ಸಮಾಜದಲ್ಲಿ ಶಾಂತಿ, ಸಹೋದರತೆ, ಸಮಾನತೆ, ಪರಸ್ಪರ ನಂಬಿಕೆ, ಸತ್ಯ, ನ್ಯಾಯ, ನೈತಿಕತೆ ನೆಲೆಸಿ ಸಮಾಜದ ಸರ್ವತೋಮುಖ ಕಲ್ಯಾಣವಾಗಬೇಕೆಂಬ ಪ್ರಾಮಾಣಿಕ ಕಳಕಳಿಯೇ ಶಾಂತಿ ಪ್ರಕಾಶನದ ಚಾಲಕಶಕ್ತಿ.
● ಮಾತಾಪಿತರ ಸ್ಥಾನ-ಮಾನಗಳೇನು ...?
● ಮಾತಾಪಿತರ ನಿರ್ಲಕ್ಷ್ಯಕ್ಕೆ ಕಾರಣಗಳೇನು ... ?
● ಮಾತಾಪಿತರ ಉಜ್ವಲ ಸೇವೆಗೆ
ಪವಿತ್ರ ಕುರ್'ಆನಿನ ಪಾಠಗಳೇನು ... ?
ಮಾತಾಪಿತರ ಸ್ಥಾನ-ಮಾನದ ಕುರಿತು ನಮ್ಮನ್ನು ಸ್ವಯಂ ವಿಚಾರಣೆಗೆ ಒಳಪಡಿಸುವ ಮಹೋನ್ನತ ಕೃತಿ.
'ರಮಝಾನ್' ತಿಂಗಳ ಮಹತ್ವ ಮತ್ತು ಮೌಲ್ಯಗಳನ್ನು ಸಾರುವ ಅತ್ಯುತ್ತಮ ಕೃತಿ.
● ರಮಝಾನ್ ತಿಂಗಳ ಶ್ರೇಷ್ಠತೆ ಏನು ... ?
● ಉಪವಾಸ ವ್ರತದ ಉದ್ದೇಶವೇನು ... ?
● ರಮಝಾನ್ ಉಂಟುಮಾಡುವ ಸಾಮಾಜಿಕ ಬದಲಾವಣೆಗಳೇನು ... ?
● ಉಪವಾಸ ವ್ರತದಿಂದ ಆಗುವ ಆರ್ಥಿಕ ಮತ್ತು
ನೈತಿಕ ಕ್ರಾಂತಿ ಯಾವುದು ... ?
'ಹಿಜಾಬ್' ( ಶಿರವಸ್ತ್ರ) ಮಹಿಳೆಯರ ಗೌರವ ಮತ್ತು ಘನತೆಯ ಸಂಕೇತವಾಗಿದೆ. ಇವತ್ತು ಇದನ್ನೇ ಗುರಿಯಾಗಿರಿಸಿ ನಕಾರಾತ್ಮಕ ರೂಪದಲ್ಲಿ ಬಿಂಬಿಸಲಾಗುತ್ತದೆ, ವಾಸ್ತವದಲ್ಲಿ ಹಿಜಾಬ್ ಎಂದರೇನು, ಅದರ ಮಹತ್ವ ಮತ್ತು ಮೌಲ್ಯಗಳೇನು ಎಂಬಿತ್ಯಾದಿ ವಿಷಯಗಳ ಕುರಿತು ಬೆಳಕು ಚೆಲ್ಲಿರುವ -ಶಾಂತಿ ಪ್ರಕಾಶನ-ದ ವಿಶೇಷ ಆವೃತಿ ಇದಾಗಿದೆ.
ಶಾಂತಿ ಪ್ರಕಾಶನದ ಹೊಸ ಪ್ರಕಟನೆಯಾದ 'ಮಾತಾಪಿತರು ಸ್ವರ್ಗದ ಬಾಗಿಲು' ಎಂಬ ಕೃತಿಯು ಮಕ್ಕಳು ಮತ್ತು ಮಾತಪಿತರ ನಡುವಿನ ಅನ್ಯೋನ್ಯ ಸಂಬಂಧ ಮತ್ತು ಅವರ ಮೇಲಿರುವ ಹೊಣೆಗಾರಿಕೆಗಳ ಕುರಿತು ವಿವರಿಸಿರುವ ಒಂದು ಅನನ್ಯ ಕೃತಿಯಾಗಿದೆ.