ಒಂದೆರಡು ತಿಂಗಳ ಹಿಂದೆ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಹೊಸ ನಿರ್ಮಾಪಕರೊಬ್ಬರು ಸಿಕ್ಕಿದ್ದರು. ನಿರ್ಮಾಣ ಮಾಡೋ ಮುಂಚೆ ವಿತರಣೆ ಮಾಡಿ ಚಿತ್ರರಂಗದ experience ಪಡೆಯೋಣ ಅಂತ ರವಿಚಂದ್ರನ್ ಮನೆಗೆ ಹೋಗಿ ಅವರ ಹಳೆ ಎರಡು ಚಿತ್ರಗಳ ಮರುಬಿಡುಗಡೆ ಬಗ್ಗೆ ಮಾತನಾಡಿದ್ರಂತೆ. "ರವಿಚಂದ್ರ���್ ಬುದ್ದಿ ಹೇಳಿ ಕಳಿಸಿದ್ರು. ಈ ಫಿಲ್ಮ್, ಆ ಫಿಲ್ಮ್ ಮರು ಬಿಡುಗಡೆ ಮಾಡ್ತೀನಿ ಅಂತ ಜಾಹಿರಾತು ಕೊಟ್ಟ ದಿನದಿಂದ ಸನ್ ಅವರ ಉದಯ TV ನಲ್ಲಿ ಅದನ್ನು ದಿನಾ ಪ್ರಸಾರ ಮಾಡ್ತಾರೆ. ಸುಮ್ನೆ 50-60 ಲಕ್ಷ ಕಳೆದುಕೊಳ್ಳುತ್ತೀರ ಅಂತ ಅಂದ್ರು," ಅಂತಂದ್ರು.
ಉದಯ ಮಾತ್ರವಲ್ಲ, ಆ ಕಾಲದಲ್ಲಿ ಕೇವಲ Home Video ಹಕ್ಕು ಪಡೆದವರು, ಆಡಿಯೋ ರೈಟ್ಸ್ ಪಡೆದವರು, ಎಲ್ಲರೂ ಸೇರಿ FB, YT, Insta ಗಳಲ್ಲಿ ಈಗಾಗಲೇ ಈ "ಶಾಂತಿ ಕ್ರಾಂತಿ re-release ಮಾಡಿ" ಟ್ರೆಂಡ್ ನಿಂದ ದುಡ್ಡು ಮಾಡುತ್ತಿದ್ದಾರೆ. Theatre ನಲ್ಲಿ ಬಿಡುಗಡೆ ಮಾಡುವ ಬುದ್ದಿವಂತ ಮಾತ್ರ ದುಡ್ಡು ಕಳೆದುಕೊಳ್ಳುತ್ತಾನೆ.