ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮಗಳಿಗೆ ಬೀಟ್ ಸಿಬ್ಬಂದಿಗಳು ಭೇಟಿ ನೀಡಿ ಕುಂದು -ಕೊರತೆಗಳ ಬಗ್ಗೆ ವಿಚಾರಿಸಿ ಗ್ರಾಮದ ವಿಶೇಷತೆ ಬಗ್ಗೆ ಮಾಹಿತಿಯನ್ನು ಪಡೆದಿರುತ್ತಾರೆ. ಜನಸ್ನೇಹಿ ಪೊಲೀಸ್ ಕಾರ್ಯರೂಪಕ್ಕೆ ಸಹಕಾರ ಕೋರಿರುತ್ತಾರೆ.
ಈ ದಿನ ದಿನಾಂಕ 30/05/2026 ರಂದು ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಕುಂದು ಕೊರತೆ ಸಭೆ"ಯನ್ನು ನಡೆಸಿ , ಕುಂದು ಕೊರತೆಗಳನ್ನು ಆಲಿಸಿ, ಸೂಕ್ತ ಸಲಹೆ ಸೂಚನೆಗಳನ್ನು ನೀಡಲಾಯಿತು.
ಮುಂಬರುವ ಬಕ್ರೀದ್ ಹಬ್ಬದ ಪ್ರಯುಕ್ತ ಇಂದು . ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಿವಿಧ ಸಮುದಾಯದ ಮುಖಂಡರುಗಳೋಂದಿಗೆ "ಶಾಂತಿ ಸಭೆ"ಯನ್ನು ಹಮ್ಮಿಕೊಂಡಿದ್ದು, ಹಬ್ಬದ ಸಂದರ್ಭದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವ ಕುರಿತು ಸೂಕ್ತ ಸೂಚನೆಗಳನ್ನು ನೀಡಲಾಯಿತು.
ದಿನಾಂಕ 07/05/2026 ರಂದು ರಾಮನಗರ ಗ್ರಾ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕ ರವರ ನೇತೃತ್ವದಲ್ಲಿ ಬನ್ನಿಕುಪ್ಪೆ 'ಶ್ರೀ ಬಸವೇಶ್ವರ ದೇವಸ್ಥಾನ ಹಬ್ಬದ' ಪ್ರಯುಕ್ತ ಗ್ರಾಮದಲ್ಲಿ "ಶಾಂತಿ ಸಭೆಯನ್ನು" ಹಮ್ಮಿಕೊಂಡು, ಜಾತ್ರೆ ಮುಂಜಾಗ್ರತೆಯ ಕ್ರಮಗಳ ಬಗ್ಗೆ ಚರ್ಚಿಸಿ, ಸೂಚನೆಗಳನ್ನು ನೀಡಲಾಯಿತು
ಈ ದಿನ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರವರು ಠಾಣಾ ವ್ಯಾಪ್ತಿ ಅವ್ವೇರಹಳ್ಳಿ (SRS ಬೆಟ್ಟ) ಗ್ರಾಮದ "ಶ್ರೀ ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವದ" ಪ್ರಯುಕ್ತ ಮುಂಜಾಗ್ರತ ಕ್ರಮಗಳನ್ನು ಕೈಗೊಂಡು,ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನೇಮಿಸಿ ಸೂಚನೆಗಳನ್ನು ನೀಡದರು.
ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ರೆಸಾರ್ಟ್ಸ್ ಮತ್ತು ಹೋಮ್ ಸ್ಟೇ ಮಾಲೀಕರುಗಳಿಗೆ ಸಭೆಯನ್ನು ಕರೆದು ಸರ್ಕಾರದ ಸುತ್ತೋಲೆಯನ್ವಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆಗಳನ್ನು ನೀಡಲಾಯಿತು.
ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯ ವತಿಯಿಂದ ಎಲ್ಲಾ ಸಾರ್ವಜನಿಕರಿಗೆ 'ಯುಗಾದಿ ಹಬ್ಬದ ಶುಭಾಶಯಗಳು', ಹಬ್ಬದ ಪ್ರಯುಕ್ತ ಜೂಜಾಟ ಇತ್ಯಾದಿ ಅಕ್ರಮ ಚಟುವಟಿಕೆಗಳು ಭಾಗಿಯಾಗದಂತೆ ಮನವಿ, ಭಾಗಿಯಾದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.
ಈ ದಿನ ರಾಮನಗರ ಗ್ರಾ ಠಾಣೆಯಲ್ಲಿ 'ರಂಜಾನ್ ಹಾಗೂ ಯುಗಾದಿ' ಹಬ್ಬದ ಪ್ರಯುಕ್ತ "ಶಾಂತಿ ಸಭೆಯನ್ನು" ನಡೆಸಿ, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದ ರೀತಿಯಲ್ಲಿ ಹಬ್ಬಗಳನ್ನು ಆಚರಿಸುವಂತೆ ಸೂಚಿಸಿ, ಸೂಕ್ತ ಸಲಹೆ ಸೂಚನೆಗಳನ್ನು ನೀಡಲಾಯಿತು.
ರಾಮನಗರ ತಾಲ್ಲೂಕು ಕೆಂಪೇಗೌಡನ ದೊಡ್ಡಿ ಗ್ರಾಮದ ಮನೆಯೊಂದರಲ್ಲಿ ಜೀವನೋಪಾಯಕ್ಕಾಗಿ ಸಾಕಲಾಗಿದ್ದ ಮೇಕೆಗಳನ್ನು ಕಳತನವಾಗಿದ್ದು, ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿ & ಸಿಬ್ಬಂದಿಗಳು ಮೇಕೆಗಳನ್ನು ಪತ್ತೆ ಮಾಡಿ ವಾರಸುದಾರರಿಗೆ ಹಿಂದಿರುಗಿಸಿರುತ್ತಾರೆ.
ರಾಮನಗರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಪೆಟ್ರೋಲ್ ಬಂಕ್ ಗಳಿಗೆ ಭೇಟಿ ನೀಡಿ, ಪೆಟ್ರೋಲ್ ಬಂಕ್ ಗಳಲ್ಲಿ ಕೈಗೊಂಡಿರುವ ಭದ್ರತೆ & ಸುರಕ್ಷತೆಗಳ ಬಗ್ಗೆ ಪರಿಶೀಲಿಸಿ, ಬ್ಯಾಂಕಿಗೆ ಹಣ ಜಮಾವಣೆ ಮಾಡಲು ಹೋಗುವ ಸಂಧರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಲೀಕರು ಹಾಗೂ ಸಿಬ್ಬಂದಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಲಾಯಿತು.
ಇಂದು ಠಾಣೆಯಲ್ಲಿ ತೆರೆದ ಮನೆ ಕಾರ್ಯಕ್ರಮದ ಅಂಗವಾಗಿ ಶಾಲಾ ವಿದ್ಯಾರ್ಥಿಗಳನ್ನು ಠಾಣೆಗೆ ಬರಮಾಡಿಕೊಂಡು, ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿ, ಠಾಣೆಯಲ್ಲಿ ನಡೆಯುವ ಕಾರ್ಯವೈಖರಿಗಳ ಬಗ್ಗೆ ಮಾಹಿತಿ ನೀಡಲಾಯಿತು. ಮಕ್ಕಳಿಗೆ, ಮಕ್ಕಳ ಕಾನೂನು ಬಗ್ಗೆ, ಅಪರಾಧಗಳನ್ನು ತಡೆಗಟ್ಟುವ ಬಗ್ಗೆ, 112 ಸಹಾಯವಾಣಿಯ ಬಗ್ಗೆ ಅರಿವು ಮೂಡಿಸಲಾಯಿತು.
ಅಂತರ್ ರಾಜ್ಯ ಕಳ್ಳರಿಂದ ಬೈಕ್ ಡಿಕ್ಕಿಯಲ್ಲಿ ಇಟ್ಟಿದ್ದ ಚಿನ್ನಾಭರಣ ಕಳ್ಳತನ ಪ್ರಕರಣ – ಸುಮಾರು 20 ಲಕ್ಷ ರೂ ಮೌಲ್ಯದ, 189.45 ಗ್ರಾಂ ತೂಕದ ಚಿನ್ನಾಭರಣಗಳ ವಶ. ರಾಮನಗರ ಗ್ರಾಮಾಂತರ ಪೊಲೀಸರಿಂದ ಕಾರ್ಯಾಚರಣೆ.
ಶಾಲಾ ಮಕ್ಕಳಿಗೆ ಠಾಣೆಯಲ್ಲಿ "ತೆರೆದಮನೆ ಕಾರ್ಯಕ್ರಮ" ಆಯೋಜಿಸಿದ್ದು. ಮಕ್ಕಳಿಗೆ ಠಾಣೆಯ ಪರಿಚಯ ಮತ್ತು ಅಪರಾಧ ಹಾಗೂ ಸೈಬರ್ ಪ್ರಕರಣಗಳ ಅರಿವು ತುರ್ತುಸೇವೆ, ಮಹಿಳಾ ಆಯೋಗ , ಮಕ್ಕಳು ಹಕ್ಕುಗಳ ಬಗ್ಗೆ ತಿಳಿಸಿ ಚರ್ಚಿಸಲಾಯಿತು.