ನವರಾತ್ರಿ ಎರಡನೇ ದಿನ ದೇವಿ ಬ್ರಹ್ಮಚಾರಿಣಿ ದೇವಿಯ ಆರಾಧನೆಯು ಸ್ಥಿರತೆ, ತ್ಯಾಗ, ಶಾಂತಚಿತ್ತ, ಸದ್ಗುಣ, ಸ್ವನಿಯಂತ್ರಣದ ಹೆಚ್ಚಳಕ್ಕೆ ಕಾರಣವಾಗುತ್ತದೆ. ಜೀವನದಲ್ಲಿ ಎದುರಾಗುವ ಕಷ್ಟದ *ಸಮಯದಲ್ಲೂ ಮನಸ್ಸು ಕರ್ತವ್ಯದಿಂದ ವಿಮುಖವಾಗುವುದಿಲ್ಲ. ದೇವಿಯ ಆರಾಧನೆಯು ಮನಸ್ಸಿನಲ್ಲಿರುವ ಕೆಟ್ಟ ಗುಣ, ಕಲ್ಮಶ ಮತ್ತು ದೋಷಗಳನ್ನು ನಿವಾರಿಸುತ್ತದೆ.
ನವರಾತ್ರಿಯ ಮೊದಲನೇ ದಿನ ಶೈಲಪುತ್ರಿ ದೇವಿ ಆರಾಧನೆ
ನವರಾತ್ರಿಯ ಮೊದಲ ದಿನ ದೇವಿಯನ್ನು ಶೈಲಪುತ್ರಿಯ ರೂಪದಲ್ಲಿ ಪೂಜಿಸಲಾಗುತ್ತದೆ. ದಕ್ಷ ಪುತ್ರಿ ಸತೀ ದೇವಿ ಯಜ್ಞ ಕುಂಡದಲ್ಲಿ ಪ್ರಾಣ ತೆತ್ತು ಮತ್ತೆ ಶಿವನನ್ನು ಸೇರಲು ಪರ್ವತರಾಜ ಹಿಮವಂತನ ಮಗಳಾಗಿ ಹುಟ್ಟುತ್ತಾಳೆ. ಅವಳ ಈ ರೂಪವೇ 'ಶೈಲ ಪುತ್ರಿ.
#SRFP#BSCT#Navratri2025
ಜನಮನದಲ್ಲಿ ನೆಲೆಸಿರುವ ಜಾಗತಿಕ ನಾಯಕ ಸಮಾಜದ ಪ್ರತಿಯೊಬ್ಬನೂ ಸುಖ-ಸಂತೋಷ-ಸಮೃದ್ಧಿಯಿಂದ ಇರಲೆಂದು ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದ ಸಹೃದಯಿ ನಮ್ಮ ನೆಚ್ಚಿನ ಹೆಮ್ಮೆಯ ಪ್ರಧಾನಿಗಳಾದ
ಶ್ರೀ ನರೇಂದ್ರ ಮೋದಿಜಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
#nimmavasandeepreddy#SandeepReddyForPeople#SRFP#BSCT
ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಪುಣ್ಯಸ್ಮರಣೆ
ದೇಶದ ಏಕತೆಗಾಗಿ ಶ್ರಮಿಸಿದ ಹಿರಿಯ ಚೇತನ, ಭಾರತೀಯ ಜನಸಂಘದ ಸ್ಥಾಪಕ, ಖ್ಯಾತ ಶಿಕ್ಷಣ ತಜ್ಞ, ಭವ್ಯ ಭಾರತದ ಬಗ್ಗೆ ಅಪಾರ ಕನಸು ಕಂಡಿದ್ದ ನಾಯಕ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಆದರ್ಶ, ಚಿಂತನೆಗಳಿಂದ ಸ್ಫೂರ್ತಿ ಪಡೆಯೋಣ.
ಕಬೀರ್ ದಾಸ್ ನೇಯ್ಗೆ ಮಾಡುತ್ತಿದ್ದಾಗ, ಎಲ್ಲರೂ ಅವರು ಬಟ್ಟೆಗಳನ್ನು ನೇಯುತ್ತಿದ್ದಾರೆಂದು ಭಾವಿಸಿದ್ದರು. ವಾಸ್ತವವಾಗಿ, ಅವರು ಪ್ರೀತಿ ಮತ್ತು ಭಕ್ತಿಯ ನೂಲು ಮತ್ತು ನೂಲಿನಿಂದ ನೇಯುತ್ತಿದ್ದರು.
ಬುದ್ಧರ ಸಂದೇಶವು ಶಾಂತಿ, ಸರಳತೆ, ಮತ್ತು ಸ್ವಯಂ ಜ್ಞಾನದ ಮೇಲೆ ಕೇಂದ್ರೀಕೃತವಾಗಿದ್ದು, ಇಂದಿಗೂ ವಿಶ್ವದಾದ್ಯಂತ ಲಕ್ಷಾಂತರ ಜನರಿಗೆ ಮಾರ್ಗದರ್ಶನ ನೀಡುತ್ತಿದೆ. ಎಲ್ಲರಿಗೂ ಬುದ್ಧ ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು.
ಪೂಂಚ್ ಮೇಲೆ ನಡೆದ ಪಾಕಿಸ್ತಾನದ ಶೆಲ್ ದಾಳಿಗೆ ಹುತಾತ್ಮರಾದ ಭಾರತೀಯ ಸೇನಾ ಯೋಧ ದಿನೇಶ್ ಕುಮಾರ್ ಶರ್ಮಾರವರ ಆತ್ಮಕ್ಕೆ ಶಾಂತಿ ದೊರಕಲಿ, ದೇವರು ಯೋಧರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಕರುಣಿಸಲಿ.