ಕೋರಮಂಗಲದ ಮೇಸ್ತ್ರಿಪಾಳ್ಯ ಕೆರೆಯ ಆವರಣದಲ್ಲಿ ಶ್ರೀಮತಿ ತೇಜಸ್ವಿನಿ ಅನಂತ್ಕುಮಾರ್ ಅವರ ನೇತೃತ್ವದ 'ಅದಮ್ಯ ಚೇತನ' ಟ್ರಸ್ಟ್ ಆಯೋಜಿಸಿದ್ದ 'ಹಸಿರು ಭಾನುವಾರ' (Green Sunday) ಅಭಿಯಾನದಲ್ಲಿ ಪಾಲ್ಗೊಂಡು, ಸಸಿ ನೆಡುವ ಮೂಲಕ ಪರಿಸರ ಜಾಗೃತಿ ಕಾರ್ಯಕ್ರಮಕ್ಕೆ ಕೈಜೋಡಿಸಿದೆ.
ಬೆಂಗಳೂರಿನ ಹಸಿರು ಹೊದಿಕೆಯನ್ನು ಹೆಚ್ಚಿಸುವ ಇಂತ��� ಜನಪರ ಹಾಗೂ ಪರಿಸರ ಸ್ನೇಹಿ ಕಾರ್ಯಕ್ರಮಗಳು ನಿಜಕ್ಕೂ ಶ್ಲಾಘನೀಯ.
ಈ ಸಂದರ್ಭದಲ್ಲಿ ಕೋರಮಂಗಲ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ (RWA) ಪದಾಧಿಕಾರಿಗಳು ಹಾಗೂ ಸ್ಥಳೀಯ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪರಿಸರದ ಮೇಲಿನ ತಮ್ಮ ಕಾಳಜಿಯನ್ನು ಮೆರೆದರು.
ಮುಂದಿನ ಪೀಳಿಗೆಗೆ ಸ್ವಚ್ಛ ಹಾಗೂ ಹಸಿರು ಬೆಂಗಳೂರನ್ನು ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಒಂದಾಗಿ ಶ್ರಮಿಸೋಣ.
#RamalingaReddy
#GreenSunday #AdamyaChetana #Koramangala #Bengaluru
@adamya_chetana
#BREAKING
Minister or not, forest rules apply to everyone!
Karnataka has ordered a probe into a viral video showing Tamil Nadu Minister Vanni Arasu approaching a wild elephant and later chasing a tiger inside Bandipur Tiger Reserve
Forest Minister Ramalinga Reddy says the vehicle number is visible and officials have been directed to investigate possible wildlife violations.
���Everyone must follow forest rules, irrespective of their position”
@RLR_BTM
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಒಂದು ವೀಡಿಯೊವನ್ನು ನಾನು ವೈಯಕ್ತಿಕವಾಗಿ ವೀಕ್ಷಿಸಿದ್ದೇನೆ. ಸದರಿ ವೀಡಿಯೊದಲ್ಲಿ ನಾಗರಹೊಳೆ ಅರಣ್ಯ ವ್ಯಾಪ್ತಿಯ ರಸ್ತೆ ಬದಿಯಲ್ಲಿದ್ದ ಆನೆಯ ಮೇಲೆ KA 09 HY 0257 ನೋಂದಣಿ ಸಂಖ್ಯೆಯ ಬೈಕ್ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ಕಲ್ಲುಗಳನ್ನು ತೂರಿ, ವನ್ಯಜೀವಿಗಳ ಮೇಲೆ ಕ್ರೌರ್ಯ ಎಸಗಿರುವುದು ಅತ್ಯಂತ ಕಳವಳಕಾರಿ ಮತ್ತು ಖಂಡನೀಯ ವಿಷಯವಾಗಿದೆ.
ವನ್ಯಜೀವಿಗಳ ಸಂರಕ್ಷಣೆ ಮತ್ತು ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಇಂತಹ ಬೇಜವಾಬ್ದಾರಿ ಕೃತ್ಯಗಳನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ.
ಆದುದರಿಂದ, ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಕೂಡಲೇ ವೀಡಿಯೊದಲ್ಲಿರುವ ದ್ವಿಚಕ್ರ ವಾಹನವನ್ನು (KA 09 HY 0257) ಹಾಗೂ ಕೃತ್ಯವೆಸಗಿದ ವ್ಯಕ್ತಿಗಳನ್ನು ಪತ್ತೆ ಹಚ್ಚಿ, ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ (Wildlife Protection Act) ತಕ್ಷಣವೇ ಕಠಿಣ ಕಾನೂನು ಕ್ರಮ ಜರುಗಿಸಬೇಕು.
ಈ ಕುರಿತು ಕೈಗೊಂಡ ಕ್ರಮದ ಬಗ್ಗೆ ಕೂಡಲೇ ವರದಿ ಸಲ್ಲಿಸುವಂತೆ ಅರಣ್ಯ ಪಡೆ ಮುಖ್ಯಸ್ಥರಾದ ಶ್ರೀ ಬಿಪಿ ರವಿ ಅವರಿಗೆ (HoFF) ನಿರ್ದೇಶನ ನೀಡಿದ್ದೇನೆ.
#RamalingaReddy #Nagarahole #WildlifeProtection #KarnatakaForest #SaveWildlife #Elephant
@aranya_kfd
ಹಾಸನ ಜಿಲ್ಲೆಯ ಬೇಲೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಕಾಡಾನೆಗಳ ಹಾವಳಿಯನ್ನು ಗಂಭೀರವಾಗಿ ಪರಿಗಣಿಸಿ, ಇಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಉನ್��ತ ಮಟ್ಟದ ಸಭೆ ನಡೆಸಲಾಯಿತು.
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಶಿವಲಿಂಗೇಗೌಡರು, ಶಾಸಕರಾದ ಶ್ರೀ ರಾಜೇಗೌಡರು ಹಾಗೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಶ್ರೀ ಕುಮಾರ್ ಪುಷ್ಕರ್, ಎಪಿಸಿಸಿಎಫ್ ಶ್ರೀ ವಿಶ್ವಜಿತ್ ಮಿಶ್ರಾ ಸೇರಿದಂತೆ ಹಿರಿಯ ಅರಣ್ಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸುರಕ್ಷತೆಗೆ ಆದ್ಯತೆ ನೀಡಿ, ಬೇಲೂರು ಸೇರಿದಂತೆ ಅಕ್ಕಪಕ್ಕದ ತಾಲೂಕುಗಳು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಜನರಿಗೂ ಯಾವುದೇ ತೊಂದರೆಯಾಗದಂತೆ ಕೂಡಲೇ ಪ��ಿಣಾಮಕಾರಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
#RamalingaReddy #Hassan #Belur
#ElephantAttack
#HassanNews #Chikmagalur
ಉಡುಪಿ ಹಾಗೂ ದಕ್ಷಿಣ ಕನ್ನಡ ಕರಾವಳಿ ಪ್ರವಾಸದ ಮುಖ್ಯಾಂಶಗಳು:
📍 ಕುಂದಾಪುರ ವಿಭಾಗ ಭೇಟಿ & ಕೋಡಿ ಬೆಂಗ್ರೆ ಕರಾವಳಿಯಲ್ಲಿ ಡಾಲ್ಫಿನ್ ವೀಕ್ಷಣೆ
🌿 ಮ್ಯಾಂಗ್ರೋವ್ ಪರಿಸರ ವ್ಯವಸ್ಥೆ ಕುರಿತು ಸಮಾಲೋಚನೆ
🌱 ತಣ್ಣೀರುಬಾವಿ ಏರೋಡೈನಾಮಿಕ್ ನೆಡುತೋಪು ವೀಕ್ಷಣೆ
🐅 ಪಿಲಿಕುಳ ತಾರಾಲಯ ಹಾಗೂ ಜೈವಿಕ ಉದ್ಯಾನವನ ಭೇಟಿ
📊 ವನ್ಯಜೀವಿ ಮತ್ತು ಅರಣ್ಯ ಸಂರಕ್ಷಣೆ ಕುರಿತು ಪ್ರಗತಿ ಪರಿಶೀಲನಾ ಸಭೆ
ಅಭಿವೃದ್ಧಿಯೊಂದಿಗೆ ಪರಿಸರ ಸಮತೋಲನ ಕಾಪಾಡುವುದು ನಮ್ಮೆಲ್ಲರ ಸಂಕಲ್ಪ!
#RamalingaReddy #Mangaluru #Kundapura #KodiBengre #Tannirubavi
As we honor India’s first Prime Minister, Pandit Jawaharlal Nehru, let us nurture every child with love, education, and freedom—for they are the true architects of our future.
Happy Children’s Day!
#RamalingaReddy#ChildrensDay#Nehru
ಮಾನ್ಯ ಪ���ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ, ಸಂಸದರು, ಸಚಿವರು ಹಾಗೂ ಶಾಸಕರ ಉಪಸ್ಥಿತಿಯಲ್ಲಿ ನವೆಂಬರ್ 13ರಂದು ಬೆಂಗಳೂರಿನ ನಮ್ಮ ಮೆಟ್ರೋದ ಗುಲಾಬಿ ಮಾರ್ಗದ (Pink Line) 7.5 ಕಿ.ಮೀ. ಉದ್ದದ ಮೊದಲ ಕಾರ್ಯಾಚರಣಾ ವಿಭಾಗದ ಉದ್ಘಾಟನೆ ನಡೆಯುತ್ತಿರುವುದು ಸಂತಸದ ವಿಚಾರ.
ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ ಸಂಪರ್ಕ ಕಲ್ಪಿಸುವ ಈ ಮಾರ್ಗವು ಬೆಂಗಳೂರು ದಕ್ಷಿಣದ ಸಾರಿಗೆ ವ್ಯವಸ್ಥೆಗೆ ಹೊಸ ವೇಗ ನೀಡಲಿದೆ. ಬ���ಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಲಿರುವ ಈ ಯೋಜನೆಯನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ.
2013-14ರಲ್ಲಿ ಶ್ರೀ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದಲ್ಲಿ ನಾನು ಸಾರಿಗೆ ಸಚಿವನಾಗಿ ಹಾಗೂ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವನಾಗಿ ಕಾರ್ಯನಿರ್ವಹಿಸುತ್ತಿದ್ದೆ.
ಇನ್ನೊಂದು ಮಹತ್ವದ ಸಂಗತಿಯೆಂದರೆ, 2014ರ ಜನವರಿ 30ರಂದು ಯುಪಿಎ ಸರ್ಕಾರದ ಅವಧಿಯಲ್ಲಿಯೇ ಕೇಂದ್ರ ಸಚಿವ ಸಂಪುಟವು ನಮ್ಮ ಮೆಟ್ರೋದ ಎರಡನೇ ಹಂತಕ್ಕೆ ಅನುಮೋದನೆ ನೀಡಿತು. ಗೊಟ್ಟಿಗೆರೆ–ನಾಗವಾರ ಮಾರ್ಗವೂ ಈ ಯೋಜನೆಯ ಭಾಗವಾಗಿತ್ತು. ಇದೇ ಮಾರ್ಗವು ಇಂದು ಗುಲಾಬಿ ಮಾರ್ಗವಾಗಿ ಅಭಿವೃದ್ಧಿಯಾಗುತ್ತಿದೆ.
ಅಂದರೆ, ಇಂದು ಉದ್ಘಾಟನೆಯಾಗುತ್ತಿರುವ ಗುಲಾಬಿ ಮಾರ್ಗದ ಮೂಲ ಯೋಜನೆಗೆ ಅಗತ್ಯವಾದ ಕೇಂದ್ರ ಮಟ್ಟದ ಅನುಮೋದನೆ ಯುಪಿಎ ಸರ್ಕಾರದ ಅವಧಿಯಲ್ಲಿಯೇ ದೊರೆತಿತ್ತು.
ಬೆಂಗಳೂರು ಮೆಟ್ರೋ ಅಭಿವೃದ್ಧಿಗೆ ಯುಪಿಎ ಸರ್ಕಾರ ಹಾಕಿಕೊಟ್ಟ ಅಡಿಪಾಯ, ಕರ್ನಾಟಕದ ವಿವಿಧ ಸರ್ಕಾರಗಳ ನಿರಂತರ ಪ್ರಯತ್ನ ಮತ್ತು ನಂತರದ ಕೇಂದ್ರ ಹಾಗೂ ರಾಜ್ಯ ���ರ್ಕಾರಗಳ ಸಹಕಾರವನ್ನು ಇತಿಹಾಸ ಮರೆಯಬಾರದು.
🚇 ಗುಲಾಬಿ ಮಾರ್ಗದ ವೆಚ್ಚದ ವಾಸ್ತವ ಚಿತ್ರಣ
ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಒಟ್ಟು 21.26 ಕಿ.ಮೀ. ಉದ್ದದ ಗುಲಾಬಿ ಮಾರ್ಗದ ಯೋಜನೆಯ ಮೂಲ ಅಂದಾಜು ವೆಚ್ಚ ₹8,730 ಕೋಟಿಯಾಗಿತ್ತು. ನಂತರದ ಪರಿಷ್ಕೃತ ಅಂದಾಜಿನ ಪ್ರಕಾರ ವೆಚ್ಚ ₹17,346 ಕೋಟಿಗೆ ಏರಿಕೆಯಾಗಿದೆ. ಇದರಲ್ಲಿ ರಾಜ್ಯ ಸರ್ಕಾರದ ಪಾಲು ಸುಮಾರು ₹12,000 ಕೋಟಿ.
ನಮ್ಮ ಮೆಟ್ರೋದ ಮೊದಲ, ಎರಡನೇ, 2A, 2B ಹಾಗೂ ಮೂರನೇ ಹಂತಗಳ ಒಟ್ಟು ಯೋಜನಾ ವೆಚ್ಚ ಮತ್ತು ಅಂದಾಜು ವೆಚ್ಚ ₹77,891 ಕೋಟಿ.
- ಕರ್ನಾಟಕ ಸರ್ಕಾರದ ಕೊಡುಗೆ – ₹65,291 ಕೋಟಿ (ಶೇ. 83.8).
- ಕೇಂದ್ರ ಸರ್ಕಾರದ ಕೊಡುಗೆ – ₹12,600 ಕೋಟಿ (ಶೇ. 16.2).
ನಮ್ಮ ಮೆಟ್ರೋ ಕನ್ನಡಿಗರ ತೆರಿಗೆ ಹಣ, ಕರ್ನಾಟಕ ಸರ್ಕಾರದ ಆರ್ಥಿಕ ಬದ್ಧತೆ, ��ೆಂಗಳೂರಿನ ಜನರ ಕನಸು ಹಾಗೂ ಹಲವು ದಶಕಗಳ ಅಭಿವೃದ್ಧಿಯ ಪಯಣದ ಪ್ರತೀಕವಾಗಿದೆ.
ಗುಲಾಬಿ ಮಾರ್ಗದ ಉದ್ಘಾಟನೆ ಬೆಂಗಳೂರಿನ ಅಭಿವೃದ್ಧಿಗೆ ಮತ್ತೊಂದು ಮೈಲಿಗಲ್ಲಾಗಲಿ. ನಮ್ಮ ಮೆಟ್ರೋ ನಿರ್ಮಾಣದಲ್ಲಿ ಕರ್ನಾಟಕ ಸರ್ಕಾರ ಮತ್ತು ಕನ್ನಡಿಗರ ಕೊಡುಗೆಗೆ ತಕ್ಕ ಗೌರವ ಹಾಗೂ ಮನ್ನಣೆ ದೊರೆಯಲಿ.
ಬೆಂಗಳೂರು ಬೆಳೆದರೆ ಕರ್ನಾಟಕ ಬೆಳೆಯುತ್ತದೆ. ಕರ್ನಾಟಕ ಬೆಳೆದರೆ ದೇಶ ಬೆಳೆಯುತ್ತದೆ.
#RamalingaReddy #NammaMetro #PinkLine #Karnataka #Bengaluru
@narendramodi @DKShivakumar @DrParameshwara
ಗರ್ಭಿಣಿ ಹಿಪ್ಪೊಗೆ ಚಿಕಿತ್ಸೆ ನೀಡುವ ವೇಳೆ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಧೈರ್ಯಶಾಲಿ ವನ್ಯಜೀವಿ ವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರ ವನ್ಯಜೀವಿ ಸಂರಕ್ಷಣೆಗಾಗಿ ತೋರಿದ ಸಮರ್ಪಣಾಭಾವ ಮತ್ತು ಪರಿಶ್ರಮ ಎಂದೆಂದಿಗೂ ಸ್ಮರಣೀಯ.
ಮೊದಲು ಕೇವಲ ಮರಿ ಹಿಪ್ಪೊಗೆ ಮಾತ್ರ ಡಾ. ಸಮೀಕ್ಷಾ ಅವರ ಹೆಸರಿಡಲಾಗಿತ್ತು.
ಆದರೆ ಅವರ ಈ ತ್ಯಾಗ ಮತ್ತು ಸೇವೆ ಇತಿಹಾಸದಲ್ಲಿ ಸದಾ ಅಚ್ಚಳಿಯದೆ ಉಳಿಯಬೇಕು ಎಂಬ ಕಾರಣಕ್ಕೆ, ಬನ್ನೇರುಘಟ್ಟ ಜೈವಿಕ ಉದ್ಯಾನವನದ ಇಡೀ ಹಿಪ್ಪೊ ಬ್ಲಾಕ್ಗೆ 'ಸಮೀಕ್ಷಾ ಬ್ಲಾಕ್' ಎಂದು ನಾಮಕರಣ ಮಾಡುವಂತೆ ನಾನು ಶಿಫಾರಸು ಮಾಡಿದ್ದೇನೆ.
ಅಲ್ಲದೆ, ಈ ಲೋಕಾರ್ಪಣೆ ಸಮಾರಂಭಕ್ಕೆ ಡಾ. ಸಮೀಕ್ಷಾ ಅವರ ಪೋಷಕರನ್ನು ಆಹ್ವಾನಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದು, ಈ ಕಾರ್ಯಕ್ರಮದಲ್ಲಿ ನಾನೂ ಸಹ ಸ್ವತಃ ಉಪಸ್ಥಿತನಿರಲಿದ್ದೇನೆ.
ಅವರ ಈ ಸ್ಮರಣೆ ಸದಾ ಜೀವಂತವಾಗಿರುತ್ತದೆ.
Dr. Sameeksha Reddy, the courageous wildlife veterinarian who tragically lost her life while treating a pregnant hippopotamus, showed extraordinary dedication to wildlife conservation.
While initially only a baby hippo was named in her memory, believing that her name should forever be etched in history, I have recommended naming the entire Hippopotamus block at Bannerghatta Biological Park as the 'Sameeksha Block'.
I have also instructed the officials to invite her parents for the upcoming unveiling ceremony, which I will be personally attending.
Her inspiring dedication sheds light on the immense risks and vital commitment involved in wildlife veterinary care, ensuring her noble legacy will forever be remembered.
#BannerghattaBiologicalPark #Bengaluru #RamalingaReddy #SameekshaReddy
ಬೆಂಗಳೂರಿನ ಹೆಮ್ಮೆ��� ಪ್ರವಾಸಿ ತಾಣವಾದ ಬನ್ನೇರುಘಟ್ಟ ಜೈವಿಕ ಉದ್ಯಾನವನವನ್ನು (BBP) ಪ್ರವಾಸಿಗರಿಗೆ ಮತ್ತಷ್ಟು ಅನುಕೂಲಕರವಾಗಿಸಲು ಮತ್ತು ವನ್ಯಜೀವಿ ಸಂರಕ್ಷಣೆಯನ್ನು ಬಲಪಡಿಸುವ ಉದ್ದೇಶದಿಂದ, ಒಟ್ಟು ₹38 ಕೋಟಿ ವೆಚ್ಚದಲ್ಲಿ ಹಮ್ಮಿಕೊಳ್ಳಲಾದ ವಿವಿಧ ಪ್ರವಾಸಿ ಸ್ನೇಹಿ ಅಭಿವೃದ್ಧಿ ಕಾಮಗಾ��ಿಗಳು ಹಾಗೂ ನೂತನ ಸೌಲಭ್ಯಗಳನ್ನು ಇಂದು ಉದ್ಘಾಟಿಸಿ ಲೋಕಾರ್ಪಣೆಗೊಳಿಸಿದೆ.
ಮುಖ್ಯಾಂಶಗಳು ಹಾಗೂ ನೂತನ ಸೌಲಭ್ಯಗಳು:
⚡ ಪ್ರವಾಸಿಗರ ಸುಲಭ ಸಂಚಾರಕ್ಕಾಗಿ ನೂತನ ಎಲೆಕ್ಟ್ರಿಕ್ ವಾಹನಗಳು
🏢 ನೂತನವಾಗಿ ನಿರ್ಮಿಸಲಾದ ಆಡಳಿತ ಕಚೇರಿ "ಅಡವಿ" ಕಟ್ಟಡ
🌱 ಲೈವ್ ಫೀಡ್ ಘಟಕ ಹಾಗೂ ಕೇಂದ್ರೀಯ ನರ್ಸರಿ ಉದ್ಘಾಟನೆ
🏥 ನೂತನ ಕ್ಯಾರಂಟೈನ್ ಬ್ಲಾಕ್ ಮತ್ತು ಅರಣ್ಯ ಸಿಬ್ಬಂದಿಗಳ ವಸತಿಗೃಹಗಳು
🚪 ಉದ್ಯಾನವನದ ಆಕರ್ಷಕ ನವೀಕೃತ ಮುಖ್ಯ ಪ್ರವೇಶ ದ್ವಾರ
🛍️ ಹೊಸದಾಗಿ ಪ್ರಾರಂಭಿಸಲ��ದ "ಝೂ ಶಾಪ್" ಹಾಗೂ "ಸುವರ್ಣಮುಖಿ ಕೆಫೆ"
🐺 ನೂತನ ಪ್ರಾಣಿ-ಪಕ್ಷಿಗಳ ಆವರಣಗಳು: ತೋಳ, ಚೀತಾ, ಎಮು ಮತ್ತು ರಿಯಾ ಪಕ್ಷಿಗಳು ಹಾಗೂ ಫೆಸೆಂಟ್ ಪಕ್ಷಿಗಳ ಆವರಣ
🦛 ವಿಶೇಷ ನಮನ:
ಶಿವಮೊಗ್ಗದಲ್ಲಿ ಹಿಪ್ಪೋಪೊಟಮಸ್ ಚಿಕಿತ್ಸಾ ಸಮಯದಲ್ಲಿ ಕರ್ತವ್ಯದ ವೇಳೆ ಅಸುನೀಗಿದ ದಕ್ಷ ಪಶುವೈದ್ಯೆ ಡಾ. ಸಮೀಕ್ಷಾ ಅವರ ಸ್ಮರಣಾರ್ಥ, ಹಿಪ್ಪೋಪೊಟಮಸ್ ಬ್ಲಾಕ್ ಹಾಗೂ ಮರಿ ಹಿಪ್ಪೋಪೊಟಮಸ್ಗೆ "ಸಮೀಕ್ಷ" ಎಂದು ನಾಮಕರಣ ಮಾಡಲಾಯಿತು.
ವನ್ಯಜೀವಿಗಳ ಸೇವೆಗಾಗಿ ಅವರು ನ���ಡಿದ ಕೊಡುಗೆ ಸದಾ ಸ್ಮರಣೀಯ.
🐘 ಸುವರ್ಣ ಆನೆ ಆರೈಕೆ ಕೇಂದ್ರ:
ಆನೆಗಳ ಆರೋಗ್ಯ, ಆರೈಕೆ ಮತ್ತು ಕಲ್ಯಾಣಕ್ಕಾಗಿ ಮೀಸಲಾಗಿರುವ “ಸುವರ್ಣ ಆನೆ ಆರೈಕೆ ಕೇಂದ್ರ”ದ ವೀಕ್ಷಣಾ ಗೋಪುರವನ್ನು ಉದ್ಘಾಟಿಸಿ, ಸಫಾರಿ ವೀಕ್ಷಣೆಯ ಮೂಲಕ ಉದ್ಯಾನವನದಲ್ಲಿ ಕೈಗೊಳ್ಳಲಾಗುತ್ತಿರುವ ವನ್ಯಜೀವಿ ಸಂರಕ್ಷಣಾ ಚಟುವಟಿಕೆಗಳನ್ನು ಪರಿಶೀಲಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶಾಸಕರಾದ ಶ್ರೀ ಬಿ. ಶಿವಣ್ಣ, ಶ್ರೀ ಎಂ. ಕೃಷ್ಣಪ್ಪ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯ ಪಡೆ ಮುಖ್��ಸ್ಥರಾದ ಶ್ರೀ ರವಿ ಬಿ.ಪಿ., ಭಾ.ಅ.ಸೇ ಹಾಗೂ ಇತರೆ ಹಿರಿಯ ಅರಣ್ಯಾಧಿಕಾರಿಗಳು ಉಪಸ್ಥಿತರಿದ್ದರು.
#BannerghattaBiologicalPark #RamalingaReddy #KarnatakaForest #WildlifeConservation #EcoTourism
ಗುಲಾಬಿ ಮಾರ್ಗದ (Pink Line)
🚇 ತಾವರೆಕೆರೆ ಮೆಟ್ರೋ ನಿಲ್ದಾಣಕ್ಕೆ- ಸುದ್ದುಗುಂಟೆಪಾಳ್ಯ ��ೆಟ್ರೋ ನಿಲ್ದಾಣ
🚇 ಜೆಪಿ ನಗರ 4ನೇ ಹಂತದ ಮೆಟ್ರೋ ನಿಲ್ದಾಣಕ್ಕೆ- ಎನ್.ಎಸ್ ಪಾಳ್ಯ ಮೆಟ್ರೋ ನಿಲ್ದಾಣ
🚇 IIMB ಮೆಟ್ರೋ ನಿಲ್ದಾಣಕ್ಕೆ ಬಿಳೇಕಹಳ್ಳಿ – IIMB ಮೆಟ್ರೋ ನಿಲ್ದಾಣ
ಎಂದು ನಾಮಕರಣ ಮಾಡುವಂತೆ ನಾನು, ಜಿಬಿಎ ಸಚಿವರಾದ ಶ್ರೀ ಕೃಷ್ಣಭೈರೇ ಗೌಡ, ಸಂಸದರಾದ ಶ್ರೀ ತೇಜಸ್ವಿ ಸೂರ್ಯ ಶಾಸಕರಾದ ಶ್ರೀ ಸತೀಶ್ ರೆಡ್ಡಿ, ಶ್ರೀ ಉದಯ್ ಗರುಡಾಚಾರ್, ಶ್ರೀ ಎಂ. ಕೃಷ್ಣಪ್ಪ ಅವರನ್ನು ಒಳಗೊಂಡ ನಮ್ಮ ಸಮಿತಿ ವತಿಯಿಂದ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ (BMRCL) ಮೂಲಕ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಅಧಿಕೃತವಾಗಿ ಮನವಿ ಸಲ್ಲಿಸಲಾಗಿದೆ.
ಕೇಂದ್ರ ಸಚಿವಾಲಯದಿಂದ ಅಗತ್ಯ ಅನುಮೋದನೆ ದೊರೆತು ಈ ಹೆಸರುಗಳು ಶೀಘ್ರ ಅನುಷ್ಠಾನಗೊಳ್ಳುತ್ತದೆ ಎಂಬ ನಂಬಿಕೆ ನನಗಿದೆ.
#RamalingaReddy #NammaMetro #SGPalya #NSPalya #Bilekahalli #IIMB
ನಾಡಿನ ಸಮಸ್ತ ಜನತೆಗೆ ��ೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.
May the festival of lights brighten every corner of your life with happiness, peace, prosperity, and endless opportunities.
Happy Deepavali 🪔✨
#Deepavali #Diwali2026 #RamalingaReddy
ನಮ್ಮ ಹೆಮ್ಮೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿ, ಅ���ಣ್ಯ ಸಂರಕ್ಷಣೆ, ವನ್ಯಜೀವಿಗಳ ರಕ್ಷಣೆ, ಮಾನವ-ವನ್ಯಜೀವಿ ಸಂಘರ್ಷ ತಡೆ ಕ್ರಮಗಳು, ಆಧುನಿಕ ತಂತ್ರಜ್ಞಾನದ ಬಳಕೆ ಹಾಗೂ ಮುಂಚೂಣಿ ಸಿಬ್ಬಂದಿಯ ಕಲ್ಯಾಣ ಕಾರ್ಯಕ್ರಮಗಳ ಕುರಿತು ಸಮಗ್ರ ಪರಿಶೀಲನಾ ಸಭೆ ನಡೆಸಿ, ಕ್ಷೇತ್ರ ಭೇಟಿ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಪ್ರಮುಖವಾಗಿ ಚರ್ಚಿಸಲಾದ ಮತ್ತು ಜಾರಿಗೆ ತಂದ ಪ್ರಮುಖಾಂಶಗಳು ಇಲ್ಲಿವೆ:
🔹 ಹುಲಿಗಳ ಸಂಖ್ಯೆ & ಪರಿಸರ ಸಮತೋಲನ:
ಬಂಡೀಪುರದಲ್ಲಿ ಹುಲಿಗಳ ಸಂಖ್ಯೆ 155ಕ್ಕೂ ಹೆಚ್ಚು ಏರಿಕೆಯಾಗಿದ್ದು, ಪ್ರತಿ ಚದರ ಕಿ.ಮೀ. ವ್ಯಾಪ್ತಿಯಲ್ಲಿ ಹೇರಳವಾದ ಬೇಟೆ ಪ್ರಾಣಿಗಳು (ಜಿಂಕೆ, ಕಾಡೆಮ್ಮೆ, ಕಡವೆ) ಇರುವುದು ಕಾಡಿನ ಆರೋಗ್ಯಕರ ಪರಿಸರಕ್ಕೆ ಸಾಕ್ಷಿಯಾಗಿದೆ.
🚀 ಪ್ರಮುಖ ಲೋಕಾರ್ಪಣೆಗಳು & ಕೈಪಿಡಿ ಬಿಡುಗಡೆ:
* ಬಂಡೀಪುರದಿಂದ ಸಿದ್ಧಪಡಿಸಲಾದ "ಡ್ರೋನ್ ಪೈಲಟ್ ಕ್ಷೇತ್ರ ಕೈಪಿಡಿ" (Drone Pilot Field Manual) ಬಿಡುಗಡೆ.
* ಪ್ರವಾಸಿಗರ ಸೇವೆಗಳನ್ನು ಬಲಪಡಿಸಲು "ಇಕೋ-ಟೂರಿಸಮ್ ಕ್ವಾಲಿಟಿ ಅಶ್ಯುರೆನ್ಸ್ & ವಿಸಿಟರ್ ರಿಡ್ರೆಸಲ್ ಪ್ಲಾಟ್ಫಾರ್ಮ್" ಲೋಕಾರ್ಪಣೆ.
* ಪರಿಸರ ಸಂರಕ್ಷನೆಯ ಸಂಕೇತವಾಗಿ ಸಸಿ ನೆಡುವ ಕಾರ್ಯ.
🛡️ ಸಿಬ್ಬಂದಿ ಕಲ್ಯಾಣ ಹಾಗೂ ವಿಶೇಷ ಕಾರ್ಯಪಡೆಗಳು:
* ಕಾಡಿನ ರಕ್ಷಣೆಯಲ್ಲಿ ಹಗಲಿರುಳು ಶ್ರಮಿಸುತ್ತಿರುವ ಮುಂಚೂಣಿ ಸಿಬ್ಬಂದಿಗೆ ರೇಷನ್ ಕಿಟ್ಗಳ ವಿತರಣೆ ಹಾಗೂ ಕ್ಷೇತ್ರ ಕಾರ್ಯಚಟುವಟಿಕೆಗಳಿಗೆ ಹೊಸ ವಾಹನಗಳ ವಿತರಣೆ.
* ಎಲಿಫೆಂಟ್ ಟಾಸ್ಕ್ ಫೋರ್ಸ್ ಹಾಗೂ ಚಿರತೆ ಕಾರ್ಯಪಡೆ (Leopard Task Force) ಸಿಬ್ಬಂದಿಯನ್ನು ಭೇಟಿ ಮಾಡಿ ಸಾರ್ವಜನಿಕ ಸುರಕ್ಷತಾ ಕ್ರಮಗಳ ಪರಿಶೀಲನೆ.
��️ ತಂತ್ರಜ್ಞಾನದ ಬಳಕೆ & ನಿಯಂತ್ರಣ ಕೇಂದ್ರಗಳು:
* ಥರ್ಮಲ್ ಡ್ರೋಣ್ಗಳು, ಜಿಪಿಎಸ್ ರೇಡಿಯೋ ಕಾಲರ್ಗಳು, ವನ್ಯಜೀವಿ ಟೆಲಿಮೆಟ್ರಿ ಹಾಗೂ ಗಸ್ತು ಉಪಕರಣಗಳ ಪ್ರದರ್ಶನ ವೀಕ್ಷಣೆ.
* ಜಿಲ್ಲಾ ಸಂಘರ್ಷ ನಿಯಂತ್ರಣ ಕೇಂದ್ರ ಹಾಗೂ ಅರಣ್ಯ ಇಲಾಖೆಯ ಶ್ವಾನ ದಳದ (Dog Squad) ಕಾರ್ಯವೈಖರಿ ಪರಿಶೀಲನೆ.
🐘 ಮಾನವ-ವನ್ಯಜೀವಿ ಸಂಘರ್ಷ ತಡೆ & ಅರಣ್ಯ ರಕ್ಷಣೆ:
* ರೈಲ್ವೆ ಬ್ಯಾರಿಕೇಡ್ಗಳು, ಸೋಲಾರ್ ಫೆನ್ಸಿಂಗ್ ಹಾಗೂ ಆನೆ ಕಂದಕಗಳ ಪರಿಣಾಮಕಾರಿ ನಿರ್ವಹಣೆ.
* ಬಂಡೀಪುರ ವ್ಯಾಪ್ತಿಯಲ್ಲಿ ಗು���ುತಿಸಲಾಗಿರುವ ಒತ್ತುವರಿಯನ್ನು ಸಂಪೂರ್ಣ ತೆರವುಗೊಳಿಸಲು ಹಾಗೂ ಕಳ್ಳಬೇಟೆ ತಡೆ ಶಿಬಿರಗಳ (APC Camps) ದುರಸ್ತಿಗೆ ಕಟ್ಟುನಿಟ್ಟಿನ ಸೂಚನೆ.
* ಮೂಲೇಹೊಳೆ ಚೆಕ್ಪೋಸ್ಟ್ ಪರಿಶೀಲಿಸಿ, ಹೊರರಾಜ್ಯದಿಂದ ಬರುವ ವೈದ್ಯಕೀಯ ತ್ಯಾಜ್ಯಗಳ ವಿಲೇವಾರಿ ತಡೆಯಲು ಕಟ್ಟುನಿಟ್ಟಿನ ಕ್ರಮ.
* ವನ್ಯಜೀವಿ ದಾಳಿಯಿಂದ ಆಗುವ ಬೆಳೆ ನಷ್ಟಕ್ಕೆ ಪರಿಹಾರ ಮತ್ತು ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಲು ಭರವಸೆ.
🌿 ಆವಾಸಸ್ಥಾನ ನಿರ್ವಹಣೆ & ಕಾಳ್ಗಿಚ್ಚು ತಡೆ:
* ಅರಣ್ಯದಲ್ಲಿ ಸಫಾರಿ ನಡೆಸಿ ಪರಿಸರ ವ್ಯವಸ್ಥೆ ಅವಲೋಕನ.
* ಲ್ಯಾಂಟಾನಾ (Lantana) ಹಾಗೂ ಸೆನ್ನಾ ಸ್ಪೆಕ್ಟಾಬಿಲಿಸ್ (Senna spectabilis) ಆಕ್ರಮಣಕಾರಿ ಕಳೆಗಳನ್ನು ವೈಜ್ಞಾನಿಕವಾಗಿ ತೆರವುಗೊಳಿಸುವುದು ಮತ್ತು ಕಾಳ್ಗಿಚ್ಚು ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಚರ್ಚೆ.
ಈ ಸಭೆಯಲ್ಲಿ ಗುಂಡ್ಲುಪೇಟೆ ಕ್ಷೇತ್ರದ ಶಾಸಕರಾದ ಶ್ರೀ ಗಣೇಶ್ ಪ್ರಸಾದ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಶ್ರೀ ಕುಮಾರ್ ಪುಷ್ಕರ್, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ಮನೋಜ್ ರಾಜನ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ��ದ ಶ್ರೀ ರವಿಶಂಕರ್ ಆರ್. ಹಾಗೂ ಡಾ. ಎಂ. ಮಾಲತಿ ಪ್ರಿಯಾ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀ ನಂದೀಶ್ ಎಲ್. ಮತ್ತು ಡಾ. ಪ್ರಭು ಗೌಡ್, ವಲಯ ಅರಣ್ಯಾಧಿಕಾರಿಗಳಾದ ಶ್ರೀ ಸತೀಶ್ ಹಾಗೂ ಶ್ರೀ ಮೋಹನ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾಡು, ನಾಡು ಹಾಗೂ ವನ್ಯಜೀವಿಗಳ ಸಂರಕ್ಷಣೆ ಮತ್ತು ರೈತರ ಹಿತಾಸಕ್ತಿ ಕಾಪಾಡಲು ನಮ್ಮ ಸರ್ಕಾರ ಸದಾ ಬದ್ಧವಾಗಿದೆ.
#Bandipur #KarnatakaForest #RamalingaReddy #WildlifeConservation #TigerReserve #ForestDepartment #Karnataka #EcoTourism #Conservation
ಆರ್. ಅಶೋಕ್ ಅವರೇ,
ನಿಮ್ಮ ಮೊಸಳೆ ಕಣ್ಣೀರಿನ ನಾಟಕ ಸಾಕು! ಕೇಂದ್ರದ ನಿಮ್ಮದೇ ���ಿಜೆಪಿ ಸರ್ಕಾರದ ಜನವಿರೋಧಿ ನೀತಿಗಳ ಬಗ್ಗೆ ಮಾತನಾಡಲು ಧೈರ್ಯವಿಲ್ಲದೆ, ಈಗ ದೀಪಾವಳಿ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದ್ದೀರಿ.
ರಾಜ್ಯ ಸರ್ಕಾರದ ಮೇಲೆ 'ಗಬ್ಬರ್ ಟ್ಯಾಕ್ಸ್' ಎಂದು ಬೊಬ್ಬೆ ಹೊಡೆಯುವ ನಿಮಗೆ, 2014ರಿಂದ ಇಲ್ಲಿಯವರೆಗೆ ಕೇಂದ್ರ ಬಿಜೆಪಿ ಸರ್ಕಾರ ಜನಸಾಮಾನ್ಯರ ಮೇಲೆ ನಡೆಸಿದ ಬೆಲೆ ಏರಿಕೆಯ ಮಹಾಸುಲಿಗೆ ಕಾಣುತ್ತಿಲ್ಲವೇ?
* ಕೆಲವು ಹಸಿ ಹಸಿ ಸತ್ಯಗಳು ಇಲ್ಲಿವೆ:
* ಅಡುಗೆ ಅನಿಲ (LPG):
2014ರಲ್ಲಿ ₹400 ಇದ್ದ ಸಿಲಿಂಡರ್ ಬೆಲೆ ಇಂದು ಸುಮಾರು ₹1,000ಕ್ಕೆ ಏರಿ, ಬಡವರ ಒಲೆ ಆರಿಸಿದೆ.
* ಇಂಧನ ಲೂಟಿ ಮತ್ತು ಹಣದುಬ್ಬರ:
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಕೇಂದ್ರದ ತೆರಿಗೆಯನ್ನು ಮನಬಂದಂತೆ ಹೆಚ್ಚಿಸಿ ಜನಸಾಮಾನ್ಯರ ಜೇಬು ಕತ್ತರಿಸ��ಾಗಿದೆ.
ಇಂಧನ ಬೆಲೆ 2009 UPA ಅವಧಿಯಲ್ಲಿ ₹36.89 ಈಗ ₹98.13.
ಕಳೆದ 2 ವರ್ಷಗಳ ಅವಧಿಯಲ್ಲೇ ಬರೋಬ್ಬರಿ 7 ಬಾರಿ ಹೆಚ್ಚಳವಾಗಿದ್ದು, ₹10.47 ಪ್ರತಿ ಲೀಟರ್ ಗೆ ಜಾಸ್ತಿಯಾಗಿದೆ.
ಕೇಂದ್ರ ಸರ್ಕಾರ ಇಂಧನದ ಮೇಲೆ ವಿಧಿಸುವ ಈ ಪರೋಕ್ಷ ಸುಲಿಗೆಯಿಂದಲೇ ದೇಶಾದ್ಯಂತ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿ ಹಣದುಬ್ಬರ ಉಂಟಾಗಿದೆ. ಇದು ಅಸಲಿ 'ಗಬ್ಬರ್ ಟ್ಯಾಕ್ಸ್' ಅಲ್ಲವೇ? ಇದಕ್ಕೆ ನಿಮ್ಮ ಉತ್ತರವೇನು?
* ನಿಜವಾದ ಗಬ್ಬರ್ ಸಿಂಗ್ ಟ್ಯಾಕ್ಸ್ (GST): ಸ್ವಾತಂತ್ರ್ಯದ ನಂತರ ಎಂದೂ ಇಲ್ಲದ ರೀತಿಯಲ್ಲಿ ದಿನನಿ���್ಯದ ಅಗತ್ಯ ವಸ್ತುಗಳ ಮೇಲೆ ಜಿಎಸ್ಟಿ ಹೇರಿದ ಕೀರ್ತಿ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ. ಬೇಳೆಕಾಳುಗಳು, ಹಾಲು, ಮೊಸರು, ಆಸ್ಪತ್ರೆ ಸೇವೆಗಳೂ ಸೇರಿದಂತೆ ದಿನನಿತ್ಯದ ವಸ್ತುಗಳ ಮೇಲೆ ಜಿಎಸ್ಟಿ ಹೇರಿ ಮಧ್ಯಮ ವರ್ಗದವರನ್ನು ಉಸಿರುಗಟ್ಟಿಸಲಾಗಿದೆ.
* ಕರ್ನಾಟಕಕ್ಕೆ ದ್ರೋಹ ಬಗೆಯುತ್ತಿರುವ ಕೇಂದ್ರದ ತೆರಿಗೆ ಅನ್ಯಾಯ: ಕೇಂದ್ರ ಸರ್ಕಾರ ಕರ್ನಾಟಕದಿಂದ ಜಿಎಸ್ಟಿ, ನೇರ ತೆರಿಗೆ ಮತ್ತು ಸೆಸ್ ರೂಪದಲ್ಲಿ ವಾರ್ಷಿಕ ₹4.5 ಲಕ್ಷ ಕೋಟಿಗೂ ಅಧಿಕ ಹಣವನ್ನು ಲೂಟಿ ಮಾಡುತ್ತಿದೆ! ಆದರೆ, ನಮಗೆ ವಾಪಸ್ ಸಿಗುವ ತೆರಿಗೆ ಪಾಲು ��ತ್ತು ಅನುದಾನ ಮಾತ್ರ ತೀರಾ ಅಲ್ಪ. ಇತ್ತೀಚಿನ ಕೇಂದ್ರದ ತೆರಿಗೆ ಹಂಚಿಕೆಯಲ್ಲೂ ಲಕ್ಷಾಂತರ ಕೋಟಿ ರೂ. ಸಂಗ್ರಹವಾಗುವ ನಮ್ಮ ರಾಜ್ಯಕ್ಕೆ ಸಿಕ್ಕಿದ್ದು ಕೇವಲ ₹4,504 ಕೋಟಿ ಮಾತ್ರ! ನಮ್ಮ ಹಕ್ಕಿನ ಹಣವನ್ನು ಕಸಿದುಕೊಂಡು ರಾಜ್ಯಕ್ಕೆ ಅನ್ಯಾಯ ಮಾಡುತ್ತಿರುವ ಕೇಂದ್ರದ ಗುಲಾಮಗಿರಿ ಮಾಡುತ್ತಿರುವ ನಿಮಗೆ ರಾಜ್ಯದ ಬಗ್ಗೆ ಮಾತನಾಡಲು ಯಾವ ನೈತಿಕತೆಯಿದೆ?
* ಬಂಡವಾಳಶಾಹಿಗಳಿಗೆ ಸಾಲ ಮನ್ನಾ, ಬಡವರಿಗೆ ಗಬ್ಬರ್ ಟ್ಯಾಕ್ಸ್: ದೇಶದ ದೊಡ್ಡ ದೊಡ್ಡ ಕಾರ್ಪೊರೇಟ್ ಕುಳಗಳ ಲಕ್ಷಾಂತರ ಕೋಟ�� ರೂಪಾಯಿ ಸಾಲವನ್ನು ಮಣ್ಣು ಮಾಡುವ (Write-off) ಕೇಂದ್ರ ಸರ್ಕಾರ, ಬಡವರು ಹಾಗೂ ಮಧ್ಯಮ ವರ್ಗದ ದಿನಸಿ ಹಾಗೂ ಔಷಧಿಗಳ ಮೇಲೂ ಜಿಎಸ್ಟಿ ಹಾಕಿ ರಕ್ತ ಹಿಂಡುತ್ತಿದೆ. ಇದುವೇ ಬಿಜೆಪಿ ಸರ್ಕಾರದ ಅಸಲಿ ಬಂಡವಾಳಶಾಹಿ ಲೂಟಿ.
* ಸ್ವಿಟ್ಸ್ರ್ಲ್ಯಾಂಡ್ ಬ್ಯಾಂಕ್ ಕಪ್ಪು ಹಣ ಮಾಯವಾಯಿತೇ?: ವಿದೇಶಿ ಬ್ಯಾಂಕ್ಗಳಲ್ಲಿರುವ ಕಪ್ಪು ಹಣವನ್ನು ತಂದು ಪ್ರತಿಯೊಬ್ಬರ ಖಾತೆಗೆ ₹15 ಲಕ್ಷ ಹಾಕುವುದಾಗಿ ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಅವರ ಮಾತಿಗೆ ಈಗ 12 ವರ್ಷ ಕಳೆದಿವೆ. ಆ ಕಪ್ಪು ಹಣ ���ನಾಯಿತು? 12 ವರ್ಷವಾದರೂ ಆ ಸುಳ್ಳು ಭರವಸೆ ಈಡೇರದಿರಲು ಕಾರಣವೇನು? ದೇಶದ ಜನರಿಗೆ ಮೋಸ ಮಾಡಿದ್ದೇಕೆ?
* 2 ಕೋಟಿ ಉದ್ಯೋಗಗಳು ಎಲ್ಲಿವೆ?: ದೇಶದ ಯುವಕರಿಗೆ ವರ್ಷಕ್ಕೆ 2 ಕೋಟಿಯಂತೆ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದ್ದ ಮೋದಿ ಸರ್ಕಾರ, ಕಳೆದ 12 ವರ್ಷಗಳಲ್ಲಿ ಕೋಟ್ಯಂತರ ಯುವಕರ ಭವಿಷ್ಯವನ್ನು ಬೀದಿಪಾಲು ಮಾಡಿದೆ. ನಿರುದ್ಯೋಗಿಗಳ ಕಣ್ಣೀರು ನಿಮಗೆ ಕಾಣುವುದಿಲ್ಲವೇ?
* ಬರ ಪರಿಹಾರದಲ್ಲೂ ಮಲತಾಯಿ ಧೋರಣೆ: ರಾಜ್ಯದಲ್ಲಿ ತೀವ್ರ ಬರಗಾಲ ಬಂದು ರೈತರು ಕಂಗಾಲಾದಾಗ, ಸಂಕಷ್ಟದಲ್ಲಿದ್ದ ಕನ್ನಡಿಗರಿಗೆ ಪರಿಹಾರವನ್ನೂ ವಿಳಂಬ ಮಾಡಿ ಸರಿಯಾಗಿ ನೀಡದೆ ಮಲ���ಾಯಿ ಧೋರಣೆ ತೋರಿದ ಕೇಂದ್ರ ಸರ್ಕಾರದ ಪರವಾಗಿ ಮಾತನಾಡುವ ನಿಮಗೆ ಕನ್ನಡಿಗರ ಬಗ್ಗೆ ಮಾತನಾಡಲು ಯಾವ ಹಕ್ಕಿದೆ?
ಈ ಯಾವ ವಿಚಾರಗಳ ಬಗ್ಗೆಯೂ ಮಾತನಾಡದೇ, ದೆಹಲಿಯ ನಿಮ್ಮ ಹೈಕಮಾಂಡ್ ಮುಂದೆ ಬಾಲ ಮುದುರಿಕೊಂಡು ಕೂರುವುದೇ ನಿಮ್ಮ ಸಾಧನೆಯೇ? ಕನ್ನಡಿಗರ ತೆರಿಗೆ ಹಣವನ್ನು ದೆಹಲಿಗೆ ದರೋಡೆ ಮಾಡಿಸುತ್ತಾ ರಾಜ್ಯದ ವಿರುದ್ಧ ಸುಳ್ಳು ಆರೋಪ ಮಾಡುವುದನ್ನು ನಿಲ್ಲಿಸಿ.
#RamalingaReddy #RAshok #Congress #BJP #GabbarTax
@RAshokaBJP @INCKarnataka
ಬಿಜೆಪಿಯ ‘RSS ಸಂಸ್ಕಾರ’ದ ಅಸಲಿ ಮುಖವಾಡ ಬಯಲು: ಒಬ್ಬರು ಏಕವಚನದಲ್ಲಿ ಬೈಯುತ್ತಾರೆ, ಮತ್ತೊಬ್ಬರು ತುಂಡು ತುಂಡಾಗಿ ಕತ್ತರಿಸುವುದಾಗಿ ಬೆದರಿಕೆ ಹಾಕುತ್ತಾರೆ.
ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸಾರ್ವಜನಿಕವಾಗಿ ಅತ್ಯಂತ ಏಕವಚನ ಪದ ಬಳಸಿ ನಾಲಿಗ�� ಹರಿಬಿಟ್ಟು, ಕೊನೆಗೆ ಮುಜುಗರಗೊಂಡು ಕ್ಷಮೆ ಕೇಳುವ ನಾಟಕವಾಡಿದ ಹಾದಿಯಲ್ಲೇ, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಈಗ ಕಾಂಗ್ರೆಸ್ ನಾಯಕರನ್ನು ತುಂಡು ತುಂಡಾಗಿ ಕತ್ತರಿಸಿ ಅರಬ್ಬಿ ಸಮುದ್ರಕ್ಕೆ ಎಸೆಯುತ್ತೇವೆ ಎಂದು ರೌಡಿಗಳಂತೆ ಬಹಿರಂಗ ಬೆದರಿಕೆ ಹಾಕಿದ್ದಾರೆ.
ಇವೆರಡೂ ಘಟನೆಗಳನ್ನು ನೋಡಿದರೆ, ಬಿಜೆಪಿ ನಾಯಕರಿಗೆ ಸಂಸ್ಕಾರ ಕಲಿಸಲು RSS ಹೊಸದಾಗಿ ಯಾವುದೋ 'ವಿಶೇಷ ತರಬೇತಿ ��ಿಬಿರ' ಆರಂಭಿಸಿದೆಯೇ ಎಂಬ ಗಂಭೀರ ಅನುಮಾನ ಮೂಡುತ್ತಿದೆ.
ಅಧಿಕಾರವಿಲ್ಲದೆ ಹತಾಶರಾಗಿರುವ ಈ ನಾಯಕರಿಗೆ ರಾಜಕೀಯವಾಗಿ ಎದುರಿಸುವ ಬೌದ್ಧಿಕ ಸಾಮರ್ಥ್ಯವಿಲ್ಲದೆ, ಈಗ ಅಸಹ್ಯಕರ ಬೈಗುಳ ಹಾಗೂ ಕೊಲೆ ಬೆದರಿಕೆಗಳೇ ಅವರ ಏಕೈಕ ರಾಜಕೀಯ ಅಸ್ತ್ರವಾಗಿವೆ.
ನಮ್ಮ ಕಾರ್ಯಕರ್ತರಿಗೂ ನಿಮ್ಮದೇ ರೀತಿಯ ಕಟುವಾದ ಭಾಷೆಯಲ್ಲಿ ತಿರುಗೇಟು ನೀಡಲು ಚೆನ್ನಾಗಿ ಗೊತ್ತಿದೆ. ಅವರು ಬಳಸಲು ಆರಂಭಿಸಿದರೆ ಅದನ್ನು ಎದುರಿಸುವ ತಾಕತ್ತು ನಿಮಗಿದೆಯೇ?
ಇಂತಹ ಕೀಳುಮಟ್ಟದ, ವಿಕೃತ ಮತ್ತು ಹಿಂಸಾತ್ಮಕ ರಾಜಕಾರಣವನ್ನು ಕನ್ನಡಿಗರು ಎಂದಿಗೂ ಸಹಿಸುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಸಂಯಮ ಕಳೆದುಕೊಂಡಿರುವ ಇವರಿಗೆ ಜನರೇ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ.
#RamalingaReddy #BYVijayendra #ChalavadiNarayanaswamy #BJPAnarchy #Karnataka #BJP #Congress
@BYVijayendra @NswamyChalavadi
ಕೋಲಾರ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ವತಿಯಿಂದ ಏರ್ಪಡಿಸಿದ್ದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ತಾಯಿ ಕನ್ನಡಾಂಬೆಯ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದೆ.
ಈ ವೇಳೆ ಸಂಸದರಾದ ಶ್ರೀ ಮಲ್ಲೇಶ್ ಬಾಬು, ಶಾಸಕರಾದ ಶ್ರೀ ಕೊತ್ತೂರು ಮಂಜು���ಾಥ್, ಪರಿಷತ್ ಸದಸ್ಯರಾದ ಶ್ರೀ ಎಂ.ಎಲ್. ಅನಿಲ್ ಕುಮಾರ್, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.
ನಾಡು-ನುಡಿಯ ಅಸ್ಮಿತೆಯನ್ನು ಸಾರುವ ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದು ಖುಷಿಯ ಸಂಗತಿ.
ಕನ್ನಡವೇ ಸತ್ಯ, ಕನ್ನಡವೇ ನಿತ್ಯ!
#RamalingaReddy #KannadaRajyotsava #Kolar #Karnataka