ಧಾರ್ಮಿಕ ಸುಧಾರಣೆಯ ಮೂಲಕ ಅಸ್ಪೃಶ್ಯತೆ, ಅಜ್ಞಾನ, ಅಂಧಶ್ರದ್ಧೆ ವಿರುದ್ಧ ಸಮರ ಸಾರಿ, ಸಮ ಸಮಾಜ ನಿರ್ಮಾಣಕ್ಕಾಗಿ ಹೋರಾಡಿದ ಕ್ರಾಂತಿಕಾರಿ ಸಂತ ನಾರಾಯಣ ಗುರುಗಳ ಚಿಂತನೆ ನಮ್ಮ ಮುನ್ನಡೆಯ ದಾರಿಗೆ ಬೆಳಕಾಗಲಿ. ..
ನಾಡ ಬಾಂಧವರಿಗೆಲ್ಲ ನಾರಾಯಣ ಗುರು ಜಯಂತಿಯ ಶುಭಾಶಯಗಳು....
#narayanagurujayanthi
ರಾಜ್ಯ ಸರ್ಕಾರ ಬಹುನಿರೀಕ್ಷಿತ “ಗೃಹಲಕ್ಷ್ಮೀ” ಯೋಜನೆಗೆ ಇದೇ ಆಗಸ್ಟ್ 27 ರಂದು ಚಾಲನೆ ನೀಡಲಿದ್ದೇವೆ. ಈ ಯೋಜನೆಗೆ ರಾಜ್ಯದ 11 ಸಾವಿರ ಕಡೆ ಚಾಲನೆ ಸಿಗಲಿದ್ದು ಎಲ್ಲ ಗ್ರಾಮ ಪಂಚಾಯತ್, ನಗರಸಭೆ, ಪುರಸಭೆ ಸೇರಿದಂತೆ ಆಯಾ ಸ್ಥಳಗಳಲ್ಲಿ ಈ ಯೋಜನೆಯ ಚಾಲನಾ ಸಮಾರಂಭ ನಡೆಯಲಿದೆ.
ಬೆಳಗಾವಿಯಲ್ಲೇ ”ಗೃಹಲಕ್ಷ್ಮೀ” ಯೋಜನೆಗೆ ಚಾಲನೆ ಸಿಗಬೇಕೆಂಬುದು ನನ್ನ ಕನಸು. ಈ ಕುರಿತು ಮಾನ್ಯ ಸಿಎಂ ಮತ್ತು ಡಿಸಿಎಂ ಬಳಿ ಮನವಿ ಸಲ್ಲಿಸಿದ್ದೆ. ನನ್ನ ಮನವಿಗೆ ಸ್ಪಂದಿಸಿದ ನಮ್ಮ ನಾಯಕರು ಬೆಳಗಾವಿಯಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲು ಸಹಕರಿಸುತ್ತಿದ್ದಾರೆ. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ.
#Gruhalaxmi
ನವೆಂಬರ್ 14
ಸ್ವಾತಂತ್ರ್ಯ ಚಳುವಳಿಯ ಮುಂಚೂಣಿ ನಾಯಕ, ಭಾರತದ ಮೊದಲ ಪ್ರಧಾನಿ, ನವ ಭಾರತ ನಿರ್ಮಾತೃ, 'ಭಾರತ ರತ್ನ' ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮ ದಿನದಂದು ಮಕ್ಕಳ ಬಗೆಗಿನ ಅವರ ಅತೀವ ಪ್ರೀತಿಯ ಸಂಕೇತವಾಗಿ ಆಚರಿಸಲಾಗುವ 'ಮಕ್ಕಳ ದಿನಾಚರಣೆ'ಯ ಶುಭಾಶಯಗಳು.
ಭಾರತದ ಮೊದಲ ಮಹಿಳಾ ಪ್ರಧಾನಿ,ದಿಟ್ಟ ಹಾಗೂ ಉಕ್ಕಿನ ಮಹಿಳೆ ಶ್ರೀಮತಿ ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆಯಂದು ನಮನಗಳು.
ನೂರಾರು ಕ್ರಾಂತಿಕಾರಿ ಯೋಜನೆಗಳ ಮೂಲಕ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣರಾಗಿ, ಆಧುನಿಕ ಭಾರತದ ನಿರ್ಮಾಣಕ್ಕೆ ಮುನ್ನುಡಿ ಬರೆದ ಅವರ ಸಾಮಾಜಿಕ ಕಳಕಳಿ ನಮಗೆ ಸದಾಕಾಲವೂ ಪ್ರೇರಣೀಯ
#indiragandhideathanniversery
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸುತ್ತಿದೆ.
ನಾಳೆ ಅಕ್ಟೋಬರ್ 28 ರಂದು ಬೆಳಿಗ್ಗೆ 11 ಗಂಟೆಗೆ ಏಕಕಾಲದಲ್ಲಿ ಕನ್ನಡಿಗರ ಕಂಠಧ್ವನಿಯಲ್ಲಿ ಕನ್ನಡದ ಇಂಪು ಹೊರಹೊಮ್ಮಲಿದೆ. ನಾನು ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದೇನೆ. ನೀವೂ ಭಾಗವಹಿಸಿ, ಅಭಿಯಾನ ಯಶಸ್ವಿಗೊಳಿಸಿ.
#ಕೋಟಿ_ಕಂಠ_ಗಾಯನ
ಇಂದು ಹುಟ್ಟು ಹಬ್ಬವನ್ನು ಆಚರಿಸುತ್ತಿರುವ ಸರಳ ಸಜ್ಜನಿಕೆಯ ಪ್ರತಿರೂಪ , ನಿಸ್ವಾರ್ಥ ರಾಜಕಾರಣಿ ಕರ್ನಾಟಕ ಸರಕಾರದ ಆರೋಗ್ಯ, ಆಹಾರ, ನಾಗರೀಕ ಸರಬರಾಜು ಇಲಾಖೆಯ ಮಾಜಿ ಸಚಿವರಾಗಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಉಸ್ತುವಾರಿ ಸಚಿವರೂ ಆಗಿದ್ದ ನಮ್ಮ ಆತ್ಮೀಯರೂ ಆದ ಯು.ಟಿ ಖಾದರ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು
#UTKhader
ಜಗವ ಬೆಳಗಿಸಿದ ಜಗತ್ ಜ್ಯೋತಿ ವಿಶ್ವ ವಿಮೋಚಕ ಕಾರುಣ್ಯದ ಕಡಲು ಪ್ರವಾದಿ ಮುಹಮ್ಮದ್ ಮುಸ್ತಫಾ ಸಲ್ಲಲ್ಲಾಹು ಅಲೈಹಿವಸಲ್ಲಮ್ ರವರ ಜನ್ಮದಿನದ ಅಂಗವಾಗಿ ಆಚರಿಸುವ ಹಬ್ಬ ಈದ್ ಮಿಲಾದ್..
ಈ ಹಬ್ಬವು ಸಮಾಜದಲ್ಲಿ ಸಾಮರಸ್ಯ ಮತ್ತು ಸಹಾನುಭೂತಿಯ ಮನೋಭಾವವನ್ನು ಹೆಚ್ಚಿಸಲಿ, ಎಲ್ಲೆಡೆ ಶಾಂತಿ ನೆಲೆಸಲಿ’ ಎಂದು ಹಾರೈಸುತ್ತೇನೆ...
#EidMiladunNabi
Gauri stood for Truth
Gauri stood for Courage
Gauri stood for Freedom
I stand for Gauri Lankesh and countless others like her, who represent the true spirit of India.
Bharat Jodo Yatra is their voice.
It can never be silenced.