ಕೆಲ ರಾಜಕೀಯ ಪಟ್ಟಭದ್ರರು, ಅಡ್ಜಸ್ಟ್ಮೆಂಟ್ ರಾಜಕಾರಣದ ಹರಿಕಾರರಿಂದ ಲೋಕ ಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ತೀವ್ರ ಹಿನ್ನಡೆಯಾಯಿತು. ಕಲ್ಬುರ್ಗಿ, ರಾಯಚೂರು, ಬಳ್ಳಾರಿ, ಚಿಕ್ಕೋಡಿಯಲ್ಲಿ ಆದ ಸೋಲಿನ ಪರಾಮರ್ಶೆಯನ್ನು ಹೈ ಕಮಾಂಡ್ ಮಾಡದೆ ಇರುವುದು ಕಲ್ಯಾಣ ಕರ್ನಾಟಕದಲ್ಲಿ ಪಕ್ಷದ ಅವನತಿಗೆ ಕಾರಣವಾಗಿದೆ.
ಕಾರ್ಯಕರ್ತರ ಪಕ್ಷ ಎಂದು ಹೆಸರುವಾಸಿಯಾಗಿದ್ದ ಭಾರತೀಯ ಜನತಾ ಪಕ್ಷ ಈಗ ಕುಟುಂಬ ರಾಜಕಾರಣದಲ್ಲಿ ಮುಳುಗಿರುವುದು ವಿಷಾದನೀಯ.
ಪಕ್ಷದ ವಿರುದ್ದ ಬಹಿರಂಗವಾಗಿ ಮಾತನಾಡಿ ಹಾಗೂ ಆಡಳಿತಾರೂಢ ಪಕ್ಷದ ಸಭೆಯಲ್ಲಿ ಭಾಗವಹಿಸುತ್ತಿದ್ದ ಶಾಸಕರ ಉಚ್ಚಾಟನೆ ಮಾಡದೆ ಉತ್ತರ ಕರ್ನಾಟಕದ ಭಾಗದಲ್ಲಿ ಪಕ್ಷದ ಬಲವರ್ಧನೆಗೆ ಟೊಂಕಕಟ್ಟಿ ಕೆಲಸ ಮಾಡಿದ ನನ್ನಂತವರಿಗೆ ಉಚ್ಚಾಟನೆ ಮಾಡುವುದು ಪಕ್ಷದ ದ್ವಂದ್ವ ನೀತಿಗಳಿಗೆ ಹಿಡಿದ ಕೈಗನ್ನಡಿ.
ಕಲ್ಯಾಣ ಕರ್ನಾಟಕದಲ್ಲಿ ಸಧೃಡವಾಗಿದ್ದ ಪಕ್ಷ ಲೋಕ ಸಭಾ ಚುನಾವಣೆಯಲ್ಲಿ ಮಕಾಡೆ ಮಲಗಿದ್ದು ಯಾರ 'ಅಡ್ಜಸ್ಟ್ಮೆಂಟ್ ರಾಜಕಾರಣದಿಂದ' ಎಂದು ಪಕ್ಷದ ಪ್ರಮುಖರು ವಿಶ್ಲೇಷಿಸಲಿ.
ಬಿ.ಬಿ.ಶಿವಪ್ಪ, ಮಲ್ಲಿಕಾರ್ಜುನಪ್ಪ, ಡಾ ವಿ.ಎಸ.ಆಚಾರ್ಯರು ಸೇರಿದಂತೆ ಪಕ್ಷದ ಅನೇಕ ಧುರೀಣರು, ಸಾವಿರಾರು ಕಾರ್ಯಕರ್ತರು ಪಕ್ಷವನ್ನು ಸಂಘಟಿಸಿದ ಪರಿಣಾಮದಿಂದಲೇ ಪಕ್ಷ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿದ್ದು. ಬಿಡಿಗಾಸಿಲ್ಲದೇ, ಕಾರ್ಯಕರ್ತರ ಓಡಾಟ, ಉಪಹಾರಕ್ಕೂ ಹಣವಿಲ್ಲದಿರುವ ಕಾಲಘಟ್ಟದಲ್ಲಿ ದಿವಂಗತ ಮಲ್ಲಿಕಾರ್ಜುನಪ್ಪನವರು ತಮ್ಮ ಸ್ವಂತ ಸಂಪನ್ಮೂಲದಿಂದ ಪಕ್ಷವನ್ನು ಮುನ್ನೆಡೆಸಿ ಕಾರ್ಯಕರ್ತರ ಮನೋಬಲವನ್ನು ಹೆಚ್ಚಿಸಿ ಸಂಘಟನೆಗೆ ಕಾರಣವಾದರು. ಮಾತು ಕಡಿಮೆಯಾದರೂ ತಮ್ಮ ಕೆಲಸದಿಂದ ಕರಾವಳಿಯಲ್ಲಿ ಪಕ್ಷವನ್ನು ಸಂಘಟಿಸಿದ್ದು ಪಕ್ಷ ಮರೆಯಲಾಗದ ಮಾಣಿಕ್ಯ ಡಾ. ವಿ.ಎಸ್.ಆಚಾರ್ಯರು. ಆಯಕಟ್ಟಿನ ಸ್ಥಾನದಲ್ಲಿದ್ದರೂ ಆಚಾರ್ಯರ ಕುಟುಂಬದವರು ಯಾರೂ ಸಹ ರಾಜಕಾರಣಕ್ಕೆ ಬರಲಿಲ್ಲ ಎಂಬುದು ಹಲವರಿಗೆ ಗೊತ್ತಿಲ್ಲ.
ಹಿಂದುತ್ವವಾದ ಬಗ್ಗೆ ರಾಜಿ ಮಾಡಿಕೊಳ್ಳದೆ, ಕುಟುಂಬ ರಾಜಕಾರಣದ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ರಾಜ್ಯದಲ್ಲಿ ಪಕ್ಷವನ್ನು ಕಟ್ಟಿದ್ದ ಈಶ್ವರಪ್ಪನವರನ್ನು ಹೊರಗಿಟ್ಟರು. ನಿಸ್ವಾರ್ಥ ಕಾರ್ಯಕರ್ತರು, ತನು-ಮನ-ಧನದಿಂದ ದುಡಿದ ಮುಖಂಡರಿಂದ ಪಕ್ಷದ ಸಂಘಟನೆಯಾಯಿತೇ ಹೊರತು ಸ್ವಯಂಘೋಷಿತ 'ಪೂಜ್ಯ' ರಿಂದಲ್ಲ.
ರಾಜ್ಯದಲ್ಲಿ ಪ್ರ ಪ್ರಥಮ ಬಾರಿಗೆ ವಕ್ಫ್ ಹೋರಾಟಕ್ಕೆ ಧರಣಿ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದು ನಾವೇ, ವಾಲ್ಮೀಕಿ ಹಗರಣ, ದಲಿತರಿಗೆ SCSP/TSP ಅನುದಾನದ ದುರ್ಬಳಕೆಯನ್ನು ಖಂಡಿಸಿದ್ದು, ಹೋರಾಟ ರೂಪಿಸಿದ್ದು, ವಕ್ಫ್ ವಿರುದ್ಧ ನಾವು ಮಾಡಿದ್ದ ಮಾಹಿತಿ ಸಂಗ್ರಹಕ್ಕೆ ಜೆ.ಪಿ.ಸಿ ಅಧ್ಯಕ್ಷರಾದ ಶ್ರೀ ಜಗದಂಬಿಕಾ ಪಾಲ್ ಅವರು ಪ್ರಶಂಸಿಸಿದ್ದರು.
ಪ್ರತಿ ಬಾರಿ ಅಧಿವೇಶನ ನಡೆದಾಗಲೂ ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಮಲತಾಯಿ ಧೋರಣೆಯನ್ನು, ಕೃಷ್ಣ ಯೋಜನೆಯ ವಿಳಂಬದ ಬಗ್ಗೆ ಧ್ವನಿ ಎತ್ತಿದ್ದು ನಾವೇ, ಕರ್ನಾಟಕ ಲೋಕ ಸೇವಾ ಆಯೋಗದಲ್ಲಿರುವ ಭ್ರಷ್ಟರನ್ನು ಕಿತ್ತೊಗೆಯಲು ಸ್ಪರ್ಧಾರ್ಥಿಗಳ ಜೊತೆಗೆ ನಿಂತಿದ್ದು ನಾವೇ. ಬಾಣಂತಿಯರ ಸಾವಿನ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದು ನಾನೇ. ಪಕ್ಷದಲ್ಲಿ ಆಗಬೇಕಾದ ಕೆಲ ಬದಲಾವಣೆಗಳು, ಸುಧಾರಣೆಗಳು ಸೂಚಿಸಿದಕ್ಕೆ ನಮ್ಮ ನಿಲುವು ಕೆಲವರಿಗೆ 'ಅಪಥ್ಯ' ವಾಗಿದೆ.
ಅಡ್ಜಸ್ಟ್ಮೆಂಟ್ ರಾಜಕಾರಣ ನಿಲ್ಲದಿದ್ದರೆ ಪಕ್ಷ ಮಕಾಡೆ ಮಲಗುವುದು ಖಚಿತ. ಕುಟುಂಬ ರಾಜಕಾರಣಕ್ಕೆ ಕಡಿವಾಣ ಹಾಕಿ, ನಿಜವಾದ ಜನ ಪರ ಕಾಳಜಿ ಇರುವ ನಾಯಕರಿಗೆ ಪಕ್ಷ ಅವಕಾಶ ನೀಡಬೇಕು. ಕಾಟಾಚಾರಕ್ಕೆ ಸರ್ಕಾರದ ನೀತಿಗಳನ್ನು ಖಂಡಿಸಿ ಸಂಜೆ ವೇಳೆ ಅವರ ಮನೆಯಲ್ಲಿ ಭೋಜನ ಕೂಟದಲ್ಲಿ ಭಾಗವಹಿಸುವ ನಾಯಕರ ಅವಶ್ಯ ಪಕ್ಷಕ್ಕಿಲ್ಲ.
Nation First, Party next, Self last ಎಂಬ ತತ್ವದಡಿ ಕೆಲಸ ಮಾಡುವ ನನ್ನ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ.
🚩🚩

ತಂಬೂರಿ
💛ಜಾನಪದ ಕನ್ನಡದ ತಾಯಿಬೇರು❤️
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಅಣ್ಣ ಟಿ ಎ ನಾರಾಯಣ ಗೌಡ್ರು ಅವರು ಆಯೋಜಿಸದ್ದ "ತಂಬೂರಿ " ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ನಾವು ಪಾಲ್ಗೊಂಡು ಕನ್ನಡದ ಹಾಡುಗಳನ್ನು ಕೇಳಿ ಆನಂದಿಸಿದೆವು.
ಕನ್ನಡ ನಾಡು ನುಡಿ ರಕ್ಷಣೆಗಾಗಿ ಹೋರಾಟ ಮಾತ್ರವಲ್ಲದೆ ಹಿಂತಹ ಹಲವು ಮನೋರಂಜನ ಕಾರ್ಯಕ್ರಮಗಳನ್ನು, ಆಯೋಜಿಸುವ ಮೂಲಕ ಕನ್ನಡದ ಕಲಾವಿದರಿಗೆ ಪ್ರೋತ್ಸಾಹ ನೀಡುವ ನಮ್ಮ ಕರವೇ ನಾರಾಯಣ ಗೌಡ್ರು ಅಣ್ಣ ಅವರಿಗೆ ದೇವರು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ದೇವರಲ್ಲಿ ನಾವು ಪ್ರಾರ್ಥಿಸುತ್ತೇವೆ.
ಇಂತಿ
ಕಾಂತಾಕುಮಾರ್
ಕರವೇ ರಾಜ್ಯ ವಿದ್ಯಾರ್ಥಿ ಘಟಕದ ಪ್ರದಾನ ಸಂಚಾಲಕರು.
AKSSA @AKSSAofficial ರಾಜ್ಯಾಧ್ಯಕ್ಷರು.
Byteam#@AKSSAofficial
ಸ್ಪೀಕರ್ ಪೀಠಕ್ಕೆ ಆಗೌರವ - 18 ಬಿಜೆಪಿ ಶಾಸಕರು ಆರು ತಿಂಗಳು ಅಮಾನತು
ಕೆಪಿಎಸ್ಸಿ ಇಂದ ಆದ ಕೆಎಎಸ್ ಕನ್ನಡ ಅಭ್ಯರ್ಥಿಗಳಿಗೆ ಆದ ಅನ್ಯಾಯದ ವಿರುದ್ಧ ಸರ್ಕಾರ ಇಲ್ಲಿಯವರೆಗೆ ಕೆಪಿಎಸ್ಸಿ ವಿರುದ್ಧ ಯಾವ ಕ್ರಮನು ತೆಗೆದುಕೊಂಡಿಲ್ಲ ಇದಕ್ಕೆಲ್ಲ ಕಾರಣ ತಿಳಿಸಿ @siddaramaiah ನಿಮಗೆ ಆದರೆ ಅದು ಅನ್ಯಾಯ ವಿದ್ಯಾರ್ಥಿಗಳಿಗೆ ಆದರೆ ಅದು?? @INCKarnataka
ಇವರಿಗೆ
ಮಾನ್ಯ ಶ್ರೀ @siddaramaiah ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ವಿಧಾನ ಸೌಧ ಬೆಂಗಳೂರು.
ವಿಷಯ :- ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಲವು ವರ್ಷಗಳಿಂದ ನೇಮಕಾತಿಗಳೇ ನಡೆದಿಲ್ಲ, ಹೀಗಾಗಿ ಎಲ್ಲ ಇಲಾಖೆಗಳ ನೇಮಕಾತಿಗಳಿಗೆ ಆದೇಶಿಸಿ ನಂತರ ಒಳ ಮೀಸಲಾತಿಯನ್ನು ಯಾರಿಗೂ ಅನ್ಯಯವಾಗದಂತೆ ಅನ್ವಯಿಸಬೇಕೆಂದು ಕೋರಿ.
ಮಾನ್ಯರೇ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಲವು ವರ್ಷಗಳಿಂದ ಯಾವುದೇ ರೀತಿಯ ನೇಮಕಾತಿಗಳು ನಡೆದಿಲ್ಲ, ಕರ್ನಾಟಕ ಸರ್ಕಾರವು ಒಳ ಮೀಸಲಾತಿ ಜಾರಿಯಾದ ನಂತರ ನೇಮಕಾತಿ ಮಾಡುವುದಾಗಿ ಹಾಗೂ ಸುಮಾರು ನಾಲ್ಕು ತಿಂಗಳ ಹಿಂದೆಯೇ ಎರಡು ತಿಂಗಳ ಒಳಗಾಗಿ ಒಳ ಮೀಸಲಾತಿಯನ್ನು ಜಾರಿ ಮಾಡುವುದಾಗಿ ಹೇಳಿತು, ಆದರೆ ಸರ್ಕಾರವು ಒಳ ಮೀಸಲಾತಿ ಜಾರಿ ಮಾಡುವಲ್ಲಿ ಬಹಳ ಮಂದಗತಿಯಲ್ಲಿ ಸಾಗುತಿದ್ದು, ಈಗ ಇನ್ನು ಮೂರು ತಿಂಗಳುಗಳ ಕಾಲ ಒಳ ಮೀಸಲಾತಿ ಜಾರಿಯಾಗುವುದು ವಿಳಂಬವಾಗುತ್ತದೆ ಎಂದು ಸರ್ಕಾರದ ಸಚಿವರು ಹೇಳಿಕೆಗಳನ್ನು ನೀಡುತ್ತಿದ್ದು, ಇದರಿಂದ ಯುವ ಜನತೆಯು ಕಂಗಲಾಗಿ ಹೋಗಿದ್ದಾರೆ.
ಕರ್ನಾಟಕ ಸರ್ಕಾರದ ಕೆಲವು ಸಚಿವರುಗಳು ಇನ್ನೂ ಮೂರು ತಿಂಗಳು ವಿಳಂಬವಾಗುತ್ತದೆ ಎಂದು ಹೇಳಿಕೆ ನೀಡಿದ ನಂತರ ನಾವು ಮಾನ್ಯ ಶ್ರೀ ಹೆಚ್ ಎನ್ ನಾಗಮೋಹನ್ ದಾಸ್ ಅವರನ್ನು ಬೇಟಿ ಮಾಡಿ ವಿಚಾರಿಸಿದಾಗ ಒಳ ಮೀಸಲಾತಿ ಜಾರಿಗೆ ನಮ್ಮ ಬಳಿ ಸಮರ್ಪಕವಾದ ದತ್ತಾಂಶಗಳಿಲ್ಲದ ಕಾರಣ ಹಾಗೂ ಸರ್ಕಾರದ ಅಧಿಕಾರಿಗಳು ಸಹಕರಿಸದ ಕಾರಣ ವಿಳಂಬವಾಗುತ್ತಿದೆ, ಆದ್ದರಿಂದ ನಾನು ಸಹ ಮುಖ್ಯಮಂತ್ರಿಗಳಿಗೆ ಸರ್ಕಾರವು ನೇಮಕಾತಿ ಮಾಡುವುದೇ ಅಪರೂಪ ಅದರಲ್ಲಿಯೂ ನೇಮಕಾತಿಯನ್ನು ತಡೆಹಿಡಿದರೆ ಹೇಗೆ ನೇಮಕತಿಯನ್ನು ಯಾವುದೇ ಕಾರಣಕ್ಕೂ ತಡೆ ಹಿಡಿಯಬೇಡಿ ಎಂದು ಮೌಖಿಕವಾಗಿ ಹೇಳಿದ್ದೇನೆ ಎಂದರು, ಹೀಗಾಗಿ ಸರ್ಕಾರವು ಆದಷ್ಟು ಬೇಗ ನೇಮಕಾತಿಯ ಅಧಿಸೂಚನೆಯನ್ನು ಹೊರಡಿಸಬೇಕೆಂದು ನಾಡಿನ ಸಮಸ್ತ ವಿದ್ಯಾರ್ಥಿಗಳ ಪರವಾಗಿ ಮನವಿ ಮಾಡುತ್ತೇವೆ.
ನಾವು ಮಾನ್ಯ ಎಚ್ ಎನ್ ನಾಗಮೋಹನ್ ದಾಸ್ ಅವರನ್ನು ಸರ್ಕಾರವು ನೇಮಕಾತಿಗಳಿಗೆ ಅಧಿಸೂಚನೆ ಹೊರಡಿಸುವಂತೆ ತಮ್ಮ ಅಭಿಪ್ರಾಯವನ್ನು ಲಿಖಿತ ರೂಪದಲ್ಲಿ ನೀಡಿ ಸರ್ ಎಂದು ಕೇಳಿದೆವು, ಅದಕ್ಕೆ ಮಾನ್ಯರು ಹಾಗೂ ಗೌರವನ್ವಿತರು ಆದ ಎಚ್ ಎನ್ ನಾಗಮೋಹನ್ ದಾಸ್ ಅವರು ಲಿಖಿತ ರೂಪದಲ್ಲಿ ನೀಡಿದರೆ ರಾಜಕೀಯ ತಿರುವು ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಹೀಗಾಗಿ ಆದಷ್ಟು ಬೇಗ ಸರ್ಕಾರ ಎಲ್ಲ ಇಲಾಖೆಗಳಲ್ಲಿ ನೇಮಕಾತಿಯನ್ನು ನಡೆಸಬೇಕೆಂದು ಹಾಗೂ ನೇಮಕಾತಿಯ ಕೊನೆಯ ಹಂತದಲ್ಲಿ ಒಳ ಮೀಸಲಾತಿಯನ್ನು ಅನ್ವಯಿಸಬೇಕಾಗಿ ಹಾಗೂ ನಾಡಿನ ಯುವಜನತೆಯ ಪರವಾಗಿ ನಿಂತು ನಿರುದ್ಯೋಗ ಸಮಸ್ಯೆಯನ್ನು ಸರ್ಕಾರ ಹೋಗಲಾಡಿಸಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇವೆ.
(@AKSSAofficial ) @secretarykpsc@shalinirajnish@siddaramaiah@DKShivakumar@PriyankKharge@INCKarnataka@tv9kannada@AsianetNewsSN@NewsFirstKan@publictvnews@BJPKarnataka@RAshokaBJP@BYVijayendra@INCIndia@INCKarnataka@BJPindia__@BJPKarnataka@BasanagoudaBJP@KannadaPrabha@Vijayavani_Digi
ಕನ್ನಡ ಮಾಧ್ಯಮ ಸ್ಪರ್ಧಾರ್ಥಿಗಳಿಗೆ ಕರ್ನಾಟಕ ಲೋಕ ಸೇವಾ ಆಯೋಗ ಅನ್ಯಾಯ ಮಾಡುತ್ತಿರುವುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಅಗತ್ಯವಿಲ್ಲ. ಪರೀಕ್ಷೆ ನಡೆಯುವುದಕ್ಕೂ ಮುನ್ನವೇ ಕನ್ನಡದಲ್ಲೂ ಪರೀಕ್ಷೆ ಬರೆಯುವ ಅವಕಾಶ ಇರಬೇಕು ಎಂದು ಆಗ್ರಹಿಸಿದ್ದೆ; ಆದರೆ ತೀವ್ರತರವಾದ ದೃಷ್ಟಿ ಹಾಗೂ ಶ್ರವಣದೋಷವಿರುವ ಭ್ರಷ್ಟ ಕೆ.ಪಿ.ಎಸ್.ಸಿ ಗೆ ಕನ್ನಡ ಮಾಧ್ಯಮ ಸ್ಪರ್ಧಾರ್ಥಿಗಳ ಕೂಗು/ಮನವಿ ಕೇಳದೆ ಇರುವುದು ದುರಂತ. ಆಯೋಗ ಯಾರ ಪರ ಇದೆ ಎಂದು ಇದರಿಂದಲೇ ಗೊತ್ತಾಗುತ್ತದೆ.
ಪೇಪರ್ ಸೆಟ್ಟಿಂಗ್ ನಲ್ಲಿ ಯಾವುದೇ logical consistency ಇಟ್ಟುಕೊಳ್ಳದ ಆಯೋಗ ಪ್ರಶ್ನೆಯನ್ನು ಕನ್ನಡದಲ್ಲಿ ಕೇಳಿದೆ ಆದರೆ ಉತ್ತರಿಸಬೇಕಾದದ್ದು ಮಾತ್ರ ಆಂಗ್ಲದಲ್ಲಿ ಎಂಬ ನಿಯಮವಿದೆ.
ಆಯೋಗದ criminal intent ಹಾಗೂ ಸ್ಪರ್ಧಾರ್ಥಿ ವಿರೋಧಿ ನಿಲುವು ಎಷ್ಟರ ಮಟ್ಟಿಗೆ ಇದೆ ಎಂದರೆ ಅವರು ವಾಪಾಸ್ ಪಡೆಯುವ ಉತ್ತರ ಪತ್ರಿಕೆಯಲ್ಲಿ ಮಾತ್ರ ಆಂಗ್ಲದಲ್ಲಿ ಮಾತ್ರ ಪರೀಕ್ಷೆ ಬರಿಯಬೇಕು ಎಂದು ಸೂಚಿಸಿದ್ದಾರೆ; ತನ್ಮೂಲಕ, ಸ್ಪರ್ಧಾರ್ಥಿಗಳಿಗೆ ಯಾವುದೇ ಕುರುಹು ನೀಡದೆ ತಮ್ಮ ಲೋಪದೋಷಗಳನ್ನು ಮುಚ್ಚಿಹಾಕಬಹುದೆಂಬ ಮಾಸ್ಟರ್ ಪ್ಲಾನ್ ರಚಿಸಿಯೇ ಮಾಡಿದಂತಿದೆ.
ಸರ್ಕಾರ ಕೂಡಲೇ ಪರೀಕ್ಷಾ ನಿಯಂತ್ರಕರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿ ಶಿಸ್ತು ಕ್ರಮ ಕೈಗೊಳ್ಳಲಿ.
@Prash_devadig I @AKSSAofficial I #KPSCReforms I @KarnatakaCivil I @CMofKarnataka I
KAT ಆದೇಶ ಹೇಗಿದೆಯೆಂದರೆ ಕಳ್ಳರಿಂದ ಕಳ್ಳತನದ ಸಂಶೋಧನೆ ಮಾಡಿಸುವಂತಾಗಿದೆ.... @RAshokaBJP@BYVijayendra
ಪ್ರಶ್ನೆ ಪತ್ರಿಕೆಯನ್ನು KPSC ನೇಮಕ ಮಾಡುವ ತಜ್ಞರಿಂದ ಮರುಪರಿಶೀಲನೆ ಮಾಡಬೇಕು ಮರುಪರಿಶೀಲನೆ ಮಾಡಿದ ನಂತರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ...
ಕಳ್ಳರ ಕೈಯಲ್ಲಿ ಕಳ್ಳತನ ತನಿಖೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾದರೆ KAT ಯಾವ ಪುರುಷಾರ್ಥಕ್ಕೆ ಇದೆ...
KPSCದಿಂದ ಮೋಸವಾಗಿದೆಯೆಂದು ನ್ಯಾಯ ಕೊಡಿ ಎಂದು ಹೊದವರು ನಾವು ನ್ಯಾಯ ಕೊಡುವ ಸ್ಥಾನದಲ್ಲಿ ಇರುವ KAT ನೇ ಅನ್ಯಾಯ ಮಾಡಿದ KPSC ಕೈಯಲ್ಲಿ ಸರಿಪಡಿಸಿ ಎಂದು ಅಧಿಕಾರ ಕೊಟ್ಟರೆ ನ್ಯಾಯ ಸಿಗಲು ಸಾಧ್ಯವೇ?
ನ್ಯಾಯ ನಿಡಬೇಕೆಂಬ ಉದ್ದೇಶ KAT ಗೇ ಇದ್ದಿದ್ದರೆ ತಾನೇ ಒಂದು ಭಾಷಾತಜ್ಞರ ಸಮಿತಿ ರಚಿಸಿ ಅದರಲ್ಲಿ ಆಗಿರುವ ಸರಿ ತಪ್ಪುಗಳನ್ನು ಪರಿಶಿಲಿಸಿ ಅಂತಿಮ ನಿರ್ಧಾರಕ್ಕೆ ಬರಬಹುದಿತ್ತು... ಆದರೆ ನ್ಯಾಯ ನೀಡಬೇಕೆಂಬ ಯಾವುದೇ ಸದ್ದುದೇಶ KATಗೇ ಇಲ್ಲ ಎಂಬುದು ನಮಗೆ ಮನವರಿಕೆ ಆಗಿದೆ..
ಇಲ್ಲಿ ಗುರುತಿಸಬಹುದಾದ ಪ್ರಮುಖ ಅಂಶವೆಂದರೆ ಪ್ರಶ್ನೆ ಪತ್ರಿಕೆಯಲ್ಲಿ ಬಹುದೊಡ್ಡ ಭಾಷಾಂತರ ದೋಷ ಆಗಿದೆಯೆಂದು KAT ಗೇ ಕೂಡ ಮನವರಿಕೆ ಆಗಿದೆ ಹಾಗಾಗಿನೇ ಭಾಷಾ ತಜ್ಞರ ಸಮಿತಿ ರಚಿಸಿ ಮರುಪರಿಶೀಲನೆ ಮಾಡಿ ಎಂದು ಹೇಳಿದೆ ಆದರೆ ಅಂತಿಮ ನಿರ್ಧಾರಕ್ಕೆ ಬರಲು ಅದಕ್ಕೆ ಸಾಧ್ಯವಾಗಿಲ್ಲ ಎಂದರೆ ಅದು ಎಂತಹ ದೊಡ್ಡ ಇಕ್ಕಟ್ಟಿಗೆ ಸಿಲುಕಿದೆ ಎಂದು ನಾವು ಸಂಕ್ಷಿಪ್ತವಾಗಿ ಅರ್ಥ ಮಾಡಿಕೊಳ್ಳಬೇಕು ಬಿಡಿಸಿ ಹೇಳುವ ಅಗತ್ಯವಿಲ್ಲ ..
ಹಾಗಾದರೆ ನಮ್ಮ ಮುಂದಿರುವ ಆಯ್ಕೆಗಳು
1) ಐವತ್ತು ಸಾವಿರಕ್ಕಿಂತ ಅಧಿಕ ಸಂಖ್ಯೆಯಲ್ಲಿ ಸೇರಿ ಬೆಂಗಳೂರಲ್ಲಿ ದೊಡ್ಡ ಮಟ್ಟದಲ್ಲಿ ಹೊರಾಟ ರೂಪಿಸಿ ನಮ್ಮ ಹಕ್ಕು ನಾವು ಪಡೆಯುವುದು...
2) ನ್ಯಾಯ ಒದಗಿಸುತ್ತಿನಿ ಎಂದು ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ @siddaramaiah ಮಾತಿಗೆ ತಪ್ಪಿದರೆ ಹೈಕೋರ್ಟ್ ಮೊರೆ ಹೊಗುವದು..
ಈ ಎರಡೂ ಆಯ್ಕೆಯಲ್ಲಿ ಮೊದಲ ಆಯ್ಕೆಯನ್ನು ಆಯ್ದುಕೊಳ್ಳುವುದು ಉತ್ತಮ ಯಾಕೆಂದರೆ ಈಗಾಗಲೇ ಮುಖ್ಯಮಂತ್ರಿಗಳು KAT ಹೆಸರೆಳಿ ತಪ್ಪಿಸಿಕೊಂಡಿದ್ದಾರೆ ಈಗ ತಕ್ಷಣ ಹೈಕೋರ್ಟ್ ನ್ಯಾಯಾಲಯದ ಮೊರೆ ಹೊದರೆ ಅದರ ಸಬೂಬೂ ಹೇಳಿ ಜಾರಿಕೊಳ್ಳುತ್ತಾರೆ ಹಾಗಾಗಿ ಸರಕಾರದ ನಿಜವಾದ ಮುಖವಾಡ ಬಯಲಾಗಬೇಕೆಂದರೆ
ನಾವು ದೊಡ್ಡ ಮಟ್ಟದಲ್ಲಿ ಹೊರಾಟ ರೂಪಿಸಬೇಕು ಆವಾಗ ಸರ್ಕಾರದ ನಿರ್ಧಾರ ಏನಾಗುತ್ತದೆ ಎಂದು ನೋಡಿ ಹೈಕೋರ್ಟ್ ಮೊರೆ ಹೊಗುವದು ಉತ್ತಮ..
ಈಗಲೂ ಕೂಡ ಮುಖ್ಯಮಂತ್ರಿ KAT ತಜ್ಞರ ಸಮಿತಿ ರಚಿಸಿ ಮರುಪರಿಶೀಲನೆ ಮಾಡಿ ಎಂದು ಹೇಳಿದೆ ವರದಿ ಬಂದ ಮೇಲೆ ನೋಡೊಣ ಎಂದು ಹೇಳುವ ಸಾಧ್ಯತೆ ಅಧಿಕವಾಗಿದೆ ನಾವು ಅದಕ್ಕೆ ಅವಕಾಶ ನೀಡುವುದು ಬೇಡ ಯಾಕೆಂದರೆ ಮುಖ್ಯಮಂತ್ರಿ ಹಿಂದುಗಡೆ ಯಾವ ಕುತಂತ್ರಿ ಕೈವಾಡ ಇದೆ ಎಂದು ನಮಗೆ ಗೊತ್ತೆ ಇದೆ ಬಿಡಿಸಿ ಹೇಳುವ ಅಗತ್ಯವಿಲ್ಲ ಇನ್ನೂ ಮುಂದೆ ಆ ಕುತಂತ್ರಿ ಆಟ ನಡೆಯಬಾರದೆಂದರೆ ನಾವು ದೊಡ್ಡ ಮಟ್ಟದಲ್ಲಿ ಹೊರಾಟ ರೂಪಿಸಲೇಬೇಕು ಅದೊಂದೆ ತಕ್ಷಣ ಇರುವ ಪರಿಹಾರ...
ಕಾದು ಕುಳಿತು ನೋಡುವ ಸಮಯವಲ್ಲ ಇದು ಕಾದಾಟ ಮಾಡಿ ಗೆಲ್ಲುವ ಸಮಯ ಇದು...
ಏಳಿ ಎದ್ದೇಳಿ ಕನ್ನಡಕ್ಕಾಗಿ ಕನ್ನಡಿಗರಿಗಾಗಿ ಹೊರಾಡೋಣ... ನಮ್ಮ ಹಕ್ಕು ನಾವು ಪಡೆಯೊಣ..@AKSSAofficial@secretarykpsc@shalinirajnish@siddaramaiah@DKShivakumar@PriyankKharge@INCKarnataka@tv9kannada@AsianetNewsSN@NewsFirstKan@publictvnews@BJPKarnataka@RAshokaBJP@BYVijayendra@INCIndia@INCKarnataka@BJPindia__@BJPKarnataka@BasanagoudaBJP@KannadaPrabha@Vijayavani_Digi
ಅಧಿವೇಶನದಲ್ಲಿ ನಾವು ಆಯೋಗದಲ್ಲಿ ಬದಲಾವಣೆಗಳು ಆಗಬೇಕಾಗಿದೆ, ವೃತ್ತಿಪರತೆ ಬರಬೇಕಾಗಿದೆ, ಭ್ರಷ್ಟರನ್ನು ಹೊರಗಿಟ್ಟು ಕೆಲಸ ಮಾಡಬೇಕಾಗಿದೆ ಎಂದು ಮನವಿ ಮಾಡಿದರೂ ಸಹ ಆಯೋಗಕ್ಕೆ ದೃಷ್ಟಿ ಹಾಗೂ ಶ್ರವಣ ದೋಷ ಇದ್ದಂತೆ ಭಾಸವಾಗುತ್ತದೆ.
ಆಯೋಗ ಮತ್ತೊಮ್ಮೆ ತನ್ನ ಹಳೆ ಚಾಳಿಯನ್ನು ಮುಂದುವರೆಸಿ ಭಾಷಾಂತರ ತಪ್ಪುಗಳನ್ನು ಮಾಡಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರತಿ ನಿಮಿಷ/ಸೆಕೆಂಡು ಸಹ ಪ್ರಮುಖವಾಗಿರುತ್ತದೆ, ಪರೀಕ್ಷಾರ್ಥಿಗಳು ಗೊಂದಲ ಪರಿಹಾರದಲ್ಲೇ ಸಮಯ ಕಳೆದರೆ ಅವರಿಗೆ ಉತ್ತಮ ಅಂಕ ಬರಲು ಸಾಧ್ಯವೇ ಇಲ್ಲ.
ಅಧಿವೇಶನದಲ್ಲಿ ಅಷ್ಟು ಸಲಹೆ, ಸೂಚನೆ, ಚರ್ಚೆ, ನಡೆದರೂ ಸಹ ಆಯೋಗ ಮಾತ್ರ Old Habits Die Hard ಅನ್ನುವ ಹಾಗೆ ತನ್ನ ಹಳೆ ಚಾಳಿಯನ್ನು ಮುಂದುವರೆಸಿದೆ.
ಈ ಪ್ರಶ್ನೆ ಪತ್ರಿಕೆ ಸಿದ್ದಪಡಿಸಿದ ಅಧಿಕಾರಿ/ಸಿಬ್ಬಂದಿಯನ್ನು ಸರ್ಕಾರ ಕೂಡಲೇ ಅಮಾನತಿನಲ್ಲಿಟ್ಟು ಸರ್ಕಾರ ಆಯೋಗದಲ್ಲಿ ಯಾವುದೇ ಅಶಿಸ್ತಿಗೆ, ತಪ್ಪು ಒಪ್ಪುಗಳನ್ನು ಸಹಿಸುವುದಿಲ್ಲ ಎಂಬ ಮೇಲ್ಪಂಕ್ತಿಯನ್ನು ಹಾಕಿಕೊಡಲಿ.
@CMofKarnataka I @AKSSAofficial I @HosadiganthaWeb I @Vijayavani_Digi I #KPSCReforms I
ಇಂದು AKSSA ಸಂಘಟನೆಯು ನಿವೃತ್ತ ನ್ಯಾಯಮೂರ್ತಿ ಹಾಗೂ ಒಳ ಮೀಸಲಾತಿ ಆಯೋಗದ ಏಕ ಪೀಠ ಸದಸ್ಯರಾದ ಹೆಚ್ ಎನ್ ನಾಗಮೋಹನದಾಸ್ ಅವರ ಒಳ ಮೀಸಲಾತಿ ಕಚೇರಿಗೆ ಬೇಟಿ ನೀಡಿ ಆದಷ್ಟು ಬೇಗ ಒಳ ಮೀಸಲಾತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕೆಂದು ಮನವಿ ಮಾಡಿದೆವು, ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮಾನ್ಯರು ಪ್ರಸ್ತುತ ಆಯೋಗದ ಮುಂದಿರುವ ವಿವಿಧ ಪಂಗಡಗಳ ನಡುವಿನ ಒಳ ಮೀಸಲಾತಿ ಹಂಚಿಕೆ ವಿಚಾರದಲ್ಲಿ ಆಯೋಗದ ಮುಂದಿರುವ ಸವಾಲುಗಳನ್ನು ಬಹಳ ಸಂಕ್ಷಿಪ್ತವಾಗಿ ನಮಗೆ ವಿವರಿಸಿದರು ಹಾಗೂ ಸಮಾಜದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಉಪ ಜಾತಿಗಳ ಕಟ್ಟ ಕಡೆಯ ವ್ಯಕ್ತಿಗೂ ಅನ್ಯಾಯವಾದಂತೆ ಎಲ್ಲರಿಗೂ ಸಮಾನ ನ್ಯಾಯವನ್ನು ನೀಡುವ ಸಲುವಾಗಿ ಸಮಯ ಬೇಕೆಂದು ತಿಳಿಸಿದರು.
ಮಾನ್ಯ ಹೆಚ್ ಎನ್ ನಾಗಮೋಹನ ದಾಸ್ ಅವರು ಸಮಾಜದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಎಲ್ಲಾ ಸಮುದಾಯದ ಮೇಲೆ ಹೊಂದಿರುವ ಕಾಳಜಿ ನಮಗೆ ನಿಜಕ್ಕೂ ಸಂತೋಷವನ್ನುಂಟು ಮಾಡಿದ್ದು, ಆದರೆ ನಾವು ಪ್ರಸ್ತುತ ಕರ್ನಾಟಕದ ಯುವ ಜನತೆ ಸರ್ಕಾರಿ ನೇಮಕಾತಿ ಅಧಿಸೂಚನೆಗಾಗಿ ಹಲವು ವರ್ಷಗಳಿಂದ ಬಕಪಕ್ಷಿಗಳಂತೆ ಕಾಯುತ್ತಿರುವುದು ಹಾಗೂ ಸರ್ಕಾರ ಒಳ ಮೀಸಲಾತಿ ಆಯೋಗದ ಕಾರಣವನ್ನು ಇಟ್ಟುಕೊಂಡು ನೇಮಕಾತಿ ಮಾಡಲು ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ಹಾಗೂ ಇನ್ನೂ ತಡವಾದರೆ ವಿದ್ಯಾರ್ಥಿಗಳು ವಯೋಮಿತಿ ಕಳೆದುಕೊಳ್ಳುವ ಆತಂಕವನ್ನು ವ್ಯಕ್ತಪಡಿಸಿದೆವು,
ಇದಕ್ಕೆ ಸ್ಪಂದಿಸಿದ ಅವರು ನೇಮಕಾತಿ ಅಧಿಸೂಚನೆ ಹೊರಡಿಸುವುದರಿಂದ ಯಾವುದೇ ಸಮಸ್ಯೆ ಇಲ್ಲ ಈ ಕುರಿತು ನಾವು ಮಾನ್ಯ ಮುಖ್ಯಮಂತ್ರಿಗಳಿಗೂ ಮೌಖಿಕವಾಗಿ ತಿಳಿಸಿದ್ದೇನೆ ಎಂದು ತಿಳಿಸಿದರು ಒಟ್ಟಾರೆಯಾಗಿ ಯುವಜನತೆ ಹಾಗೂ ಸಮಾಜದ ಪರಿಶಿಷ್ಟರ ಪರವಾಗಿ ಇರುವ ನಿಮಗೆ ಹೃದಯಪೂರ್ವಕ ಕೃತಜ್ಞತೆಗಳು.
ಒಂದು ತಿಂಗಳ ಒಳಗಾಗಿ ಸರ್ಕಾರದ @siddaramaiah ವಿವಿಧ ಇಲಾಖೆಗಳಲ್ಲಿ ನೇಮಕಾತಿ ನಡೆಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದೆಂದು ಸರ್ಕಾರಕ್ಕೆ AKSSA ಸಂಘಟನೆ ಒತ್ತಾಯಿಸುತ್ತದೆ.
(@AKSSAofficial ) @secretarykpsc@shalinirajnish@siddaramaiah@DKShivakumar@PriyankKharge@INCKarnataka@tv9kannada@AsianetNewsSN@NewsFirstKan@publictvnews@BJPKarnataka@RAshokaBJP@BYVijayendra@INCIndia@INCKarnataka@BJPindia__@BJPKarnataka@BasanagoudaBJP@KannadaPrabha@Vijayavani_Digi
ವಿಷಯ, ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಪ್ರಮಾಣ ನಿಗದಿಪಡಿಸಲು ರಚನೆಯಾಗಿರುವ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ನೇತೃತ್ವದ ಆಯೋಗವು ಆದಷ್ಟು ಬೇಗ ಸರ್ಕಾರಕ್ಕೆ @siddaramaiah ವರದಿ ಸಲ್ಲಿಸಬೇಕೆಂದು ಕೋರಿ.
ಮಾನ್ಯರೇ,
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಪ್ರಮಾಣ ನಿಗದಿಪಡಿಸಲು ಎಚ್ ಎನ್ ನಾಗಮೋಹನದಾಸ್ ನೇತೃತ್ವದ ಆಯೋಗವನ್ನು ರಚಿಸಿರುವುದು *ಪ್ರಶಂಸನಿಯಾ*, ಆದರೆ ಹಲವಾರು ವರ್ಷಗಳಿಂದ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಯಾವುದೇ ರೀತಿಯ ನೇಮಕಾತಿಗಳು ಕೂಡ ನಡೆದಿಲ್ಲ ಇದರಿಂದ ರಾಜ್ಯದಲ್ಲಿ ಲಕ್ಷಾಂತರ ಯುವಕ ಯುವತಿಯರು ಬಕಪಕ್ಷಿಯಂತೆ ಸರ್ಕಾರದ ನೇಮಕಾತಿ ಅಧಿಸೂಚನೆಗಾಗಿ ಕಾಯುತ್ತಿದ್ದಾರೆ, ಇನ್ನೊಂದೆಡೆ ನೇಮಕಾತಿ ಅಧಿಸೂಚನೆಯು ವಿಳಂಬಗೊಂಡರೆ ವಯೋಮಿತಿಯ ಅರ್ಹತೆಯನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ ಆದ್ದರಿಂದ ಮಾನ್ಯರು ಪರಿಶಿಷ್ಟ ಜಾತಿಗಳ ಯಾವುದೇ ಸಮುದಾಯಕ್ಕೆ ಅನ್ಯಾಯವಾಗದಂತೆ ಒಳ ಮೀಸಲಾತಿ ವರ್ಗೀಕರಣ ಮಾಡಿ, *ಉದ್ಯೋಗಾಂಕಾಕ್ಷಿಗಳಿಗೆ* ಸಮಸ್ಯೆ ಆಗದಂತೆ ನಿಗದಿತ ಗಡುವಿನೊಳಗೆ ಆಯೋಗವು ಸರ್ಕಾರಕ್ಕೆ ವರದಿ ಸಲ್ಲಿಸಬೇಕೆಂದು ಕರ್ನಾಟಕದ ಲಕ್ಷಾಂತರ *ಉದ್ಯೋಗಾಂಕಾಕ್ಷಿಗಳ* ಪರವಾಗಿ ಮನವಿ *ಮಾಡುತಿದ್ದೇವೆ*, ಹಾಗೂ ಸರ್ಕಾರ ನೀಡಿದ್ದ ಎರಡು ತಿಂಗಳ ಸಮಯ ಮುಕ್ತಾಯವಾಗಿದ್ದು ಆಯೋಗವು ಸರ್ಕಾರಕ್ಕೆ ಯಾವುದೇ ರೀತಿಯ ವರದಿ ಸಲ್ಲಿಸಿಲ್ಲ ಇದರಿಂದ ಸರ್ಕಾರಿ *ಉದ್ಯೋಗಕಾಂಕ್ಷಿಗಳಲ್ಲಿ* ಆತಂಕ *ಉಂಟುಮಾಡಿದ್ದೂ* ಮಾನ್ಯರು ಇದರ ಬಗ್ಗೆ ಗಮನ ಹರಿಸಿ ವಿದ್ಯಾರ್ಥಿಗಳ ಪರವಾಗಿ ಹಾಗೂ ಪರಿಶಿಷ್ಟ ಜಾತಿ ಹಾಗೂ *ಪರಿಶೀಷ್ಟ* ಪಂಗಡದ ಒಳ ಪಂಗಡಗಳ ಜನರ ಧ್ವನಿಯಾಗಿ ಆದಷ್ಟು ಬೇಗ ಸರ್ಕಾರಕ್ಕೆ ವರದಿ ಸಲ್ಲಿಸಬೇಕೆಂದು ಎಲ್ಲ ವಿದ್ಯಾರ್ಥಿಗಳ ಪರವಾಗಿ AKSSA ಸಂಘಟನೆಯು ಮನವಿ *ಮಾಡಿಕೊಳ್ಳುತೇವೆ* .
ಧನ್ಯವಾದಗಳೊಂದಿಗೆ.
(@AKSSAofficial ) @secretarykpsc@shalinirajnish@siddaramaiah@DKShivakumar@PriyankKharge@INCKarnataka@tv9kannada@AsianetNewsSN@NewsFirstKan@publictvnews@BJPKarnataka@RAshokaBJP@BYVijayendra@INCIndia@INCKarnataka@BJPindia__@BJPKarnataka@BasanagoudaBJP@KannadaPrabha@Vijayavani_Digi
ಪೀಠ: ನಾವು ಏನು ಮಾಡಿದರೂ ನಡೆದು ಹೋಗುತ್ತದೆ ಎಂಬ ನಡತೆಯನ್ನು ಬಿಡಬೇಕು. ಅಲೆಕ್ಸಾಂಡರ್ನಂಥವನು ಕಾಲಗರ್ಭದಲ್ಲಿ ಮುಗಿದು ಹೋಗಿದ್ದಾನೆ. ನಮಗೂ ಹೇಗೆ ನಡೆದುಕೊಳ್ಳಬೇಕು ಎಂಬುದು ಗೊತ್ತಿದೆ.
ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಮೂಲಭೂತ ಹಕ್ಕುಗಳನ್ನು ಸಹಾ ಸಂರಕ್ಷಸಿ ಮಾನ್ಯ ಕಾನೂನು ಸಚಿವರೇ, ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆ ಸರ್ಕಾರ ತೋರುತ್ತಿರುವ ಈ ತಾತ್ಸಾರ ಧೋರಣೆ ಸರಿಯಲ್ಲ,ಕೆಟ್ಟ ವ್ಯವಸ್ಥೆಯಿಂದಲೆ ದೋಷಪೂರಿತ ಪರೀಕ್ಷೆಗಳು ನಡೆದಿವೆ, ಮರು ಅಧಿಸೂಚನೆಗೆ ಹೆಚ್ಚಿನ ಗಮನ ಹರಿಸಿ @HKPatilINC@siddaramaiah