ಸಾಮಾಜಿಕ ಜಾಲತಾಣದಲ್ಲಿ Ganesh B ಎಂಬವ ರಾಜ್ಯದ ನೂತನ ಗೃಹ ಸಚಿವರಾದ ಮಾನ್ಯ @PriyankKharge ಯವರನ್ನು ಅಶ್ಲೀಲ ಪದಗಳಿಂದ ನಿಂದಿಸಿ ಅವಹೇಳನಕಾರಿಯಾದ ಕಾಮೆಂಟ್ ಮಾಡಿದ್ದು, ತಕ್ಷಣವೇ ಆತನ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇನೆ.
@DgpKarnataka@CMofKarnataka
ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಶ್ರೀ @DKShivakumar ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ @DrParameshwara ಮತ್ತು ನೂತನ ಮಂತ್ರಿಗಳಿಗೆ ಅಭಿನಂದನೆಗಳು.
ಕರ್ನಾಟಕ ರಾಜ್ಯದ 7 ಕೋಟಿ ಜನರ ಅಶೋತ್ತರಗಳಿಗೆ ಪೂರಕವಾಗಿ, ಉತ್ತಮವಾಗಿ ಕೆಲಸ ನಿರ್ವಹಿಸುತ್ತೀರಿ ಎಂಬ ಆಶಾಭಾವನೆಯೊಂದಿಗೆ ಶುಭಕಾಮನೆಗಳು
ರಾಂಪುರದಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಅವರು ಮುಸ್ಲಿಂ ಸಮುದಾಯದ ವಿರುದ್ಧ ಅವಹೇಳನಕಾರಿ ಪದ ಬಳಸಿ ದ್ವೇಷ ಭಾಷಣ ಮಾಡಿರುವುದನ್ನು ಖಂಡಿಸಿ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದೇವೆ. ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು.
@CMofKarnataka@DgpKarnataka @SPChikkamagaluru
ಈ ಕೋಮುಕ್ರಿಮಿಯ ಪ್ರಚೋದನೆಯಿಂದ KG ಹಳ್ಳಿ, DJ ಹಳ್ಳಿ ಗಲಭೆ ಉಂಟಾದದ್ದು, ಪ್ರಾಣಹಾನಿ, ಆಸ್ತಿ ಹಾನಿ ಸಂಭವಿಸಿ, ನೂರಾರು ಕೇಸುಗಳು ಧಾಖಲಾಗಿ, ನೂರಾರು ಬಂಧನ ನಡೆದು, ಇಂದಿಗೂ ಹಲವು ಅಮಾಯಕರು ಜೈಲಿನಲ್ಲಿ ಕೊಳೆಯುತ್ತಿರುವುದು.
ಇಂತಹ ಕೋಮು ವಿದ್ವೇಷ ಹರಡುವ ವೈರಸ್ ಗಳನ್ನು ಪೊಲೀಸ್ ಇಲಾಖೆ ಮಟ್ಟ ಹಾಕದಿದ್ದರೆ, ಇನ್ನೊಂದು ಅನಾಹುತಕ್ಕೆ ದಾರಿ ಆಗುತ್ತದೆ.
ಆದ್ರೆ ಏನು ಮಾಡುವುದು ಕಾಂಗ್ರೇಸ್ ಸರ್ಕಾರ ಗಾಢ ನಿದ್ರೆಯಲ್ಲಿದೆ.
@CMofKarnataka@osd_cmkarnataka@DKShivakumar@DgpKarnataka@CPBlr
ಇಲ್ಲಿ ಹಾಕಿರುವ fb ಪೋಸ್ಟ್ ನ ಸ್ಕ್ರೀನ್ ಶಾರ್ಟ್ ಚಿತ್ರಗಳು ಆತೂರಿನ ಒಬ್ಬರು ಶಿಕ್ಷಕಿಗೆ 10/5/26ರಂದು ಸರ್ಕಾರಿ ಬಸ್ಸಿನಲ್ಲಿ ಆದ ಕಹಿ ಘಟನೆಯ ಒಂದು ಪೋಸ್ಟ್ ಆಗಿರುತ್ತದೆ.
ಪೋಸ್ಟ್ ಗೆ ಸಂಬಂಧಿಸಿದಂತೆ KA19F3151 ಸಂಖ್ಯೆಯ ಬಸ್ ನಿರ್ವಾಹಕನ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸುತ್ತೇನೆ.
@KSRTC_Journeys
https://t.co/6QjoKSh7dk
ತಲ್ವಾರ್ ಹಿಡಿದುಕೊಂಡು ಸಾರ್ವಜನಿಕವಾಗಿ ಪುಂಡಾಟ ಮೆರೆಯುತ್ತಿರುವ ಈ ಕೀರಾತಕರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆಗಳು ಸಮಾಜದ ಶಾಂತಿ ಮತ್ತು ಭದ್ರತೆಗೆ ಗಂಭೀರ ಬೆದರಿಕೆ.
ದಾವಣಗೆರೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳೇ, @SP_Davanagere ಆರೋಪಿಗಳನ್ನು ತಕ್ಷಣ ಬಂಧಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತೇನೆ.
#LawAndOrder #Davanagere #PublicSafety #StopViolence
@DavanagerePolice @KarnatakaPolice
ಮೂಡಿಗೆರೆ ತಾಲೂಕಿನ ಬಿದ್ರೆಹಳ್ಳಿ ದರ್ಗಾ ಊರುಸ್ ವೇಳೆ ಪ್ರತಿವರ್ಷ ಕರೆಂಟ್ ಕಡಿತವಾಗುತ್ತಿರುವುದು ಗಂಭೀರ ವಿಷಯ. ಸಾವಿರಾರು ಜನ ಸೇರುವ ಸಂದರ್ಭದಲ್ಲಿ ಕತ್ತಲೆ ಭಯ ಹುಟ್ಟಿಸುತ್ತಿದೆ.
ಇದು ಉದ್ದೇಶಪೂರ್ವಕವೇ? ತಕ್ಷಣ ತನಿಖೆ ನಡೆಸಿ ನಿರಂತರ ವಿದ್ಯುತ್ ಪೂರೈಕೆ ಖಚಿತಪಡಿಸಿ.
@NayanaJhawar @KarnatakaKEB @SDPI_KarPresi
ತಮಿಳುನಾಡಿನ ಚುನಾವಣಾ ಪ್ರಚಾರದ ವೇಳೆ, ಪವಿತ್ರವಾದ Basilica of Our Lady of Good Health (ವೆಳಾಂಕಣ್ಣಿ ಚರ್ಚ್) ಗೆ ಭೇಟಿ ನೀಡುವ ಅವಕಾಶ ಲಭಿಸಿತು.
ಮಾನ್ಯ ರೆವರೆಂಡ್ ಫಾದರ್ ಇರುದಯರಾಜ್ ಅವರನ್ನು ಭೇಟಿಯಾಗಿ, ಪ್ರಸ್ತುತ ಸಾಮಾಜಿಕ-ರಾಜಕೀಯ ವಿಷಯಗಳ ಕುರಿತು ಅರ್ಥಪೂರ್ಣ ಚರ್ಚೆ ನಡೆಸಲಾಯಿತು.
SDPI ನಡೆಸುತ್ತಿರುವ ಮಾನವೀಯ ಸೇವೆಯನ್ನು ಫಾದರ್ ಮೆಚ್ಚಿ ಪ್ರಶಂಸಿಸಿ, ನಮ್ಮ ಪ್ರಯತ್ನಗಳಿಗೆ ಹೃದಯಪೂರ್ವಕ ಆಶೀರ್ವಾದ ಮತ್ತು ಪ್ರಾರ್ಥನೆಗಳನ್ನು ಸಲ್ಲಿಸಿದರು.
ನನ್ನಿಲಂ ಕ್ಷೇತ್ರದ SDPI ಅಭ್ಯರ್ಥಿ Mohammed Mubarak ಅವರ ಗೆಲುವಿಗಾಗಿ ಹಾಗೂ SDPI ಯಶಸ್ಸಿಗಾಗಿ ಅವರ ಆಶೀರ್ವಾದ ಮತ್ತು ಪ್ರಾರ್ಥನೆಗಳನ್ನು ಕೋರಲಾಯಿತು.
ಇಂತಹ ಭೇಟಿ-ಸಂವಾದಗಳು ಸಮಾಜದಲ್ಲಿ ಸೌಹಾರ್ದತೆ, ಪರಸ್ಪರ ಗೌರವ ಮತ್ತು ಸಮಾನತೆಯ ಮೌಲ್ಯಗಳನ್ನು ಮತ್ತಷ್ಟು ಬಲಪಡಿಸುತ್ತವೆ.
#Velankanni #TamilNadu #Unity #Peace #SDPI #Nannilam #MohammedMubarak #ElectionCampaign
The Bombay High Court’s discharge of all accused in the 2006 Malegaon blast case is a grave blow to justice. After 20 years, no accountability for innocent lives lost. From false targeting of Muslim youth to the collapse of the case, justice has been denied and truth buried.#SDPI #malegaonblast
ಚಿಕ್ಕಮಗಳೂರು: ಆದಿಶಕ್ತಿ ಭಾರತ್ ಗ್ಯಾಸ್ ನಿರ್ಲಕ್ಷ್ಯ!
ಶಾರ್ಫುನ್ನಿಸ ಅವರಿಗೆ 2021ರಲ್ಲಿ ಉಚಿತ ಗ್ಯಾಸ್ ಸಿಕ್ಕಿದರೂ, ಹಲವು ಬಾರಿ ಬುಕ್ಕಿಂಗ್ ಮಾಡಿದರೂ 1 ಸಲ ಮಾತ್ರ ಸಿಲಿಂಡರ್.
ಬಡವರ ಮೇಲೆ ಅನ್ಯಾಯ — ತಕ್ಷಣ ಕ್ರಮ ಕೈಗೊಳ್ಳಿ.
@PetroleumMin@IndianOilcl@CMofKarnataka @dcchikmagalur #UjjwalaYojana#Chikkamagaluru
ಹುಬ್ಬಳ್ಳಿಯಲ್ಲಿ ಯೂತ್ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಫಿರೋಜ್ ಪಠಾಣ್ ಅವರ ಭೀಕರ ಕೊಲೆ ಈ ಘಟನೆಗಳು ರಾಜ್ಯದ ಕಾನೂನು-ಸುವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸುತ್ತಿವೆ. ಕಾಂಗ್ರೆಸ್ ಸರ್ಕಾರದಲ್ಲೇ ತಮ್ಮದೇ ನಾಯಕರಿಗೂ ರಕ್ಷಣೆ ಇಲ್ಲದಿದ್ದರೆ, ಸಾಮಾನ್ಯ ಜನರ ಭದ್ರತೆ ಯಾವ ಮಟ್ಟದಲ್ಲಿದೆ?
ಇಂತಹ ಸಂದರ್ಭಗಳಲ್ಲಿ ಸರ್ಕಾರದ ನಿಧಾನ ಕ್ರಮಗಳು ಮತ್ತು ನಾಯಕತ್ವದ ಮೌನ ಜನರಲ್ಲಿ ಆತಂಕವನ್ನು ಹೆಚ್ಚಿಸುತ್ತಿವೆ. ದೋಷಿಗಳನ್ನು ತಕ್ಷಣ ಬಂಧಿಸಿ, ಪಾರದರ್ಶಕ ತನಿಖೆ ನಡೆಸಿ, ಕಠಿಣ ಶಿಕ್ಷೆ ವಿಧಿಸಬೇಕು. ಪೀಡಿತ ಕುಟುಂಬಗಳಿಗೆ ನ್ಯಾಯ ದೊರಕುವಂತೆ ಸರ್ಕಾರ ನಿಂತು ಕೆಲಸ ಮಾಡಬೇಕು.
@CMofKarnataka@siddaramaiah@DKShivakumar@INCKarnataka@INCTweets@KarnatakaPolice @DGP_Karnataka
#JusticeForFirozPathan #LawAndOrder #Accountability #Karnataka #Hubballi #Dharwad #SDPI #AfsarKodlipete #NewPolitics
ದಾವಣಗೆರೆ ದಕ್ಷಿಣದಲ್ಲಿ ಬದಲಾವಣೆಯ ಹೆಜ್ಜೆ
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI Karnataka) ಅಭ್ಯರ್ಥಿಯಾಗಿ ನಾನು ಇಂದು ಅಧಿಕೃತವಾಗಿ ನಾಮಪತ್ರ ಸಲ್ಲಿಸಿದ್ದೇನೆ. ಈ ಕ್ಷಣವು ಕೇವಲ ಒಂದು ಚುನಾವಣಾ ಪ್ರಕ್ರಿಯೆಯ ಭಾಗವಲ್ಲ, ಇದು ಜನರ ಸ್ವಾಭಿಮಾನ, ನ್ಯಾಯ ಮತ್ತು ಸಮಾನತೆಯ ಹೋರಾಟದ ಹೊಸ ಅಧ್ಯಾಯಕ್ಕೆ ಚಾಲನೆ ನೀಡಿದ ಮಹತ್ವದ ಹೆಜ್ಜೆಯಾಗಿದೆ.
ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಪುಟ್ಟನಂಜಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಮುಜಾಹಿದ್ ಪಾಷಾ, ರಾಜ್ಯ ಕೋಶಾಧಿಕಾರಿ ಅಮ್ಜದ್ ಖಾನ್, ರಾಜ್ಯ ಸಮಿತಿ ಸದಸ್ಯರಾದ ಫಯಾಜ್ ದಾವಣಗೆರೆ, ಜಿಲ್ಲಾಧ್ಯಕ್ಷರಾದ ಎ.ಆರ್. ತಾಹಿರ್, ಜಿಲ್ಲಾ ಉಪಾಧ್ಯಕ್ಷರಾದ ರಿಯಾಝ್ ರಿಝ್ವಿ ಸೇರಿದಂತೆ ಅನೇಕ ನಾಯಕರು, ಕಾರ್ಯಕರ್ತರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.
ನನ್ನ ಈ ಸ್ಪರ್ಧೆ ಯಾವುದೇ ಒಂದು ವ್ಯಕ್ತಿಗಾಗಿಯೇ ಅಲ್ಲ, ದಾವಣಗೆರೆಯ ಸಾಮಾನ್ಯ ಜನರ, ಶೋಷಿತರ, ಹಿಂದುಳಿದವರ ಮತ್ತು ನ್ಯಾಯಕ್ಕಾಗಿ ಹೋರಾಡುವ ಪ್ರತಿಯೊಬ್ಬರ ಧ್ವನಿಯಾಗಿದೆ. ಕಳೆದ ಹಲವು ವರ್ಷಗಳಿಂದ ನಾನು ನಡೆಸಿಕೊಂಡು ಬಂದ ಜನಪರ ಹೋರಾಟಗಳ ಮುಂದುವರಿದ ಭಾಗವಾಗಿ, ಈ ಚುನಾವಣೆ ಒಂದು ಪರ್ಯಾಯ ರಾಜಕೀಯದ ದಿಕ್ಕಿನಲ್ಲಿ ಜನತೆಗೆ ದೊರಕಿರುವ ಅವಕಾಶವಾಗಿದೆ.
ನ್ಯಾಯ, ಸಮಾನತೆ ಮತ್ತು ಸಂವಿಧಾನ ಮೌಲ್ಯಗಳ ರಕ್ಷಣೆಯೇ ನನ್ನ ಪ್ರಮುಖ ಗುರಿ. ಜನರ ವಿಶ್ವಾಸ ಮತ್ತು ಬೆಂಬಲದೊಂದಿಗೆ, ದಾವಣಗೆರೆಯಿಂದಲೇ ಒಂದು ಹೊಸ ರಾಜಕೀಯ ಸಂಸ್ಕೃತಿಗೆ ನಾಂದಿ ಹಾಡುವ ಸಂಕಲ್ಪ ನನ್ನದು.
ನಿಮ್ಮ ಪ್ರಾರ್ಥನೆ ಮತ್ತು ಬೆಂಬಲ ಸದಾ ಇರಲಿ 🤝
ನಿಮ್ಮ ಸೇವಕ – ನಿಮ್ಮ MLA ಆಗಲು ಅವಕಾಶ ನೀಡಿ
A Step Towards Change in Davanagere South
As the candidate of the Social Democratic Party of India (SDPI Karnataka) for the Davanagere South Assembly by-election, I have officially filed my nomination today. This moment is not just part of the electoral process; it marks a significant step toward a new chapter in the struggle for self-respect, justice, and equality for the people.
On this occasion, State Vice President Puttananjayya, State General Secretary Mujahid Pasha, State Treasurer Amjad Khan, State Committee Member Fayaz Davanagere, District President A.R. Tahir, District Vice President Riyaz Rizvi, along with many leaders, party workers, and well-wishers, were present and extended their support.
My candidature is not for any one individual; it represents the voice of the common people of Davanagere—the oppressed, the marginalized, and all those who stand for justice. As a continuation of the people-centric struggles I have been part of over the years, this election is an opportunity for the people to move toward alternative politics.
My primary goal is to protect justice, equality, and constitutional values. With the trust and support of the people, I am determined to usher in a new political culture starting from Davanagere.
I seek your prayers and support 🤝
Your servant – Give me an opportunity to become your MLA
#Davanagere #DavanagereByElection #SDPI #SDPIKarnataka #AfsarKodlipete #Nomination #Election2026
An elderly widow, wife of a Darvesh Baba, was found alone in Chikmagalur—unwell, with no children or support. As a team, we shifted her to hospital & alerted 112.
Serving the helpless is duty. —authorities must act now to ensure her care, dignity & support.
#SocialJustice
ಚಿಕ್ಕಮಗಳೂರಿನ ಆಲ್ದೂರು–ಕುಂದೂರು–ಸಾರಗೋಡು ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಭಾರಿ ಟಿಪ್ಪರ್ಗಳ ಸಂಚಾರದಿಂದ ರಸ್ತೆ ಗುಂಡಿಮಯವಾಗಿದ್ದು, ಅಪಘಾತಗಳು ಸಂಭವಿಸುತ್ತಿವೆ. ಧೂಳಿನಿಂದಾಗಿ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಕೂಡಲೇ ಡಾಂಬರೀಕರಣಕ್ಕೆ ಕ್ರಮ ಕೈಗೊಳ್ಳಿ.@osd_cmkarnataka@ZP_Chikmagalur
@siddaramaiah ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಮಾತು ಒಂದೇ, ನಡೆ ಬೇರೆ.
ಮುಸ್ಲಿಂ ಸಮುದಾಯಕ್ಕೆ ಮಾಡಿದ ದ್ರೋಹಕ್ಕೆ ಉತ್ತರ ನೀಡುವ ಸಮಯ ಬಂದಿದೆ.
ನ್ಯಾಯ ಮತ್ತು ಸ್ವಾಭಿಮಾನಕ್ಕಾಗಿ SDPIಗೆ ಬೆಂಬಲ ನೀಡಿ.@afsarkodlipet@SDPI_KarPresi @
ರಂಜಾನ್ ಸಂದರ್ಭದಲ್ಲಿ ಸೌಹಾರ್ದತೆಯ ಮಾತುಗಳು ಚೆನ್ನಾಗಿವೆ. ಆದರೆ ಬಜೆಟ್ನಲ್ಲಿ ಮುಸ್ಲಿಂ ಸಮುದಾಯವನ್ನು ಕಡೆಗಣಿಸಿದ್ದು ಏಕೆ?
ದಾವಣಗೆರೆ ಉಪಚುನಾವಣೆಯಲ್ಲಿಯೂ ಪ್ರತಿನಿಧಿತ್ವದಲ್ಲಿ ಅನ್ಯಾಯ — ಇದು ಕೇವಲ ಶುಭಾಶಯ ರಾಜಕೀಯವೇ?
ಮಾತು ಬೇರೆ, ನಡೆ ಬೇರೆ ಇರಬಾರದು. ಸಮುದಾಯಕ್ಕೆ ನ್ಯಾಯ ಬೇಕು, ಕೇವಲ ಭರವಸೆಗಳಲ್ಲ.@CMofKarnataka
ಈದ್ ಮುಬಾರಕ್ ಸಮಸ್ತ ಮುಸ್ಲಿಂ ಬಾಂಧವರಿಗೆ ಈದ್ ಹಬ್ಬದ ಹಾರ್ದಿಕ ಶುಭಾಶಯಗಳು.ಈ ಪವಿತ್ರ ದಿನವು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಹೋದರತ್ವವನ್ನು ಮತ್ತಷ್ಟು ಬಲಪಡಿಸಲಿ.
ಸಮಾನತೆ, ನ್ಯಾಯ ಮತ್ತು ಮಾನವೀಯ ಮೌಲ್ಯಗಳು ನಮ್ಮ ಸಮಾಜದಲ್ಲಿ ಸದಾ ಉಳಿಯಲಿ ಎಂಬುದು ನಮ್ಮ ಆಶಯ.
ಎಲ್ಲರ ಜೀವನದಲ್ಲಿ ಸುಖ, ಸಮೃದ್ಧಿ ಮತ್ತು ಆಶೀರ್ವಾದಗಳು ತುಂಬಿರಲಿ
ಕಡೂರು APMC ರಾಗಿ ಖರೀದಿ ಕೇಂದ್ರದಲ್ಲಿ ನಡೆಯುತ್ತಿರುವ ಅವ್ಯವಸ್ಥೆ ಖಂಡನೀಯ. ವಾರಗಟ್ಟಲೆ ಸಾಲಿನಲ್ಲಿ ನಿಂತಿರುವ ರೈತರನ್ನು ಕಡೆಗಣಿಸಿ ಹಣ ಕೊಟ್ಟವರ ರಾಗಿ ಮೊದಲು ಖರೀದಿ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಅನ್ನದಾತರಿಗೆ ಅನ್ಯಾಯವಾಗದಂತೆ ತಕ್ಷಣ ಕ್ರಮ ಕೈಗೊಳ್ಳಬೇಕು.
@KRBaiyegowda @ksanandmlakaduru @afsarkodlipet