ರೈತರಿಂದ ಯುವಕರವರೆಗೆ, ಕೈಗಾರಿಕೆಯಿಂದ ಶಿಕ್ಷಣದವರೆಗೆ ರಾಜ್ಯದ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ, ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ.
ರಾಜ್ಯದ ಬಡ ರೈತರಿಗೆ ಉಚಿತ ಉಳುಮೆ ಸೌಲಭ್ಯ ಕಲ್ಪಿಸುವ ಸಿಎಂ ನೇಗಿಲ ಯೋಜನೆ, ರೈತರ ಆರ್ಥಿಕ ಸಬಲೀಕರಣಕ್ಕೆ ʻತೇಗ ಸಿರಿʼ, ಕಾರ್ಮಿಕರಿಗೆ ಅವರು ಕೆಲಸ ಮಾಡುವ ಜಾಗದಲ್ಲೇ ವಸತಿ ಕಲ್ಪಿಸುವ ʻಶ್ರಮಿಕ್ ನಿವಾಸʼ, ಯುವ ಸಬಲೀಕರಣಕ್ಕಾಗಿ ಭಾರತ್ ಜೋಡೋ ಸಂಘಗಳ ಸ್ಥಾಪನೆ, ರಾಜ್ಯದಲ್ಲಿ ಹೂಡಿಕೆ ಆಕರ್ಷಿಸಲು ʻಜವಳಿ ಮತ್ತು ನೂತನ ಸಿದ್ಧ ಉಡುಪು ನೀತಿ…ʼ ಸೇರಿದಂತೆ ಹಲವು ಅಭಿವೃದ್ಧಿ ಪರ ಯೋಜನೆಗಳು ಸಾಕಾರಗೊಳ್ಳಲಿವೆ.
ಸಮಗ್ರ, ಸಮೃದ್ಧ ಕರ್ನಾಟಕ ನಮ್ಮ ಗುರಿ.
ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸನ್ನು ನನಸಾಗಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಕಾಂಗ್ರೆಸ್ ಸರ್ಕಾರ ಚಾಲನೆ ನೀಡಿದೆ.
ʻವಿದೇಶ ಅಧ್ಯಯನ -2026ʼ ಎಂಬ ಯೋಜನೆ ಆರಂಭಿಸಿರುವ ಸರ್ಕಾರ, ಈ ಯೋಜನೆಯಡಿ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಜಾಗತಿಕ ಮಟ್ಟದ ಶಿಕ್ಷಣ ಪಡೆಯಲು 2 ಕೋಟಿ ರೂ.ವರೆಗೆ ಶಿಕ್ಷಣ ಸಾಲ ಸೌಲಭ್ಯ ಒದಗಿಸಲಿದೆ.
3,145 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದೇಶಗಳಲ್ಲಿ ಕಲಿಕೆಗೆ ಅವಕಾಶ ಕಲ್ಪಿಸಲಾಗಿದ್ದು, 80ಕ್ಕೂ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ 300ಕ್ಕೂ ಹೆಚ್ಚು ವಿಷಯಗಳ ಅಧ್ಯಯನ ಮಾಡುವ ಸದವಕಾಶ ಈ ಯೋಜನೆಯಿಂದ ದೊರೆಯಲಿದೆ.
ಬಿಪಿಎಲ್ ಕಾರ್ಡ್ ಹೊಂದಿರುವ ದಂಪತಿಗೆ ಆರೋಗ್ಯ ಕರ್ನಾಟಕ ಯೋಜನೆಯಡಿ ಕಾಂಗ್ರೆಸ್ ಸರ್ಕಾರ ಉಚಿತ ಐವಿಎಫ್ (IVF) ಸೌಲಭ್ಯ ಕಲ್ಪಿಸಿದೆ.
ಈ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದ, ಮಕ್ಕಳಿಲ್ಲದ ದಂಪತಿ ಉಚಿತವಾಗಿ ಕೃತಕ ಗರ್ಭದಾರಣೆ ಚಿಕಿತ್ಸೆ ಪಡೆಯಬಹುದು. 3 IVF ಪ್ರಯತ್ನಗಳಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲು ಅನುಮೋದನೆ ನೀಡಿದ್ದು, ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ.
ಹಸಿವು ಮುಕ್ತ ಕರ್ನಾಟಕದ ಕನಸು ಕಂಡು, ಅನ್ನಭಾಗ್ಯ ಯೋಜನೆ ಜಾರಿಗೆ ತಂದು, ಅನ್ನರಾಮಯ್ಯ ಎಂದೇ ಖ್ಯಾತಿ ಪಡೆದ, ಭಾಗ್ಯಗಳ ಸರದಾರರು ಶ್ರೀ @Siddaramaiah ಅವರಿಗೆ ಜನ್ಮದಿನದ ಶುಭಾಶಯಗಳು.
ಎಸ್ಐಆರ್ ನಡೆಯುತ್ತಿರುವುದು ಇದು ಮೊದಲ ಬಾರಿಯಲ್ಲ, 1950ರಲ್ಲಿ ಚುನಾವಣಾ ಆಯೋಗ ರಚನೆಯಾಗಿ, 1952 ರಲ್ಲಿ ಪ್ರಥಮ ಚುನಾವಣೆ ನಡೆಯಿತು. ಆಗಿಂದ್ದಾಗ ಆಯೋಗವು ಮತದಾರರ ಪಟ್ಟಿ ಪರಿಷ್ಕರಣೆ ಮಾಡುತ್ತಾ ಬಂದಿದೆ, ಆದರೆ ಅರ್ಹ ಮತದಾರರನ್ನು ಕೈಬಿಡುವ ಅಧಿಕಾರ ಆಯೋಗಕ್ಕೆ ಇಲ್ಲ. ಆಯೋಗ ಸಂವಿಧಾನಬದ್ಧವಾಗಿಯೇ ಕೆಲಸ ಮಾಡಬೇಕು. ಇತ್ತೀಚಿನ ವರ್ಷಗಳಲ್ಲಿ ಅಂದರೆ 2014ರ ನಂತರ "ಮತ ದ್ರೋಹ" ಮಾಡಲಾಗುತ್ತಿದೆ, ಜನರ ಬಹುಮತದ ಮೂಲಕ ಗೆದ್ದವರು ಮಾತ್ರ ಅಧಿಕಾರ ನಡೆಸಲು ಯೋಗ್ಯರು. ಮೋಸ ಮಾಡಿದವರಲ್ಲ.
ಇಡೀ ದೇಶದ 141 ಕೋಟಿ ಜನಸಂಖ್ಯೆಯಲ್ಲಿ 96 ಕೋಟಿ ಮತದಾರರಿದ್ದಾರೆ. ನಮ್ಮಲ್ಲಿ ಬಹಳಷ್ಟು ಜನ 1,000 ದಿಂದ 5,000 ಮತಗಳ ಅಂತರದಿಂದ ಗೆದ್ದವರು ಇದ್ದಾರೆ. ಇಂತಹ ಕಡೆ ನಾಲ್ಕೈದು ಸಾವಿರ ಮತಗಳನ್ನು ಕಿತ್ತು ಹಾಕಿದರೆ ನಮ್ಮವರ ಗೆಲುವು ಕಷ್ಟ. ಇದಕ್ಕಾಗಿ ಪಕ್ಷ ಇಷ್ಟು ದೊಡ್ಡ ಮಟ್ಟದಲ್ಲಿ ಜಾಗೃತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಬಡವರು, ರೈತರು, ಕಾರ್ಮಿಕರು, ಅಲ್ಪಸಂಖ್ಯಾತರ ಮತಗಳನ್ನು ಡಿಲೀಟ್ ಮಾಡುತ್ತಾರೆ. ಈ ಜನರೇ ಬಿಜೆಪಿ ಪಕ್ಷದ ಟಾರ್ಗೆಟ್.
ದೇಶದಲ್ಲಿ ಬಿಜೆಪಿ ಪಕ್ಷ ಕೇವಲ 36% ಮತ ಪಡೆದಿದೆ. 64% ಜನ ಬಿಜೆಪಿ ವಿರುದ್ಧವಾಗಿ ಮತ ಹಾಕಿದ್ದಾರೆ. ಈ 64% ನಲ್ಲಿ 10% ಮತಗಳನ್ನು ಕೈಬಿಟ್ಟರೆ ಏನಾಗುತ್ತದೆ ಎಂದು ಊಹಿಸುವುದು ಕಷ್ಟ. ನಮ್ಮ ಪಕ್ಷದ ಶಾಸಕರು, ಮುಖಂಡರು, ಕಾರ್ಯಕರ್ತರು ಎಸ್ಐಆರ್ ಕಾರ್ಯ ನಡೆಯುವ ಜೂನ್ 30 ರಿಂದ ಜುಲೈ 29 ರ ವರೆಗೆ ಒಂದು ತಿಂಗಳ ಕಾಲ ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಈಗ ದೇಶದಲ್ಲಿ ಸಂವಿಧಾನಬದ್ಧವಾದ ಚುನಾವಣಾ ಆಯೋಗ ಇಲ್ಲ ಎನ್ನುವುದನ್ನು ಮರೆಯಬೇಡಿ. 2019ರಲ್ಲಿ ಬಿಜೆಪಿಯ 303 ಜನ ಗೆದ್ದಿದ್ದರು, ಈಗ 2024ರಲ್ಲಿ 240ಕ್ಕೆ ಇಳಿದಿದ್ದಾರೆ. ಇದಕ್ಕೆ ಬೆಲೆಯೇರಿಕೆ, ವಚನ ಭ್ರಷ್ಟತೆ, ನಿರುದ್ಯೋಗ ಕಾರಣ. ಈ ಫಲಿತಾಂಶವನ್ನು ಮುಂದಿನ ದಿನಗಳಲ್ಲಿ ಎಸ್ಐಆರ್ ಮೂಲಕ ಬದಲಾಯಿಸಲು ಹೊರಟಿದ್ದಾರೆ.
ಬಿಜೆಪಿಯವರು ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿಗಳು. ಅವರಿಗೆ ಸರ್ವಾಧಿಕಾರದಲ್ಲಿ ಮಾತ್ರ ನಂಬಿಕೆ. ಅವರದ್ದು ಒನ್ ನೇಷನ್, ಒನ್ ಎಲೆಕ್ಷನ್ ನೀತಿ. ಹಿಂದುತ್ವದ ಮಾತಾಡುವವರು ಜಾತಿ, ವರ್ಣಾಶ್ರಮದ ಹೆಸರಲ್ಲಿ ಜನರನ್ನು ಶೋಷಣೆ ಮಾಡಿಲ್ಲವೇ? ಶೂದ್ರ ಸಮುದಾಯ ಬಿಜೆಪಿ ಜೊತೆ ಹೋಗಲೇಬಾರದು. ಸಾಮಾಜಿಕ ನ್ಯಾಯ ಬರಬಾರದು, ಬಂದರೆ ಶೋಷಣೆಗೆ ಅವಕಾಶ ಇಲ್ಲ ಎಂಬುದನ್ನು ಅವರು ಅರಿತಿದ್ದಾರೆ. ಬಿಜೆಪಿ ಪಕ್ಷದವರು ಸುಳ್ಳನ್ನು ಸೃಷ್ಟಿಸಿ, ಮಾರಾಟ ಮಾಡಿ, ಅದನ್ನೇ ಸತ್ಯ ಮಾಡುತ್ತಾರೆ.
13 ರಾಜ್ಯಗಳಲ್ಲಿ, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಆಗಿದೆ, ಹರಿಯಾಣ, ಪಶ್ಚಿಮ ಬಂಗಾಳ, ಮಹಾರಾಷ್ಟ್ರದಲ್ಲಿ ಫಲಿತಾಂಶ ಏನಾಗಿದೆ? ಕೇರಳದಲ್ಲಿ ಇವರ ಆಟ ನಡೆಯಲಿಲ್ಲ ಅಷ್ಟೆ. ಬಿಜೆಪಿ ಎರಡು ಬಾರಿಯೂ ಆಪರೇಷನ್ ಕಮಲದ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದು. ಅವರು ಅಧಿಕಾರದಲ್ಲಿ ಉಳಿಯಲು ಏನು ಮಾಡಲು ಹೇಸದವರು. ಆರ್ಎಸ್ಎಸ್ ನ ಸಂಸ್ಥಾಪಕ ಹೆಡ್ಗೆವಾರ್ ಅವರು ತಮ್ಮ ಆಪ್ತರನ್ನು ಇಟಲಿ, ಜರ್ಮನಿಗೆ ಕಳಿಸಿ ಅಲ್ಲಿ ಸರ್ವಾಧಿಕಾರಿ ಹೇಗೆ ನಡೆಯುತ್ತದೆ ಎಂದು ಅಧ್ಯಯನ ಮಾಡಲು ಬಿಟ್ಟಿದ್ದರು. ಅಲ್ಲಿಂದಲೇ ಇವರ ಸರ್ವಾಧಿಕಾರದ ವ್ಯಾಮೋಹ ಹುಟ್ಟಿದ್ದು. ನೀವು ಎಚ್ಚರ ತಪ್ಪಿದರೆ ನಿಮ್ಮನ್ನು ಮುಗಿಸ್ತಾರೆ. ಅದಕ್ಕಾಗಿ ನಮ್ಮ ಎಲ್ಲಾ ಹಾಲಿ, ಮಾಜಿ ಶಾಸಕರು, ಸಂಸದರು, ಸೋತ ಅಭ್ಯರ್ಥಿಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು.
ಜುಲೈ ತಿಂಗಳು ಬಹಳ ಮಹತ್ವದ ತಿಂಗಳು. ನೀವು ಬಿಎಲ್ಒ ಗಳ ಜೊತೆ ಸಮನ್ವಯ ಮಾಡಿಕೊಂಡು ಅವರ ಜೊತೆ ಮನೆ ಮನೆಗೆ ತೆರಳಬೇಕು. ಜೊತೆಗೆ ಕನಿಷ್ಠ ಪಕ್ಷ ಇಬ್ಬರು ಸ್ಥಳೀಯ ಮತದಾರರನ್ನು ಪ್ರತಿ ಬೂತ್ಗೆ ಆಯ್ಕೆ ಮಾಡಬೇಕು. ಯಾರಿಗೆಲ್ಲಾ ಶಾಸಕರಾಗುವ, ಸಂಸದರಾಗುವ ಆಸೆ ಇದೆ, ಅವರು ಪ್ರಜಾಪ್ರಭುತ್ವ, ಸಂವಿಧಾನ ಮತ್ತು ದೇಶವನ್ನು ಉಳಿಸಲು ಈ ಪ್ರಯತ್ನ ಮಾಡಬೇಕು. ಬಿಜೆಪಿಯ, ಮೋದಿಯವರ ಕುತಂತ್ರವನ್ನು ಬಯಲು ಮಾಡಲು ಕೆಲಸ ಮಾಡಬೇಕು. ದೇಶದಲ್ಲಿ ಒಮ್ಮೆ ಪ್ರಜಾಪ್ರಭುತ್ವ ಹೋದರೆ ಮತ್ತೆ ಗುಲಾಮಗಿರಿ ಬರುತ್ತದೆ ಎಚ್ಚರ.
ಈ ಸಂಘ ಪರಿವಾರದವರು ಸ್ವಾತಂತ್ರ್ಯ ಪೂರ್ವದಲ್ಲಿ ಯಾರ ಸಂಪರ್ಕದಲ್ಲಿದ್ದರು ಗೊತ್ತಾ? ಹೆಡ್ಗೆವಾರ್, ಗೋಲ್ವಾಲ್ಕರ್ ಇವರೆಲ್ಲ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದಾರ? ಸಾವರ್ಕರ್ ಅನ್ನು ವೈಭವೀಕರಿಸುತ್ತಾರೆ, ಅವರು ಕ್ಷಮಾಪಣೆ ಕೇಳಿ ಜೈಲಿಂದ ಹೊರಬಂದವರು. ಇವರ ಹಿಂಬಾಲಕರು ದೇಶ ಉಳಿಸ್ತಾರ? ನೀವು ಜಾಗೃತರಾಗದೆ ಹೋದರೆ ನಿಮ್ಮ ರಾಜಕೀಯ ಬದುಕಿನ ಮಾರಣಹೋಮ ನಿಶ್ಚಿತ. ನನ್ನ ರಾಜಕೀಯ ಮುಗಿಯುತ್ತಾ ಬಂದಿದೆ, ಆದರೆ ನೀವು ಇನ್ನೂ ರಾಜಕೀಯ ಮಾಡಬೇಕಾದವರು. ಹಾಗಾಗಿ ನೀವು ಮುಂದಿನ ಒಂದು ತಿಂಗಳು ಎಚ್ಚರಿಕೆ ವಹಿಸಲೇಬೇಕು.
ನಿಮಗೆ ಅವಕಾಶ ಇದೆ, ಈ ಅವಕಾಶದಿಂದ ವಂಚಿತರಾದರೆ ಅಪಾಯ ಕಟ್ಟಿಟ್ಟಬುತ್ತಿ. ಎನಮರೇಷನ್ ಫಾರ್ಮ್ ನಿಮಗೆ ಕೊಡುತ್ತಾರೆ, ಅದನ್ನು ಸರಿಯಾಗಿ ಭರ್ತಿ ಮಾಡಿ, ಸ್ವೀಕೃತಿ ದೃಢೀಕರಣ ಪಡೆಯಿರಿ. ಇದೇ ಬಹಳಾ ಮುಖ್ಯವಾದುದ್ದು. ಇದಕ್ಕಾಗಿ ಸುದರ್ಶನ್ ಅವರು ಇಡೀ ರಾಜ್ಯ ಸುತ್ತಿ ಜನಜಾಗೃತಿ ಕಾರ್ಯ ಮಾಡುತ್ತಿದ್ದಾರೆ. ಸಂವಿಧಾನ, ದೇಶ ಉಳಿಸುವುದು ಕಾಂಗ್ರೆಸ್ ಮಾತ್ರ. ಮುಂದಿನ ಒಂದು ತಿಂಗಳು ಎಲ್ಲ ಕೆಲಸ ಬಿಟ್ಟು ಎಸ್ಐಆರ್ ಮೇಲೆ ನಿಗಾ ಇಡುವ ಕೆಲಸ ಮಾಡಬೇಕು ಎಂದು ತಮ್ಮಲ್ಲಿ ಕೈಮುಗಿದು ಪ್ರಾರ್ಥಿಸುತ್ತೇನೆ. ಒಬ್ಬನೇ ಒಬ್ಬ ಅರ್ಹ ಮತದಾರ ಪಟ್ಟಿಯಿಂದ ಬಿಟ್ಟುಹೋಗಬಾರದು. ಹಾಗೆ ನೀವು ಕೆಲಸ ಮಾಡಬೇಕು.
- ಮೈಸೂರಿನಲ್ಲಿ ನಡೆದ ಎಸ್ಐಆರ್ ಜಾಗೃತಿ ಸಮಾವೇಶದಲ್ಲಿ ನನ್ನ ಮಾತುಗಳು
ರಾಜಕೀಯ ಅಧಿಕಾರ ಎನ್ನುವುದು ಜನರ ಸೇವೆ ಮಾಡಲು ಒದಗಿಬಂದ ಅವಕಾಶದ ಭಾಗ್ಯ ಎಂದು ನಾನು ತಿಳಿದುಕೊಂಡವನು.
ಮುಖ್ಯಮಂತ್ರಿಯ ಪದತ್ಯಾಗ ಮಾಡಿದ ದಿನದಿಂದ ಹೋದಲ್ಲಿ, ಬಂದಲ್ಲಿ ಜನತೆ ವ್ಯಕ್ತಪಡಿಸುತ್ತಿರುವ ಪ್ರೀತಿ, ಅಭಿಮಾನ, ವಿಶ್ವಾಸವನ್ನು ನೋಡಿದರೆ ಅಧಿಕಾರವನ್ನು ಬಳಸಿಕೊಂಡು ಜಗಮೆಚ್ಚುವ ರೀತಿಯಲ್ಲಿ ಜನಸೇವೆ ಮಾಡಿದ್ದೇನೆ ಎಂಬ ಸಾರ್ಥಕ್ಯದ ಭಾವನೆ ಮೂಡಿದೆ.
ಪದತ್ಯಾಗದ ನಂತರ ಇಂದು ಮೊದಲ ಬಾರಿಗೆ ಹುಟ್ಟೂರಿಗೆ ಆಗಮಿಸಿದಾಗ ಇದೇ ಅನುಭವವಾಯಿತು. ಸೇರಿದ್ದ ಜನಸಾಗರ, ಅವರು ತೋರಿದ ಪ್ರೀತಿ-ಅಭಿಮಾನ ಕಂಡು ಮೂಕವಿಸ್ಮಿತನಾಗಿದ್ದೇನೆ.
ಅಧಿಕಾರ, ಸಂಪತ್ತು ಕಾಲ ಬದಲಾದಂತೆ ಕಳೆದು ಹೋಗಬಹುದು, ಜನರ ಪ್ರೀತಿ ನಿರಂತರ. ನನ್ನ ಸಾರ್ವಜನಿಕ ಬದುಕಿನಲ್ಲಿ ನನ್ನನ್ನು ಪ್ರೀತಿಸುವ ದೊಡ್ಡ ಜನಸಮೂಹವನ್ನೇ ಸಂಪಾದಿಸಿದ್ದೇನೆ ಎನ್ನುವ ಹೆಮ್ಮೆ ನನ್ನದು.
ಮುಖ್ಯಮಂತ್ರಿಯ ಸಿಂಹಾಸನ ನಶ್ವರ, ಜನತೆಯ ಹೃದಯಸಿಂಹಾಸನ ಶಾಶ್ವತ. ಅಲ್ಲಿಂದ ನನ್ನನ್ನು ಯಾರೂ ಕೆಳಗಿಳಿಸಲಾರರು. ಅದು ನನ್ನ ಮತ್ತು ನಾನು ನಂಬುವ ಜನತಾ ಜನಾರ್ಧನರ ನಡುವಿನ ಶಾಶ್ವತ ಒಪ್ಪಂದ.
ನಾಡಿನ ಉದ್ದಗಲಕ್ಕೂ ಯಾವ ನಿರೀಕ್ಷೆಯೂ ಇಲ್ಲದೆ ಪ್ರೀತಿ - ಅಕ್ಕರೆ ತೋರುತ್ತಿರುವ ಪ್ರೀತಿಯ ಬಂಧುಗಳ ಸೇವೆಗೆ ನಾನು ಸದಾ ಬದ್ಧ. ಮತ್ತೊಮ್ಮೆ ಎಲ್ಲರಿಗೂ ನನ್ನ ತುಂಬು ಹೃದಯದ ಕೃತಜ್ಞತೆಗಳು.
Let us protect and preserve our natural heritage for future generations.I have signed this petition in support of safeguarding Great Nicobar Island.voice matters when itcomes to protecting our environment and ecological wealth.I urge everyone to join this effort and make heard.
This #WorldEnvironmentDay, I want to ask every young Indian one question:
What kind of India do you want to inherit?
One where rainforests have been bulldozed for casinos, coral reefs erased from maps, tribal communities pushed off their land, and the air we breathe turned into poison?
Or one where India’s natural heritage is protected, our tribal communities are safe, and progress works with nature - not against it.
Right now, the Modi government is destroying Great Nicobar Island. More than 1.5 crore trees, ancient coral reefs, irreplaceable rainforests are being destroyed - to profit one businessman.
This is your inheritance they are bulldozing. And only you can stop them.
Sign the petition. Tell the Modi government we choose #GreenOverGreed 🇮🇳
#NicobarMatters
https://t.co/bJOIt0tzgs
ನಾಡಿನ ಸಮಸ್ತ ಜನತೆಗೆ ಪವಿತ್ರ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು.
ಈ ಹಬ್ಬವು ಎಲ್ಲರ ಬದುಕಿನಲ್ಲಿ ಸ್ನೇಹ,ಸೌಹಾರ್ದತೆ, ಸಾಮರಸ್ಯ,ಸಹಬಾಳ್ವೆಯನ್ನು ಹೆಚ್ಚಿಸಲಿ.
#EidMubarak
ಕೆಂಪನಹಳ್ಳಿ ರಸೂಲ್ ಖಾನ್
ಜಿಲ್ಲಾಧ್ಯಕ್ಷರು
ಜಿಲ್ಲಾ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿ
ಚಿಕ್ಕಮಗಳೂರು
ಗೌರವಾನ್ವಿತ ರಾಜ್ಯಪಾಲರ ಭಾಷಣದ ಮೇಲೆ ವಿಧಾನ ಪರಿಷತ್ನಲ್ಲಿ ನಡೆದ ಚರ್ಚೆಗೆ ಮುಖ್ಯಮಂತ್ರಿ @siddaramaiah ಅವರ ಉತ್ತರ:
• ನಮ್ಮದು 11 ಜಿ ಎಕಾನಮಿ, ಬಿಜೆಪಿಯವರದು ಜಿ ಹುಜೂರ್ ನಮೂನೆಯದು.
• ಕೆಲಸದ ಹಕ್ಕು, ಶಿಕ್ಷಣದ ಹಕ್ಕು, ಆಹಾರದ ಹಕ್ಕುಗಳನ್ನು ನಮ್ಮ ಸಂವಿಧಾನದ ಮೂಲಭೂತ ಹಕ್ಕುಗಳು. ಕೆಲಸದ ಹಕ್ಕಿನ ಬಗ್ಗೆ ತಕರಾರು ಎತ್ತಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯನ್ನು ಕೇಂದ್ರವೇಕೆ ವಿರೋಧಿಸುತ್ತಿದೆ?
• ನಾನು ಯಾವುದೇ ಕಾರಣಕ್ಕೂ ಬಿಜೆಪಿ ಹಾಗೂ ಆರ್ ಎಸ್ ಎಸ್ ಸಿದ್ಧಾಂತವನ್ನು ಒಪ್ಪುವುದಿಲ್ಲ. ಏಕೆಂದರೆ ಆರ್ ಎಸ್ ಎಸ್ ನವರು ದಲಿತರು, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಮಹಿಳೆಯರನ್ನು ವಿರೋಧಿಸುತ್ತಾರೆ.
• ಸಂವಿಧಾನ ಎಲ್ಲಕ್ಕಿಂತ ದೊಡ್ಡದು. ಯಾವುದೇ ವಿರೋಧಗಳು ಸಂವಿಧಾನದ ಎಲ್ಲೆಯನ್ನು ಮೀರಬಾರದು. ನಾವುರಾಜ್ಯಪಾಲರ ಬಗ್ಗೆ ಅಗೌರವದಿಂದ ನಡೆದುಕೊಂಡಿಲ್ಲ. ನಾವು ಕೇಂದ್ರದ ವಿರುದ್ಧ ಸುಳ್ಳು ಅಪಾದನೆಗಳನ್ನು ಮಾಡಿಲ್ಲ.
• ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಅನ್ಯಾಯವಾಗುತ್ತಿದೆ ಎನ್ನುವುದು ನೂರಕ್ಕೆ ನೂರು ಸತ್ಯ. ಬೆಳೆಹಾನಿ ಹಾಗೂ ಮೂಲಸೌಲಭ್ಯಕ್ಕೆ ಅನುದಾನ ನೀಡಲು ರಾಜ್ಯದ ಮನವಿಯ ಹೊರತಾಗಿಯೂ, ಇನ್ನೂ ಕೇಂದ್ರ ಅನುದಾನ ನೀಡಿಲ್ಲ.
• ರಾಜ್ಯದ ಹಿತ ಕಾಪಾಡುವ ಸಲುವಾಗಿ ರಾಜ್ಯ ಸರ್ಕಾರದ ಕರ್ತವ್ಯವನ್ನು ನಾವು ನಿರ್ವಹಿಸುತ್ತಿದ್ದೇವೆ. ಕೇಂದ್ರ ತನ್ನ ಬಜೆಟ್ ನಲ್ಲಿ ಘೋಷಿಸಿದ ಅನುದಾನ ನೀಡಿಲ್ಲ. ಈ ಅನ್ಯಾಯವನ್ನು ಭಾಷಣದಲ್ಲಿ ಪ್ರಶ್ನಿಸಲಾಗಿದೆ.
• ರಾಜ್ಯಪಾಲರ ಭಾಷಣದ ಮೂಲಕ ಕೇಂದ್ರದ ಅನ್ಯಾಯವನ್ನು ಪ್ರಶ್ನಿಸಿ, ಜನರ ಹಿತವನ್ನು ಕಾಯಲೇಬೇಕಾಗುತ್ತದೆ.
• 2008 ರಲ್ಲಿಯೂ ಕರ್ನಾಟಕದ ರಾಜ್ಯಪಾಲರು ತಮ್ಮ ಭಾಷಣದಲ್ಲಿ ಯುಪಿಎ ಆಡಳಿತವಿದ್ದ ಕೇಂದ್ರ ಸರ್ಕಾರದ ಮೇಲೆ ರಾಜ್ಯ ಸರ್ಕಾರ ವಿವಿಧ ಯೋಜನೆಗಳಿಗೆ ಒತ್ತಾಯ ಹೇರಿತ್ತು.
•2012 ರಲ್ಲಿ ಅಂದಿನ ರಾಜ್ಯಪಾಲರಾಗಿದ್ದ ಹಂಸರಾಜ್ ಭಾರಧ್ವಾಜ್ ಅವರು ಯಡಿಯೂರಪ್ಪ ನೇತೃತ್ವದ ಸರ್ಕಾರವನ್ನು ವಜಾಗೊಳಿಸುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದರು, ಆದರೆ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಅದನ್ನು ನಿರಾಕರಿಸಿದ್ದರು. ನಾವು ರಾಜ್ಯದ, ದೇಶದ ಹಿತಕ್ಕಾಗಿ ಕೆಲಸ ಮಾಡುತ್ತೇವೆ.
• ಕೇಂದ್ರದ ಮನರೇಗಾ ಯೋಜನೆಯ ರದ್ದುಪಡಿಸುವಿಕೆಯನ್ನು ಪ್ರಶ್ನಿಸುತ್ತೇವೆ. ಮನರೇಗಾ ಅಡಿ ಕಾರ್ಮಿಕರ ಕೆಲಸದ ಹಕ್ಕುನ್ನು ಕಸಿಯಲಾಗಿದೆ.
• ಬಿಜೆಪಿ ಕಾಲದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ನಮ್ಮ ಸರ್ಕಾರದ ಅವಧಿಯಲ್ಲಿ ಅಪರಾಧಗಳ ಸಂಖ್ಯೆ ಇಳಿಮುಖವಾಗಿವೆ.
• ಉತ್ತರ ಕರ್ನಾಟಕದ ರಾಜ್ಯಗಳ ಅಭಿವೃದ್ಧಿಗೆ ಜಾರಿ ತರಲಾದ 371 ಜೆ ಕಾಯ್ದೆಯನ್ನು ಅಂದಿನ ಉಪಪ್ರಧಾನಿ ಎಲ್.ಕೆ.ಅದ್ವಾನಿ ವಿರೋಧಿಸಿದ್ದರು.
• ಎಸ್ ಸಿಎಸ್ ಪಿ ಟಿಎಸ್ ಪಿ ಕಾಯ್ದೆಯನ್ನು ಬೇರೆ ರಾಜ್ಯಗಳಲ್ಲಿ ಏಕೆ ಜಾರಿ ಮಾಡಲಿಲ್ಲ? ಕಾಯ್ದೆಯಡಿ ಐದು ವರ್ಷಗಳಲ್ಲಿ 88,000 ಕೋಟಿ ವೆಚ್ಚವಾಗಿದ್ದು, ಈ ವರ್ಷ 42,018 ಕೋಟಿ ಮೀಸಲಿಡಲಾಗಿದೆ.
• ಸುಪ್ರೀಂ ಕೋರ್ಟ್ ಬಡ್ತಿಯಲ್ಲಿ ಮೀಸಲಾತಿಯನ್ನು ರದ್ದು ಮಾಡಿದಾಗ ನಮ್ಮ ರಾಜ್ಯದಲ್ಲಿ ಇದನ್ನು ಜಾರಿ ಮಾಡಿದೆವು. ಬಡ್ಡಿಯಲ್ಲಿ ಮೀಸಲಾತಿ ನೀಡುವ ಏಕೈಕ ರಾಜ ಕರ್ನಾಟಕ. ಸರ್ಕಾರಿ ಗುತ್ತಿಗೆಯಲ್ಲಿ ಮೀಸಲಾತಿಯನ್ನು ನಮ್ಮ ಸರ್ಕಾರ ಜಾರಿ ಮಾಡಿದೆ.
ಆರೋಗ್ಯವಂತ ತಾಯಿಯಿಂದಲೇ ಆರೋಗ್ಯವಂತ ಕುಟುಂಬ
ಕನಕಪುರದಲ್ಲಿರುವ ತಾಯಿ - ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ, ಆಸ್ಪತ್ರೆಯಲ್ಲಿ ನೀಡಲಾಗುತ್ತಿರುವ ಸೇವೆಗಳ ಗುಣಮಟ್ಟ, ಸೌಲಭ್ಯಗಳು ಹಾಗೂ ಆಡಳಿತಾತ್ಮಕ ಕಾರ್ಯವೈಖರಿಯನ್ನು ಪರಿಶೀಲಿಸಿದೆ.
ಗರ್ಭಿಣಿಯರು ಮತ್ತು ನವಜಾತ ಶಿಶುಗಳಿಗೆ ಲಭ್ಯವಿರುವ ಚಿಕಿತ್ಸೆ, ಹೆರಿಗೆ ಘಟಕ, ಮಕ್ಕಳ ವಾರ್ಡ್, ಲಸಿಕಾ ವ್ಯವಸ್ಥೆ, ಔಷಧಿ ಲಭ್ಯತೆ ಹಾಗೂ ವೈದ್ಯರು–ನರ್ಸಿಂಗ್ ಸಿಬ್ಬಂದಿಯ ಕಾರ್ಯಕ್ಷಮತೆಯ ಕುರಿತು ಆಸ್ಪತ್ರೆಯ ಸಿಬ್ಬಂದಿಯಿಂದ ಮಾಹಿತಿ ಪಡೆದೆ.
ಇದೇ ವೇಳೆ ಆಸ್ಪತ್ರೆಯ ಸ್ವಚ್ಛತೆ, ಮೂಲಸೌಕರ್ಯ, ತುರ್ತು ಚಿಕಿತ್ಸಾ ಸಿದ್ಧತೆಗಳು ಮತ್ತು ರೋಗಿಗಳಿಗೆ ನೀಡಲಾಗುತ್ತಿರುವ ಸೇವೆಗಳ ಬಗ್ಗೆ ಹಾಗೂ ತಾಯಿ-ಮಕ್ಕಳ ಆರೋಗ್ಯ ರಕ್ಷಣೆಗೆ ಒತ್ತು ನೀಡುವಂತೆ ಅಧಿಕಾರಿಗಳಿಗೆ ಸಲಹೆ - ಸೂಚನೆಗಳನ್ನು ನೀಡಿದೆ.
ಭಾರತವು ತನ್ನನ್ನು ತಾನು ಆಳಿಕೊಳ್ಳಲು ರಚಿಸಿಕೊಂಡ ಸಂವಿಧಾನ ಜಾರಿಗೆ ಬಂದು ಇಂದಿಗೆ 77 ವರ್ಷಗಳು ತುಂಬುತ್ತಿದೆ. ಭಾರತದ ಎಲ್ಲ ನಾಗರಿಕರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು, ಚಿಂತನೆ, ಅಭಿವ್ಯಕ್ತಿ, ನಂಬಿಕೆ ಮತ್ತು ಆರಾಧನೆಯ ಸ್ವಾತಂತ್ರ್ಯವನ್ನು, ಸ್ಥಾನಮಾನ ಮತ್ತು ಅವಕಾಶಗಳಲ್ಲಿ ಸಮಾನತೆಯನ್ನು ಖಾತರಿಪಡಿಸಿ, ಎಲ್ಲರ ನಡುವೆ ಭ್ರಾತೃತ್ವವನ್ನು ಉದ್ದೀಪನಗೊಳಿಸುವುದೇ ಸಂವಿಧಾನದ ಮೂಲ ಆಶಯವಾಗಿದೆ.
ವಿಶ್ವಕ್ಕೆ ಮಾದರಿ ಸ್ವರೂಪದ ಇಂತಹದ್ದೊಂದು ಸಂವಿಧಾನವನ್ನು ನಮಗೆ ನೀಡಿದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಈ ಸಂದರ್ಭದಲ್ಲಿ ನೆನೆದು, ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ.
ನಾಡಿನ ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳು.
- ಮುಖ್ಯಮಂತ್ರಿ @siddaramaiah
#RepublicDay2026
MGNREGA Bachao
While the BJP slashes funds, delays wages, and sabotages rural livelihoods, Congress stands with workers on the streets, fighting for jobs, dignity, and survival.
MGNREGA is not charity.
It is a lifeline the BJP is trying to choke.
India’s poor will not be silenced.
Congress will not step back.
ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ಡಾ. ವಿಕ್ರಮ ಅಮಟೆ, ಐಪಿಎಸ್, ಪೊಲೀಸ್ ಅಧೀಕ್ಷಕರು, ಚಿಕ್ಕಮಗಳೂರು ಜಿಲ್ಲೆ ರವರು ಇಂದು ನೂತನ ಪೀಕ್ ಕ್ಯಾಪ್ ಅನ್ನು ವಿತರಿಸಿದರು.
@DgpKarnataka@Rangepol_WR@KarnatakaCops
ಬ್ರಿಟಿಷರ ವಿರುದ್ಧ ಸಿಡಿದೆದ್ದ ಅಪ್ರತಿಮ ಸ್ವಾತಂತ್ರ್ಯ ಸೇನಾನಿ, ಭಾರತವನ್ನು ಸ್ವತಂತ್ರಗೊಳಿಸಲು ತನ್ನ ಮಕ್ಕಳನ್ನು ಒತ್ತೆಯಿಡಲು ಹಿಂಜರಿಯದ ಮಹಾನ್ ರಾಜ, ದಕ್ಷ ಆಡಳಿತಗಾರ, ಜಾತ್ಯತೀತನಾಗಿ ಸರ್ವಧರ್ಮಗಳನ್ನು ಸಮಾನವಾಗಿ ಕಂಡ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರ ಜಯಂತಿಯ ಶುಭಾಶಯಗಳು.
#tippusultan