ಇಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ರೋಟರಿ ಬೆಂಗಳೂರು ಸಮೃದ್ಧಿ ಸಹಯೋಗದಲ್ಲಿ ಲಾಲ್ಬಾಗ್ನಲ್ಲಿ ಆಯೋಜಿಸಲಾಗಿದ್ದ ವಾಕಥಾನ್ನಲ್ಲಿ ಭಾಗವಹಿಸಲಾಯಿತು. "ಹಸಿರು ಆರೋಗ್ಯ" ಕೇವಲ ಘೋಷಣೆಯಾಗದಿರಲಿ, ನಮ್ಮ ದೈನಂದಿನ ಜೀವನದ ಭಾಗವಾಗಲಿ. ಸ್ವಚ್ಛ ಪರಿಸರ ಮತ್ತು ಉತ್ತಮ ಆರೋಗ್ಯಕ್ಕಾಗಿ ನಾವೆಲ್ಲರೂ ಕೈಜೋಡಿಸೋಣ
🌍ವಿಶ್ವ ಪರಿಸರ ದಿನಾಚರಣೆ 🍀
ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ.
ಮರಗಳನ್ನು ನೆಡೋಣ, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡೋಣ, ನೀರು & ವಿದ್ಯುತ್ ಸಂರಕ್ಷಣೆ ಮಾಡೋಣ.ಪ್ರಕೃತಿ ನಮ್ಮನ್ನು ಕಾಪಾಡುತ್ತದೆ, ನಾವು ಪ್ರಕೃತಿಯನ್ನು ಕಾಪಾಡಿದರೆ!
Public Advisory from Bengaluru City Police regarding the TATA IPL 2026 Final. 🚔
We urge all citizens to celebrate responsibly. Avoid public disturbances, respect law enforcement directions, and keep the city safe.
🚨 For any emergencies, Dial 112 immediately.
ದಿನಾಂಕ 24/05/2026 ರಂದು ಪ್ರದೀಪ್ ಕುಮಾರ್ ಎಂಬುವವರು ತಮ್ಮ ದ್ವಿಚಕ್ರ ವಾಹನದ ಡಿಕ್ಕಿಯಲ್ಲಿ ₹3 ಲಕ್ಷ ನಗದು ಹಣ ಹಾಗೂ ಕೀ ಮರೆತು ಹೋಗಿದ್ದರು. ಅದನ್ನು ಗಮನಿಸಿದ ಚಿರಂಜೀವಿ ಅವರು ಮಾನವಿತೆಯಿಂದ ಹಣವನ್ನು ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ತಂದು ಹಾಜರುಪಡಿಸಿದ್ದು, ಆ ಹಣವನ್ನು ಚಿರಂಜೀವಿ ರವರ ಮೂಲಕ ಮರಳಿ ವಾರಸುದಾರರಿಗೆ ಹಸ್ತಾಂತರಿಸಿದೆ
ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವತಿಯಿಂದ ಪೊಲೀಸ್ ವಸತಿ ಗೃಹಗಳಿಗೆ ಭೇಟಿ ನೀಡಿ ಪೊಲೀಸ್ ಕುಟುಂಬದೊಂದಿಗೆ ಈ ಬಾರಿಯ ದೀಪಾವಳಿಯನ್ನು ವಿಶೇಷವಾಗಿ ಆಚರಿಸಲಾಯಿತು ಈ ಈ ಸಮಯದಲ್ಲಿ ದೀಪಾವಳಿಯು ಸಂತೋಷ ಶಾಂತಿ.. ಸಮೃದ್ಧಿಯಿಂದ ಕೂಡಿ ಜೀವನವು ಬೆಳಕಿನಿಂದ ಕೂಡಿ ಎಲ್ಲಾ ಆಸೆಗಳು ನೆರವೇರಲೆಂದು ಶುಭ ಕೋರಲಾಯಿತು.
ಮನೆ ಮನೆ ಪೊಲೀಸ್ !!
ನಿಮ್ಮ ರಕ್ಷಕರು, ನಿಮ್ಮ ಮನೆ ಬಾಗಿಲಿಗೆ!
ಕಾರ್ಯಕ್ರಮದ ಅಂಗವಾಗಿ ಈ ದಿನ ಪುಟ್ಟೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಿಧ ಏರಿಯಾಗಳಲ್ಲಿನ ಮನೆಗಳಿಗೆ ಅಧಿಕಾರಿ ಮತ್ತು ಸಿಬ್ಬಂದಿಗಳು ತೆರಳಿ ಸಾರ್ವಜನಿಕರಿಂದ ಸಮಸ್ಯೆಗಳನ್ನು, ದೂರುಗಳನ್ನು ಹಾಗೂ ಅಮೂಲ್ಯ ಸಲಹೆ-ಸೂಚನೆಗಳನ್ನು ಆಲಿಸಲಾಯಿತು.
ಈ ದಿನ ಅಂತರರಾಷ್ಟ್ರೀಯ ಮಾದಕ ದ್ರವ್ಯ ವ್ಯಸನ ಹಾಗೂ ಸಾಗಾಣಿಕೆ ವಿರೋಧಿ ದಿನ ಅಂಗವಾಗಿ ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧ ಶಾಲೆಗಳಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿರುತ್ತದೆ.
2025 ರ ಹೊಸ ವರ್ಷದ ಆಚರಣೆ ಪ್ರಯುಕ್ತ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಠಾಣಾ ವ್ಯಾಪ್ತಿಯ ಶ್ರೀ ಚೈತನ್ಯ ಚಾರಿಟೇಬಲ್ ಟ್ರಸ್ಟ್ ಕ್ಕೆ ಭೇಟಿ ನೀಡಿ, ಮಕ್ಕಳು ಮತ್ತು ವೃದ್ಧರೊಂದಿಗೆ ಹೊಸ ವರ್ಷವನ್ನು ಆಚರಿಸಲಾಯಿತು.
On water or land, courage knows no bounds. While the Indian Navy protects our shores, we safeguard our streets. Together, we stand with pride.
#IndianNavyDay#WeServeWeProtect
ಜಲದ ಮೇಲಾಗಲಿ ಅಥವಾ ನೆಲದ ಮೇಲೆ, ಧೈರ್ಯಕ್ಕೆ ಯಾವುದೇ ಮಿತಿಗಳಿಲ್ಲ. ಭಾರತೀಯ ನೌಕಾಪಡೆ ನಮ್ಮ ಕಡಲ ತೀರಗಳನ್ನು ರಕ್ಷಿಸುತ್ತಿರುವಾಗ, ನಾವು ನಮ್ಮ ರಸ್ತೆಗಳನ್ನು ಸುರಕ್ಷಿತವಾಗಿಡುತ್ತೇವೆ. ಒಟ್ಟಿಗೆ, ನಾವು ಹೆಮ್ಮೆಯಿಂದ ನಿಲ್ಲುತ್ತೇವೆ.
ಈ 'ವಿಶ್ವ ಸಾರ್ವಜನಿಕ ಸಾರಿಗೆ ದಿನ'ದಂದು, ಸ್ವಚ್ಛ ಮತ್ತು ಹಸಿರಿನ ನಮ್ಮ ಬೆಂಗಳೂರಿಗಾಗಿ ಖಾಸಗಿ ಸಾರಿಗೆಯ ಬಳಕೆಯನ್ನು ತಗ್ಗಿಸಿ, ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸುವ ಪ್ರತಿಜ್ಞೆ ಮಾಡೋಣ.
#WorldPublicTransportDay