ಇವರಿಗೆ
(@AKSSAofficial ) @secretarykpsc@shalinirajnish@siddaramaiah@PriyankKharge@INCKarnataka@tv9kannada@AsianetNewsSN@NewsFirstKan@publictvnews@BYVijayendra@INCIndia@INCKarnataka
ಮಾನ್ಯರೇ,
ವಿಷಯ: ಸಿಂಧನೂರಿನಲ್ಲಿ ನಡೆದ PDO ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ ಆದ ಅವ್ಯವಸ್ಥೆ ಪ್ರಶ್ನಿಸಿದ ಅಭ್ಯರ್ಥಿಗಳ ವಿರುದ್ಧ ದಾಖಲಿಸಲಾದ ಪೊಲೀಸ್ ಪ್ರಕರಣ ವಾಪಸ ಪಡಿಯುವ ಮನವರಿಕೆ ಕುರಿತು.
ಈ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ 17 ನವೆಂಬರ್ 2024 ರಂದು ಸಿಂಧನೂರು ತಾಲೂಕನಲ್ಲಿ ಪಂಚಾಯತ್ ರಾಜ್ ಅಭಿವೃದ್ಧಿ ಅಧಿಕಾರಿ ಪರೀಕ್ಷೆಯು ಸರ್ಕಾರಿ ಮಹಾವಿದ್ಯಾಲಯ ಸಿಂಧನೂರು ನಲ್ಲಿ ಇದ್ದು ನಾವೆಲ್ಲ ಸ್ಪರ್ಧಾರ್ಥಿಗಳು ಹಾಜರಾಗಲು ಅಲ್ಲಿಗೆ ಹೋಗಿರುತ್ತೇವೆ.
ಆದರೆ ಅಲ್ಲಿ ಪರೀಕ್ಷಾ ಕೊಠಡಿಗೆ ತಲುಪಿದ ನಂತರ ಮೊದಲನೆದಾಗಿ ಅಲ್ಲಿನ ಪರೀಕ್ಷಾ ಕೊಠಡಿ ಮೇಲ್ವಿಚಾರಕರು ಸರಿಯಾದ ಸಮಯಕ್ಕೆ ಪ್ರಶ್ನೆ ಪತ್ರಿಕೆಯನ್ನು ನೀಡಿರುವುದಿಲ್ಲ.
ಆದ್ದರಿಂದ ಸರಿಯಾದ ಸಮಯಕ್ಕೆ ಪ್ರಶ್ನೆ ಪತ್ರಿಕೆಯನ್ನು ನೀಡಬೇಕೆಂದು ಕೇಳಿದಾಗ ಅದಕ್ಕೆ ಪ್ರತ್ಯುತ್ತರವಾಗಿ ಕೊಡುತ್ತವೆ ಅಂತ ಅಂದರು ಆದರೆ ಸಮಯ ಹತ್ತಾದರೂ(ಅಂದರೆ ಪರೀಕ್ಷೆಯ ಸಮಯ ಪ್ರಾರಂಭವಾದರೂ)ಕೂಡ ಪ್ರತಿ ಪರೀಕ್ಷಾ ಕೊಠಡಿಗಳಲ್ಲಿ ಹಾಜರಿದ್ದಂತ 24 ಜನರಿಗೂ ಕೂಡ ಪ್ರಶ್ನೆ ಪತ್ರಿಕೆಯನ್ನು ಕೊಡಲಿಲ್ಲ ಬದಲಾಗಿ
ಅಲ್ಲಿ ಇದ 35 ಪರೀಕ್ಷಾ ಕೋಣೆಯಲ್ಲಿದ 24 ಜನರಲ್ಲಿ ಕೇವಲ 12 ಜನರಿಗೆ ಮಾತ್ರ ಪ್ರಶ್ನೆ ಪತ್ರಿಕೆಯನ್ನು ಕೊಟ್ಟಿದರು ಇದು ಕೇವಲ ಒಂದು ರೂಮಿಗೆ ಮಾತ್ರ ಸಂಬಂಧಿಸಿಲ್ಲದೆ ಇಡೀ ಕಾಲೇಜಿನಲ್ಲಿ ಇದ್ದಂತ ಎಲ್ಲರಿಗೂ ಕೂಡ ಸಮಸ್ಯೆಯಾಗಿತ್ತು ಪ್ರತಿ ರೂಮಿನಲ್ಲಿಯೂ ಕೇವಲ 12 ಪ್ರಶ್ನೆ ಪತ್ರಿಕೆ ಮಾತ್ರ ಒದಗಿಸಲಾಗಿತ್ತು (ಅಂದರೆ ಅಲ್ಲಿ ಇದ್ದ 840 ಜನರಲ್ಲಿ ಕೇವಲ 420 ವಿದ್ಯಾರ್ಥಿಗಳಿಗೆ ಮಾತ್ರ ಒದಗಿಸಲಾಗಿತ್ತು) ಆದರೆ ಇನ್ನುಳಿದ 12 ವಿದ್ಯಾರ್ಥಿಗಳಿಗೆ ಯಾವುದೇ ಪ್ರಶ್ನೆ ಪತ್ರಿಕೆ ಒದಗಿಸಿರಲಿಲ್ಲ.
ಆದ್ದರಿಂದ ನಾವು ಪರಿಕ್ಷಾ ಕೊಠಡಿಯ ಮೇಲ್ವಿಚಾರಕರನ್ನು ಪ್ರಶ್ನಿಸಿದ್ದೆವು ಆದರು ಅವರು ಯಾವುದೇ ಸ್ಪಂದನೆ ನೀಡಿಲ್ಲ ಅದಾದ ಸ್ವಲ್ಪ ಹೊತ್ತಿನಲ್ಲಿ ಕೆಳಗಡೆ ರೂಮಿನಲ್ಲಿ ಇದರ ಕುರಿತಾಗಿ ಗದ್ದಲ ಗಲಾಟೆ ಪ್ರಾರಂಭವಾಯಿತು ಅದೇನೆಂದು ನೋಡಲು ಹೋದೆವು ಆದರೆ ಆ ರೂಮಿನಲ್ಲಿ ಪ್ರಶ್ನೆ ಪತ್ರಿಕೆಯ ಬಂಡಲ್ ಮೊದಲೇ ಹರಿದಿತ್ತು ಇದನ್ನು ಪ್ರಶ್ನಿಸಿದ ವಿದ್ಯಾರ್ಥಿಗಳು ಹೋರಾಟಕ್ಕೆ ಮುಂದಾದರು.
ನಾವು ಮತ್ತೆ ನಮ್ಮ ರೂಮಿಗೆ ತೆರಳಿದಾಗ ಯಾರೊಬ್ಬರೂ ಅಲ್ಲಿ ಇರಲಿಲ್ಲ ಆದ್ದರಿಂದ ಕೆಳಗಡೆ ಬಂದು ನಾವು ಕೂಡ ಪ್ರಶ್ನಿಸಿದ್ದೆವು ಪ್ರಶ್ನೆಸಿದಾಗ ಅಲ್ಲಿನ ವ್ಯವಸ್ಥಾಪಕರಲ್ಲಿ ಒಬ್ಬರಾದ ಸ್ಥಳೀಯ ಯಾರೊಬ್ಬರು ನಮಗೆ ಧಮ್ಕಿಯನ್ನು ಹಾಕುವುದರ ಜೊತೆಗೆ ನಾವು ಸ್ಥಳೀಯರು ನಾವು ನಿಮ್ಮನ್ನ ಏನು ಬೇಕಾದರೂ ಮಾಡುತ್ತೇವೆ ಅನ್ನೋ ಮಾತನ್ನು ಹೇಳಿರುತ್ತಾರೆ.
ಅಲ್ಲಿಂದ ಮುಂದೆ ಹೋಗಿ ತಹಶೀಲ್ದಾರರ ಜೊತೆ ಮಾತಾಡಿದಾಗ ಅವರು ಸಹ ಒಂದು ಗಂಟೆ ಹೆಚ್ಚುವರಿ ಆಗಿ ಕೊಡುತ್ತೇವೆ ಉಳಿದ ಪೇಪರ್ ಇನ್ನೇನು ಬರುತ್ತವೆ ಎಂದು ಹೇಳುವುದರ ಮೂಲಕ ಮತ್ತೆ ಪರೀಕ್ಷೆಯನ್ನು ಬರೆಯಲು ನಮಗೆ ಹೇಳಿದರು ಆದರೆ ನಾವು ಅವರ ಮಾತನ್ನು ಒಪ್ಪಲಿಲ್ಲ.
ಅಲ್ಲಿಯೇನೋ ದುರಾಚಾರ ಅಕ್ರಮ ನಡೆದಿದೆ ಎಂಬ ಅನುಮಾನದ ಮೇಲೆ ಹೋರಾಟಕ್ಕೆ ಮುಂದಾದೆವು ಈ ಒಂದೇ ಕಾರಣದಿಂದ ಯಾರ ಒತ್ತಡಕ್ಕೂ ಒಳಗಾಗದೆ ಸ್ವಯಂ ಪ್ರೇರಿತರಾಗಿ ನಮಗಾದ ಅನ್ಯಾಯದ ವಿರುದ್ಧ ನಾವು ಹೋರಾಟಕ್ಕೆ ಮುಂದಾದೆವು,
ಅದಾದ ಕೆಲವು ಗಂಟೆಗಳ ಬಳಿಕ ತಹಶೀಲ್ದಾರರು ಎರಡನೇ ಪ್ರಶ್ನೆ ಪತ್ರಿಕೆಯನ್ನಾದರೂ ಬರೆಯಿರಿ ಅಂತ ಹೇಳಿದರು ಅದನ್ನು ಒಪ್ಪದ ನಾವು ನಮ್ಮ ಹೋರಾಟವನ್ನು ಮುಂದುವರಿಸಿದೆವೂ, ತಾವು ಮಾಡಿದ ತಪ್ಪನ್ನು ಮರೆಮಾಚಲು ಎರಡನೇ ಪ್ರಶ್ನೆ ಪತ್ರಿಕೆಯನ್ನು ಬರೆಯಲು ಅವಕಾಶ ನೀಡುವ ರೀತಿ ಯಲ್ಲಿ ವಿದ್ಯಾರ್ಥಿಗಳ ಮನವೊಲಿಕೆಗೆ ಮುಂದಾದಾಗ ಕೆಲವೊಂದಿಷ್ಟು ಜನ ವಿದ್ಯಾರ್ಥಿ ಮಾತ್ರ ಪರೀಕ್ಷೆಯನ್ನು ಬರೆಸಲು ಒಪ್ಪಿದರು ಇದನ್ನು ಒಪ್ಪದ ನಾವು ನಮ್ಮ ಹೋರಾಟವನ್ನು ಮುಂದುವರಿಸಿದೆವು.
ಸಾಯಂ ಕಾಲ ನಾಲ್ಕರವರೆಗೂ ಕೂಡ ವಿದ್ಯಾರ್ಥಿಗಳು ತಮ್ಮ ಹೋರಾಟವನ್ನು ಮುಂದುವರಿಸಿದರು ಆದರೂ ಯಾವ್ ಅಧಿಕಾರಿ ಕೂಡ ತಮ್ಮ ದೋಷವನ್ನು ಒಪಲಿಲ್ಲ, ಬದಲಾಗಿ
ಅಲ್ಲಿನ ಅಧಿಕಾರಿಗಳು ತಮ್ಮ ತಮ್ಮ ತಪ್ಪನ್ನು ಮರೆಮಾಚಲು ವಿದ್ಯಾರ್ಥಿಗಳನ್ನು ಹಿಂದಿಕಲೂ ಪ್ರಯತ್ನಿಸಿದರು ಕೊನೆದಾಗಿ ತಾವು ಮಾಡಿದ ತಪ್ಪನ್ನು ಅಲ್ಲಿ ನೆರದಿದ್ದ 840 ಅಭ್ಯರ್ಥಿಗಳ ಪರವಾಗಿ ಹೋರಾಟಕ್ಕೆ ಮುಂದಾದ ಅಭ್ಯರ್ಥಿಗಳಲ್ಲಿ ಕೇವಲ 12 ಅಭ್ಯರ್ಥಿಗಳ ಮೇಲೆ ಪೋಲಿಸ್ ಪ್ರಕರಣ ದಾಖಲಿಸಿ ತಮ್ಮ ತಪ್ಪನ್ನು ಮರೆಮಾಚಲು 12 ಅಭ್ಯರ್ಥಿಗಳನ್ನು ಬಲಿಪಶುವನ್ನಾಗಿ ಮಾಡುವ ಕೆಲಸಕ್ಕೆ ಅಲ್ಲಿನ ಆಡಳಿತ ವ್ಯವಸ್ಥೆ ಮುಂದಾಗಿದೆ ಮತ್ತು 12 ಜನ ಅಭ್ಯರ್ಥಿಗಳ ಮೇಲೆ ಪೊಲೀಸ್ ಪ್ರಕರಣ ದಾಖಲಿಸಿದೆ
ಆದ್ದರಿಂದ 12 ವಿದ್ಯಾರ್ಥಿಗಳ ವಿರುದ್ಧ ಮಾಡಲಾದ ಪ್ರಕರಣವನ್ನು ರದ್ದುಪಡಿಸಲು ತಮ್ಮ ಕಡೆಯಿಂದ ಸಹಕರಿಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿಕೊಡಿ ಎಂದು ಮನವಿ ಮಾಡಿಕೊಳ್ಳುತ್ತೇವೆ ಮತ್ತು ಅಲ್ಲಿ ಕರ್ತವ್ಯದಲ್ಲಿ ಲೋಪವೆಸಗಿದ ಕರ್ತವ್ಯ ಭ್ರಷ್ಟ ಸಿಬ್ಬಂದಿಗಳ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಂಡು ಅಭ್ಯರ್ಥಿಗಳಿಗೆ ನ್ಯಾಯವನ್ನು ಒದಗಿಸಿ ಕೊಡಬೇಕಾಗಿ
(ಮರುಪರೀಕ್ಷೆ) ವಿನಂತಿಸಿಕೋಳ್ಳುತ್ತೇವೆ.
ಸುಳ್ಳು FIR ರಲ್ಲಿ ಯಾವುದೇ ಪ್ರತಿಭಟನೆಯಲ್ಲಿ ಭಾಗಿಯಾಗದ ಅಭ್ಯರ್ಥಿಗಳ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ.6ನೇ ಆರೋಪಿ ಮತ್ತು
8ನೇ ಆರೋಪಿ ಎಂದು ಅಧಿಕಾರಿಗಳು ಸುಳ್ಳು FIR ಅಲ್ಲಿ ಸೇರಿಸಿದ್ದಾರೆ. ಇದು ಅಧಿಕಾರಿಗಳ ದೂರವರ್ತನೆಗೆ ಹಿಡಿದ ಕೈಗನ್ನದಿಯಾಗಿದೆ
ಧನ್ಯವಾದಗಳೊಂದಿ
ಇಂತಿ ನಿಮ್ಮ ವಿಶ್ವಾಸಿಗಳು
01. ಕಾಶಿಪತಿ
02.ಬಾಬು
03.ಅರುಣ್ ಗೌಡ
04.ಅಮಿತ್
05. ವೆಂಕಟೇಶ್
06. ರವಿಶಂಕರ್
07. ವಿಶ್ವಾರಾಧ್ಯ
08.ಬಸವರಾಜ್
09.ವೆಂಕಟೇಶ್
10. ರಾಘವೇಂದ್ರ
11. ರವಿತೇಜ
12. ಸಾಬರೆಡ್ದಿ
#PSI545_ ಮರುಪರೀಕ್ಷೆ ನಡೆದು 7 ತಿಂಗಳು ಕಳೆದರೂ ಕೂಡ ಅದರ ಫಲಿತಾಂಶ ಇನ್ನು ಪ್ರಕಟವಾಗಿಲ್ಲ. ಈ ಕುರಿತು ಮನನೊಂದ ಅಭ್ಯಥಿಗಳ ಪೋಷಕರು ಮಾನ್ಯ ಮುಖ್ಯ ಮಂತ್ರಿಗಳು ಮತ್ತು ಮಾನ್ಯ ಗೃಹ ಮಂತ್ರಿಗಳಿಗೆ ತಮ್ಮ ಕಷ್ಟಗಳನ್ನು ಹೇಳುವ ಮೂಲಕ ಘನ ಸರ್ಕಾರಕ್ಕೆ ಬೇಗ ಆಯ್ಕೆಪಟ್ಟಿಯನ್ನು ಪ್ರಕಟಿಸುವಂತೆ ಈ ಮೂಲಕ ಒತ್ತಾಯಿಸಿದ್ದಾರೆ @DrParameshwara
ಶ್ರೀಯುತ ಗೃಹ ಸಚಿವರೇ ಮತ್ತು ಕೆಇಎ ಎಂಡಿ ಪ್ರಸನ್ನ ಸರ್ ಅವರೇ ಸೆಪ್ಟೆಂಬರ್ 22 ರ ನಂತರ 1 ವಾರ ದಿಂದ 15 ದಿನಗಳ ಒಳಗಾಗಿ 402 PSI ಪರೀಕ್ಷೆ ಮಾಡಬಹುದು ಸರ್ ಪ್ಲಿಜ್ 🙏ದಯವಿಟ್ಟು ನೀವು ಮನಸ್ಸು ಮಾಡಿದ್ರೇ ನಿಮ್ಮಿಂದ ಮಾತ್ರ ಸಾಧ್ಯ ಸರ್🙏
ಪೊಲೀಸ್ ಸಬ್ ಇನ್ಸ್ಪೆಕ್ಟರ್ ಲಿಖಿತ ಪರೀಕ್ಷೆಯ ನಿರ್ಧರಿತ ದಿನಾಂಕವನ್ನು ಮುಂದೂಡುವಂತೆ ಒತ್ತಾಯಿಸಿ ರಾಜ್ಯ ಬಿಜೆಪಿ ನಿಯೋಗವು ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ನಿಯೋಗದಲ್ಲಿ ಮಾಜಿ ಉಪಮುಖ್ಯಮಂತ್ರಿಗಳಾದ @drashwathcn , ಬಿಜೆಪಿ ಯುವಮೋರ್ಚಾ ರಾಜ್ಯ ಅಧ್ಯಕ್ಷರಾದ ಶ್ರೀ @dheerajmuniraj ಮತ್ತು ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ನಡೆಯುತ್ತಿರುವ ಪಿಎಸ್ಐ ಲಿಖಿತ ಪರೀಕ್ಷೆಯು ಸೆಪ್ಟೆಂಬರ್ 22ರಂದು ನಿಗದಿಯಾಗಿತ್ತು. ಇದೇ ದಿನಾಂಕದಂದು ಕೇಂದ್ರ ಲೋಕಸೇವಾ ಆಯೋಗದ ಮುಖ್ಯ ಪರೀಕ್ಷೆ ಇರುವುದರಿಂದ ಹಲವು ಪರೀಕ್ಷಾರ್ಥಿಗಳು ಅವಕಾಶ ವಂಚಿತರಾಗುತ್ತಾರೆ. ಇದನ್ನು ಪರಿಗಣಿಸಿ ಮಾನ್ಯ ಗೃಹ ಸಚಿವರಾದ @DrParameshwara ಅವರಿಗೆ ಪಿಎಸ್ಐ ಲಿಖಿತ ಪರೀಕ್ಷೆಯನ್ನು ಮುಂದೂಡುವಂತೆ ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷರು ಮತ್ತು ಶಾಸಕರಾದ ಧೀರಜ್ ಮುನಿರಾಜು ಹಾಗೂ ಬಿಜೆಪಿ ನಿಯೋಗದೊಂದಿಗೆ ಮನವಿ ಸಲ್ಲಿಸಲಾಯಿತು. ವಿದ್ಯಾರ್ಥಿಗಳ ಹಿತಾಸಕ್ತಿ ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಕೋರುತ್ತೇನೆ
ಮಾನ್ಯ ಗೃಹ ಮಂತ್ರಿಗಳೇ ಹೆಚ್ಚಿನ ಮನವಿಗಳು ಬಂದಲ್ಲಿ PSI ಪರೀಕ್ಷೆಯನ್ನು ಮುಂದೂಡುತ್ತೇವೆ ಎಂದು ಹೇಳಿದ್ದಿರಿ, ಅದರಂತೆ ಮನವಿಗಳನ್ನು ಸಲ್ಲಿಸಿಯು ಆಯಿತು, ಈಗ ನೀವು PSI ಪರೀಕ್ಷೆಯನ್ನು ಮುಂದೂಡದಲ್ಲಿ ನೂರಕ್ಕೂ ಹೆಚ್ಚು UPSC ಮುಖ್ಯ ಪರೀಕ್ಷೆಯನ್ನು ಬರೆಯುವ ಅಭ್ಯರ್ಥಿಗಳು PSI ಪರೀಕ್ಷೆಯಿಂದ ವಂಚಿತರಾಗುತ್ತಾರೆ. @DrParameshwara (1/2)
@siddaramaiah@DrParameshwara
ಸೆಪ್ಟೆಂಬರ್ 22ರಂದು ಪಿಎಸ್ಐ 402 ಪರೀಕ್ಷೆ ನಿಗದಿಯಾಗಿದೆ ಅದೇ ದಿನ ನಮ್ಮ ನಾಡಿನ ಈ ಕೆಳಕಂಡ ವಿದ್ಯಾರ್ಥಿಗಳು ಯುಪಿಎಸ್ಸಿ ಮುಖ್ಯ ಪರೀಕ್ಷೆಯನ್ನು ತೆಗೆದುಕೊಂಡಿದ್ದಾರೆ
ಯುಪಿಎಸ್ಸಿ ಪರೀಕ್ಷೆ ತೆಗೆದುಕೊಳ್ಳಿ ಎಂದು ಪ್ರೋತ್ಸಾಹಿಸಿ ಅವಕಾಶ ನೀಡದಿದ್ದರೆ ಹೇಗೆ ?
ಸರ್ಕಾರವೇ ಕನಸುಗಳನ್ನು ಕೊಲ್ಲುತ್ತಿದೆ!
👆👆👆👆👆👆👆👆👆
ಪೊಲೀಸ್ ಕಾನ್ಸ್ಟೇಬಲ್ ಹುದ್ದೆಯ ವಯೋಮಿತಿಯನ್ನು ಪ್ರಸ್ತುತ ನೇಮಕಾತಿ ಆಯ್ಕೆಯಲ್ಲಿ ಸಾಮಾನ್ಯ ಅಭ್ಯರ್ಥಿಗಳಿಗೆ 30 ವರ್ಷ ಮತ್ತು ಎಸ್ಸಿ ಎಸ್ಟಿ ಒಬಿಸಿ ಅಭ್ಯರ್ಥಿಗಳಿಗೆ 33 ವರ್ಷ ಕಾಯಂ ಆಗಿ ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿಯನ್ನು ಹೆಚ್ಚಿಗೆ ಮಾಡಿಕೊಡಬೇಕೆಂದು ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದೇವೆ