"ಕ್ರಮಿಸಿದ ಹಾದಿಯಲ್ಲಿ
ಬಿರುಸಿನ ಹೆಜ್ಜೆಗಳು
ಹೆಜ್ಜೆ ಹೆಜ್ಜೆಗೂ
ಅರಳಿದ ಕಮಲಗಳು"
ಸಂಘಟನೆ ಬಲಪಡಿಸಲು ಹಗಲಿರುಳೆನ್ನದೆ ಶ್ರಮಿಸುತ್ತಾ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಯಶಸ್ವಿಯಾಗಿ 1 ವರ್ಷ ಪೂರೈಸಿ ಮುನ್ನಡೆಯುತ್ತಿರುವ ಶ್ರೀ @BYVijayendra ಅವರಿಗೆ ಅಭಿನಂದನೆಗಳು.
#1YearOfBYV
ನಾಳೆ ನಡೆಯಲಿರುವ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಇಂದು ನಗರದ ಖಾಸಗಿ ಹೋಟೆಲ್ ನಲ್ಲಿ, ವಿಧಾನಸಭೆ ಪ್ರತಿಪಕ್ಷ ನಾಯಕ ಶ್ರೀ @RAshokaBJP , ವಿಧಾನ ಪರಿಷತ್ ವಿಪಕ್ಷ ನಾಯಕ ಶ್ರೀ @NswamyChalavadi ರವರೊಂದಿಗೆ, ಪಕ್ಷದ ಶಾಸಕಾಂಗ ಸಭೆ ನಡೆಸಿ, ಚುನಾವಣಾ ಕಾರ್ಯತಂತ್ರ ಹಾಗೂ ಮತದಾನದ ಪ್ರಕ್ರಿಯೆಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು. ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಮ್ಮ ಎಲ್ಲ ಶಾಸಕರೊಂದಿಗೆ ಸಮಾಲೋಚಿಸಿ ನಿರ್ಣಯ ತೆಗೆದುಕೊಳ್ಳಲಾಯಿತು.
#WATCH | Bidadi: On Karnataka govt's final notification to acquire nearly 500 acres for the proposed GBIT near Bidadi, Karnataka BJP President BY Vijayendra says, "Farmers clearly told that they are willing to give away their lives, but not their agricultural land. This trend is very clear for every farmer in and around Bidadi township... I don't own any land here. Even if I own land, if it comes to the knowledge of the chief minister, let them acquire those lands also."
ಸಂಘಟನಾ ಸಾಮರ್ಥ್ಯದ ವೃದ್ಧಿ ಮತ್ತು ವಿಕಸಿತ ಭಾರತದ ಸಾಕಾರದೆಡೆಗೆ ದೃಢಸಂಕಲ್ಪ!
ಗೌರವಾನ್ವಿತ ಕೇಂದ್ರ ವಿತ್ತ ಸಚಿವರಾದ ಶ್ರೀಮತಿ @nsitharaman ಜೀ ಅವರೊಂದಿಗೆ ದೇವನಹಳ್ಳಿಯ ನೂತನ ಸುಸಜ್ಜಿತ ಪಕ್ಷದ ಕಾರ್ಯಾಲಯ ಉದ್ಘಾಟನೆ, ನಂತರ ವಿಶೇಷ "ಮಾಧ್ಯಮ ಸಂವಾದ"ದಲ್ಲಿ ಹೆಮ್ಮೆಯ ಪ್ರಧಾನಿ ಶ್ರೀ @narendramodi ಜೀ ಅವರ 12 ವರ್ಷಗಳ ಐತಿಹಾಸಿಕ ಜನಪರ ಆಡಳಿತ ಹಾಗೂ ವಿಕಸಿತ ಭಾರತದ ಮೈಲಿಗಲ್ಲುಗಳ ಮಾಹಿತಿ ಹಂಚಿಕೆ - ಒಂದು ಕಿರುನೋಟ.
#12YearsOfSeva
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿರುವ ಪಬ್ ಒಂದರಲ್ಲಿ ಇಂದು ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಇಬ್ಬರು ಅಮಾಯಕರು ಸಜೀವ ದಹನವಾಗಿ ಮೃತಪಟ್ಟಿರುವ ಹಾಗೂ ಏಳೆಂಟು ಜನ ಗಂಭೀರವಾಗಿ ಗಾಯಗೊಂಡಿರುವ ದುಃಖದ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬದವರಿಗೆ ಈ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ, ಹಾಗೆಯೇ, ಈ ದಾರುಣ ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ರಾಜ್ಯ ಸರ್ಕಾರ ಮೊದಲು ಗಾಯಗೊಂಡವರಿಗೆ ಅಗತ್ಯ ಸೂಕ್ತ ಚಿಕಿತ್ಸೆ ಲಭ್ಯವಾಗುವಂತೆ ಖಚಿತಪಡಿಸಿಕೊಳ್ಳಬೇಕು ಎಂದು ಆಗ್ರಹಿಸುತ್ತೇನೆ.
ಇಂತಹ ದುರ್ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿದ್ದರೂ ರಾಜ್ಯ ಸರ್ಕಾರ, ಜನನಿಬಿಡ ವಾಣಿಜ್ಯ ಮಳಿಗೆ, ಪಬ್ ಇತ್ಯಾದಿಗಳಲ್ಲಿ ಕನಿಷ್ಠ ಅಗ್ನಿ ಸುರಕ್ಷತಾ ನಿಯಮಗಳ ಪಾಲನೆಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಉದಾಸೀನತೆ ಹಾಗೂ ಮಹಾನಗರ ಪಾಲಿಕೆಯ ಆಡಳಿತಾತ್ಮಕ ವೈಫಲ್ಯ ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ. ನಿಯಮಗಳನ್ನು ಗಾಳಿಗೆ ತೂರಿ ಅಕ್ರಮ ವಾಣಿಜ್ಯ ವಹಿವಾಟುಗಳಿಗೆ ಮುಕ್ತ ಪರವಾನಗಿ ನೀಡುವುದರಿಂದ ಅಮಾಯಕರು ಜೀವ ಕಳೆದುಕೊಳ್ಳುವಂತಾಗಿದೆ. ಈ ಕೂಡಲೇ ರಾಜ್ಯ ಸರ್ಕಾರ ಘಟನೆಯ ಕುರಿತು ಉನ್ನತ ಮಟ್ಟದ ನಿಷ್ಪಕ್ಷಪಾತ ತನಿಖೆಗೆ ಆದೇಶಿಸಬೇಕು ಮತ್ತು ನಿಯಮ ಉಲ್ಲಂಘಿಸಿದ ತಪ್ಪಿತಸ್ಥ ಮಾಲೀಕರು ಹಾಗೂ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇನೆ.
Deeply saddened by the news of the tragic loss of five brave sons of Bharat in the AN 32 aircraft accident at Jorhat, Assam. Their service and sacrifice will always be remembered.
Heartfelt condolences to the families of our fallen heroes. I pray that they find strength to bear this irreparable loss. Om Shanti 🙏
ಸಿದ್ದಾಂತ, ಸಂಘಟನೆ, ಪರಿಶ್ರಮ, ಜನಕಲ್ಯಾಣ
ಕೊಡಗಿನ ಶನಿವಾರಸಂತೆಯಲ್ಲಿ ಇಂದು ಪಕ್ಷದ ಜಿಲ್ಲಾ ಘಟಕದ ಪದಾಧಿಕಾರಿಗಳ ಸಭೆ ನಡೆಸಲಾಯಿತು. ಅಂತ್ಯೋದಯದ ಧ್ಯೇಯ ಹಾಗೂ ಸಂಘಟನೆಯ ಬಲಿಷ್ಠಗೊಳಿಸುವ ದೃಢ ಸಂಕಲ್ಪದೊಂದಿಗೆ ಜಿಲ್ಲೆಯಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸುವ ಕುರಿತು ಸಭೆಯಲ್ಲಿ ಸಮಾಲೋಚಿಸಲಾಯಿತು.
ಸಭೆಯಲ್ಲಿ ಲೋಕಸಭಾ ಸದಸ್ಯರಾದ ಶ್ರೀ @yaduveerwadiyar , ಮಾಜಿ ಸ್ಪೀಕರ್ ಶ್ರೀ ಕೆ.ಜಿ.ಬೋಪಯ್ಯ, ಮಾಜಿ ಶಾಸಕರಾದ ಶ್ರೀ ಅಪ್ಪಚ್ಚು ರಂಜನ್, ಜಿಲ್ಲಾಧ್ಯಕ್ಷ ಶ್ರೀ ರವಿ ಕಾಳಪ್ಪ, ವಿಧಾನ ಪರಿಷತ್ ಸದಸ್ಯ ಶ್ರೀ ಸುಜಾ ಕುಶಾಲಪ್ಪ, ಮಂಗಳೂರು ವಿಭಾಗ ಪ್ರಭಾರಿ, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀ ಡಾ. ಬಿ.ಸಿ.ನವೀನ್, ರಾಜ್ಯ ಪದಾಧಿಕಾರಿ ಶ್ರೀಮತಿ ರೀನಾ ಪ್ರಕಾಶ್ ಸೇರಿದಂತೆ ಜಿಲ್ಲಾ ಪ್ರಮುಖರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.
#BJP4Karnataka
ಜೀವನದಿ ಕಾವೇರಿ ಮಾತೆಯ ಉಗಮಸ್ಥಾನ ನಮ್ಮ ಕೊಡಗು ಜಿಲ್ಲೆಯಲ್ಲಿ ಇಂದು ಆಧ್ಯಾತ್ಮ, ಸಾಮಾಜಿಕ ಮತ್ತು ರಾಷ್ಟ್ರಭಕ್ತಿಯ 'ತ್ರಿವೇಣಿ ಸಂಗಮ'ದಲ್ಲಿ ಮೀಯುವ ಸದವಕಾಶ ದೊರಕಿತ್ತು.
ಶ್ರೀ ಸಿದ್ಧಗಂಗಾ ಮಠದ ಕಿರಿಯ ಶ್ರೀಗಳಾದ ಪರಮಪೂಜ್ಯ ಶ್ರೀ ಶಿವ ಸಿದ್ದೇಶ್ವರ ಮಹಾಸ್ವಾಮಿಗಳು, ಮನೆಹಳ್ಳಿ ಮಠದ ಪರಮಪೂಜ್ಯ ಶ್ರೀ ಮಹಾಂತ ಶಿವಲಿಂಗ ಸ್ವಾಮಿಗಳು, ವಿರಾಜಪೇಟೆಯ ಅರಮೇರಿ ಕಳಂಚೇರಿಮಠದ ಪರಮಪೂಜ್ಯ ಶ್ರೀ ಶಾಂತಮಲ್ಲಿಕಾರ್ಜುನ ಮಹಾಸ್ವಾಮಿಗಳು ಸೇರಿದಂತೆ ಅನೇಕ ಸಂತರ ದಿವ್ಯ ಸಾನ್ನಿಧ್ಯದಲ್ಲಿ, ಕೊಡಗು ಜಿಲ್ಲೆಯ ವೀರಶೈವ ಲಿಂಗಾಯತ ಸಮಾಜ ಮತ್ತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಯುವ ಘಟಕದ ಸಂಯುಕ್ತಾಶ್ರಯದಲ್ಲಿ, ಶನಿವಾರಸಂತೆಯ ಗುಡುಗಳಲೆಯಲ್ಲಿ ಇಂದು ನಡೆದ ಬಸವ ಜಯಂತಿ, ಜಗದ್ಗುರು ರೇಣುಕಾಚಾರ್ಯ ಜಯಂತಿ, ಸಿದ್ಧಗಂಗಾ ಮಠದ ಶ್ರೀ ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳ ಜಯಂತಿ, ಹಾಲೇರಿ ಅರಸರ ಮತ್ತು ಸ್ವಾತಂತ್ರ್ಯ ಹೋರಾಟಗಾರ ಹೆಮ್ಮನೆ ಶ್ರೀ ಪುಟ್ಟಬಸಪ್ಪನವರ ಸಂಸ್ಕರಣೋತ್ಸವದಲ್ಲಿ ಪಾಲ್ಗೊಳ್ಳಲಾಯಿತು.
ಸಮಾರಂಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷ ಶ್ರೀ ಶಂಕರ ಬಿದರಿಯವರು, ಪಕ್ಷದ ಮೈಸೂರು-ಕೊಡಗು ಸಂಸದರಾದ ಶ್ರೀ @yaduveerwadiyar , ಮಡಿಕೇರಿ ಶಾಸಕರಾದ ಡಾ. ಮಂತರ್ಗೌಡ, ಮಾಜಿ ಶಾಸಕ ಅಪ್ಪಚ್ಚು ರಂಜನ್ ಸೇರಿದಂತೆ ಹಲವಾರು ಗಣ್ಯರು, ಆಹ್ವಾನಿತರು, ಹೆಚ್ಚಿನ ಸಂಖ್ಯೆಯಲ್ಲಿ ತಾಯಂದಿರು, ಸೋದರಿಯರು, ಯುವ ಮಿತ್ರರು ಮತ್ತು ಸಮಾಜದ ಬಂಧುಗಳು ಉಪಸ್ಥಿತರಿದ್ದರು.
ಶತಕೋಟಿ ಭಾರತೀಯರ ಹೆಮ್ಮೆಯ ನೇತಾರ, ಆದರಣೀಯ ಪ್ರಧಾನಮಂತ್ರಿ ಶ್ರೀ @narendramodi ಜೀ ರವರು ಸತತವಾಗಿ 4399 ದಿನಗಳಿಂದ ದೇಶವನ್ನು ಮುನ್ನಡೆಸಿದ ದೀರ್ಘಾವಧಿ ಚುನಾಯಿತ ಪ್ರಧಾನಮಂತ್ರಿಗಳಾಗಿ ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಅಭೂತಪೂರ್ವ ಮೈಲಿಗಲ್ಲು ಸ್ಥಾಪಿಸಿದ ಈ ಐತಿಹಾಸಿಕ ಸಂದರ್ಭದಲ್ಲಿ, ಇಂದು ಬೆಂಗಳೂರಿನ ಪುರಾಣ ಪ್ರಸಿದ್ಧ ಶ್ರೀ ಕಾಡು ಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪಕ್ಷದ ನಾಯಕರೊಂದಿಗೆ ವಿಶೇಷ ಪೂಜೆ ಹಾಗೂ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು.
ಭಾರತಮಾತೆಯನ್ನು ಜಗದ್ಗುರುವಿನ ಸ್ಥಾನದಲ್ಲಿ ನಿಲ್ಲಿಸಲು, ಒಂದು ದಿನವೂ ವಿರಮಿಸದೆ, ಹಗಲಿರುಳು ಶ್ರಮಿಸುತ್ತಿರುವ ಹೆಮ್ಮೆಯ ನಾಯಕ ಶ್ರೀ ಮೋದಿ ಜೀ ಅವರ ಸಂಕಲ್ಪ ಶಕ್ತಿಗೆ ಮತ್ತು ಅವರ ನಿರಂತರ ಜನಸೇವೆಯ ತಪಸ್ಸಿಗೆ ಈ ಧಾರ್ಮಿಕ ಕೈಂಕರ್ಯದ ಮೂಲಕ ಗೌರವ ಸಮರ್ಪಿಸಲಾಯಿತು.
ವಿಶೇಷ ಪೂಜೆ ಸಲ್ಲಿಸಿದ ನಂತರ ಪಕ್ಷದ ಕಚೇರಿಗೆ ತೆರಳುವ ಮಾರ್ಗದಲ್ಲಿ ಸುತ್ತಮುತ್ತಲಿನ ವ್ಯಾಪಾರಿಗಳು ಮತ್ತು ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ಶ್ರೀ @AgrawalRMD , ಸಹ ಉಸ್ತುವಾರಿಗಳಾದ ಶ್ರೀ @ReddySudhakar21, ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕರಾದ ಶ್ರೀ @drashwathcn , ಜಿಲ್ಲಾಧ್ಯಕ್ಷ ಶ್ರೀ ಹರೀಶ್, ಮಾಜಿ ಸಚಿವ ಶ್ರೀ ಮುರುಗೇಶ್ ನಿರಾಣಿ, ಎಸ್. ಟಿ.ಮೋರ್ಚಾ ಅಧ್ಯಕ್ಷ ಶ್ರೀ ಬಂಗಾರು ಹನುಮಂತು, ಶಾಸಕ ಶ್ರೀ ಮಾನಪ್ಪ ವಜ್ಜಲ್, ಶಾಸಕ ಶ್ರೀ ಶಿವರಾಜ್ ಪಾಟೀಲ್ ಸೇರಿದಂತೆ ಹಲವಾರು ಪ್ರಮುಖ ನಾಯಕರು, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
12 years of Seva, Sankalp and transformative governance under Hon’ble Prime Minister Shri @narendramodi ji.
Modi ji’s leadership has strengthened institutional delivery, ensured last-mile governance, deepened public trust and placed Bharat firmly on the path of progress, stability and global respect.
#12YearsOfSeva
ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಇಂದು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಹೆಮ್ಮೆಯ ದಿನ. ಸುದೀರ್ಘ ಕಾಲ ಸತತವಾಗಿ ದೇಶವನ್ನು ಮುನ್ನಡೆಸಿದ ಜನಪ್ರಿಯ ವಿಶ್ವನಾಯಕ, ಭಾರತದ ಹೆಮ್ಮೆಯ ಪ್ರಧಾನಮಂತ್ರಿ ಶ್ರೀ @narendramodi ಜೀ ರವರು ದೇಶದ ಅತ್ಯಂತ ದೀರ್ಘಾವಧಿಯ ಚುನಾಯಿತ ಪ್ರಧಾನಿಯಾಗಿ ಐತಿಹಾಸಿಕ ಮೈಲಿಗಲ್ಲು ಸಾಧಿಸುತ್ತಿರುವ ಈ ಅಭೂತಪೂರ್ವ ಐತಿಹಾಸಿಕ ಸಂದರ್ಭದಲ್ಲಿ, ರಾಜ್ಯದ ಜನತೆಯ ಪರವಾಗಿ ನೆಚ್ಚಿನ ಪ್ರಧಾನಮಂತ್ರಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು.
ಕಳೆದ 12 ವರ್ಷಗಳ ಪ್ರಧಾನಿ ಶ್ರೀ ಮೋದಿ ಜೀ ರವರ ನಿರ್ಣಾಯಕ ನಾಯಕತ್ವ, ಕೇವಲ ಅಂಕಿ-ಅಂಶಗಳ ಸಾಧನೆಯಲ್ಲ, ಅದು ಕೋಟ್ಯಂತರ ಭಾರತೀಯರ ಬದುಕಿನಲ್ಲಿ ತಂದಿರುವ ಸಕಾರಾತ್ಮಕ ಪರಿವರ್ತನೆಯ ಸಾರ್ಥಕ ಸಾಧನೆಗಳಾಗಿದೆ. "ಸಂಕಲ್ಪದಿಂದ ಸಿದ್ಧಿಯೆಡೆಗೆ" ರಾಷ್ಟ್ರವನ್ನು ಮುನ್ನಡೆಸುತ್ತಿರುವ ಶ್ರೀ ಮೋದಿ ಜೀ ಅವರ ಆಡಳಿತಾವಧಿ, ಬಲಿಷ್ಠ ಆರ್ಥಿಕತೆ, ತಳಮಟ್ಟದ ಬಡವರ ಕಲ್ಯಾಣ, ಮೂಲಸೌಕರ್ಯ ಕ್ರಾಂತಿ ಹಾಗೂ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಅಭೂತಪೂರ್ವ ಗೌರವವನ್ನು ತಂದುಕೊಟ್ಟಿದೆ.
"ದೇಶ ಮೊದಲು" ಎಂಬ ಸಿದ್ಧಾಂತದೊಂದಿಗೆ, ಒಂದು ದಿನವೂ ವಿರಮಿಸದೆ, ದೇಶ ಸೇವೆಗೆ ತಮ್ಮ ಬದುಕನ್ನೇ ಮುಡುಪಾಗಿಟ್ಟಿರುವ ಅವರ ತಪಸ್ಸು "ವಿಕಸಿತ ಭಾರತ"ದ ಪರಿಕಲ್ಪನೆಯನ್ನು ನನಸಾಗಿಸುತ್ತಿದೆ. ಹೆಮ್ಮೆಯ ಆದರಣೀಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜೀ ರವರಿಗೆ ಮತ್ತೊಮ್ಮೆ ಪಕ್ಷದ ಸಮಸ್ತ ಕಾರ್ಯಕರ್ತರ ಪರವಾಗಿ ಮತ್ತು ವೈಯಕ್ತಿಕವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಾ, ನಮ್ಮೆಲ್ಲರ ನೆಚ್ಚಿನ ನಾಯಕನಿಗೆ ದೇವರು ಉತ್ತಮ ಆರೋಗ್ಯದೊಂದಿಗೆ ಸುದೀರ್ಘ ಆಯುಷ್ಯವನ್ನು ಕರುಣಿಸಿ, ವಿಕಸಿತ ಭಾರತದ ಸಾಕಾರದೆಡೆಗೆ ದೇಶವನ್ನು ಮತ್ತಷ್ಟು ಪ್ರಬಲವಾಗಿ ಮುನ್ನಡೆಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
#LongestServingPM #ViksitBharat #12YearsOfSeva
4,399 days. And what days they have been!
Article 370 abrogated. Ram Mandir consecrated. Ujjwala Yojana. Jan Dhan Yojana. Jal Jeevan Mission. UDAN. PM Awas Yojana. Swachh Bharat. Ayushman Bharat. The list goes on!
Thanks to these transformational schemes and governance, today we are the world’s 4th largest economy! This is the decade that changed Bharat.
Congratulations to PM @narendramodi ji on becoming India’s longest-serving elected Prime Minister. A record written not just in years, but in the lives, dignity, and aspirations of 140 crore Indians.
Bharat salutes you, Modi ji, and walks with you, toward Viksit Bharat.
#LongestServingPM #ViksitBharat #12YearsOfSeva
ರಾಜ್ಯದಿಂದ ರಾಜ್ಯಸಭೆ ಹಾಗೂ ವಿಧಾನಪರಿಷತ್ ಸ್ಥಾನಗಳಿಗೆ ಪಕ್ಷದ ಅಭ್ಯರ್ಥಿಗಳಾದ ಶ್ರೀ ಡಾ ಎಂ.ನಾಗರಾಜ್, ಶ್ರೀ ಲಿಂಗರಾಜ್ ಪಾಟೀಲ್ ಹಾಗೂ ಶ್ರೀ ರಘು ಕೌಟಿಲ್ಯ ಅವರಿಗೆ ಪಕ್ಷದ ಕಚೇರಿಯಲ್ಲಿ ಇಂದು ಅಭಿನಂದನೆಗಳನ್ನು ಸಲ್ಲಿಸಿ, ಶುಭ ಹಾರೈಸಲಾಯಿತು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಶ್ರೀ ಛಲವಾದಿ ನಾರಾಯಣಸ್ವಾಮಿ, ಪರಿಷತ್ ನಲ್ಲಿ ಪಕ್ಷದ ಮುಖ್ಯ ಸಚೇತಕ ಶ್ರೀ ರವಿಕುಮಾರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿರುವ ಶ್ರೀ ಡಾ ಎಂ.ನಾಗರಾಜ್ ಅವರಿಗೆ ಹಾಗೂ ವಿಧಾನ ಪರಿಷತ್ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳಾಗಿರುವ ಶ್ರೀ ಲಿಂಗರಾಜ್ ಪಾಟೀಲ್ ಹಾಗೂ ರಘು ಕೌಟಿಲ್ಯ ಅವರಿಗೆ ಹಾರ್ದಿಕ ಅಭಿನಂದನೆಗಳು.
ಚುನಾವಣೆಯಲ್ಲಿ ಯಶಸ್ಸನ್ನು ಹಾರೈಸುತ್ತಾ, ಸದನದಲ್ಲಿ ರಾಜ್ಯದ ಹಿತರಕ್ಷಣೆ ನಿಟ್ಟಿನಲ್ಲಿ ಮತ್ತು ಜನಸಾಮಾನ್ಯರ ಆಶೋತ್ತರಗಳಿಗೆ ಪೂರಕವಾಗಿ ನಿಮ್ಮ ಕಾರ್ಯನಿರ್ವಹಣೆ ಯಶಸ್ವಿಯಾಗಲಿ, ನಾಡಿನ ಪ್ರಗತಿ ಹಾಗೂ ಸಾರ್ವಜನಿಕ ಸೇವೆಯಲ್ಲಿ ನಿಮ್ಮ ಮುಂದಿನ ಪಯಣ ಅತ್ಯಂತ ಸಾರ್ಥಕವಾಗಿರಲಿ ಎಂದು ಶುಭ ಹಾರೈಸುತ್ತೇನೆ.