26/11 ಮುಂಬೈಯಲ್ಲಿ ಪಾಪಿ ಪಾಕಿ ಉಗ್ರರ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಅಮಾಯಕ ನಾಗರಿಕ ಬಂಧುಗಳಿಗೆ ಹಾಗೂ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರ ಯೋಧರಿಗೆ ಗೌರವಪೂರ್ವಕ ಶ್ರದ್ಧಾಂಜಲಿ ಅರ್ಪಿಸಿ, ಅವರ ಬಲಿದಾನವನ್ನು ಸ್ಮರಿಸೋಣ.
ಶಕ್ತಿನಗರದಲ್ಲಿರುವ ಶಕ್ತಿ ರೆಸಿಡೆನ್ಸಿಯಲ್ ಸ್ಕೂಲ್ ಇದರ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು, ಶಕ್ತಿ ಎಜುಕೇಶನಲ್ ಟ್ರಸ್ಟ್ ನ ಪ್ರಮುಖರಿಗೆ, ಶಿಕ್ಷಕ ವರ್ಗಕ್ಕೆ ಹಾಗೂ ವಿದ್ಯಾರ್ಥಿ ವೃಂದಕ್ಕೆ ಶುಭ ಹಾರೈಸಲಾಯಿತು.
ರಾಜಸಭಾ ಸದಸ್ಯರಾದ ಶ್ರೀ ನಾರಾಯಣ ಸಾ. ಭಾಂಡಗೆ ಅವರಿಗೆ ಜನ್ಮದಿನದ ಶುಭಾಶಯಗಳು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಕೃಪೆಯಿಂದ ನಿಮ್ಮ ಇಷ್ಟಾರ್ಥಗಳೆಲ್ಲವೂ ಸಿದ್ಧಿಸಲಿ ಎಂದು ಹಾರೈಸುತ್ತೇನೆ.
ಮಾಜಿ ಸಚಿವರೂ, ನಿಪ್ಪಾಣಿ ವಿಧಾನಸಭಾ ಕ್ಷೇತ್ರದ ಶಾಸಕರೂ ಆಗಿರುವ ಶ್ರೀಮತಿ ಶಶಿಕಲಾ ಜೊಲ್ಲೆಯವರಿಗೆ ಜನ್ಮದಿನದ ಶುಭಾಶಯಗಳು. ಪಕ್ಷ, ಸಂಘಟನೆ ಮತ್ತು ಕ್ಷೇತ್ರದ ಸೇವೆಗಾಗಿ ತಾಯಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ನಿಮಗೆ ಸಕಲ ಶಕ್ತಿಯನ್ನು ಅನುಗ್ರಹಿಸಲಿ ಎಂದು ಹಾರೈಸುತ್ತೇನೆ.
@ShashikalaJolle
ಪಕ್ಷದ ಬಂಟ್ವಾಳ ವಿಧಾನಸಭಾ ಕ್ಷೇತ್ರದ ವೀರಕಂಭ ಶಕ್ತಿ ಕೇಂದ್ರದಿಂದ ನಡೆದ ರಾಜ್ಯ ಸರಕಾರದ ಜನ ವಿರೋಧಿ ನೀತಿಗಳ ವಿರುದ್ಧ ಜನಾಂದೋಲನದ ಅಂಗವಾಗಿ ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ ಬೃಹತ್ ಪಾದಯಾತ್ರೆ ಹಾಗೂ ಪ್ರತಿಭಟನಾ ಸಭೆಯಲ್ಲಿ ಶಾಸಕರಾದ ಶ್ರೀ ರಾಜೇಶ್ ನಾಯ್ಕ್, ಕಾರ್ಯಕರ್ತ ಬಂಧುಗಳೊಂದಿಗೆ ಪಾಲ್ಗೊಳ್ಳಲಾಯಿತು.
ಯುವ ಸಂಸದರೂ, ಭಾಜಪಾ ಯುವ ಮೋರ್ಚಾ ನಿಕಟಪೂರ್ವ ರಾಷ್ಟ್ರೀಯ ಅಧ್ಯಕ್ಷರೂ, ಆತ್ಮೀಯರಾದ ಶ್ರೀ ತೇಜಸ್ವಿ ಸೂರ್ಯ ಅವರಿಗೆ ಜನ್ಮದಿನದ ಶುಭಾಶಯಗಳು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವರ ಅನುಗ್ರಹದಿಂದ ನಿಮ್ಮ ಇಷ್ಟಾರ್ಥಗಳು ನೆರವೇರಲಿ ಎಂದು ಹಾರೈಸುತ್ತೇನೆ. @Tejasvi_Surya
ರಾಜ್ಯ ಸಹಕಾರಿ ರತ್ನ ಪ್ರಶಸ್ತಿಗೆ ಭಾಜನರಾದ ನಮ್ಮೆಲ್ಲರ ಮಾರ್ಗದರ್ಶಕರೂ, ಮಾಜಿ ಶಾಸಕರೂ, ಭಾಜಪಾ ಹಿರಿಯ ಮುಖಂಡರಾಗಿರುವ ಶ್ರೀ ಪದ್ಮನಾಭ ಕೊಟ್ಟಾರಿಯವರಿಗೆ ಹೃದಯಸ್ಪರ್ಶಿ ಅಭಿನಂದನೆಗಳು.
ಭಾರತೀಯ ರಾಜಕೀಯ ಭೂಪಟದಲ್ಲಿ ಭಾರತೀಯ ಜನತಾ ಪಾರ್ಟಿಯ ಅಶ್ವಮೇಧ ವಿಜಯ ಯಾತ್ರೆಗೆ ಓಂಕಾರ ಹಾಕಿ, ಭಾರತಾಂಬೆಯ ಸೇವೆಯಲ್ಲಿ ಧುಮುಕಲು ಕೋಟ್ಯಾಂತರ ದೇಶಭಕ್ತರಿಗೆ ಹೊಸ ಹುಮ್ಮಸ್ಸು ನೀಡಿದ, ಮಾಜಿ ಉಪ ಪ್ರಧಾನಿ, ಭಾರತ ರತ್ನ ಶ್ರೀ ಲಾಲ್ ಕೃಷ್ಣ ಅಡ್ವಾಣಿಯವರ ತತ್ವಾದರ್ಶಗಳನ್ನು ಅವರನ್ನು ಬಹಳ ಸನಿಹದಿಂದ ಅರಿತ, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಜಿಯವರ ಸಾಹಿತ್ಯದ ಅನುವಾದಗಳನ್ನು ಹೊಂದಿರುವ ಲೇಖನಗಳನ್ನು ಓದಿ, ಮಾಹಿತಿ ಹಂಚಿಕೊಳ್ಳೋಣ.
ಮೂಡಲಿ ಸಂತಸದ ಚಿತ್ತಾರ, ದೂರಾಗಲಿ ಬದುಕಿನ ಅಂಧಕಾರ. ದೀಪದ ಬೆಳಕು ಮನೆ ಮನಗಳನ್ನು ತುಂಬಲಿ, ಸುಖ–ಸಮೃದ್ಧಿ ಎಲ್ಲರ ಬಾಳಲ್ಲೂ ನೆಲೆಸಲಿ.
ನಾಡಿನ ಸಮಸ್ತ ಜನತೆಗೆ ದೀಪಾವಳಿಯ ಹಾರ್ದಿಕ ಶುಭಾಶಯಗಳು! 🪔
#ದೀಪಾವಳಿ#Deepavali
ಸರ್ವರಿಗೂ ಧನ್ವಂತರಿ ಜಯಂತಿಯ ಹಾರ್ದಿಕ ಶುಭಾಶಯಗಳು. ಭಗವಾನ್ ಧನ್ವಂತರಿಯ ಕೃಪೆಯಿಂದ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಉತ್ತಮ ಆರೋಗ್ಯ, ಆಯಸ್ಸು ಹಾಗೂ ಸಮೃದ್ಧಿ ಲಭಿಸಲಿ ಎಂದು ಹಾರೈಸುತ್ತೇನೆ.
ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯದ ಭಾಜಪಾ ನೂತನ ಉಸ್ತುವಾರಿ ಶ್ರೀ ಹರೀಶ್ ಚಂದ್ರ ದ್ವಿವೇದಿಯವರನ್ನು ನಮ್ಮ ಬೆಂಗಳೂರಿನಲ್ಲಿರುವ ಪಕ್ಷದ ಕೇಂದ್ರ ಕಾರ್ಯಾಲಯದಲ್ಲಿ ಆತ್ಮೀಯವಾಗಿ ಸ್ವಾಗತಿಸಲಾಯಿತು.
ನಮ್ಮ ಪರಂಪರೆಯೇ ನಮ್ಮ ಶಕ್ತಿ. ಕನ್ನಡವೇ ನಮ್ಮ ಹೆಮ್ಮೆ. ನಾಡು–ನುಡಿಯ ಪ್ರೀತಿಯೊಂದಿಗೆ, ಸೌಹಾರ್ದದ ಕರ್ನಾಟಕವನ್ನು ಕಟ್ಟೋಣ.
ಈ ನಾಡನ್ನು ಪ್ರೀತಿಸುವ ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! ❤️💛
#ಕರ್ನಾಟಕರಾಜ್ಯೋತ್ಸವ#ಜೈಕರ್ನಾಟಕ
ಪೊಲೀಸರ ವಿಚಾರಣೆಯಿಂದ ಮನನೊಂದು ಆತ್ಮಹತ್ಯೆಗೈದ ಹೊಸಬೆಟ್ಟು ನಿವಾಸಿ ಶ್ರೀ ಸೋಮನಾಥ ಅವರ ಮನೆಗೆ ಸಂಘ ಪರಿವಾರದ ಪ್ರಮುಖರು, ಸ್ಥಳೀಯ ಮುಖಂಡರೊಂದಿಗೆ ಭೇಟಿ ನೀಡಿ, ಅವರ ಕುಟುಂಬದವರಿಗೆ ಸಾಂತ್ವನ ಹೇಳಲಾಯಿತು.