ಜೈ ಜವಾನ್, ಜೈ ಕಿಸಾನ್ ಎಂಬ ಘೋಷಣೆಯ ಮೂಲಕ ದೇಶಕ್ಕೆ ಹೊಸ ದಿಕ್ಕನ್ನು ತೋರಿದ ಸರಳತೆಯ ಸಾಕಾರಮೂರ್ತಿ, ಮಾಜಿ ಪ್ರಧಾನಿ, ಭಾರತ ರತ್ನ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯಂದು ಅನಂತ ನಮನಗಳು. ಅವರ ತ್ಯಾಗ, ಪ್ರಾಮಾಣಿಕತೆ ಮತ್ತು ದೃಢ ಸಂಕಲ್ಪ ನಮಗೆ ಸದಾ ಪ್ರೇರಣೆ.
ನಾಡಹಬ್ಬ ದಸರಾ ಉದ್ಘಾಟಕರಾಗಿ ಆಯ್ಕೆಯಾದ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿ ಅವರಿಗೆ ಹಾಗೂ ನಾಡ ಹಬ್ಬಕ್ಕೆ ಶ್ರೀಗಳಿಗೆ ಆಯ್ಕೆ ಮಾಡಿದ ಕರ್ನಾಟಕದ ನಾಡ ದೊರೆ ಮುಖ್ಯಮಂತ್ರಿಗಳಾದ ಸನ್ಮಾನ್ಯ ಡಿಕೆ ಶಿವಕುಮಾರ್ ಅವರಿಗೂ ಹೃದಯಪೂರ್ವಕ ನಮನಗಳು...
ಸ್ವಚ್ಛತೆ ಎಂದಾಗಲೆಲ್ಲ ಮೊದಲು ನೆನಪಾಗುವವರ ಪೈಕಿ ಪೌರ ಕಾರ್ಮಿಕರು ಒಬ್ಬರು. ನೀವಿದ್ದರೆ ಮಾತ್ರ ನಾವಿರುವ ನಗರ , ಪಟ್ಟಣ ಶುಚಿಯಾಗಿರಲು ಸಾಧ್ಯ. ನಿಮ್ಮ ಈ ಸೇವೆಗೆ ನಮ್ಮದೊಂದು ಸಲಾಂ. ನಾಡಿನ ಸಮಸ್ತ ಪೌರ ಕಾರ್ಮಿಕರಿಗೆ ಪೌರ ಕಾರ್ಮಿಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು .
2024ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿರುವ ಕನ್ನಡ ಚಿತ್ರರಂಗದ ಖ್ಯಾತ ನಟ ಅನಂತ್ನಾಗ್ ಅವರಿಗೆ ಅಭಿನಂದನೆಗಳು.
ಅನಂತ್ನಾಗ್ ಅವರ ಹಲವು ದಶಕಗಳ ಕಲಾಸೇವೆಗೆ ಸಂದಿರುವ ಈ ಪ್ರಶಸ್ತಿಯು ಕನ್ನಡ ಸಿನಿಮಾ ರಂಗದ ಇತರೆ ಕಲಾವಿದರೆಲ್ಲರಿಗೂ ಸ್ಪೂರ್ತಿಯಾಗಲಿ ಎಂದು ಹಾರೈಸುತ್ತೇನೆ.
ನಾಡಿನ ಸಮಸ್ತ ಜನತೆಗೆ “ಗೌರಿ-ಗಣೇಶ” ಹಬ್ಬದ ಹಾರ್ದಿಕ ಶುಭಾಶಯಗಳು. ವಿಘ್ನ ವಿನಾಶಕ ಗಣಪತಿ ಸರ್ವರಿಗೂ ಸುಖ, ಶಾಂತಿ, ಸಮೃದ್ಧಿ, ಆರೋಗ್ಯ, ಐಶ್ವರ್ಯವನ್ನು ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.
ಕರ್ನಾಟಕ ಏಕೀಕರಣದ ರೂವಾರಿಗಳು, ಶ್ರೇಷ್ಠ ಶಿಕ್ಷಣ ತಜ್ಞರು, ಮುಂಬೈ ಕರ್ನಾಟಕ ಸರ್ಕಾರದಲ್ಲಿ ದಾಖಲೆಯ ಏಳು ಖಾತೆಗಳನ್ನು ನಿರ್ವಹಿಸಿದ ಮಹಾನ್ ಮುತ್ಸದ್ದಿ ಸರ್.ಸಿದ್ದಪ್ಪ ಕಂಬಳಿ ಅವರ ಜಯಂತಿಯ ಶುಭಾಶಯಗಳು.
ನನ್ನ ಎಲ್ಲ ಪ್ರೀತಿಯ ಜ್ಞಾನದಾಸೋಹಿ ಶಿಕ್ಷಕ ಬಂಧುಗಳಿಗೆ ಶಿಕ್ಷಕರ ದಿನದ ಶುಭಾಶಯಗಳು. ಈ ದಿನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರನ್ನು ಗೌರವದಿಂದ ಸ್ಮರಿಸುತ್ತ ನನ್ನ ನಮನಗಳನ್ನು ಸಲ್ಲಿಸುತ್ತೇನೆ.
A moment of felicitating Shri Vinay Kulkarni—a close associate, Working President of the Karnataka Pradesh Congress Committee, and MLA of the Dharwad Rural Assembly constituency—along with other associates.
ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಪ್ರವಾದಿ ಮುಹಮ್ಮದರ ಜನ್ಮದಿನವಾದ ಈದ್ ಮಿಲಾದ್ ಹಬ್ಬದ ಹಾರ್ದಿಕ ಶುಭಾಶಯಗಳು. ಹಬ್ಬವು ಎಲ್ಲರ ಬಾಳಿನಲ್ಲಿ ಸುಖ ಸಮೃದ್ಧಿ ತರಲಿ, ಸರ್ವರಿಗೂ ಒಳಿತಾಗಲಿ ಎಂದು ಹಾರೈಸುತ್ತೇನೆ.
ರಾಜ್ಯ ಕಂಡ ನಾಯಕರು,ಕ್ಷೇತ್ರದ ಅಭಿವೃದ್ಧಿಯ ಹರಿಕಾರ, ಬಡವರ ಬಂಧು , ನಮ್ಮ ನಾಯಕರು ಆದ ಹುಬ್ಬಳ್ಳಿ ಧಾರವಾಡ ಪೂರ್ವ ಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯ ಅಧ್ಯಕ್ಷರಾದ ಮಾನ್ಯ ಶ್ರೀ ಪ್ರಸಾದ ಅಬ್ಬಯ್ಯ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಷಯಗಳು.