ಯಾವುದಾದರೂ ಪುಸ್ತಕ ಓದಿದ ಮೇಲೆ, ಸಿನಿಮಾ ನೋಡಿದ ಮೇಲೆ, ಅಥವಾ ಎಲ್ಲಿಗಾದರೂ ಹೋಗಿ ಬಂದ ಮೇಲೆ ನಮ್ಮವರ ಜೊತೆ ಕೂತು ಅದರ ಬಗ್ಗೆ ಮಾತನಾಡುವುದಿದೆಯಲ್ಲ ಅದೊಂದು ವಿಶೇಷವಾದ ಖುಷಿ. ನಾವು ಕಂಡದ್ದು, ಅನುಭವಿಸಿದ್ದು, ನಮಗನ್ನಿಸಿದ್ದನ್ನು ಹಂಚಿಕೊಳ್ಳುತ್ತಾ ನಮ್ಮವರ ದೃಷ್ಟಿಕೋನವನ್ನೂ ಕೇಳುತ್ತಾ, ಮುಗಿದ ಅನುಭವವನ್ನೇ ಮತ್ತೊಮ್ಮೆ ಬದುಕಿದಂತಾಗುತ್ತದೆ.
The Saddest Part of #Toxic is how Raya’s Entire Story Keeps Coming Back to her Sister Ganga.
She raised him, Protected him and Stood by him through everything.
And Huma getting Ganga killed so Kiara would always remind her of Ganga makes it even more heartbreaking.
Ganga spent her whole life protecting her brother and gave her life trying to save him.
That’s why Raya and Ganga brother sister bond was easily the strongest relationship in #ToxicTheMovie for me.
ಚೋಳರಿಗಿಂತ 500 ವರ್ಷಗಳ ಮುಂಚೆ, ಕನ್ನಡಿಗ ಇಮ್ಮಡಿ ಪುಲಿಕೇಶಿ ನೂರು ಹಡಗುಗಳೊಂದಿಗೆ ಈಗಿನ ಮಹಾರಾಷ್ಟ್ರದಲ್ಲಿ ನೌಕಾ ಯುದ್ಧ ಮಾಡಿದ ಸಾಕ್ಷಿ ಪತ್ತೆಯಾಗಿದೆ. ಭಾರತೀಯ ನೌಕಾದಳದ ಪಿತಾಮಹ ಚಾಲುಕ್ಯ ಚಕ್ರೇಶ್ವರ, ಕನ್ನಡ ಕುಲತಿಲಕ ಇಮ್ಮಡಿ ಪುಲಿಕೇಶಿ 💛❤️
ಬೂದಿ ಬಸಪ್ಪ 1881 ರಲ್ಲಿ ಹಚ್ಚಿದ ರೈತರ ಕ್ರಾಂತಿಯ ಕಿಡಿಗೆ ಬೆಚ್ಚಿಬಿದ್ದ ಬ್ರಿಟೀಷರು, ಎಲ್ಲಿ ಆ ಕಿಡಿ ಭಾರತದ ಇತರೆಡೆ ಹರಡುತ್ತೊ ಅನ್ನೋ ಭಯದಲ್ಲಿ ಕೇವಲ 32 ವರ್ಷಗಳ ಹಿಂದೆ ಟೀಪು ಹಿಡಿತಲಿದ್ದ ಮೈಸೂರನ್ನು ಒಡೆಯರ್ ವಂಶಕ್ಕೆ ಹಿಂದಿರುಗಿಸಿದ್ದರೋ ಹಾಗೇ ಕಿತ್ತುಕೊಂಡರು.
ಇಂದಿಗೆ (June 11) 192 ವರ್ಷಗಳ ಹಿಂದೆ (1834ರಲ್ಲಿ) ಮಾರ್ಕ್ ಕಬ್ಬನ್ (ಕಬ್ಬನ್ ಪಾರ್ಕ್ ಗೊತ್ತಲ್ಲ?) ನನ್ನು ಮೈಸೂರು ರಾಜ್ಯದ ಕಮಿಷನರ್ ಮಾಡಿತು. ಮೈಸೂರು ರಾಜ ವಂಶ ಮತ್ತೆ ಹೈದರ್-ಟೀಪು ಕಾಲದ ರೀತಿ ಮನೆ ಸೇರಿತು. ಮುಂದೆ ಐವತ್ತು ವರ್ಷಗಳ ನಂತರ 1881 ರಲ್ಲಿ ವಡೆಯರ್ ರಾಜರಿಗೆ ಮತ್ತೆ ಮೈಸೂರನ್ನು ಹಿಂದಿರುಗಿಸಿದ್ದು.
ಸರಿ 1831ರಲ್ಲಿ ಜನರ ಕ್ರಾಂತಿ ರೂಪಿಸಿದ ಈ ಬೂದಿ ಬಸಪ್ಪ ಯಾರು? ಯಾಕೆ ನಮ್ಮ ಇತಿಹಾಸ ಪುಸ್ತಕಗಳಲ್ಲಿ ಇವನಿಲ್ಲ? ಅವನಿಂದ ಪ್ರೇರಿತರಾಗಿ 1831 ರಲ್ಲೇ ನಗರದಿಂದ (ಈಗ ಶಿವಮೊಗ್ಗದ ಒಂದು ಸಣ್ಣ ಹಳ್ಳಿ. 1638 ನಂತರ ಶಿವಪ್ಪ ನಾಯಕ ಕಟ್ಟಿದ ಕೆಳದಿಯ ಕೊನೆ ರಾಜಧಾನಿ) ಬೆಂಗಳೂರಿನವರೆಗೂ ದಂಗೆ ಎದ್ದ ಕನ್ನಡದ ರೈತರು ಕೇಳಿದ್ದು ಏನು ಗೊತ್ತಾ? "ಶಿವಪ್ಪ ನಾಯಕನ ಸಿಸ್ತು ಮತ್ತೆ ಜಾರಿಯಾಗಲಿ," ಅಂತ.
ಬೂದಿ ಬಸಪ್ಪನಿಗೂ ಸುಮಾರು 200 ವರ್ಷಗಳ ಹಿಂದೆ 1650ರಲ್ಲಿ ಶಿವಪ್ಪ ನಾಯಕ ಜಾರಿ ಮಾಡಿದ ಅವನ ಸಿಸ್ತು (ಕಂದಾಯ) 1831 ರಲ್ಲಿ ಅವನ ಆಗಿನ ಸೀಮೆಗೂ ಮೀರಿದ ಕನ್ನಡ ಪ್ರದೇಶಗಳಲ್ಲಿ ಕನ್ನಡ ಮಕ್ಕಳನ್ನು ಬಡಿದೆಬ್ಬಿಸಿತ್ತು! ಆಗಿನ ಮೈಸೂರು ರಾಜ್ಯದ ಹಳ್ಳಿ ಹಳ್ಳಿಯಲ್ಲೂ ಕೂಟಗಳನ್ನು ಕಟ್ಟಿದ ಬೂದಿ ಬಸಪ್ಪನನ್ನು ಇತಿಹಾಸದಿಂದ ಕಣ್ಮರೆ ಮಾಡಲಾಗಿದೆ. ನಮಗೆ ಇನ್ನು ಇಂಗ್ಲಿಷರ ರಾಬಿನ್ ಹೂಡ್ ಸಾಕು!
ಬ್ರಿಟೀಷರು ಏಳು ಜನ "ಬೂದಿ ಬಸಪ್ಪರನ್ನು" ಮುಂದಿನ 10 ವರ್ಷ ನೇಣಿಗೆ ಹಾಕಿದರು. 1837ರಲ್ಲಿ ಮಂಗಳೂರನ್ನು ಒಂದು ವಾರದ ಕಾಲ ಸ್ವಾತಂತ್ರ್ಯ ಮಾಡಿದ ನಮ್ಮ ರೈತರ ಅಮರ-ಸುಳ್ಯ ಸ್ವಾತಂತ್ರ್ಯ ದಂಗೆಯಲ್ಲೂ ಇದೇ ಬೂದಿ ಬಸಪ್ಪನ ಹೆಸರಿದೆ. ಅವ ಸಾಯಲೇ ಇಲ್ಲ! ಇಂದೂ ಸತ್ತಿಲ್ಲ!!
ಅವನಿಗೂ ಇನ್ನೂರು ವರ್ಷಗಳ ಹಿಂದೆ ಅವನಿಗೆ ಮತ್ತು ಲಕ್ಷಾಂತರ ಕನ್ನಡಿಗರಿಗೆ ಪ್ರೇರಣೆ ಕೊಟ್ಟ ಶಿವಪ್ಪ ನಾಯಕ ಈಗಿನ 99.9% ಕನ್ನಡಿಗರಿಗೇ ಗೊತ್ತಿಲ್ಲ!! ನಮ್ಮ ವೀರರಿಗೆ ಸಾವಿಲ್ಲ. ಮತ್ತೆ ಮತ್ತೆ ಹುಟ್ಟಿ ಬರುತ್ತಾರೆ 💛❤️
#ನಮ್ಮನಾಡು_ನಮ್ಮವೀರರು
#ನಮ್ಮನಾಡು_ನಮ್ಮಆಳ್ವಿಕೆ
ಕನ್ನಡವನ್ನು ಸರಿಯಾಗಿ ಓದಲು, ಬರೆಯಲು ಬಾರದಿರೋದು ಒಂದು 'ಹೆಮ್ಮೆಯ ಗರಿ' ಎಂಬ ಮನೋಭಾವ ಬೆಂಗಳೂರಲ್ಲಿ ಹುಟ್ಟಿ-ಬೆಳೆದು, ಇಂಗ್ಲಿಷ್ ಮಾಧ್ಯಮದಲ್ಲೋದಿದ ಎಷ್ಟೋ ಮಂದಿಗಿರೋದನ್ನ ನಾನು ಕಣ್ಣಾರೆ ಕಂಡಿದ್ದೇನೆ.
ಇದೊಂದು ಬಗೆಯ ಕಾನ್ಸರ್ ಇದ್ದಂತೆ. ಇದಕ್ಕಿರೋದು ಒಂದೇ ಪರಿಹಾರ: ನಮ್ಮ ಸರ್ಕಾರ, ಕರ್ನಾಟಕದ ಎಲ್ಲಾ ಬಗೆಯ ಶಾಲೆಗಳಲ್ಲೂ ಕನ್ನಡ ಕಡ್ಡಾಯ ಮಾಡಿ, ಆಡಳಿತದಲ್ಲೂ ಕನ್ನಡಕ್ಕೆ ಪ್ರಾಧಾನ್ಯತೆ ನೀಡೋದು. ಕನ್ನಡ ಕಲಿಯದೆ ಕರ್ನಾಟಕದಲ್ಲಿ ಬದುಕುವುದೇ ತ್ರಾಸಿನ ಕೆಲಸವಾಗುವಂತೆ ಮಾಡಬೇಕಿದೆ.
ನೆನಪಿಡಿ: ಮೂಗು ಮುಚ್ಚಿದರಷ್ಟೇ ಬಾಯಿ ಬಿಡೋದು. ಇದು ನಮ್ಮ ನಾಡಿನಲ್ಲೇ ನಮ್ಮ ಭಾಷೆಯ ಅಳಿವು-ಉಳಿವುನ ಪ್ರಶ್ನೆ. ಕೊಂಚ ಆಕ್ರಮಣಕಾರಿ ಹಾದಿ ಹಿಡಿದರೆ ತಪ್ಪಿಲ್ಲ!
ಮಹಾಕವಿ ಕುವೆಂಪುರವರೇ ಹೇಳಿದಂತೆ, "ಕಲ್ಲೋ ಸೊಲ್ಲೋ ಕನ್ನಡಕ್ಕಾಗಿ ಎಲ್ಲವೂ ಬೇಕು!" #Kannada
There is a memory I carry with me from my years as a civil servant. It has never left me....
Back then, I had just been transferred as Collector to Mangalore, a city then shadowed by communal violence and a menacing sand mafia. Before I left, word came that the Chief Minister wished to see me personally. It was unusual. Collectors don't typically get called in. I walked into his chamber with a knot in my stomach.
He looked at me, that familiar, unreadable face. Steady. Unhurried.
"Banri…" he said. (Come in.)
"Nimage ondhe kelasa… alli ennum communal aaga baradhu."
(You have only one job there. No communal incident should happen.)
That was it. No preamble. No politics. No performance. Just a Chief Minister, alone with a young IAS officer, telling him exactly what mattered. In that single sentence lived an entire philosophy of governance. one rooted not in optics, but in the protection of ordinary people from extraordinary hatred.
Fifteen days later, Mangalore erupted. Two communal murders, two communities, one city on edge. He called me again. Just as directly.
"DC... Do what is required. Take anyone into custody, even our party people. Don't bother. But stop this within a day."
To a young collector, those words were everything. They were permission. They were protection. They were political will at its most honest.
I have known the contrast too. Under a different dispensation, in a similar crisis, the instruction from the top was the opposite. Do nothing strongly. Let things fester. …That silence said everything about who governs for whom.
Siddaramaiah Ji was never that kind of leader.
He carried government finances in his fingertips and social justice in his spine. He refused to tour places that reeked of feudalism. He spoke plainly, governed sharply, and stood on the side of the last person in the room.
If there was one political figure I have genuinely admired, from the stage and up close, it has been him. His legacy is not in the schemes he launched or the budgets he read. It is in the kind of Chief Minister he chose to be when no one was watching. . On that quiet phone call. In the way he asked a nervous young officer to go out and keep the peace.
And now, as he steps back with the same quiet dignity with which he always led, I find myself moved. He has handled this transition with the grace of someone who always knew that principles outlast positions.
Siddaramaiah Ji....long life, good health, and please keep guiding us. The Congress, and this country, still needs the kind of moral clarity only you carry so naturally.
ಸಿದ್ದರಾಮಯ್ಯ ನವರ ಬಗ್ಗೆ ಬರೆಯಲು ಸಾಕಷ್ಟು ಇದೆ. ನಮ್ಮನ್ನು ಬಲ್ಲವರಿಗೆ ಗೊತ್ತು ನಾವೆಷ್ಟು ಅವರ ಅಭಿಮಾನಿಗಳು ಅಂತ.
ನಮಗೆ ಅವರಲ್ಲಿ ಅತ್ಯಂತ ಇಷ್ಟ ಆಗಿದ್ದು ಸಮಾಜದಲ್ಲಿ ಅನಾಫಿಶಿಯಲ್ ಆಗಿ ಹಾಸು ಹೊಕ್ಕಿದ್ದ ಶ್ರೇಷ್ಠತೆಯ ಸೋಗಿನ ಒಂದು ಗೋಡೆಯನ್ನು ಒದ್ದು ಬಿಸಾಕಿದ್ದು.
ಅಪ್ಪ ಮಕ್ಕಳ ದರ್ಬಾರಿಗೆ ಬೇಸತ್ತು ಅಂದಿನ ಕಾಲದಲ್ಲಿ ಹಿಂದೆಂದೂ ಕಂಡು ಕೇಳರಿಯದ ಅಹಿಂದ ಸಮಾವೇಶ ಅಂತ ಮಾಡಿದಾಗ ನಮಗೆ ಶಾಕ್ ಆಗಿತ್ತು. ಏನಿದು ಅಹಿಂದ?
ನಮ್ಮಲ್ಲಿ ಶ್ರೇಷ್ಠತೆಯ ವ್ಯಸನ ತುಂಬಿದ ಮಂದಿಯ ಅಂಡಿಗೆ ಜೀರಿಗೆ ಮೆಣಸು ಕಿವುಚಿದ ಪದ ಅಹಿಂದ. ಅಂದು ಸಿದ್ಧರಾಮಯ್ಯ ಕೊಟ್ಟ ವಿವರಣೆ ನಾವು ತುಳಿಸಿಕೊಳ್ಳುವವರು ಅಲ್ಲ, ನಮ್ಮಲ್ಲಿ ತಾಕತ್ತು ಇದೆ ಅಂತ. ಒಂದು ದೊಡ್ಡ ಸಮೂಹದ ಶಕ್ತಿ ತೋರಿಸಿದರು.
ನಿಮಗೆ ಅಂದಿನ ಕಾಲದ ನಮ್ಮ ಶ್ರೇಷ್ಠತೆಯ ವ್ಯಸನಿಗಳ ಮನಸ್ಥಿತಿ ಬಗ್ಗೆ ಹೇಳಬೇಕು. ಅಂದು ಕುರುಬ ಅನ್ನುವ ಪದವನ್ನು ಏನೂ ಗೊತ್ತಿಲ್ಲದ ಪೆದ್ದ, ದಡ್ಡ ಅನ್ನುವುದಕ್ಕೆ ಅನ್ವರ್ಥವಾಗಿ ಬಳಸುತ್ತಾ ಇದ್ದರು. ಕುರುಬ ಹೊಲೆಯ ವಡ್ಡ ಹಜಾಮ ಅಂತೆಲ್ಲಾ ಲೇವಡಿ ಅರ್ಥವಾಗಿ ಬಳಸುವ ಶ್ರೇಷ್ಟತೆಯ ವ್ಯಸನಿಗಳ ಹಾರಾಟ. ಅಂತ ಸಮಯದಲ್ಲಿ ಆ ವ್ಯಸನಿಗಳ ಅಂಡು ಅದುರುವ ಹಾಗೆ ಮಾಡಿದ್ದು ಆ ಸಮಾವೇಶ. ಮುಂದೆ ಅಪ್ಪ ಮಕ್ಕಳ ದರ್ಬಾರು ಬಿಟ್ಟು ಹೊರ ಬರಲು ಅದೇ ಹೆಬ್ಬಾಗಿಲು ಆಯ್ತು. ಅಹಿಂದ ನಾಯಕರಾಗಿ ಬಂದರು ಸಿದ್ದರಾಮಯ್ಯ.
ನಮಗೆ ಅವರಲ್ಲಿ ತುಂಬಾ ಇಷ್ಟ ಆಗಿದ್ದು ಅವ್ರ ನಿಷ್ಠುರ ಮಾತುಗಳು. ಶ್ರೇಷ್ಟತೆಯ ವ್ಯಸನಿಗಳ ಮುಖಕ್ಕೆ ಹೊಡೆದ ಹಾಗೆ ಏ ಯಾವನೋ ನೀನು ಅಂತ ಅವರು ಹಾಕುವ ಪರಿ! ಅದ್ಬುತ.
ಅವರ ಇನ್ನೊಂದು ಅದ್ಬುತ ನಡೆ ಸರ್ಕಾರಿ ಕಚೇರಿಗಳಲ್ಲಿ ಈ ಯುಗದ ಮಹಾನ್ ಚೇತನ, ಜಗತ್ತಿನ ಅಪ್ರತಿಮ ಸುಧಾರಕ ಬಸವಣ್ಣನವರ ಫೋಟೋ ಕಡ್ಡಾಯ ಮಾಡಿದ್ದು. ಶ್ರೇಷ್ಟತೆಯ ವ್ಯಸನಿಗಳಿಗೆ ಇದು ಮಗದೊಂದು ಬಾರಿ ಅಂಡಿಗೆ ಗರ್ನಾಲ್ ಇಟ್ಟಿದ್ದು ಹೌದು. ಬಸವಣ್ಣ ದಿನ ನಿತ್ಯ ಜನರಿಗೆ ನೆನಪಾಗಬೇಕು ಅನ್ನುವ ಅದ್ಬುತ ಆಲೋಚನೆ ಸಿದ್ದರಾಮಯ್ಯ ಅವರದ್ದು.
ಶ್ರೇಷ್ಟತೆಯ ವ್ಯಸನಿಗಳ ಸಮಯ ಸಿಕ್ಕಾಗೆಲ್ಲ ಬಿಂಬಿಸಿದ್ದು ಸಿದ್ದರಾಮಯ್ಯ ಹಿಂದೂ ವಿರೋಧಿ, ಸನಾತನ ಧರ್ಮದ ವಿರೋಧಿ ಅಂತೆಲ್ಲಾ. ಆದ್ರೆ ಅವರನ್ನು ಬಲ್ಲವರಿಗೆ ಗೊತ್ತು ಅವೆಲ್ಲ ಎಷ್ಟು ದೊಡ್ಡ ಅಚ್ಚೆ ದಿನ್ ತರಹದ ಸುಳ್ಳುಗಳು ಅಂತ. ಇದ್ರ ಬಗ್ಗೆ ನಮ್ಮ ಸೋಮಯಾಜಿಗಳು ಒಂದು ಕಡೆ ಚೆನ್ನಾಗಿ ಹೇಳಿದ್ದಾರೆ.
ಮಾಂಸ ತಿಂದು ದೇವಸ್ಥಾನಕ್ಕೆ ಹೋದ್ರು ಅಂತ ಅಂಡು ಬಗೆದು ಜಿಗಿದು ಕೂಗಿದ್ದು ಅದೇ ಶ್ರೇಷ್ಟತೆಯ ವ್ಯಸನಿಗಳೇ. ಸತ್ಯ ಏನು ಅಂತ ಆಮೇಲೆ ಗೊತ್ತಾಯ್ತು ಬಿಡಿ.
ಎಲ್ಲಕ್ಕಿಂತ ಮುಕುಟಪ್ರಾಯ ನಡೆ ಅನ್ನ ಭಾಗ್ಯ. ನಾವ್ ಬಿಡಿ ಅನ್ನ ಇಲ್ಲದೇ ಊಟವನ್ನೇ ಶುರು ಮಾಡದ ಮಂದಿ ಆದ್ರೆ ಎಷ್ಟೋ ಮಂದಿಗೆ ಅನ್ನ ಒಂದು ಲಕ್ಷುರಿ. ಹಸಿವು ಜಗತ್ತಿನಲ್ಲೇ ಅತ್ಯಂತ ಭಯಾನಕ. ಈ ಹಸಿವು ಮುಕ್ತ ರಾಜ್ಯ ಆಗಬೇಕು ಕರ್ನಾಟಕ, ಅನ್ನ ಲಕ್ಷುರಿ ಅಲ್ಲ ಅನ್ನುವ ಆಲೋಚನೆ ಇಟ್ಟು ತಂದರು ಅನ್ನ ಭಾಗ್ಯ. ಇದನ್ನು ಸೋಮಾರಿ ಸ್ಕೀಮ್, ಫ್ರೀ ಭಾಗ್ಯ ಅಂತೆಲ್ಲಾ ಕೂಗಾಡಿದ್ದು ಅದೇ ಶ್ರೇಷ್ಟತೆಯ ವ್ಯಸನಿಗಳೇ.
ಹೇಳಲು ತುಂಬಾ ಇದೆ. ಅವು ನಿಮಗೆ ಗೊತ್ತಿದೆ ಕೂಡ.
ಈ ಲೋಕ ಕಂಡ ವಿಶೇಷ ನಾಯಕರ ಸಾಲಿನಲ್ಲಿ ಆರಾಮಾಗಿ ಬರ್ತಾರೆ ಸಿದ್ದರಾಮಯ್ಯ.
ನಿಮ್ಮ ನಿಷ್ಠುರ ನಡೆಯನ್ನು ಬಿಡಬೇಡಿ.
ಒಳ್ಳೆದಾಗಲಿ
ನೀವು ನಿಮ್ಮ ಅಪ್ಪ ಅಮ್ಮನನ್ನಾಗಲಿ, ಅಣ್ಣ ಅಕ್ಕ ತಮ್ಮ ತಂಗಿಯರನ್ನಾಗಲಿ, ಅತ್ತೆ ಮಾವಂದಿರನ್ನಾಗಲಿ, ಅಷ್ಟೇ ಏಕೆ ನಿಮ್ಮ ಮಕ್ಕಳನ್ನಾಗಲಿ.. ಆಯ್ಕೆ ಮಾಡುವುದಿಲ್ಲ. ಆಗುವುದೂ ಇಲ್ಲ.
ನಿಮ್ಮ ಜೀವನದಲ್ಲಿ ನೀವು ಆಯ್ಕೆ ಮಾಡುವುದು ಕೇವಲ ನಿಮ್ಮ ಸಂಗಾತಿಯನ್ನು ಮಾತ್ರ.
ಆಕೆ/ಆತ ಮಾತ್ರಾ ನಿಮ್ಮನ್ನು ನಿಜವಾಗಿ ನೋವು ಅಥವಾ ಸಂತೋಷ ಕೊಡಬಲ್ಲರು. ಉಳಿದವರಲ್ಲರೂ ನಿಮಿತ್ತ ಅಷ್ಟೇ.
ಈ ಸತ್ಯ ಅರಿತರೆ ನಿಮ್ಮ ಜೀವನ ಬಂಗಾರ.
“Politics is more than chess. It is teamwork like cricket. You must have the stamina for a marathon. You must remember it is a hard game like rugby and it is a blood sport like boxing,” - Former President/Prime Minister of Sri Lanka, Ranil Wickremesinghe
Recently discovered Kannada inscription in Nitturu, (Siruguppa, Ballari) has been deciphered. It is from the reign of Akalavarsha Krishna (Krishna I), the same emperor who commissioned the Kailasa temple in Ajanta.
This inscription holds significance in the history of Kannada. It stands as evidence for:
• The use of ancient Kannada language and script as an administrative language
• The land grant system during the Rashtrakuta period
• Regional administrative divisions
• The tradition of religious blessings and curse clauses in inscriptions
Key highlights of the inscription:
• It belongs to the reign of Akalavarsha Krishna I (756–774 CE)
• It records the royal grant of 12 "mattars" of irrigated land to an individual
• The land was measured according to “Rajamana,” the royal system of measurement
• The grant also included rights of “Unchabhoga”
• It mentions two administrative divisions ending with “100” and “70”
• It also refers to the official administering the Nittur region
The inscription concludes with a customary religious warning.
What makes this inscription even more remarkable is its proximity to the region associated with Ashokan inscriptions, highlighting the historical importance of this area from the Mauryan era to the Rashtrakuta period.
inscription clearly demonstrates that Kannada had already been firmly established as an administrative language by the 8th century CE.
Inscription was discovered by a team led by Manu Tekkalakote and Ashok Abkari.
ಒಮ್ಮೆ ಸಭೆಯೊಂದರಲ್ಲಿ ಡಾ ರಾಜ್ ಕುಮಾರ್ ಅವರೊಂದಿಗೆ ಮಾತನಾಡುತ್ತಾ ಇದ್ದಾಗ,
" ಈ ನಾಡಿನ ಜನಪ್ರಿಯ ಕಲಾವಿದರಾಗಿ ಸದಾ ಕನ್ನಡ ನೆಲ ಜಲ ಮತ್ತು ಭಾಷೆಯ ಪರವಾಗಿ ಹೋರಾಟ ನಡೆಸುವ ನೀವು, ರಾಜಕಾರಣಕ್ಕೆ ಬರಬಹುದಲ್ಲವೇ, ನಿಮ್ಮಂತವರು ಬಂದಷ್ಟೂ ಸಾರ್ವಜನಿಕ ಜೀವನದ ಮೌಲ್ಯ ಹೆಚ್ಚುತ್ತದೆ ಅಲ್ಲವೇ?" ಎಂದು ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೆ.
ಸದಾ ಆತ್ಮೀಯವಾಗೇ ಇರುತ್ತಿದ್ದ ರಾಜ್ ಅವರು ತುಸು ಧೃಡವಾದ ಮತ್ತು ಪ್ರೀತಿಯ ದನಿಯಲ್ಲಿ, " ನೀವು ಹೇಳಿದಂತೆ ಈಗಾಗಲೇ ಆಂಧ್ರದಲ್ಲಿ NTR ಮತ್ತು ತಮಿಳುನಾಡಲ್ಲಿ MGR ಮಾದರಿ ನನ್ನೆದುರಿಗೆ ಇದೆ.
ಅದನ್ನು ನೋಡುವಾಗ ಅಷ್ಟು ದಿನ ಜನರ ನಿಷ್ಕಲ್ಮಶ ಪ್ರೀತಿಗೆ ಪಾತ್ರನಾಗಿದ್ದ ಕಲಾವಿದ ರಾಜಕಾರಣದ ಕಾರಣಕ್ಕೆ ಇನ್ನೊಂದು ರಾಜಕೀಯ ಪಕ್ಷದ ಎದುರಾಳಿ ಆಗುತ್ತಾನೆ, ಕೆಲವೊಮ್ಮೆ ಅವರು ನಮ್ಮನ್ನು ವಿನಾಕಾರಣ ದ್ವೇಷಿಸಬೇಕಾಗದ ಸಂದರ್ಭ ಉಂಟಾಗುತ್ತದೆ.
ನಮ್ಮನ್ನು ಪ್ರೀತಿಸುವ ಅಭಿಮಾನಿಗಳು ಕಾರಣವಿಲ್ಲದೇ ದ್ವೇಷ ಮಾಡುವುದಕ್ಕೆ ಇಲ್ಲವೇ ಅಸಹನೆ ತೋರುವುದಕ್ಕೆ ಕಾರಣವಾಗುತ್ತದೆ ಎಂದಾದರೆ ಆ ಸ್ಥಳ ನನಗೆ ಬೇಡ. ಪ್ರೀತಿಸುವ ಜನರಲ್ಲಿ ದ್ವೇಷ ತರುವುದು ಕಲೆಯ ಉದ್ದೇಶ ಅಲ್ಲ.
ಮುಖ್ಯವಾಗಿ,
ಕಲಾವಿದನಿಗೆ ರಾಜಕೀಯ ಪ್ರಜ್ಞೆ ಇರಬೇಕು ನಿಜ, ಆದರೆ ಕಲಾವಿದನು ಯಾವುದೋ ಒಂದು ರಾಜಕೀಯ ಪಕ್ಷಗಳ ಪರವಾಗಿ ನಿಂತ ಕ್ಷಣ ಅವನ ಮೌಲ್ಯ ಕುಸಿಯುತ್ತದೆ. ಕಲಾವಿದನು ಸಮಾಜಕ್ಕೆ ನೀಡುವ ಒಳ್ಳೆಯ ಸಂದೇಶ ಅದಲ್ಲ ಎಂಬುದು ನನ್ನ ಭಾವನೆ ಆಗಿದ್ದು ನಾನು ಸದಾ ಕಲಾವಿದನಾಗಿಯೇ ಉಳಿಯುತ್ತೇನೆ.
ನಮ್ಮ ಕಾಡ್ನೋರಾಗಿ ಇದೆಲ್ಲಾ ನಿಮ್ಗೆ ಚೆನ್ನಾಗಿ ಗೊತ್ತಿರತ್ತೆ ಅಲ್ವಾ ಎಂದು ಸುಮ್ಮನೆ ನಕ್ಕರು.
ಇಂತಹ ರಾಜ್ ಕುಮಾರ್ ಮುಂದೆ, ನೆಲ ಜಲ ಭಾಷೆಯ ಅಸ್ಮಿತೆಯ ಗುರುತಾಗಿದ್ದ ಗೋಕಾಕ್ ಚಳುವಳಿಯ ನೇತೃತ್ವವನ್ನೂ ವಹಿಸಿದ್ದರು. ಬಹುಶಃ ಈ ಕಾಲದಲ್ಲಿ ಈ ರೀತಿಯ ರಾಜಕೀಯೇತರವಾದ ಪ್ರಜ್ಞೆ ಕಡಿಮೆ ಎನಿಸುತ್ತಿದೆ
ಇನ್ನು ತನ್ಮ ಮಹಾನ್ ಪ್ರತಿಭೆ, ವಿನಯತೆ ಮತ್ತು ಸರಳತೆಯಿಂದ ಕಲಾವಿದನ ಜವಾಬ್ದಾರಿಯನ್ನು ಎಂದೂ ಮರೆಯದ ಡಾ ರಾಜ್ ಕುಮಾರ್ ಅವರು, ಇಂದಿನ ಎಷ್ಟೋ ಮಂದಿ ನಟರಿಗೆ ದಾರಿದೀಪ ಆಗಬಲ್ಲರು.
ಅವರ ಜನ್ಮದಿನದಂದು ಈ ಘಟನೆ ಯಾಕೋ ನೆನಪಾಯ್ತು
#ಡಾ_ರಾಜ್
#Jerox web series directed by Blink movie fame Srinidhi Bengaluru and produced by Daali Dhananjaya will stream on #Zee5 OTT platform from April 24. The trailer looks promising and has crossed 5M views. All the best to the whole team 👍🏻 @srinidhi_Blore
ಇವತ್ತು ಅಂಬೇಡ್ಕರ್ ಜಯಂತಿ.
ಯಾರು ಅಂಬೇಡ್ಕರ್ ಗೆ ಹೆಚ್ಚು ಋಣಿಯಾಗಿರಬೇಕು ಅಂದ್ರೆ ನಿಮಗೆ ತಕ್ಷಣ ಅನ್ನಿಸುವುದು ದಲಿತರು ಅಂತ.
ಬಟ್ ಎಲ್ಲರಿಗಿಂತ ಹೆಚ್ಚು ಋಣಿಯಾಗಿರಬೇಕಾದವರು ಹೆಣ್ಣುಮಕ್ಕಳು, ಹೆಂಗಸರು.
ಈ ದೇಶ ಕಂಡ ಅತೀ ಶ್ರೇಷ್ಠ, ಗ್ರೇಟೆಸ್ಟ್ ಫೆಮಿನಿಸ್ಟ್ ಅಂಬೇಡ್ಕರ್ ಅವರು.
ಆರ್ಟಿಕಲ್ 14 ಅಲ್ಲಿ ಸಮಾನತೆ, ಆರ್ಟಿಕಲ್ 15(1) ಅಲ್ಲಿ ಲಿಂಗಾಧಾರಿತ ತಾರತಮ್ಯ ನಿಷೇಧ, ಆರ್ಟಿಕಲ್ 15(3) ಅಲ್ಲಿ ಮಹಿಳೆಯರಿಗೆ ಮೀಸಲಾತಿ ಆರ್ಟಿಕಲ್ 16 ರಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ಸಮಾನ ಅವಕಾಶ
ಇನ್ನು ಹಿಂದು ಕೋಡ್ ಬಿಲ್ ಇದ್ಯಲ್ಲ ಅದು ಭಾರತೀಯ ಮಹಿಳೆಯರ ಜೀವನವನ್ನೇ ಬದಲಾಯಿಸಿ ಅವರಿಗೊಂದು ಗೌರವ ತಂದು ಕೊಟ್ಟ ಅಸಾಧಾರಣ ಬಿಲ್. ಹೆಣ್ಣುಮಕ್ಕಳಿಗೆ ಸಮಾನ ಆಸ್ತಿಯ ಹಕ್ಕು ಕೊಟ್ಟಿತು. ವಿಚ್ಛೇದನದ ಹಕ್ಕು ಕೊಟ್ಟಿತು ಹಾಗೆಯೇ ವಿಚ್ಚೇದನ ಇಲ್ಲದೆ ಗಂಡ ಇನ್ನೊಂದು ಮದುವೆ ಆಗದಂತೆ ಕಾನೂನು. ಅದೆಲ್ಲಕ್ಕಿಂತ ಹೆಚ್ಚಾಗಿ ಮಹಿಳೆ ಕಾನೂನಾತ್ಮಕವಾಗಿ ಒಬ್ಬ legal individual ಅಂತ ಗುರುತು ಕೊಟ್ಟರು.
ಮುಸ್ಲಿಂ ಸಮುದಾಯ ಇದನ್ನು ಒಪ್ಪಲಿಲ್ಲ ಇದೇ ಕಾರಣಕ್ಕೆ ಅಂದಿನಿಂದಲೂ ಅಂಬೇಡ್ಕರ್ ಮುಸ್ಲಿಂ ಸಮುದಾಯದ ಬಗ್ಗೆ ಕಟು ಧೋರಣೆ ಹೊಂದಿದ್ದು.
ನಿಮಗೆ ಗೊತ್ತಿರಲಿ ದೊಡ್ಡಣ್ಣ ಅಮೆರಿಕ ಅಲ್ಲಿ ಮಹಿಳೆ ಮಗು ಹೆತ್ತ ಹತ್ತು ಹದಿನೈದು ದಿನಗಳಲ್ಲಿ ಮತ್ತೆ ಡ್ಯೂಟಿಗೆ ಹೋಗಬೇಕು. ಆದ್ರೆ ಭಾರತದಲ್ಲಿ ಮೆಟಾರ್ನಿಟಿ ಬೆನಿಫಿಟ್ ಕಾನೂನು ತಂದಿದ್ದು ಆಗಿನ ಕಾಲದಲ್ಲಿ ಅಂಬೇಡ್ಕರ್.
ಮಹಿಳೆಗೆ ಸಮಾನ ಸಂಬಳ ಇರಬೇಕು ಅಂತ ಕಾನೂನು ಮಾಡಿದರು. 8 ಗಂಟೆ ಕೆಲಸದ ಅವಧಿ ಇಟ್ಟಿದ್ದು ಅವರೇ
ಸ್ವಾತಂತ್ರ್ಯ ಬಂದ ದಿನದಿಂದಲೇ ಮಹಿಳೆಗೆ ಮತದಾನದ ಹಕ್ಕು ಕೊಟ್ಟ ಅದ್ಬುತ ದೇಶ ಇದು.
ಎಲ್ಲಾ ಜಾತಿಯ ಮಹಿಳೆಯರಿಗೂ ಶಕ್ತಿ ತುಂಬಿದ್ದು ಅಂಬೇಡ್ಕರ್.
ನೀವು ಬ್ರಾಹ್ಮಣ ಮಹಿಳೆ ಆಗಿರಬಹುದು ಒಕ್ಕಲಿಗ ಲಿಂಗಾಯಿತ ದಲಿತ ಮಹಿಳೆ ಆಗಿರಬಹುದು ಆದ್ರೆ ಎಲ್ಲಾ ಮಹಿಳೆಯರು ಇಂದು ಹೀಗಿರಲು ಕಾರಣ ಅಂಬೇಡ್ಕರ್.
ನಿಮಗೆ ಗುರುತು ಕೊಟ್ಟು ಗೌರವ ಘನತೆ ಸಿಗುವಂತೆ ಮಾಡಿದ್ದು ಅಂಬೇಡ್ಕರ್.
ರಿಯಲ್ ಫೆಮಿನಿಸ್ಟ್