಕಾನೂನುಗಳ ಬಗ್ಗೆ ಅರಿವು ಮೂಡಿಸಿ, ಆಟವಾಡುವ ಸಮಯದಲ್ಲಿ ಹೆಚ್ಚಿನ ಸುರಕ್ಷತೆ ಬಗ್ಗೆ ಗಮನ ಹರಿಸುವಂತೆ ತಿಳಿಸಿ. ಅಪರಿಚಿತ ವ್ಯಕ್ತಿಗಳು ಹಾಗೂ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ತಕ್ಷಣ ಪೋಷಕರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡುವಂತೆ ಜಾಗೃತಿ ಮೂಡಿಸಲಾಯಿತು.
ಇದೇ ವೇಳೆ ಧೂಮಪಾನ ವಿರೋಧಿ ಜಾಗೃತಿ ಮೂಡಿಸಿ, ತುರ್ತು ಸಂದರ್ಭಗಳಲ್ಲಿ ಪೊಲೀಸ್ ಇಲಾಖೆಯ KSP App, Dial 112 ಹಾಗೂ 1930 ಸಹಾಯವಾಣಿ ಸಂಖ್ಯೆಗಳ ಬಳಕೆ ಕುರಿತು ಮಕ್ಕಳಿಗೆ ತಿಳಿಸಲಾಯಿತು. 👮♂️📞 @DgpKarnataka@BlrCityPolice@jt_cpeastbcp #ChildSafety #Childlaws #PoliceAwareness #SayNoToSmoking #KSP #Dial112 #CyberSafety #SouthEastDivision
“ಡಿಜಿಟಲ್ ಅರೆಸ್ಟ್” ಎಂಬ ಸೈಬರ್ ವಂಚನೆಗಳಿಂದ ಜಾಗ್ರತೆ ವಹಿಸಿ! 🚨
ಪೊಲೀಸರು ಅಥವಾ ಯಾವುದೇ ತನಿಖಾ ಸಂಸ್ಥೆಗಳು ವಿಡಿಯೋ ಕಾಲ್ ಮೂಲಕ ಯಾರನ್ನೂ ಬಂಧಿಸುವುದಿಲ್ಲ.
ಭಾರತದಲ್ಲಿ “ಡಿಜಿಟಲ್ ಅರೆಸ್ಟ್” ಎಂಬ ಕಾನೂನು ಅಸ್ತಿತ್ವದಲ್ಲೇ ಇಲ್ಲ.
⚠️ ವಂಚಕರು ಸಾಮಾನ್ಯವಾಗಿ:
• ಪೊಲೀಸರಂತೆ ಅಥವಾ ಅಧಿಕಾರಿಗಳಂತೆ ನಟಿಸುತ್ತಾರೆ
• ನಿಮ್ಮನ್ನು ಹೆದರಿಸಿ ತಕ್ಷಣ ಹಣ ವರ್ಗಾವಣೆ ಮಾಡಲು ಒತ್ತಾಯಿಸುತ್ತಾರೆ
💡 ಸುರಕ್ಷಿತವಾಗಿರಿ:
• ಅಪರಿಚಿತ ಕರೆಗಳು/ವಿಡಿಯೋ ಕಾಲ್ಗಳಿಗೆ ನಂಬಿಕೆ ಇಡಬೇಡಿ
• OTP, ಬ್ಯಾಂಕ್ ವಿವರಗಳು ಅಥವಾ ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬೇಡಿ
• ಯಾವುದೇ ಒತ್ತಡಕ್ಕೆ ಒಳಗಾಗದೆ ಕರೆಗಳನ್ನು ತಕ್ಷಣ ಕಡಿತಗೊಳಿಸಿ
• ತಕ್ಷಣ ನಿಮ್ಮ ಸ್ಥಳೀಯ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ
• ಅಥವಾ 1930 ಸೈಬರ್ ಕ್ರೈಂ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ
ಜಾಗೃತರಾಗಿ – ಸುರಕ್ಷಿತರಾಗಿ! 🔐 @DgpKarnataka@BlrCityPolice@jt_cpeastbcp #DigitalArrestScam #CyberSafety #OnlineSafety #StopCyberCrime #FraudAwareness #ThinkBeforeYouClick #SouthEastDivision
🚨 ಆನ್ಲೈನ್ ಉದ್ಯೋಗ ವಂಚನೆ ಎಚ್ಚರಿಕೆ 🚨
ವಂಚಕರು ಪ್ರಸಿದ್ಧ ಕಂಪನಿಗಳಲ್ಲಿ ಉದ್ಯೋಗಾವಕಾಶಗಳ ಹೆಸರಿನಲ್ಲಿ ವೈಯಕ್ತಿಕ ಇಮೇಲ್ಗಳನ್ನು ಕಳುಹಿಸುತ್ತಾರೆ. ಒಮ್ಮೆ ನೀವು ನಂಬಿದರೆ, ನೋಂದಣಿ ಶುಲ್ಕ ಹಾಗೂ ಇತರ ಕ್ರಮಗಳ ಹೆಸರಿನಲ್ಲಿ ಹಣವನ್ನು ಕೇಳುತ್ತಾರೆ. ⚠️
💡 ಸುರಕ್ಷಿತವಾಗಿರಿ:
• ಉದ್ಯೋಗಕ್ಕಾಗಿ ಯಾವುದೇ ಹಣವನ್ನು ಪಾವತಿಸಬೇಡಿ
• ವೈಯಕ್ತಿಕ ಮಾಹಿತಿ, ದಾಖಲೆಗಳು ಹಾಗೂ OTPಗಳನ್ನು ಯಾರಿಗೂ ನೀಡಬೇಡಿ
• ಕಂಪನಿಯ ಅಧಿಕೃತ ವೆಬ್ಸೈಟ್ನಲ್ಲಿ ಪರಿಶೀಲಿಸಿ
• ಅಪರಿಚಿತ ಇಮೇಲ್ಗಳು ಮತ್ತು ಆಫರ್ಗಳ ಬಗ್ಗೆ ಎಚ್ಚರಿಕೆಯಿಂದಿರಿ
• ಸಂಶಯಾಸ್ಪದ ಚಟುವಟಿಕೆಗಳನ್ನು ತಕ್ಷಣ 1930ಕ್ಕೆ ಕರೆ ಮಾಡಿ ಅಥವಾ https://t.co/ls7iPglLFn ನಲ್ಲಿ ದೂರು ದಾಖಲಿಸಿ
🔒 ಎಚ್ಚರಿಕೆಯಿಂದಿರಿ. ಸುರಕ್ಷಿತವಾಗಿರಿ. @DgpKarnataka@KarnatakaCops@BlrCityPolice@jt_cpeastbcp #CyberSafety #OnlineFraud #JobScam #StayAlert #StaySafe #SouthEastDivision
🚨 ಸೈಬರ್ ಸುರಕ್ಷತಾ ಎಚ್ಚರಿಕೆ🚨
ಯಾರಾದರೂ ನಿಮ್ಮನ್ನು ಇಂಟರ್ನೆಟ್ನಲ್ಲಿ ಹಿಂಬಾಲಿಸುತ್ತಿದ್ದಾರೆಯೇ? ಮೋಸ ಹೋಗಬೇಡಿ. ಎಚ್ಚರಿಕೆಯಿಂದಿರಿ ಮತ್ತು ನಿಮ್ಮ ಡಿಜಿಟಲ್ ಸುರಕ್ಷತೆಯನ್ನು ಕಾಪಾಡಿಕೊಳ್ಳಿ. ⚠️
🔒 ವೈಯಕ್ತಿಕ ಮಾಹಿತಿಯನ್ನು ಆನ್ಲೈನ್ನಲ್ಲಿ ಹಂಚಿಕೊಳ್ಳಬೇಡಿ
📱 ಸಾಮಾಜಿಕ ಜಾಲತಾಣಗಳ ಪ್ರೈವಸಿ ಸೆಟ್ಟಿಂಗ್ಸ್ ಪರಿಶೀಲಿಸಿ
🚫 ಅಪರಿಚಿತರ ವಿನಂತಿಗಳನ್ನು ಅಂಗೀಕರಿಸಬೇಡಿ
📢 ಅನುಮಾನಾಸ್ಪದ ಚಟುವಟಿಕೆಗಳನ್ನು ತಕ್ಷಣವೇ ವರದಿ ಮಾಡಿ
📞 ಸಹಾಯಕ್ಕಾಗಿ 1930 ಕರೆ ಮಾಡಿ ಅಥವಾ https://t.co/ls7iPglLFn ನಲ್ಲಿ ದೂರು ದಾಖಲಿಸಿ @DgpKarnataka@BlrCityPolice@jt_cpeastbcp #CyberSafety #StayAlert #StopCyberCrime #OnlineSecurity #ThinkBeforeYouClick #SouthEastDivision
ಆಗ್ನೇಯ ವಿಭಾಗದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಕ್ಕಳಿಗೆ ತೆರೆದ ಮನೆ ಕಾರ್ಯಕ್ರಮ ಹಾಗೂ ಸಾರ್ವಜನಿಕರಿಗೆ ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮಗಳು, ಧೂಮಪಾನ ವಿರೋಧಿ ಜಾಗೃತಿ, ಸೈಬರ್ ಅಪರಾಧ ತಡೆಗಟ್ಟುವಿಕೆ ಹಾಗೂ ತುರ್ತು ಸಂದರ್ಭಗಳಲ್ಲಿ ಪೊಲೀಸ್ ಇಲಾಖೆಯ KSP App, Dial 112 ಮತ್ತು 1930 ಸಹಾಯವಾಣಿ ಸಂಖ್ಯೆಗಳ ಬಳಕೆ ಕುರಿತು ಜಾಗೃತಿ ಮೂಡಿಸಲಾಯಿತು. @DgpKarnataka@BlrCityPolice@jt_cpeastbcp #PoliceAwareness #DrugFreekarnataka #SayNoToDrugs #NoSmoking #HealthyLife #CyberSafety
🚨 ಸೈಬರ್ ವಂಚನೆ ಬಗ್ಗೆ ಎಚ್ಚರಿಕೆ: AePS ನಲ್ಲಿ ಡೀಪ್ಫೇಕ್ ಅಪಾಯ 🚨
ಮೋಸಗಾರರು ಈಗ AI ಮೂಲಕ ಸೃಷ್ಟಿಸಲಾದ ಡೀಪ್ಫೇಕ್ ವೀಡಿಯೊಗಳನ್ನು ಬಳಸಿ, Aadhaar Enabled Payment System (AePS) ನಲ್ಲಿ ಇರುವ ಮುಖ ಗುರುತಿಸುವ (Facial Recognition) ಭದ್ರತೆಯನ್ನು ಮೀರಿಸುತ್ತಿದ್ದಾರೆ — OTP ಪರಿಶೀಲನೆಯನ್ನೂ ಸಂಪೂರ್ಣವಾಗಿ ತಪ್ಪಿಸುತ್ತಿದ್ದಾರೆ. ⚠️
💡 ಮೋಸದ ವಿಧಾನ:
• ಸಾರ್ವಜನಿಕವಾಗಿ ಲಭ್ಯವಿರುವ ಫೋಟೋ ಅಥವಾ ವೀಡಿಯೊಗಳಿಂದ ನಿಮ್ಮ ಮುಖವನ್ನು AI ಬಳಸಿ ನಕಲಿಸುವುದು
• ಮುಖ ಗುರುತಿಸುವ ವ್ಯವಸ್ಥೆಯನ್ನು ಮರುಳುಗೊಳಿಸುವುದು
• OTP ಇಲ್ಲದೇ ಅನಧಿಕೃತ ಹಣಕಾಸು ವ್ಯವಹಾರಗಳು
🔐 ಸುರಕ್ಷಿತವಾಗಿರಿ:
• ಅಪರಿಚಿತ ಆಪ್ಗಳು ಅಥವಾ ಲಿಂಕ್ಗಳಿಗೆ ನಿಮ್ಮ ಫೋಟೋ/ವೀಡಿಯೊ ಹಂಚಿಕೊಳ್ಳಬೇಡಿ 📱
• ಸಂಶಯಾಸ್ಪದ KYC ಅಪ್ಡೇಟ್ ವಿನಂತಿಗಳನ್ನು ತಪ್ಪಿಸಿ ❌
• ಅಧಿಕೃತ ಬ್ಯಾಂಕಿಂಗ್ ವೇದಿಕೆಗಳನ್ನೇ ಬಳಸಿ.
• ಸಂಶಯಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣ ನಿಮ್ಮ ಬ್ಯಾಂಕ್ಗೆ ತಿಳಿಸಿ
📞 1930ಕ್ಕೆ ಕರೆ ಮಾಡಿ ಅಥವಾ https://t.co/gi1itlrihq ವೆಬ್ಸೈಟ್ಗೆ ಭೇಟಿ ನೀಡಿ @DgpKarnataka@BlrCityPolice@jt_cpeastbcp #CyberCrimeAlert #Deepfake #AePS #CyberSafety #StaySafeOnline #DigitalSecurity #SouthEastDivision
👮♂️ ಈ ಕಾರ್ಮಿಕರ ದಿನಾಚರಣೆಯಂದು, ಉತ್ತಮ ಸಮಾಜವನ್ನು ನಿರ್ಮಿಸಲು ಶ್ರಮಿಸುತ್ತಿರುವ ಪ್ರತಿಯೊಬ್ಬ ಕಾರ್ಮಿಕರ ಶ್ರಮ ಮತ್ತು ಸಮರ್ಪಣೆಗೆ ನಮ್ಮ ಗೌರವಪೂರ್ಣ ವಂದನೆಗಳು. ನಿಮ್ಮ ಪರಿಶ್ರಮವೇ ನಮ್ಮ ಶಕ್ತಿಯ ಮೂಲ.
On this International Workers' Day, we extend our respectful salute to every worker whose hard work and dedication are building a better society.
Your effort is the true source of our strength. @DgpKarnataka@BlrCityPolice@jt_cpeastbcp #ಕಾರ್ಮಿಕರದಿನ #PublicSafety #LabourDay #SouthEastDivision
ಮಾದಕ ವಸ್ತುಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ಆಗ್ನೇಯ ವಿಭಾಗದ @adugodips & @hsrlayoutps ತಂಡವು ಮೂವರು ಆರೋಪಿಗಳನ್ನು ಬಂಧಿಸಿ, ಅವರಿಂದ ಗಾಂಜಾ, ಚರಸ್ ಮತ್ತು ಹೆರಾಯಿನ್ ಅನ್ನು ವಶಪಡಿಸಿಕೊಂಡಿದ್ದು, ಮಾನ್ಯ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು ಮತ್ತು ಹಿರಿಯ ಅಧಿಕಾರಿಗಳು ಆಗ್ನೇಯ ವಿಭಾಗದ ಪೊಲೀಸರು ನಿಷೇಧಿತ ಮಾದಕ ವಸ್ತುಗಳ ವಿರುದ್ದ ನಡೆಸುತ್ತಿರುವ ಪರಿಣಾಮಕಾರಿ ಕಾರ್ಯಾಚರಣೆಯನ್ನು ಪ್ರಶಂಸಿಸಿರುತ್ತಾರೆ. ಸಭೆಯಲ್ಲಿ ಮಾದಕ ವಸ್ತು ಮುಕ್ತ ಕರ್ನಾಟಕವನ್ನು ನಿರ್ಮಿಸಲು ಕರೆ ನೀಡಿರುತ್ತಾರೆ. @DgpKarnataka@KarnatakaCops@BlrCityPolice@jt_cpeastbcp #DrugFreeKarnataka #SayNoToDrugs #StaySafe #DrugAwareness #SouthEastDivision