ನಿಮ್ಮ ಬದ್ಧತೆಯ ಕೆಲಸ ಮತ್ತು ಉತ್ಸಾಹ ಪ್ರಶ್ನಾತೀತ ಸರ್ @drmcsudhakar, ಲೋಕಸಭಾ MCC ಗೂ ಮೊದಲೇ ಸಹಾಯಕ ಪ್ರಾಧ್ಯಾಪಕರಿಗೆ ನೇಮಕಾತಿ ಆದೇಶ ನೀಡಿದಲ್ಲಿ ಈ ಬದ್ಧತೆ ಮತ್ತು ಕೆಲಸದ ವೇಗ ಸಾರ್ಥಕವಾಗುತ್ತದೆ, ಸಾವಿರಾರು ಕುಟುಂಬಗಳು ನಿಮ್ಮನ್ನು ಕೊನೆವರೆಗೆ ನೆನೆಯುತ್ತಾರೆ ಮತ್ತು ಹರಸುತ್ತಾರೆ, ಸಾವಿರಾರು ಜನರ ಬದುಕು ಹಸನಾಗುತ್ತದೆ.
ಫೆಬ್ರವರಿ ಕೊನೆಯ ವಾರದಲ್ಲಿ ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಸಂಭವವಿರುವುದರಿಂದ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಆದೇಶವನ್ನು ಫೆಬ್ರವರಿ ಮೊದಲ ವಾರದೊಳಗೆ ನೀಡುವ ಮೂಲಕ ಉದ್ಯೋಗ ಭಾಗ್ಯ ನೀಡಬೇಕೆಂದು ಶಿಸ್ತು, ಸರಳತೆ ಹಾಗೂ ಬದ್ಧತೆಗೆ ಹೆಸರಾಗಿರುವ ಗೌರವಾನ್ವಿತ ಉನ್ನತ ಶಿಕ್ಷಣ ಸಚಿವರಲ್ಲಿ ವಿನಂತಿಸುತಿದ್ದೇವೆ 🙏
@drmcsudhakar
ಉದ್ಯೋಗ ಆಕಾಂಕ್ಷಿಗಳ ಬಹು ದಿನಗಳ ಕನಸು ಕೋರ್ಟ್ ಪ್ರಕರಣ ಇತ್ಯರ್ಥ ನಂತರ ವರ್ಷಗಟ್ಟಲೆ ನೆನಗುದಿಗೆ ಬಿದ್ದಿದ್ದ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಂತಿಮ ಆಯ್ಕೆ ಮಾಡಿ ಅಧಿಕೃತವಾಗಿ ಬಿಡುಗಡೆಗೊಳಿಸಿದ್ದು ಆಯ್ಕೆಯಾಗಿರುವ ಎಲ್ಲಾ ಅಭ್ಯರ್ಥಿಗಳಿಗೆ ಅಭಿನಂದನೆಗಳು.
#drmcsudhakar#highereducation#Minister#Assistant#Professors
ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಆಯ್ಕೆ ಪಟ್ಟಿಯನ್ನು ಇಂದು ವಿಶೇಷ ರಾಜ್ಯಪತ್ರದಲ್ಲಿ ಪ್ರಕಟಿಸುವಲ್ಲಿ ಕಾರಣಕರ್ತರಾದ ಸನ್ಮಾನ್ಯ HEM @drmcsudhakar ಸರ್ ಹಾಗೂ ಉನ್ನತ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಮತ್ತು ಇತರೆ ಅಧಿಕಾರಿಗಳಿಗೆ ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆಯಾದ 1209 ಅಭ್ಯರ್ಥಿಗಳ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು 🙏💐
ಇಂದು ಸಹಾಯಕ ಪ್ರಾಧ್ಯಾಪಕರ ನೇಮಕಾತಿಯ GO & Gezzet ಪ್ರಕ್ರಿಯೆ ಯಶಸ್ವಿಯಾಗಿ ನೇರವೇರಲು ಕಾರಣರಾದ ನೇರ ನಡೆನುಡಿಯ, ಅಪರೂಪದ, ಧೀಮಂತ ವ್ಯಕ್ತಿತ್ವದ ಗೌರವಾನ್ವಿತ ಉನ್ನತ ಶಿಕ್ಷಣ ಸಚಿವರಾದ @drmcsudhakar ಸರ್ ರವರಿಗೆ ಹಾಗೂ ಇಲಾಖೆಯ ಗೌರವಾನ್ವಿತ ಅಧಿಕಾರಿಗಳಿಗೆ ಸಮಸ್ತ ಅಭ್ಯರ್ಥಿಗಳ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು💐💐🙏🙏
ಇಂದು ಶಿಕ್ಷಣ ಪ್ರೇಮಿ, ಶಿಕ್ಷಕರ ಕಣ್ಮಣಿ ಶ್ರೀ ಪುಟ್ಟಣ್ಣ ಸರ್ ರವರು ಮತ್ತು ಅಸೋಸಿಯೇಷನ್ ಪದಾಧಿಕಾರಿಗಳು ಉನ್ನತ ಶಿಕ್ಷಣ ಸಚಿವಾಲಯ ಕಛೇರಿಗೆ ಆಗಮಿಸಿ ಶೀಘ್ರ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯನ್ನು ಪೂರ್ಣಗೊಳಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಮಾನ್ಯರಿಗೆ ಧನ್ಯವಾದಗಳು 🙏
ಸಚಿವರಾದ @drmcsudhakar ಸರ್ ರವರಿಗೂ ಧನ್ಯವಾದಗಳು 🙏
Article 371J ಗೊಂದಲ KAT ಯಲ್ಲಿ ಬಗೆಹರಿದಿದೆ ಈ ಮೂಲಕ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಗೆ ಇದ್ದ ತಡೆ ನಿವಾರಣೆಯಾಗಿದೆ, ಈ ಹಿಂದೆ ತಾವು ಮಾತು ಕೊಟ್ಟಂತೆ ಶೀಘ್ರವಾಗಿ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಜೊತೆಗೆ ಕಾಲೇಜು ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಮನವಿ.
@drmcsudhakar
HK ಮೀಸಲಾತಿ ಬಗೆಗಿನ ಬಹು ನಿರೀಕ್ಷಿತ KAT ತೀರ್ಪು ಹೊರಬಿದ್ದಿದೆ, ಸಹಾಯಕ ಪ್ರಾಧ್ಯಾಪಕರ ಅಂತಿಮ ಆಯ್ಕೆಪಟ್ಟಿಗೆ ಇದ್ದ ಅಡೆತಡೆಗಳು ನಿವಾರಣೆಯಾಗಿವೆ, ಇನ್ನಾದರೂ ವಿಳಂಬ ಮಾಡದೇ ನೇಮಕಾತಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ನೇಮಕಾತಿ ಆದೇಶ ನೀಡಬೇಕೆಂದು ಕೋರುತಿದ್ದೇವೆ.
@drmcsudhakar@PriyankKharge#Assistant_Professors_Recruitment
ಗೌರವಾನ್ವಿತ ಉನ್ನತ ಶಿಕ್ಷಣ ಸಚಿವರಾದ @drmcsudhakar ರವರಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳಿಂದ ವಿನಂತಿ, ಮುಂಬರುವ ಶೈಕ್ಷಣಿಕ ವರ್ಷದ ಆರಂಭಕ್ಕೂ ಮುನ್ನ ನಮ್ಮನ್ನು ನೇಮಕ ಮಾಡಿ ಉದ್ಯೋಗದ ಬಗ್ಗೆ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಭರವಸೆಯನ್ನು ಈಡೇರಿಸಿ ಯುವಕರಲ್ಲಿ ಭರವಸೆ ತುಂಬಬೇಕೆಂದು ಕೋರುತ್ತೇವೆ🙏
@EshaGowda91 @drashwathcn @DCE_Karnataka Thank you for your kind response, sir... Definitely, we try our level best to build a strong society.... Once again, thank you so much, sir...
@drashwathcn thank u so much to our honorable higher education minister and kea. Hope we get appointment order form your period only.. then this recruitment process will become landmark in our state
ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ 26 ಬೋಧನಾ ವಿಷಯಗಳ 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನಡೆಸಲಾದ ಅಂತಿಮ ನೇಮಕಾತಿ ಪಟ್ಟಿಯನ್ನು ಶುಕ್ರವಾರ (ಮಾರ್ಚ್ 3) ಪ್ರಕಟಿಸಲಾಗಿದೆ.
ಇದನ್ನು ಮುಂದಿನ ಪ್ರಕ್ರಿಯೆಗಳಿಗೆ ಅನುಕೂಲವಾಗುವಂತೆ ಸೋಮವಾರದಂದು ಸರಕಾರಕ್ಕೆ ಸಲ್ಲಿಸಲಾಗುವುದು.