ಮನುಷ್ಯನಿಗೆ ಮನುಷ್ಯ ಬೇಕು, ಎಡ-ಬಲ, ಕಪ್ಪು-ಬಿಳುಪು, ಶುದ್ಧ-ಅಶುದ್ಧಗಳು ವಾಸ್ತವಿಕ ಸತ್ಯಗಳಲ್ಲ. ಮಾನವನ ಶೀಲ ಒಳಿತು ಕೆಡಕುಗಳ -ಕಲಬೆರಕೆಗೊಂಡ ವಿಚಿತ್ರ ಮುದ್ದೆ. ಒಂದನ್ನು ಬಿಟ್ಟು ಇನ್ನೊಂದನ್ನು ಆರಿಸುವಲ್ಲಿ, ಮನುಷ್ಯ ಎಂಬ ಪದಾರ್ಥವೇ ಉಳಿಯಲಾರದು.
ನದಿಯ ಅಂತಿಮ ಗಮ್ಯ ಸಾಗರವಾದರೆ ಬದುಕಿನ ಅಂತ್ಯ ಸಾವು. ಎರಡೂ ಪೂರ್ವನಿಶ್ಚಿತವೇ. ಹಾಗಿದ್ದೂ ಅವು ಸಾಗುವ ಮಾರ್ಗ ಮಾತ್ರ ಅದೆಷ್ಟು ನಿಗೂಢ? ಅದೆಷ್ಟು ಅನಿಶ್ಚಿತ? ಎಲ್ಲಿ ತಿರುವು, ಎಲ್ಲಿ ಪ್ರಪಾತ, ಎಲ್ಲಿ ಬೆಟ್ಟ, ಎಲ್ಲಿ ಬಯಲು ಎಲ್ಲವೂ ಅನೂಹ್ಯ!
Life itself is a death.
Death just take your breaths away but life-
life will bring you on your knees.
Death isn't something to be afraid of-
life is, life is, life is.