The vote is the foundation of our democracy. When that foundation is threatened, every institution created to protect our Constitution must be held accountable.
LoP Shri @RahulGandhi has consistently warned the nation about vote chori, raising specific concerns in our own Mahadevapura and Aland, as well as in Maharashtra and Haryana. He took this fight to the people through the Voter Adhikar Yatra and has repeatedly demanded transparency and accountability from the Election Commission. Now, the revelations of recorded objections from within the ECI itself have brought these concerns into sharper focus. The questions he raised cannot simply be dismissed anymore.
The credibility of our electoral institutions must now be restored through accountability and a transparent investigation. Chief Election Commissioner Mr. Gyanesh Kumar must resign immediately, and all those involved must be investigated for their conspiracy to steal elections. No one can be above the Constitution, and the people of India have the right to know the truth about their vote.
ತೀವ್ರ ಬರದಿಂದ ರಾಜ್ಯದ ಅನ್ನದಾತರು ಕಂಗಾಲಾಗಿದ್ದು, ತಕ್ಷಣವೇ ಮಧ್ಯಂತರ ಬರ ಪರಿಹಾರ ಬಿಡುಗಡೆಗೊಳಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದಾರೆ.
3,705 ಕೋಟಿ ರೂ. ತುರ್ತು ಅನುದಾನ ಬಿಡುಗಡೆ ಮಾಡುವಂತೆ ಅವರು ಆಗ್ರಹಿಸಿದ್ದಾರೆ.
ರಾಜ್ಯದ 200ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರ ಎದುರಾಗಿದ್ದು, ಈ ಸಂಬಂಧ ಕೇಂದ್ರದ ನೆರವಿನ ಕುರಿತು ಚರ್ಚಿಸಲು ದೆಹಲಿಗೆ ಸರ್ವಪಕ್ಷ ನಿಯೋಗವನ್ನು ಕರೆದೊಯ್ಯಲು ಪ್ರಧಾನಿಗಳ ಸಮಯಾವಕಾಶ ಕೋರಲಾಗಿದೆ.
ರಾಜ್ಯದ ರೈತರ ನೋವಿಗೆ ಪ್ರತಿಸ್ಪಂದಿಸುವುದು ನಮ್ಮ ಕರ್ತವ್ಯ
ಪೆಟ್ರೋಲ್ ಬಂಕ್ ಗಳಲ್ಲಿ ಗ್ರಾಹಕರಿಗೆ ವಂಚನೆಯಾಗದಂತೆ ನೋಡಿಕೊಳ್ಳಲು ಕಾಂಗ್ರೆಸ್ ಸರ್ಕಾರ ಮಿಷನ್ ನಿಖರ ಎಂಬ ಕಾರ್ಯಕ್ರಮ ರೂಪಿಸಿದೆ.
768 ಪೆಟ್ರೋಲ್ ಬಂಕ್ ಗಳಲ್ಲಿ ಅಳತೆಯಲ್ಲಿ ಅಕ್ರಮ ಕಂಡು ಬಂದರೆ ಕ್ರಮ ಜರುಗಿಸಲಾಗಿದ್ದು, 6.6 ಲಕ್ಷ ರೂ. ದಂಡ ವಿಧಿಸಲಾಗಿದೆ.
ಗ್ರಾಹಕರ ಹಿತ ರಕ್ಷಣೆ ನಮ್ಮ ಆದ್ಯತೆ.
ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಹೊಸ ಹೆಜ್ಜೆ
ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರ ನೇತೃತ್ವದ ಸರ್ಕಾರ ಹಲವು ಮಹತ್ವದ ಯೋಜನೆಗಳನ್ನು ಘೋಷಿಸಿದೆ. ಕೈಗಾರಿಕೆ ಮತ್ತು ಹೂಡಿಕೆಗೆ ಹೊಸ ವೇಗ, ರೈತರ ಆದಾಯ ಹೆಚ್ಚಿಸಲು ಮೌಲ್ಯವರ್ಧನೆ, ಆರೋಗ್ಯ ಮತ್ತು ವಸತಿ ಸೌಲಭ್ಯಗಳಿಗೆ ಆದ್ಯತೆ, ಕ್ರೀಡಾ ಕ್ಷೇತ್ರಕ್ಕೆ ಹೊಸ ಅವಕಾಶಗಳು, ಸುಗಮ ಸಂಚಾರ, ಸುರಕ್ಷತೆ ಮತ್ತು ಪ್ರವಾಸೋದ್ಯಮದ ಅಭಿವೃದ್ಧಿ. ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಗತಿಯನ್ನು ತರಲು ಸರ್ಕಾರ ಮುಂದಾಗಿದೆ. ಈ ಮೂಲಕ ಕಲ್ಯಾಣ ಕರ್ನಾಟಕವನ್ನು ಅಭಿವೃದ್ಧಿಯ ಎತ್ತರಕ್ಕೆ ಕೊಂಡೊಯ್ಯಲು ನಿರ್ಧರಿಸಲಾಗಿದೆ.
ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷರಾದ @HariprasadBK2 ಅವರು ಮುಂಬರುವ ವಿಧಾನ ಪರಿಷತ್ ಚುನಾವಣೆ ಕ್ಷೇತ್ರಗಳ ವ್ಯಾಪ್ತಿ ಶಾಸಕರುಗಳ ಸಭೆಯನ್ನು ನಡೆಸಿದರು.
ಸಿಎಂ @DKShivakumar, ಎಐಸಿಸಿ ಕಾರ್ಯದರ್ಶಿ ಗೋಪಿನಾಥ್ ಪಳನಿಯಪ್ಪನ್, ಸಚಿವರಾದ ಮುನಿಯಪ್ಪ, ಮಾಜಿ ಸಚಿವ ಹೆಚ್ ಕೆ ಪಾಟೀಲ್ ಅವರು ಉಪಸ್ಥಿತರಿದ್ದರು.
ನಾವು ಎಲ್ಲ ಕ್ಷೇತ್ರಗಳನ್ನೂ ಬರಪೀಡಿತ ಎಂದು ಘೋಷಿಸುತ್ತೇವೆ. ನೀವು ಬಿಜೆಪಿಯವರು ಕೇಂದ್ರದಿಂದ ಹಣ ಬಿಡುಗಡೆ ಮಾಡಿಸಿ, ಇಲ್ಲದಿದ್ದರೆ ಯಾವುದೇ ಬರ, ಪ್ರಕೃತಿ ವಿಕೋಪಗಳಿಗೆ ಪರಿಹಾರ ನೀಡುವುದಿಲ್ಲ ಎಂದು ಕೇಂದ್ರ ಸರ್ಕಾರ ಘೋಷಿಸಲಿ.
2023ರಲ್ಲಿ ಬರದಿಂದಾಗಿ ಕರ್ನಾಟಕಕ್ಕೆ 39 ಸಾವಿರ ಕೋಟಿ ರೂ. ನಷ್ಟವಾಯಿತು. ನಾವು 18 ಸಾವಿರ ಕೋಟಿ ರೂ. ನೀಡಲು ಮನವಿ ಮಾಡಿದೆವು. ಆದರೆ ಕೇಂದ್ರ ಮೂರು ಕಾಸನ್ನೂ ಬಿಡುಗಡೆ ಮಾಡಲಿಲ್ಲ. ಆದರೆ ಸುಪ್ರೀಂಕೋರ್ಟ್ಗೆ ಮೊರೆ ಹೋದ ಮೇಲೆ ಕೇವಲ 3400 ಕೋಟಿ ರೂ. ಪರಿಹಾರ ನೀಡಿತು.
@DrParameshwara
ಉಪ ಮುಖ್ಯಮಂತ್ರಿಗಳು
ರೈತರು ನಮ್ಮ ನಾಡಿನ ಬೆನ್ನೆಲುಬು. ಅನ್ನದಾತರ ಹಿತ ಕಾಯುವುದೇ ನಮ್ಮ ಸರ್ಕಾರದ ಆದ್ಯತೆ.
ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರಗಾಲದ ಪರಿಸ್ಥಿತಿ ಎದುರಾಗಿದೆ. ಇದನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಬೆಳೆ ರಕ್ಷಣೆ, ಜಾನುವಾರುಗಳ ಆರೈಕೆ ಹಾಗೂ ಕುಡಿಯುವ ನೀರಿನ ಪೂರೈಕೆಗೆ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸಂಕಷ್ಟಕ್ಕೆ ಸಿಲುಕಿರುವ ಪ್ರತಿಯೊಂದು ಭಾಗದಲ್ಲೂ ನಿಖರ ಪರಿಶೀಲನೆ ನಡೆಸಿ, ಅರ್ಹರಿಗೆ ಸೂಕ್ತ ಪರಿಹಾರ ಮತ್ತು ನೆರವನ್ನು ನೇರವಾಗಿ ತಲುಪಿಸಲಾಗುತ್ತಿದೆ.
ಈ ಸಂಕಷ್ಟದ ಸಮಯದಲ್ಲಿ ರೈತಾಪಿ ವರ್ಗದ ಕೈಹಿಡಿದು, ಅವರ ಬದುಕಿಗೆ ನೆರವಾಗಲು ನಮ್ಮ ಸರ್ಕಾರ ಸದಾ ಬದ್ಧವಾಗಿದೆ.
ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ನಡೆದ ಸಂಘಟನ್ ಸೃಜನ್ ಅಭಿಯಾನದ ವೀಕ್ಷಕರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದೆ.
ರಾಜ್ಯದ ವಿವಿಧ ಭಾಗಗಳ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರ ಅಭಿಪ್ರಾಯಗಳನ್ನು ಆಲಿಸಿ, ಪಕ್ಷ-ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದ ಎಲ್ಲಾ ನಾಯಕರು, ವೀಕ್ಷಕರು ಹಾಗೂ ಪದಾಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದೆ.
ಎಐಸಿಸಿ ಕಾರ್ಯದರ್ಶಿ ಗೋಪಿನಾಥ್ ಪಳನಿಯಪ್ಪನ್, ರಾಜ್ಯಸಭಾ ಸದಸ್ಯ ಮನ್ಸೂರ್ ಅಲಿ ಖಾನ್, ಮಾಜಿ ಸಂಸದರಾದ ವಿ.ಎಸ್. ಉಗ್ರಪ್ಪ, ಮುದ್ದಹನುಮೇಗೌಡ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
@INCKarnataka
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಿದೆ.
ಸಭೆಯಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿ, ಪ್ರಸ್ತುತ ಬರ ಪರಿಸ್ಥಿತಿ ಹಾಗೂ ಪರಿಣಾಮಕಾರಿ ಬರ ನಿರ್ವಹಣೆ, ರೈತರು ಮತ್ತು ಜನಸಾಮಾನ್ಯರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವುದು ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಮುಖ್ಯಮಂತ್ರಿ @DKShivakumar , ಮಾಜಿ ಮುಖ್ಯಮಂತ್ರಿ @siddaramaiah , ಎಐಸಿಸಿ ಕಾರ್ಯದರ್ಶಿ ಗೋಪಿನಾಥನ್ ಪಳನಿಯಪ್ಪನ್, ಹಿರಿಯ ಸಚಿವರುಗಳು, ಶಾಸಕರುಗಳು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
'ವಂದೇ ಮಾತರಂ' ಹಾಡದಿದ್ದರೆ ಒಬ್ಬ ವ್ಯಕ್ತಿಯನ್ನು ಅಪರಾಧಿಯನ್ನಾಗಿ ಮಾಡಲು ಸಾಧ್ಯವಿಲ್ಲ ಎಂಬ ಸಂವಿಧಾನಾತ್ಮಕ ನಿಲುವನ್ನು ಸುಪ್ರೀಂ ಕೋರ್ಟ್ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಧಾರ್ಮಿಕ ನಂಬಿಕೆ ಅಥವಾ ಆತ್ಮಸಾಕ್ಷಿಯ ಕಾರಣದಿಂದ ಯಾರಾದರೂ ಹಾಡಲು ನಿರಾಕರಿಸಿದರೆ ಅವರನ್ನು ಕ್ರಿಮಿನಲ್ ಕ್ರಮಕ್ಕೆ ಒಳಪಡಿಸಬಾರದು ಎಂದು ನ್ಯಾಯಾಲಯ ವಿಚಾರಣೆ ವೇಳೆ ಹೇಳಿದೆ. ಇದು ನಮ್ಮ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳು ಎಷ್ಟು ಗಟ್ಟಿಯಾಗಿವೆ ಎಂಬುದಕ್ಕೆ ಮತ್ತೊಂದು ಉದಾಹರಣೆ. ದೇಶದ ಸರ್ವೋಚ್ಚ ನ್ಯಾಯಾಲಯದ ಈ ಅಭಿಪ್ರಾಯವನ್ನು ನಾವು ಸ್ವಾಗತಿಸುತ್ತೇವೆ.
ಕಾಂಗ್ರೆಸ್ ಪಕ್ಷ ಎಐಸಿಸಿ ಕಾರ್ಯಕಾರಿ ಸಮಿತಿಯಲ್ಲಿ ಹಾಗೂ ಕರ್ನಾಟಕದಲ್ಲಿ ಈಗಾಗಲೇ ಸರ್ಕಾರಿ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ನ ಮೊದಲ ಎರಡು ಚರಣಗಳನ್ನು ಹಾಡುವ ನಿರ್ಧಾರ ತೆಗೆದುಕೊಂಡಿದೆ. ಈ ವಿಚಾರದಲ್ಲಿ ಪಕ್ಷದ ನಿಲುವು ಸ್ಪಷ್ಟವಾಗಿದೆ. ದೇಶಭಕ್ತಿ ಎನ್ನುವುದು ಯಾರನ್ನಾದರೂ ಒಂದು ಹಾಡನ್ನು ಕಡ್ಡಾಯವಾಗಿ ಹಾಡುವಂತೆ ಒತ್ತಾಯಿಸುವುದರಲ್ಲಿ ಇಲ್ಲ. ದೇಶಭಕ್ತಿ ಎಂದರೆ ಸಂವಿಧಾನವನ್ನು ಗೌರವಿಸುವುದು, ದೇಶದ ವೈವಿಧ್ಯತೆಯನ್ನು ಗೌರವಿಸುವುದು ಮತ್ತು ಪ್ರತಿಯೊಬ್ಬ ನಾಗರಿಕನ ಆತ್ಮಸಾಕ್ಷಿಯ ಸ್ವಾತಂತ್ರ್ಯವನ್ನು ರಕ್ಷಿಸುವುದೂ ಹೌದು.
ಸ್ವಾತಂತ್ರ್ಯ ಹೋರಾಟದ ಕಾಲದಲ್ಲೇ ವಂದೇ ಮಾತರಂ ಕುರಿತು ರಾಷ್ಟ್ರೀಯ ನಾಯಕರು ಗಂಭೀರ ಚರ್ಚೆ ನಡೆಸಿ, ದೇಶದ ಬಹುತ್ವವನ್ನು ಗೌರವಿಸುವ ಮಾರ್ಗವನ್ನು ರೂಪಿಸಿದ್ದರು. ಆ ಐತಿಹಾಸಿಕ ಒಮ್ಮತವನ್ನು ಬದಿಗಿಟ್ಟು, ಸಂಪೂರ್ಣ ಆರು ಚರಣಗಳನ್ನು ಅಧಿಕೃತವಾಗಿ ಹಾಡಿಸುವ ಹೊಸ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಜನರ ಮೇಲೆ ಹೇರಿಕೆ ಮಾಡಿದೆ.
ವಂದೇ ಮಾತರಂ ಹಾಡುವುದನ್ನು ಯಾರು ವಿರೋಧಿಸುತ್ತಿಲ್ಲ. ಆದರೆ ಹಾಡನ್ನು ಗೌರವಿಸುವ ಹೆಸರಿನಲ್ಲಿ ಸಂವಿಧಾನವನ್ನು ಪಕ್ಕಕ್ಕೆ ಸರಿಸಲು ಸಾಧ್ಯವಿಲ್ಲ. ದೇಶಭಕ್ತಿಯ ಪ್ರಮಾಣಪತ್ರವನ್ನು ಬಿಜೆಪಿಯವರಿಂದ ಪಡೆದುಕೊಳ್ಳಬೇಕಾದ ಪರಿಸ್ಥಿತಿ ಈ ದೇಶದಲ್ಲಿಲ್ಲ. ದೇಶವನ್ನು ಪ್ರೀತಿಸುವ ಹಕ್ಕು ಪ್ರತಿಯೊಬ್ಬರಿಗೂ ಇರುವಂತೆ, ತನ್ನ ಆತ್ಮಸಾಕ್ಷಿಯಂತೆ ನಡೆದುಕೊಳ್ಳುವ ಹಕ್ಕು ಕೂಡ ಪ್ರತಿಯೊಬ್ಬ ನಾಗರಿಕನಿಗೂ ಇದೆ.
ಆದರೆ ಕರ್ನಾಟಕ ವಿಧಾನಸಭೆಯ ಅಧಿವೇಶನದಲ್ಲಿ ನಡೆದ ಘಟನೆ ಮಾತ್ರ ಬಿಜೆಪಿಯವರ ರಾಜಕೀಯ ನಿಲುವಿನ ಅಸ್ಪಷ್ಟತೆಯನ್ನು ಬಯಲಿಗೆಳೆದಿದೆ. ಸರ್ಕಾರದ ಕಾರ್ಯಕ್ರಮಗಳಲ್ಲಿ ಮೊದಲ ಎರಡು ಚರಣಗಳನ್ನು ಹಾಡುವ ನಿರ್ಧಾರವನ್ನು ವಿರೋಧಿಸಿ ಬಿಜೆಪಿ ಸದಸ್ಯರು ಪೂರ್ಣ ‘ವಂದೇ ಮಾತರಂ’ ಹಾಡಲು ಮುಂದಾದರು. ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರು ಎರಡು ಚರಣಗಳ ನಂತರ ನಿಂತು ಸಂವಿಧಾನದ ಪೀಠಿಕೆಯನ್ನು ಓದಿದಾಗ, ಪ್ರತಿಪಕ್ಷದ ಸದಸ್ಯರು ಪೂರ್ಣ ಹಾಡನ್ನು ಮುಂದುವರಿಸಿದರು.
ವಂದೇ ಮಾತರಂ ಹಾಡಲುಬಾರದ ಬಿಜೆಪಿಗರು ಮುದ್ರಿತ ಪ್ರತಿಗಳನ್ನು ಹಿಡಿದು ಹಾಡಿದರು. ವಂದೇ ಮಾತರಂನ ಪೂರ್ಣ ಆವೃತ್ತಿಯನ್ನು ಹಾಡಲೇಬೇಕು ಎಂದು ವಿಧಾನಸಭೆಯಲ್ಲಿ ಇಷ್ಟೊಂದು ದೊಡ್ಡ ರಾಜಕೀಯ ಹೋರಾಟ ಮಾಡುವ ಬಿಜೆಪಿಯವರಿಗೆ ಹಾಡಿನ ಸಂಪೂರ್ಣ ಸಾಹಿತ್ಯವೇ ಬಾಯಿಪಾಠವಾಗಿಲ್ಲ ಎನ್ನುವುದು ವಿಪರ್ಯಾಸ. ಬಾಯಿಪಾಠ ಬರದಿದ್ದರೂ ಪರವಾಗಿಲ್ಲ, ಕನಿಷ್ಠ ಸರಿಯಾಗಿ ಓದಿ ಹಾಡಲೂ ನಾಲಗೆ ಹೊರಳದಿರುವುದು ಇನ್ನೂ ದೊಡ್ಡ ವಿಪರ್ಯಾಸ. ಒಂದು ಹಾಡನ್ನು ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡು, ಅದೇ ಹಾಡನ್ನು ಸರಿಯಾಗಿ ಹಾಡಲು ಸಾಧ್ಯವಾಗದಿರುವುದಕ್ಕಿಂತ ರಾಜಕೀಯ ದೊಡ್ಡ ವೈರುಧ್ಯ ಮತ್ತೊಂದಿಲ್ಲ.
ಎಲ್ಲಕ್ಕಿಂತ ಮುಖ್ಯವಾಗಿ ಸುಪ್ರಿಂ ಕೋರ್ಟ್ ನ ಈ ಅದೇಶದಿಂದಾಗಿ, ವಂದೇ ಮಾತರಂ ಹಾಡಲು ಬಾರದ ಬಿಜೆಪಿಗರು ಇದೀಗ ಕನಿಷ್ಠ ಒಂದು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದ್ದು ನನಗಂತೂ ಸಮಾಧಾನ ತಂದಿದೆ.
ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಹೆಮ್ಮೆಯ ಕ್ಷಣ!
ಅನಂತ್ ನಾಗ್ ಅವರಿಗೆ 2024ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಗೌರವ.
ಐದು ದಶಕಗಳಿಗೂ ಹೆಚ್ಚು ಕಾಲ ತಮ್ಮ ಅದ್ಭುತ ಅಭಿನಯದ ಮೂಲಕ ಭಾರತೀಯ ಚಿತ್ರರಂಗವನ್ನು ಶ್ರೀಮಂತಗೊಳಿಸಿದ ಹಿರಿಯ ನಟ ಅನಂತ್ ನಾಗ್ ಅವರಿಗೆ ದೊರೆತ ಈ ಗೌರವ ಕನ್ನಡಿಗರ ಹೆಮ್ಮೆಯ ಕ್ಷಣ.
#anantnag
ಓಹೋ ದೇಶಭಕ್ತಿಯ ಉದ್ದುದ್ದ ಭಾಷಣ ಬಿಗಿಯುತ್ತಿರುವ ಕುಮಾರಸ್ವಾಮಿ ಅವರೇ,
2000 ಕ್ಕೂ ಹೆಚ್ಚು ಅಶ್ಲೀಲ ವಿಡಿಯೋ ಮಾಡಿ, ನೂರಾರು ಹೆಣ್ಣುಮಕ್ಕಳನ್ನು, ಅಬಲೆಯರನ್ನು ತನ್ನ ಕಾಮತೃಷೆಗೆ ಬಳಸಿಕೊಂಡ ಪ್ರಜ್ವಲ್ ರೇವಣ್ಣ ಎಂಬ ಕಾಮಾಂಧನ ಮೈಯ್ಯಲ್ಲಿ ಹರಿಯುತ್ತಿರುವುದು ಯಾರ ಕುಟುಂಬದ ರಕ್ತ ಎಂದು ಸ್ವಲ್ಪ ತಿಳಿಸುವಿರಾ?
ಪ್ರಜ್ವಲ್ ಎಂಬ ಕಾಮಾಂಧನನ್ನು ಸಂಸದನಾಗಿ ಮಾಡಿ ಕರ್ನಾಟಕಕ್ಕೆ ಕಪ್ಪುಚುಕ್ಕೆ ಬಳಿದ ನೀವು ಈಗ ಬೇರೆಯವರ ಯೋಗ್ಯತೆ ಬಗ್ಗೆ ಮಾತನಾಡುತ್ತಿರುವುದು ವಿಪರ್ಯಾಸವೇ ಸರಿ!
ಮೊದಲು ನಿಮ್ಮ ಮನೆಯಿಂದಲೇ ದೇಶಭಕ್ತಿಯ ಪಾಠ ಶುರು ಮಾಡಿ ಆಮೇಲೆ ಇನ್ನೊಬ್ಬರಿಗೆ ಹೇಳುವಿರಂತೆ!
#Karnataka #KarnatakaPolitics #IndiaPolitics #IndianPolitics #Congress #BJP #Modi #RahulGandhi #Kannada #ಕರ್ನಾಟಕ #ಕನ್ನಡ #ರಾಜಕೀಯ #ಜನರಧ್ವನಿ #ಪ್ರಜಾಪ್ರಭುತ್ವ #ಸಂವಿಧಾನ #HDK #JDS #PrajwalRevanna
ಬಿಜೆಪಿಯ ತಲೆಹರಟೆಗಳಿಗೆ ದೇಶದ ಮೇರು ರಾಜಕಾರಣಿಯಾದ, ಎಐಸಿಸಿ ಆಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆಯವರು ಸರಿಯಾಗಿ ಜಾಡಿಸಿದ್ದಾರೆ. ಸುದೀರ್ಘ ರಾಜಕೀಯ ಅನುಭವ ಇರುವ ಖರ್ಗೆಯವರು ಮೊದಲು ಶಾಸಕರಾಗಿದ್ದಾಗ ಗೃಹಸಚಿವ ಅಮಿತ್ ಷಾ ಇನ್ನೂ ಕೂಡಾ ಹಾಸಿಗೆಯಲ್ಲಿದ್ದ ಬಚ್ಚಾ! ಇಂತಹವರು ಖರ್ಗೆಯವರಿಗೆ ದೇಶಪ್ರೇಮದ ಪಾಠ ಹೇಳಿ ಕೊಡಲು ಬರುತ್ತಾರೆ. ಎಂತಹ ಅಧಿಕ ಪ್ರಸಂಗ ನೋಡಿ. ಇಂತಹ ಮಂದಿಗೆ ಸರಿಯಾಗಿ ಮಾತಿನ ತಪರಾಕಿಯನ್ನು ಖರ್ಗೆಯವರು ಕೊಟ್ಟಿದ್ದಾರೆ.
ಹಾಡು ನಿಲ್ಲಿಸಿದ ʻಕೋಗಿಲೆʼ
ಪ್ರಖ್ಯಾತ ಗಾಯಕಿ, 'ಗಾನ ಕೋಗಿಲೆ' ಎಸ್. ಜಾನಕಿ ಅಮ್ಮ ಅವರ ನಿಧನವಾರ್ತೆ ತಿಳಿದು, ದುಃಖಿತನಾಗಿದ್ದೇನೆ. 17 ಭಾಷೆಗಳಲ್ಲಿ ತಮ್ಮ ಇಂಪಾದ ಕಂಠದ ಮೂಲಕ ಸಾವಿರಾರು ಹಾಡುಗಳನ್ನು ಹಾಡಿದ ಅವರ ಅಗಲಿಕೆ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ. ಗಾಯನವನ್ನೇ ಉಸಿರಾಗಿಸಿಕೊಂಡಿದ್ದ ಜಾನಕಮ್ಮನವರು, ಅವರ ಹಾಡುಗಳ ಮೂಲಕ ಸದಾ ಸಂಗೀತಪ್ರಿಯರ ಮನಸ್ಸಿನಲ್ಲಿ ಹಸಿರಾಗಿರುತ್ತಾರೆ.
ಅವರ ಅಸಂಖ್ಯಾತ ಅಭಿಮಾನಿಗಳು, ಆಪ್ತರು, ಕುಟುಂಬ ವರ್ಗಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ. ಮೃತರ ಆತ್ಮಕ್ಕೆ ಸದ್ಗತಿ ಸಿಗಲಿ.
ಓಂ ಶಾಂತಿ.
A new chapter unfolds for Namma Bengaluru
As we transition from BBMP to GBA, visited the GBA Main office today and unveiled the new board of the same. Truly an honour and proud feeling to witness dreams translate into reality. With GBA, we will deliver transparency, accountability and good governance.
Our city deserves better and we’re here to deliver it.
#GreaterBengaluruAuthority
ಶ್ರೀಕ್ಷೇತ್ರ ಧರ್ಮಸ್ಥಳ ರಾಜಕೀಯ ವಸ್ತು ಅಲ್ಲ!
ಇಂದು ಧರ್ಮಸ್ಥಳ ಮತ್ತು ಅದರಿಂದ ರಾಜಕೀಯ ಲಾಭ ತೆಗೆದುಕೊಳ್ಳಲು ಮುಂದಾಗಿರುವ ಕೆಲವು ಪಕ್ಷಗಳ ವಿಚಾರವಾಗಿ ಮಾಧ್ಯಮದವರಿಗೆ ನನ್ನ ಉತ್ತರ.
#Dharmasthala