ಈ ಜನಪದ ಕಲಾವಿದೆ ನೊಂದ ಕನ್ನಡಿಗರ ಎದೆಯ ಸಂಕಟಕ್ಕೆ ದನಿಯಾಗಿದ್ದಾರೆ.
ಈ ಲೋಕಸಭಾ ಚುನಾವಣೆಯಲ್ಲಿ ಜನ ಮೈಮರೆಯದೆ ಎಚ್ಚರದಿಂದ ಮತ ಚಲಾಯಿಸಬೇಕೆಂಬ ಕಾಳಜಿಯೂ ಈ ಹಾಡಿನಲ್ಲಿದೆ.
ತೆರೆದ ಮನಸ್ಸಿನಿಂದ ಈ ಹಾಡನ್ನು ಕೇಳಿ, ಮನನ ಮಾಡಿಕೊಳ್ಳಿ.
ಮತ ಚಲಾಯಿಸುವಾಗ ಈ ಹಾಡಿನ ಸಾಲುಗಳು ನೆನಪಲ್ಲಿರಲಿ.
ಹಾಡು ಕಟ್ಟಿದ ಕವಿಗೆ, ಹಾಡಿದ ಗಾಯಕಿಗೆ ಮತ್ತು
ದೃಶ್ಯ ಸಂಯೋಜನೆ ಮಾಡಿದ ಕಲಾವಿದರಿಗೆ ಅಭಿನಂದನೆಗಳು.
#LokSabhaElections2024
ಕರ್ನಾಟಕಕ್ಕೆ ಕೊಡಬೇಕಾಗಿದ್ದ ತೆರಿಗೆ ಯಾಕೆ ಕೊಟ್ಟಿಲ್ಲ ಅಂತ ಸುಪ್ರೀಂ ಕೋರ್ಟ್ ಇವತ್ತು ಕೇಂದ್ರ ಸರಕಾರವನ್ನು ಕೇಳಿದೆ. ಎರಡು ವಾರದೊಳಗೆ ಸಮಸ್ಯೆ ಪರಿಹರಿಸುತ್ತೇವೆ ಎಂದು ಕೇಂದ್ರ ಸರಕಾರ ಆಶ್ವಾಸನೆ ನೀಡಿದೆ. ಅರ್ಥಮಂತ್ರಿಗಳು ಇನ್ನು ಏನು ಹೇಳ್ತಾರೋ ನೋಡೋಣ.
ಒಂದು ಗಂಟೆ ಐವತ್ತು ನಿಮಿಷಗಳ ಭಾಷಣದಲ್ಲಿ ಸಚಿವ ಕೃಷ್ಣ ಭೈರೇ ಗೌಡರು ಕೇಂದ್ರ ಸರಕಾರದಿಂದ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯಗಳನ್ನು ಅಂಕಿ ಅಂಶಗಳ ಸಮೇತ ಸಭೆಯ ಮುಂದಿಟ್ಟರು. ಈ ಕುರಿತು ಕೇಂದ್ರ ಸರಕಾರವು ಹೇಳುತ್ತಿರುವ ಸುಳ್ಳುಗಳನ್ನು ಪತ್ರಗಳ ಸಾಕ್ಷ್ಯದ ಮೂಲಕ ವಿವರಿಸಿದರು.
ಕೇಂದ್ರ ಸರಕಾರ ಉತ್ತರಿಸಬೇಕು.