ಇಸ್ಪೀಟು ಆಟ ಅಥವಾ ಇತರೆ ಜೂಜಾಟ ಆಡುವುದು ಕಂಡುಬಂದಲ್ಲಿ ತುರ್ತು ಸಹಾಯವಾಣಿ ಸಂಖ್ಯೆ112 ಅಥವಾ ನಿಮ್ಮ ಹತ್ತಿರದ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ಹಂಚಿಕೊಳ್ಳಿ.
@Rangepol_SR@112Mysuru@KarnatakaCops
ಇಂದು ಮೈಸೂರಿನ ಶ್ರೀರಾಂಪುರದ ಕ್ರೈಸ್ಟ್ ಕಾಲೇಜ್ ನಲ್ಲಿ ನಶೆ ಮುಕ್ತ ಭಾರತ (Marathon) ಓಟವನ್ನು KPA ಉಪ ನಿರ್ದೇಶಕರಾದ ಶ್ರೀ ಚೆನ್ನಬಸವಣ್ಣ ಎಸ್ ಎಲ್ IPS ರವರು ಮತ್ತು ಮೈಸೂರು ಜಿಲ್ಲಾ ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ ಎಲ್. ನಾಗೇಶ್ ರವರು ಚಾಲನೆ ನೀಡಿ, ವಿಜೇತರಿಗೆ ಬಹುಮಾನ ವಿತರಿಸಿದರು. @DgpKarnataka@Rangepol_SR
ಬನ್ನೂರು ಪೊಲೀಸ್ ಠಾಣಾ ಸರಹದ್ದಿನಲ್ಲಿ ಸೋಮನಾಥಪುರದ ದೇವಸ್ಥಾನದ ಮಂಟಪಕ್ಕೆ ಹಸಿರು ಬಣ್ಣ ಬಳಿದಿದ್ದು ಇದನ್ನು ಅನ್ಯ ಕೋಮಿನವರು ದರ್ಗಾ ಮಾಡಿರುತ್ತಾರೆಂದು ಹೇಳಿ ಪೋಸ್ಟ್ ಮಾಡಿದ್ದು, ಗ್ರಾಮಸ್ಥರು ನೀಡಿದ ಮಾಹಿತಿಯಂತೆ ಸದರಿ ಬಣ್ಣವನ್ನು ಜಾತ್ರಾ ನಿಮಿತ್ತ ಪೂಜಾ ಕಾರ್ಯ ನೆರವೇರಿಸುವ ಸಲುವಾಗಿ ಹೊಡೆದಿರುತ್ತಾರೆಂದು ತಿಳಿಸಿರುತ್ತಾರೆ.