ಕನ್ನಡಿಗ; MLC; President-Karnataka BJP OBC Morcha @OBCMorcha4Kar; Ex Chairman- D.Devaraja Urs Backward Class Development Corp, Govt of Karnataka; Ex Chairman-KEA
ಇಂದು, ಹಿರಿಯ ರಾಜಕೀಯ ಮುತ್ಸದ್ಧಿ, ದಿವಂಗತ ವಿ. ಶ್ರೀನಿವಾಸ ಪ್ರಸಾದ್ ಅವರ 79ನೇ ಜನ್ಮದಿನಾಚರಣೆ ಪ್ರಯುಕ್ತ, 'ಸ್ವಾಭಿಮಾನಿಯ ಧೀಮಂತ ಹೆಜ್ಜೆಗಳು-79' ಎಂಬ ವಿಶೇಷ ಕಾರ್ಯಕ್ರಮವನ್ನು, ನಂಜನಗೂಡಿನ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಮಾರಂಭದಲ್ಲಿ ಘನ ಉಪಸ್ಥಿತನಾಗಿ ಮಾತನಾಡಿ,
'ಶೋಷಿತರ ಧ್ವನಿ' ಹಾಗೂ 'ನೈತಿಕತೆಯ ನಿತ್ಯ ಸಂಸದ' ಎಂದೇ ಖ್ಯಾತರಾಗಿದ್ದ, ಶ್ರೀ ವಿ. ಶ್ರೀನಿವಾಸ್ ಪ್ರಸಾದ್ ರವರು, ತಮ್ಮ ಸುದೀರ್ಘ ರಾಜಕೀಯ ಜೀವನದುದ್ದಕ್ಕೂ ತತ್ತ್ವ-ಸಿದ್ಧಾಂತಗಳಿಗೆ ಬದ್ಧರಾಗಿ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಏಳಿಗೆಗಾಗಿ ಶ್ರಮಿಸಿದವರು, ಸ್ವಾಭಿಮಾನ ಹಾಗೂ ಸಾಮಾಜಿಕ ನ್ಯಾಯದ ನೈಜ ಹರಿಕಾರರಾಗಿದ್ದವರು. ರಾಜಕೀಯದಲ್ಲಿ ನೇರ ನುಡಿ ಮತ್ತು ನಿಷ್ಕಳಂಕ ವ್ಯಕ್ತಿತ್ವಕ್ಕೆ ಹೆಸರಾಗಿದ್ದ ಅವರು ಶೋಷಿತರ ಮತ್ತು ದಲಿತರ ಧ್ವನಿಯಾಗಿ ಸದಾ ನೆನಪಿನಲ್ಲಿ ಉಳಿಯುತ್ತಾರೆ, ಎಂದು ಸ್ಮರಿಸಲಾಯಿತು.
ಪೂಜ್ಯ ಬೋಧಿರತ್ನ ಭಂತೇಜಿ, ನಳಂದ ಬುದ್ಧ ವಿಹಾರ, ಅವರ ದಿವ್ಯ ಸಾನಿಧ್ಯದಲ್ಲಿ ನಡೆದ ಈ ಸಮಾರಂಭದಲ್ಲಿ,
ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಶ್ರೀ @NswamyChalavadi ಛಲವಾದಿ ನಾರಾಯಣಸ್ವಾಮಿರವರು. ನಂಜನಗೂಡು ಕ್ಷೇತ್ರದ ನಿಕಟಪೂರ್ವ ಶಾಸಕರಾದ ಶ್ರೀ ಹರ್ಷವರ್ಧನ್ ರವರು, ಹಿರಿಯ ಪತ್ರಕರ್ತ ಶ್ರೀ ಅಂಕಿ ಪ್ರಸನ್ನಕುಮಾರ್ ರವರು, ಡಾ. ಬಿ.ಆರ್. ಅಂಬೇಡ್ಕರ್ ಎಜುಕೇಷನಲ್ & ಕಲ್ಚರಲ್ ಟ್ರಸ್ಟ್ನ ಅಧ್ಯಕ್ಷರಾದ ಶ್ರೀಮತಿ ಭಾಗ್ಯಲಕ್ಷ್ಮಿ ಶ್ರೀನಿವಾಸ್ ಪ್ರಸಾದ್ ರವರು, ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಕನ್ನಡ ಚಿತ್ರರಂಗದ ಮೇರು ನಟ, ಗಾನಗಂಧರ್ವ ಡಾ. ರಾಜ್ಕುಮಾರ್ ಹಾಗೂ ಹಿಂದಿ ಚಿತ್ರರಂಗದ ಶೋಮ್ಯಾನ್ ರಾಜ್ ಕಪೂರ್ ಅವರ ಸಾರ್ವಕಾಲಿಕ ಮಧುರ ಗೀತೆಗಳನ್ನೊಳಗೊಂಡ 'ರಾಜ್ ಮತ್ತು ರಾಜ್' ಎಂಬ ವಿನೂತನ ಹಾಗೂ ಅರ್ಥಪೂರ್ಣ ಸಂಗೀತ ಕಾರ್ಯಕ್ರಮವು ಮೈಸೂರಿನ ಕಲಾಮಂದಿರದಲ್ಲಿ, ಶ್ರೀ ದೇಗುರು ರಾಮಚಂದ್ರ ಹಾಗೂ ಪರಮಪದ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಸಾಂಸ್ಕೃತಿಕ ಸಂಜೆಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ನಾನು ಶಾಸಕನಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ. ನಾನು ರಾಜ್ ಕುಮಾರ್ ರವರ ಪರಮ ಆರಾಧಕನಾಗಿ ಹಾಗೂ ಸಂಗೀತಾಭಿಮಾನಿಯಾಗಿ, ಭಾಗಿಯಾಗಿದ್ದೇನೆ. ಇಂದಿನ ಅತ್ಯಾಧುನಿಕ ಯುಗದಲ್ಲಿ ನಗರೀಕರಣ ಮತ್ತು ತಂತ್ರಜ್ಞಾನದ ತೀವ್ರ ಜಿಜ್ಞಾಸೆ ಮಾನವನ ಜೀವನಶೈಲಿಯನ್ನು ಶರವೇಗದಲ್ಲಿ ಬದಲಾಯಿಸುತ್ತಿದೆ. ಯಾಂತ್ರಿಕ ಬದುಕಿನ ಓಟದಲ್ಲಿ ಕೌಟುಂಬಿಕ ಸಂಬಂಧಗಳು, ಸಾಮಾಜಿಕ ಮೌಲ್ಯಗಳು ಹಾಗೂ ಮಾನವೀಯ ಭಾವನೆಗಳು ಕ್ಷೀಣಿಸುತ್ತಾ, ಸಾಮಾಜಿಕ ವ್ಯವಸ್ಥೆಯು ಕಲುಷಿತಗೊಳ್ಳುತ್ತಿದೆ.
ಇಂದಿನ ಪೀಳಿಗೆಯು ಮಾನವೀಯ ಹಾಗೂ ಸಾಮಾಜಿಕ ಮೌಲ್ಯಗಳಿಂದ ದೂರವಾಗುತ್ತಿರುವ ಈ ಸಂದರ್ಭದಲ್ಲಿ, ಸಮಾಜವನ್ನು ಮತ್ತೆ ಸಂಸ್ಕೃತಿ ಮತ್ತು ಸೌಹಾರ್ದತೆಯ ಹಾದಿಗೆ ತರಲು ಸೂಕ್ತ ಔಷಧ ಎಂದರೆ ಅದು ಸಂಗೀತ,
ಸಂಗೀತ ಮತ್ತು ಸಾಹಿತ್ಯಕ್ಕೆ ಮನುಷ್ಯನ ಮನಸ್ಸನ್ನು ಪ್ರಶಾಂತಗೊಳಿಸುವ ಅಪಾರ ಶಕ್ತಿಯಿದೆ. ಇಂದಿನ ಯಾಂತ್ರಿಕ ಬದುಕಿನಿಂದ ಹೊರತಂದು ಅವರಲ್ಲಿ ಸಾಂಸ್ಕೃತಿಕ ಜಾಗೃತಿ ಮೂಡಿಸಲು ಸಂಗೀತ-ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಆಯೋಜಿಸಬೇಕಿದೆ.
ಬಹುಶಃ ಮೈಸೂರು ರಾಜಮನೆತನದ ಆಡಳಿತಗಾರರಲ್ಲಿ ಸಾಂಸ್ಕೃತಿಕ ಚಿಂತನೆ ಮತ್ತು ಕಲಾಪ್ರೇಮ ಇದ್ದುದರಿಂದಲೇ ಮೈಸೂರು ಸಂಸ್ಥಾನದಲ್ಲಿ ಅತ್ಯುತ್ತಮ ಪ್ರಜಾಪರ ಆಡಳಿತ ಹಾಗೂ ''ರಾಮರಾಜ್ಯ"ದಂತಹ ಸುಖಕರ ವಾತಾವರಣ ನಿರ್ಮಾಣವಾಗಲು ಸಾಧ್ಯವಾಯಿತು.
ಉತ್ತಮ ಸಮಾಜ ನಿರ್ಮಾಣದಲ್ಲಿ ಮತ್ತು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ರಾಜಕಾರಣಿಗಳ ಪಾತ್ರ ಅತ್ಯಂತ ಪ್ರಮುಖವಾದುದು. ಕೇವಲ ಅಧಿಕಾರ ನಡೆಸುವುದಷ್ಟೇ ಆಡಳಿತವಲ್ಲ, ಪ್ರಜೆಗಳ ಭಾವನೆ, ಸಂಸ್ಕೃತಿ ಹಾಗೂ ಮೌಲ್ಯಗಳನ್ನು ಗೌರವಿಸಿ ಪೋಷಿಸುವುದು ರಾಜಕಾರಣಿಗಳ ಪ್ರಥಮ ಕರ್ತವ್ಯ. ರಾಜಕಾರಣಿಗಳಲ್ಲಿ ಸಾಂಸ್ಕೃತಿಕ ಮನಸ್ಸು ಇದ್ದಾಗ ಮಾತ್ರ ಅವರಿಂದ ಮಾನವೀಯತೆಯುಳ್ಳ, ಪ್ರಜಾಪರ ಹಾಗೂ ಸುದೀರ್ಘ ದೃಷ್ಟಿಕೋನದ ಆಡಳಿತ ಸಾಧ್ಯವಾಗುತ್ತದೆ.
ಇದಕ್ಕೆ ಅತ್ಯುತ್ತಮ ಐತಿಹಾಸಿಕ ಉದಾಹರಣೆ ಎಂದರೆ ಅದು ನಮ್ಮ ಮೈಸೂರಿನ ರಾಜ ಪರಂಪರೆ. ಮೈಸೂರು ಸಂಸ್ಥಾನದ ಆಡಳಿತಗಾರರು ಕೇವಲ ರಾಜಕೀಯವಾಗಿ ಸಂಸ್ಥಾನವನ್ನು ಮುನ್ನಡೆಸಲಿಲ್ಲ, ಬದಲಿಗೆ ಸಾಂಸ್ಕೃತಿಕವಾಗಿಯೂ ಸಂಗೀತ ಮತ್ತು ಕಲೆಗೆ ಅಪಾರ ಕೊಡುಗೆ ನೀಡಿದರು ಎಂದು ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹಿರಿಯ ರಂಗಕರ್ಮಿ, ಪ್ರಸಿದ್ಧ ನಿರ್ದೇಶಕ, ಮಾಯಾಮೃಗ ಖ್ಯಾತಿಯ ಟಿ. ಎನ್. ಸೀತಾರಾಂ ರವರು, ಭಾರತೀಯ ಸಿನಿಮಾ ಸಂಗೀತದ ಬೆಳವಣಿಗೆಗೆ, ಈ ಇಬ್ಬರು 'ರಾಜ್' ದಿಗ್ಗಜರು ಪ್ರೇಕ್ಷಕರ ಮೇಲೆ ಬೀರಿದ ಸಾಂಸ್ಕೃತಿಕ ಪ್ರಭಾವವನ್ನು ನೆನಪಿಸಿಕೊಂಡರು.
ಸಮಾರಂಭದಲ್ಲಿ ಸುಪ್ರಸಿದ್ಧ ಗಾಯಕರಾದ ಶ್ರೀ ರಾಮಚಂದ್ರ ಹಡಪದ್ ಹಾಗೂ ಗಾಯಕಿ ಶ್ರೀಮತಿ ದಿವ್ಯಾ ರಾಘವನ್ ಮತ್ತು ತಂಡದವರಿಂದ ಮೂಡಿಬಂದ ಸಂಗೀತ ರಸಸಂಜೆ ಮಂತ್ರಮುಗ್ಧಗೊಳಿಸಿತು. ಡಾ. ರಾಜ್ಕುಮಾರ್ ಅವರ ಅಭಿನಯದ ಅಮರ ಗೀತೆಗಳು ಹಾಗೂ ರಾಜ್ ಕಪೂರ್ ಅವರ ಹಿಂದಿ ಚಿತ್ರಗಳ ಸೂಪರ್ ಹಿಟ್ ಹಾಡುಗಳನ್ನು ಗಾಯಕರು ಅತ್ಯಂತ ಶ್ರದ್ಧೆಯಿಂದ ಪ್ರಸ್ತುತಪಡಿಸಿದರು.
ಎರಡು ವಿಭಿನ್ನ ಭಾಷೆಗಳ ಶ್ರೇಷ್ಠ ನಟರ ಗೀತೆಗಳ ಈ ವಿಶಿಷ್ಟ ಸಂಗಮವು ಮೈಸೂರಿನ ಸಂಗೀತಾಸಕ್ತರಿಗೆ ಹೊಸ ಅನುಭವವನ್ನು ನೀಡಿತು.
ಕಲಾಮಂದಿರದಲ್ಲಿ ನೆರೆದಿದ್ದ ನೂರಾರು ಸಂಗೀತ ಪ್ರೇಮಿಗಳು ಕರತಾಡನದ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಿದರು.
#DrRajkumar #kannadacinema #mysore #RaghuKautilya
ಕಳೆದ ವರ್ಷ ಅತಿವೃಷ್ಟಿಯಿಂದ ಹಾನಿಯಾದ ಬೆಳೆಗಳಿಗೆ ಪ್ರತೀ ಹೆಕ್ಟರ್ ಗೆ 17 ಸಾವಿರ ರೂ ಪರಿಹಾರ ನೀಡುವುದಾಗಿ ರಾಜ್ಯ ಸರಕಾರ ಹೇಳಿ ಎಕರೆಗೆ ಕೇವಲ 2 ಸಾವಿರ ರೂ ಮಾತ್ರ ಹಾಕಿದ್ದಾರೆ. ಸಿಎಂ @DKShivakumar ರವರು #ಕಲಬುರಗಿ ಜಿಲ್ಲೆಯ ರೈತರಿಗೆ ಬಾಕಿ ಇರುವ ಬೆಳೆ ವಿಮೆಯ 500 ಕೋಟಿ ರೂ ಪರಿಹಾರ ನೀಡಬೇಕು: ಶ್ರೀ @asmyakeri#OBCMorchaKarnataka
ಶುಕ್ರವಾರ ಬೆಳಗಾವಿಯಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಡುಪಿ ಚಿಕ್ಕಮಗಳೂರು ಸಂಸದರಾದ ಶ್ರೀ @KotasBJP ಮಾತನಾಡಿ, ಹಿಂದುಳಿದ ವರ್ಗಗಳಿಗೆ ಕಾಂಗ್ರೆಸ್ ಸರಕಾರವು ಅನ್ಯಾಯ ಮಾಡಿದೆ. 600 ಕೋಟಿ ರೂ ಖರ್ಚು ಮಾಡಿ ತರಾತುರಿಯಲ್ಲಿ ತಯಾರಿಸಿದ ಜಾತಿಗಣತಿ ವರದಿಯನ್ನು ಅಧಿವೇಶನದಲ್ಲಿ ಮಂಡಿಸಬೇಕು ಎಂದು ಸರಕಾರಕ್ಕೆ ಸವಾಲು ಹಾಕಿದರು.
1/n
ಇಂದು ನವದೆಹಲಿಯ ಬಿಜೆಪಿ ಕೇಂದ್ರ ಕಛೇರಿಯಲ್ಲಿ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ @blsanthosh ಜೀ' ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದು ತಮಗೆ ವಿಧಾನ ಪರಿಷತ್ ಪ್ರವೇಶಿಸಲು ಅವಕಾಶ ಮಾಡಿಕೊಟ್ಟ ಪಕ್ಷದ ವರಿಷ್ಠರಿಗೆ ಕೃತಜ್ಞತೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಒಬಿಸಿ ಮೋರ್ಚಾದ ಉಪಾಧ್ಯಕ್ಷರಾದ ಎ.ಎಸ್. ವೆಂಕಟೇಶ್ ಅವರೂ ಜೊತೆಗಿದ್ದರು.
ಇದೇ ವೇಳೆ, ರಾಷ್ಟ್ರೀಯ ನಾಯಕರು, ನೂತನವಾಗಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಶ್ರೀ @RaghuKautilya ರವರಿಗೆ ಅಭಿನಂದನೆ ಸಲ್ಲಿಸಿ, ಮುಂದಿನ ಸಂಘಟನಾತ್ಮಕ ಕಾರ್ಯಗಳಿಗೆ ಶುಭ ಹಾರೈಸಿದರು. ರಾಜ್ಯ ಓಬಿಸಿ ಮೋರ್ಚಾದ ಉಪಾಧ್ಯಕ್ಷರಾದ ಶ್ರೀ ಎ.ಎಸ್ ವೆಂಕಟೇಶ್ ರವರು ಉಪಸ್ಥಿತರಿದ್ದರು
#OBCMorchaKarnataka#RaghuKautilya#OBCMorcha 2/2
ಇಂದು ನವದೆಹಲಿಯ ಬಿಜೆಪಿ ಕೇಂದ್ರ ಕಛೇರಿಯಲ್ಲಿ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ @blsanthosh ಜೀ' ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದು ತಮಗೆ ವಿಧಾನ ಪರಿಷತ್ ಪ್ರವೇಶಿಸಲು ಅವಕಾಶ ಮಾಡಿಕೊಟ್ಟ ಪಕ್ಷದ ವರಿಷ್ಠರಿಗೆ ಕೃತಜ್ಞತೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಒಬಿಸಿ ಮೋರ್ಚಾದ ಉಪಾಧ್ಯಕ್ಷರಾದ ಎ.ಎಸ್. ವೆಂಕಟೇಶ್ ಅವರೂ ಜೊತೆಗಿದ್ದರು.
ನೂತನವಾಗಿ ಆಯ್ಕೆಯಾಗಿರುವ ರಾಜ್ಯಸಭಾ ಸದಸ್ಯರೂ ಹಾಗೂ ಬಿಜೆಪಿ ರಾಷ್ಟ್ರೀಯ ಒಬಿಸಿ ಮೋರ್ಚಾದ ಅಧ್ಯಕ್ಷರಾದ ಶ್ರೀ @Amarpalmbjp'ಅಮರ್ಪಾಲ್ ಮೌರ್ಯ' ಅವರನ್ನು, ದೆಹಲಿಯ ಪಕ್ಷದ ಕೇಂದ್ರ ಕಚೇರಿಯಲ್ಲಿ ಭೇಟಿ ಮಾಡಿ ಶುಭ ಕೋರಲಾಯಿತು. ಇದೇ ವೇಳೆ, ರಾಷ್ಟ್ರೀಯ ನಾಯಕರು ನೂತನವಾಗಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ನನಗೆ ಅಭಿನಂದನೆ ಸಲ್ಲಿಸಿ ಮುಂದಿನ ಸಂಘಟನಾತ್ಮಕ ಕಾರ್ಯಗಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ರಾಜ್ಯ ಒಬಿಸಿ ಮೋರ್ಚಾದ ಉಪಾಧ್ಯಕ್ಷರಾದ ಎ.ಎಸ್. ವೆಂಕಟೇಶ್ ಅವರು ಉಪಸ್ಥಿತರಿದ್ದರು.
#BJP4IND #nationalbjpobc #RaghuKautilya
ನಮ್ಮ ಪಕ್ಷ ಮತ್ತು ಸಿದ್ಧಾಂತಕ್ಕೆ ಸದೃಢ ಅಡಿಪಾಯ ಹಾಕಿಕೊಟ್ಟ ದಾರ್ಶನಿಕರು, ಜನಸಂಘದ ಸಹ-ಸಂಸ್ಥಾಪಕರು, ‘ಏಕಾತ್ಮ ಮಾನವತಾವಾದ’ ಹಾಗೂ ‘ಅಂತ್ಯೋದಯ’ ತತ್ತ್ವಗಳ ಮೂಲಕ ಸಮಾಜದ ಕೊನೆಯ ವ್ಯಕ್ತಿಗೂ ಅಭಿವೃದ್ಧಿಯ ಬೆಳಕು ತಲುಪಬೇಕೆಂದು ಪ್ರತಿಪಾದಿಸಿದ ಮಹಾನ್ ಚಿಂತಕರಾದ ಪಂಡಿತ್ ಶ್ರೀ ದೀನ್ ದಯಾಳ್ ಉಪಾಧ್ಯಾಯ ಅವರ ಜಯಂತಿಯಂದು ಆ ಹಿರಿಯ ಚೇತನಕ್ಕೆ ಆದರಪೂರ್ವಕ ಪ್ರಣಾಮಗಳು.
ಸಮಾಜದ ಕಟ್ಟಕಡೆಯ ವ್ಯಕ್ತಿಯ ಸಬಲೀಕರಣವೇ ರಾಷ್ಟ್ರದ ನೈಜ ವಿಕಾಸ ಎಂದು ಪ್ರತಿಪಾದಿಸಿದ ಅವರ ವಿಚಾರಧಾರೆಗಳು, ಅವರ ದೇಶಸೇವೆ ಮತ್ತು ಅವರ ತ್ಯಾಗಮಯ ಜೀವನ ರಾಷ್ಟ್ರೀಯತೆಯ ಚಿಂತನ ಮಾರ್ಗದಲ್ಲಿ ಶಾಶ್ವತ ಸ್ಪೂರ್ತಿಯಾಗಿದೆ.
ಅರಮನೆಯ ಸಿರಿ-ಸಂಪತ್ತನು ಅಡವಿಟ್ಟು,
ಕಾವೇರಿಯ ಮಡಿಲಲಿ ಕರುಣೆಯ ಧಾರೆ ಎರೆದು,
ಕೋಟಿ ಕೋಟಿ ರೈತರ ಉಸಿರಿಗೆ, ಬದುಕಿನ ಜೀವಜಲ ತಂದುಕೊಟ್ಟು , ಕನ್ನಡ ನಾಡಿನ ಮಡಿಲಲ್ಲಿ ಕೆತ್ತಿದ ತ್ಯಾಗದ ಮಹಾಕಾವ್ಯವೇ, #KRS
ಮೈಸೂರು @yaduveerwadiyar ರವರ ರಾಜಮನೆತನದ ತ್ಯಾಗಕ್ಕೆ ಶಿರಬಾಗಿ ನಮಿಸುವೆವು.
#RaghuKautilya#mysore
ಪರಿಸರ ನಾಶ ತಡೆದು ಸ್ಥಳೀಯ ರೈತರು ಹಾಗೂ ಆದಿವಾಸಿಗಳ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಬೇಕು. ಪರಿಸರ ಸಂರಕ್ಷಣೆಯೊಂದಿಗೆ ಸ್ಥಳೀಯ ಜನರ ಜೀವನೋಪಾಯವನ್ನು ಕಾಯ್ದುಕೊಳ್ಳಲು ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು.