ಕೆಪಿಟಿಸಿಎಲ್ ಮತ್ತು ರಾಜ್ಯದ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್ ಮ್ಯಾನ್ 2975 ಹುದ್ದೆಗಳಿಗೆ ಎಸ್ ಎಸ್ ಎಲ್ ಸಿ ಅಂಕಗಳು ಮತ್ತು ದೈಹಿಕ ಪರೀಕ್ಷೆಯ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುವ ಬದಲಾಗಿ ಸ್ಪರ್ಧಾತ್ಮಕ ಪರೀಕ್ಷೆ ಮುಖಾಂತರ ನೇರ ನೇಮಕಾತಿ ಮಾಡಿಕೊಳ್ಳಬೇಕೆಂಬ ಮನವಿ. @kptcl_official@KJGeorgeOffice@siddaramaiah
#PSI545_ ಮರು ಪರೀಕ್ಷೆಯ ಫಲಿತಾಂಶ ಪ್ರಕಟಣೆಗೆ ಅಡ್ಡಿಯಾಗಿದ್ದ ಪತ್ರಿಕೆ 1 ರ ಪ್ರಕರಣವನ್ನು KAT ಯು ವಜಾಗೊಳಿಸಿದೆ. ಅದ ಕಾರಣ ಫಲಿತಾಂಶ ಪ್ರಕಟಣೆಗೆ ಯಾವುದೆ ರೀತಿಯ ಅಡ್ಡಿ ಇಲ್ಲದಂತಾಗಿದೆ.ಆದ್ದರಿಂದ ಮಾನ್ಯ ಗೃಹ ಸಚಿವರು ಆದಷ್ಟು ಬೇಗ ಫಲಿತಾಂಶ ಪ್ರಕಟಿಸುವಂತೆ ತಮ್ಮಲ್ಲಿ ಕಳಕಳಿಯ ಪ್ರಾರ್ಥನೆ🙏🙏.@DrParameshwara@siddaramaiah@ksp
ಶ್ರೀಯುತ ಗೃಹ ಸಚಿವರೇ ಮತ್ತು ಕೆಇಎ ಎಂಡಿ ಪ್ರಸನ್ನ ಸರ್ ಅವರೇ ಸೆಪ್ಟೆಂಬರ್ 22 ರ ನಂತರ 1 ವಾರ ದಿಂದ 15 ದಿನಗಳ ಒಳಗಾಗಿ 402 PSI ಪರೀಕ್ಷೆ ಮಾಡಬಹುದು ಸರ್ ಪ್ಲಿಜ್ 🙏ದಯವಿಟ್ಟು ನೀವು ಮನಸ್ಸು ಮಾಡಿದ್ರೇ ನಿಮ್ಮಿಂದ ಮಾತ್ರ ಸಾಧ್ಯ ಸರ್🙏
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ನಡೆಯುತ್ತಿರುವ ಪಿಎಸ್ಐ ಲಿಖಿತ ಪರೀಕ್ಷೆಯು ಸೆಪ್ಟೆಂಬರ್ 22ರಂದು ನಿಗದಿಯಾಗಿತ್ತು. ಇದೇ ದಿನಾಂಕದಂದು ಕೇಂದ್ರ ಲೋಕಸೇವಾ ಆಯೋಗದ ಮುಖ್ಯ ಪರೀಕ್ಷೆ ಇರುವುದರಿಂದ ಹಲವು ಪರೀಕ್ಷಾರ್ಥಿಗಳು ಅವಕಾಶ ವಂಚಿತರಾಗುತ್ತಾರೆ. ಇದನ್ನು ಪರಿಗಣಿಸಿ ಮಾನ್ಯ ಗೃಹ ಸಚಿವರಾದ @DrParameshwara ಅವರಿಗೆ ಪಿಎಸ್ಐ ಲಿಖಿತ ಪರೀಕ್ಷೆಯನ್ನು ಮುಂದೂಡುವಂತೆ ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷರು ಮತ್ತು ಶಾಸಕರಾದ ಧೀರಜ್ ಮುನಿರಾಜು ಹಾಗೂ ಬಿಜೆಪಿ ನಿಯೋಗದೊಂದಿಗೆ ಮನವಿ ಸಲ್ಲಿಸಲಾಯಿತು. ವಿದ್ಯಾರ್ಥಿಗಳ ಹಿತಾಸಕ್ತಿ ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಕೋರುತ್ತೇನೆ
ಪೊಲೀಸ್ ಸಬ್ ಇನ್ಸ್ಪೆಕ್ಟರ್ ಲಿಖಿತ ಪರೀಕ್ಷೆಯ ನಿರ್ಧರಿತ ದಿನಾಂಕವನ್ನು ಮುಂದೂಡುವಂತೆ ಒತ್ತಾಯಿಸಿ ರಾಜ್ಯ ಬಿಜೆಪಿ ನಿಯೋಗವು ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ನಿಯೋಗದಲ್ಲಿ ಮಾಜಿ ಉಪಮುಖ್ಯಮಂತ್ರಿಗಳಾದ @drashwathcn , ಬಿಜೆಪಿ ಯುವಮೋರ್ಚಾ ರಾಜ್ಯ ಅಧ್ಯಕ್ಷರಾದ ಶ್ರೀ @dheerajmuniraj ಮತ್ತು ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.
The Congress government is displaying authoritarian behavior by refusing to postpone the PSI recruitment exam, despite clear scheduling clashes with major national exams like the UPSC Civil Services Mains and SSC CGL Tier 1 on Sept 22. Home Minister G Parameshwara's claim that the PSI exam was fixed before the UPSC schedule is blatantly false.
The UPSC exam calendar was released on May 10, 2023, well in advance. Meanwhile, the Karnataka Examinations Authority (KEA) initially scheduled the PSI exam for May 8, 2024, on March 5, 2024, only to postpone it on March 21, 2024, with the final date being set on March 24, 2024. Further, in response to a starred question (No. 328/400) on July 18, 2024, the government admitted that exam dates are fixed after careful consideration of national exams like UPSC, SSC, and NTA, and that adjustments are possible in case of clashes.
Despite these facts, the Congress government is adamantly pushing ahead with the exam, disregarding the aspirations of thousands of candidates. It’s time the government put its ego aside and postponed the exam for the benefit of our bright future leaders. I request the CM and the Home Minister to kindly reconsider this decision and act in the interest of the aspirants.
#StopExamClash #JusticeForAspirants #StudentWelfare
https://t.co/WRYUEcT6zr
ಕೆಪಿಎಸ್ಸಿ ಪರೀಕ್ಷೆಯ ಗೊಂದಲಗಳ ನಡುವೆ ಹಠಕ್ಕೆ ಬಿದ್ದವರಂತೆ ಪರೀಕ್ಷೆ ನಡೆಸಿದ್ದ ರಾಜ್ಯ ಸರ್ಕಾರ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ನ್ಯೂನತೆ ಬಯಲಾದ ಬೆನ್ನಲ್ಲೇ ಮತ್ತೆ ಮರು ಪರೀಕ್ಷೆಗೆ ಆದೇಶ ಹೊರಡಿಸಿ ಸಾವಿರಾರು ಪರೀಕ್ಷಾರ್ಥಿಗಳ ಶಾಪಕ್ಕೆ ಗುರಿಯಾಗಿತ್ತು.
ಇದೀಗ ಅಂತದ್ದೇ ಮತ್ತೊಂದು ಎಡವಟ್ಟು ಮಾಡಲು ಸರ್ಕಾರ ಮುಂದಾಗಿದೆ. ಸೆಪ್ಟೆಂಬರ್ 22ರಂದು ಯುಪಿಎಸ್ಸಿ ಹಾಗೂ ಎಸ್.ಎಸ್.ಸಿ ಪರೀಕ್ಷೆಗಳ ದಿನಾಂಕ ನಿಗದಿಯಾಗಿದ್ದು, ಅದೇ ದಿನ ಪಿಎಸ್ಐ ಪರೀಕ್ಷೆ ನಡೆಸಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಉದ್ಯೋಗಾಕಾಂಕ್ಷಿಗಳ ವಿರೋಧಿ ಧೋರಣೆ ಅಲ್ಲದೆ ಬೇರೇನೂ ಅಲ್ಲ.
ವಿವಿಧ ಗ್ರೂಪ್ ಬಿ ಹುದ್ದೆಗಳಿಗೆ ಸೆಪ್ಟೆಂಬರ್ 14 ಮತ್ತು 15ರಂದು ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸೆಪ್ಟೆಂಬರ್ 5 ರಂದೇ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಕೆಲವು ಅಭ್ಯರ್ಥಿಗಳ ಪರೀಕ್ಷಾ ಕೇಂದ್ರಗಳ ಹಂಚಿಕೆಯಲ್ಲಿಯೂ ವ್ಯತ್ಯಯ ಕಂಡುಬಂದಿದ್ದು ತಾತ್ಕಾಲಿಕವಾಗಿ ಪ್ರವೇಶ ಪತ್ರದ ಡೌನ್ಲೋಡ್ ಪ್ರಕ್ರಿಯೆಯನ್ನೂ ಸಹ ಸ್ಥಗಿತಗೊಳಿಸುವ ಮೂಲಕ ಕೆಪಿಎಸ್ಸಿ ಹಾಗೂ ಸರ್ಕಾರದ ಹುಳುಕು ಬಯಲಾಗಿದೆ.
ಉದ್ಯೋಗವನ್ನು ಅರಸಿ ಪರೀಕ್ಷೆಗಳನ್ನು ಬರೆಯುವ ಉದ್ಯೋಗಾಕಾಂಕ್ಷಿಗಳನ್ನು ಮತ್ತೊಮ್ಮೆ ಸಂಕಷ್ಟಕ್ಕೆ ದೂಡುವ ಮುನ್ನವೇ ರಾಜ್ಯದ ಸರ್ಕಾರ ಸೆಪ್ಟೆಂಬರ್ 22 ರಂದು ನಡೆಸಲು ನಿರ್ಧರಿಸಿರುವ ಪಿಎಸ್ಐ ಪರೀಕ್ಷೆ ಮುಂದೂಡಿಕೆ ಮಾಡಿ ಹಾಗೂ ಗ್ರೂಪ್ ಬಿ ಹುದ್ದೆಗಳ ಪರೀಕ್ಷೆಯ ಪ್ರವೇಶ ಪತ್ರ ಹಾಗೂ ಪರೀಕ್ಷಾ ಕೇಂದ್ರಗಳ ಗೊಂದಲ ನಿವಾರಿಸಿ ಪರೀಕ್ಷಾರ್ಥಿಗಳಿಗೆ ತೊಂದರೆಗಳಾಗದಂತೆ ಎಚ್ಚರ ವಹಿಸುವಂತೆ ಆಗ್ರಹಿಸುತ್ತೇನೆ.
@siddaramaiah@DrParameshwara
ಸೆಪ್ಟೆಂಬರ್ 22ರಂದು ಪಿಎಸ್ಐ 402 ಪರೀಕ್ಷೆ ನಿಗದಿಯಾಗಿದೆ ಅದೇ ದಿನ ನಮ್ಮ ನಾಡಿನ ಈ ಕೆಳಕಂಡ ವಿದ್ಯಾರ್ಥಿಗಳು ಯುಪಿಎಸ್ಸಿ ಮುಖ್ಯ ಪರೀಕ್ಷೆಯನ್ನು ತೆಗೆದುಕೊಂಡಿದ್ದಾರೆ
ಯುಪಿಎಸ್ಸಿ ಪರೀಕ್ಷೆ ತೆಗೆದುಕೊಳ್ಳಿ ಎಂದು ಪ್ರೋತ್ಸಾಹಿಸಿ ಅವಕಾಶ ನೀಡದಿದ್ದರೆ ಹೇಗೆ ?
ಸರ್ಕಾರವೇ ಕನಸುಗಳನ್ನು ಕೊಲ್ಲುತ್ತಿದೆ!
@KEA_karnataka ಮಾನ್ಯರೇ, ಸುಮಾರು 60ಕ್ಕೂ ಹೆಚ್ಚು ಕರ್ನಾಟಕದ ಅಭ್ಯರ್ಥಿಗಳು ಯುಪಿಎಸ್ಸಿ ಮುಖ್ಯ ಪರೀಕ್ಷೆ ಹಾಗೂ ಪಿಎಸ್ಐ 402 ಪರೀಕ್ಷೆ ಎರಡಕ್ಕೂ ಅರ್ಹರಿದ್ದಾರೆ, ಅರ್ಹರ ಸಂಖ್ಯೆ ಇನ್ನು ಹೆಚ್ಚಿರಬಹುದು! ಯುಪಿಎಸ್ಸಿ ಪರೀಕ್ಷೆಯ ದಿನವೇ ಪಿಎಸ್ಐ ಪರೀಕ್ಷೆ ನಡೆಸಿ ಕರ್ನಾಟಕದ ಅಭ್ಯರ್ಥಿಗಳಿಂದ ಅವಕಾಶವನ್ನು ಕಸಿದುಕೊಳ್ಳಬೇಡಿ @DrParameshwara
COME BACK!!
ಕೆಪಿಎಸ್ಸಿ ಸುಧಾರಣೆಗೆ ಶ್ರಮಿಸಿದ ವಿಕಾಸ್ ಕಿಶೋರ್ ಸುರಲ್ಕರ್‘ಸರ್ ಅವರು KPSC’ಗೆ ಮರಳಿ ಬರಬೇಕು.
ಪ್ರಾಮಾಣಿಕ ಅಧಿಕಾರಿಗಳಿಂದ ಮಾತ್ರ ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ನ್ಯಾಯ ಸಿಗಲಿದೆ.
#ComeBackVikasKishorSuralkar
PSI/PC ವಯೋಮಿತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ @DrParameshwara ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲು ತೆರಳಿದ್ದ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾದ ಕಾಂತಕುಮಾರ್ ಮತ್ತು ಪಿಎಸ್ಐ ಅಭ್ಯರ್ಥಿಗಳನ್ನು ಪೊಲೀಸರು ಈ ರೀತಿ ನಡೆಸಿಕೊಳ್ಳುವುದು ಅಕ್ಷಮ್ಯ ಅಪರಾಧ ಕೂಡಲೇ ಬಿಡುಗಡೆಗೊಳಿಸಿ @BJP4Karnataka@INCKarnataka
@DrParameshwara ಮಾನ್ಯರೆ ಸೆಪ್ಟೆಂಬರ್ 22 ರಂದು ಪಿಎಸ್ಐ 402 ಪರೀಕ್ಷೆ ನಿಗದಿಯಾಗಿದ್ದು ಅದೇ ದಿನ SSC (CGL) UPSC ಮುಖ್ಯ ಪರೀಕ್ಷೆ ನಡೆಯುವ ಕಾರಣ ಎರಡು ಪರೀಕ್ಷೆಗಳನ್ನು ಎದುರಿಸುತ್ತಿರುವ ಅಭ್ಯರ್ಥಿಗಳು ಅವಕಾಶ ವಂಚಿತರಾಗುತ್ತಿದ್ದಾರೆ @KEA_karnataka ಇಲಾಖೆಗೆ ಕನಿಷ್ಠ ಒಂದು ವಾರ ಪರೀಕ್ಷೆಯನ್ನು ಮುಂದೂಡಲು ಸೂಚಿಸಬೇಕೆಂದು ಮನವಿ
ಸರ್ಕಾರಿ ಹುದ್ದೆ ತೆಗೆದುಕೊಳ್ಳುವುದೇ ತಮ್ಮ ಜೀವನದ ಸವಾಲು ಎಂದು ಲಕ್ಷಾಂತರ ಅಭ್ಯರ್ಥಿಗಳು ಹಗಲು ರಾತ್ರಿ ಎಡೆಬಿಡದೆ ಓದುತ್ತಿರುತ್ತಾರೆ ಪರೀಕ್ಷಾ ಪರೀಕ್ಷೆ ಹಾಲ್ ನಲ್ಲಿ ಈ ರೀತಿಯ ಪತ್ರಿಕೆಗಳನ್ನು ನೋಡಿದರೆ ತಮ್ಮ ಭವಿಷ್ಯವೇ ತೊಂದರೆಗೆ ಒಳಗಾಗುತ್ತದೆ ; ಮರು ಪರೀಕ್ಷೆಯೇ ನ್ಯಾಯ !
ಬಂಜಗೆರೆ ಜಯಪ್ರಕಾಶ್ ಚಿಂತಕರು
#KPSC_Mosa#KASReExam
ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಗೂಗಲ್ ನಲ್ಲಿ ಅನುವಾದ ಮಾಡಿಸೋ ಮಟ್ಟಕ್ಕೆ ಲೋಕಸೇವಾ ಆಯೋಗ ಇಳಿದಿದೆ. ಒಬ್ಬ ಉತ್ತಮ ತರ್ಜುಮೆದಾರರ ಮೂಲಕ ಅನುವಾದ ಮಾಡಿಸಿಕೊಳ್ಳಲು ಏನು ಸಮಸ್ಯೆ ? ಆಯೋಗಕ್ಕೆ ತಮ್ಮ ಸ್ವಂತ ಸಿಬ್ಬಂದಿ, ಅಧಿಕಾರಿಗಳ ಮೇಲೆ ನಂಬಿಕೆ ಇಲ್ಲವೇ ? ಈ ರೀತಿಯಾದ ತಪ್ಪು ತರ್ಜುಮೆಯಿಂದ ಪರೀಕ್ಷಾರ್ಥಿಗಳು ಗೊಂದಲಗೊಂಡು ಸಮಯ ವ್ಯರ್ಥವಾಗುವುದಿಲ್ಲವೇ ?
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರತಿ ನಿಮಿಷ, ಸೆಕೆಂಡ್ ಕೂಡ ಮುಖ್ಯ..ಇಂತಹುದ್ದರಲ್ಲಿ, ತಪ್ಪು ತರ್ಜುಮೆ ಮಾಡಿ ಕೊಟ್ಟರೆ ಪರೀಕ್ಷಾರ್ಥಿಗಳ ಸಮಯ ಹಾಳಾಗುವುದಿಲ್ಲವೇ ? ಪ್ರಶ್ನೆ ಪತ್ರಿಕೆ ಮಾಡಿದ ನಂತರ ಅದನ್ನು ಪ್ರೂಫ್ ಮಾಡುವ ಅಭ್ಯಾಸ/ವ್ಯವಸ್ಥೆ ಇಲ್ಲವೇ?
@tv9kannada I @Vijayavani_Digi I @VijayaKarnataka I
@NewsFirstKan I @prajavani I @AsianetNewsSN I @KannadaRepublic I