ಕನ್ನಡ ನಾಡಿನ ಕ್ರಾಂತಿಯ ಕಿಡಿ, ದೇಶದ ಸ್ವಾತಂತ್ರಕ್ಕಾಗಿ ಬಲಿದಾನಗೈದ ಕೆಚ್ಚೆದೆಯ ಕಲಿ, ಬ್ರಿಟಿಷ್ ಸರ್ವಾಧಿಕಾರಿ ಸಾಮ್ರಾಜ್ಯದ ವಿರುದ್ಧ ಹೋರಾಡಿ, ಬದುಕನ್ನೇ ಸಮರ್ಪಿಸಿದ ಭಾರತಾಂಬೆಯ ಹೆಮ್ಮೆಯ ಪುತ್ರ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು.
#sangollirayanna
ದೇಶದ ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
ಸಂವಿಧಾನ ಜಾರಿಗೆ ಬಂದ ಈ ದಿನದಂದು ಸಂವಿಧಾನವನ್ನು ಇಡೀ ವಿಶ್ವದಲ್ಲೇ ಮಾದರಿಯಾಗಿ ರೂಪಿಸಲು ಶ್ರಮಿಸಿದ ಗಣ್ಯರನ್ನು ಸ್ಮರಿಸೋಣ. ಅವರ ಕೊಡುಗೆಯನ್ನು ನೆನೆಯೋಣ.
#RepublicDayIndia#ಗಣರಾಜ್ಯೋತ್ಸವ
ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆ ಹಾಗೂ ಮಹಾನವಮಿಯ ಹಾರ್ದಿಕ ಶುಭಾಶಯಗಳು.
ತಾಯಿ ದುರ್ಗಾದೇವಿಯ ಆಶೀರ್ವಾದ ಎಲ್ಲರ ಮೇಲಿರಲಿ. ಸುಖ, ಶಾಂತಿ ಹಾಗೂ ಸಮೃದ್ಧಿ ನೆಲೆಸಲಿ.
#AyudhaPooja#Dasara2025
ಬೆಂಗಳೂರಿನ ಅರಮನೆ ರಸ್ತೆಯ ಕೊಂಡಜ್ಜಿ ಸಭಾಂಗಣದಲ್ಲಿ ಹಿಂದ್ ಮಜ್ದೂರ್, ಕಿಸಾನ್ ಪಂಚಾಯತ್ ಮತ್ತು ನಮ್ಮ ಸಂತೋಷ್ ಲಾಡ್ ಫೌಂಡೇಶನ್ ಆಶ್ರಯದಲ್ಲಿ ನಡೆದ ಕಾರ್ಮಿಕ ನಾಯಕ, ಮಾಜಿ ಶಾಸಕ ಮೈಕೆಲ್ ಫರ್ನಾಂಡೀಸ್ ಅವರ 92ನೇ ಜನ್ಮ ದಿನದ ಅಂಗವಾಗಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ್ಯ @CMofKarnataka ಶ್ರೀ @siddaramaiah ಅವರೊಂದಿಗೆ ಭಾಗವಹಿಸಲಾಯಿತು.
ಕಾರ್ಯಕ್ರಮದಲ್ಲಿ ಮೈಕೆಲ್ ಅವರು ಮತ್ತು ಅವರ ಪತ್ನಿ ಡೋನಾ ಫರ್ನಾಂಡೀಸ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ವೇಳೆ ವಿವಿಧ ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು.
#Bengaluru | @SLaadFoundation
ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ದಾವಣಗೆರೆ ನಗರದ ತ್ರಿಶೂಲ್ ಭವನದಲ್ಲಿ ಹಮ್ಮಿಕೊಂಡಿದ್ದ ಬುದ್ಧ, ಬಸವ ಹಾಗೂ ಅಂಬೇಡ್ಕರ್ : ಹೊಸ ದೃಷ್ಟಿಕೋನ ಕುರಿತು ಒಂದು ದಿನದ ವಿಚಾರ ಸಂಕಿರಣ ಅದ್ಭುತವಾಗಿ ಜರುಗಿತು.
ಸಮಾರಂಭದಲ್ಲಿ ನಾಡಿನ ಹಲವು ಸ್ವಾಮೀಜಿಗಳು, ಸಂತರು, ವಿಚಾರವಾದಿಗಳು, ಲೇಖಕರು ಉಪಸ್ಥಿತರಿದ್ದು, ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರ ಕುರಿತಾಗಿ ಹಲವು ವಿಚಾರಗಳನ್ನು ಮಂಡಿಸಿದರು.
ಇಂತಹ ಅಭೂತಪೂರ್ವ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದ ದಾವಣಗೆರೆಯ ಸಮಸ್ತ ಜನತೆಗೆ ನಾನು ಆಭಾರಿ.
#Buddha #Basavanna #Ambedkar #SantoshLad #SantoshLadFoundation #Davanagere | @SLaadFoundation