ಹೊಸಕೋಟೆ ತಾಲ್ಲೂಕಿನಲ್ಲಿ 6000 ಜನರಿಗೆ ಸ್ವತ್ತಿನ ದಾಖಲೆಗಳನ್ನು ನೀಡಿದ್ದೇವೆ
ಇಂದು ಹೊಸಕೋಟೆಯಲ್ಲಿ ಏರ್ಪಡಿಸಿದ್ದ ಇ-ಸ್ವತ್ತು ಮತ್ತು ಹಕ್ಕುಪತ್ರ ವಿತರಣೆ ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಾತನಾಡಿದೆ.
140 ಶಾಸಕರ ಬಲದೊಂದಿಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಲಿಷ್ಠವಾಗಿದೆ. ಯೋಗಕ್ಕಿಂತ ಯೋಗಕ್ಷೇಮ ಮುಖ್ಯ ಎಂಬುದನ್ನು ನಮ್ಮ ಹಿರಿಯರು ಹೇಳಿದ್ದಾರೆ. ಹೊಸಕೋಟೆ ತಾಲೂಕಿನಲ್ಲಿ ಇವತ್ತು 6000 ಜನರಿಗೆ ಸ್ವತ್ತಿನ ದಾಖಲೆಯನ್ನು ನೀಡಿದ್ದೇವೆ. ಈ ಹಿಂದೆ ಭೂ ಮಾಲೀಕತ್ವ ಇಲ್ಲದ 1 ಲಕ್ಷಕ್ಕೂ ಹೆಚ್ಚು ಜನರಿಗೆ ಹಕ್ಕುಪತ್ರ ವಿತರಣೆ ಮಾಡಿದ್ದೇವೆ. ಬೆಂಗಳೂರು ನಗರದಲ್ಲಿ ಬಿಬಿಎಂಪಿ ನೀಡಿರುವ ಎಲ್ಲಾ ಬಿ - ಖಾತಾಗಳಿಗೆ ಎ ಖಾತಾ ಮಾನ್ಯತೆ ನೀಡುವ ತೀರ್ಮಾನವನ್ನು ಮಾಡಿದ್ದೇವೆ. ರೈತರ ಪಂಪ್ಸೆಟ್ಗೆ ವಿದ್ಯುತ್ ಪೂರೈಸಲು 19 ಸಾವಿರ ಕೋಟಿ ರೂ. ಹಣವನ್ನು ನೀಡುತ್ತಿದ್ದೇವೆ.
7 ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಎತ್ತಿನಹೊಳೆ ಯೋಜನೆಯ ಕಾಮಗಾರಿ ಸ್ಥಳಕ್ಕೆ ಸಚಿವರಾದ ಮುನಿಯಪ್ಪ ಅವರೊಂದಿಗೆ ಭೇಟಿ ನೀಡಿ, ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದ್ದೇವೆ. ವಿಶ್ವದಲ್ಲೇ ಅತಿ ಎತ್ತರದ ಅಕ್ವೆಡಕ್ಟ್ ಎಂಬ ಹೆಗ್ಗಳಿಕೆಗೆ ಎತ್ತಿನಹೊಳೆ ಯೋಜನೆಯ ಅಕ್ವೆಡಕ್ಟ್ ಪಾತ್ರವಾಗಿದೆ. ಸುಮಾರು 10.5 ಕಿ.ಮೀ. ಉದ್ದದ ಅಕ್ವೆಡಕ್ಟ್ ಮೂಲಕ 3,300 ಕ್ಯುಸೆಕ್ ನೀರನ್ನು ಸಾಗಿಸುವ ಗುರಿ ಇದೆ. ಈ ಯೋಜನೆ ಇಡೀ ದೇಶಕ್ಕೆ ಮಾದರಿಯಾಗಿದೆ. 2027ರ ಒಳಗೆ ಎತ್ತಿನಹೊಳೆ ಯೋಜನೆಯನ್ನು ಪೂರ್ಣಗೊಳಿಸಲು ನಮ್ಮ ಸರ್ಕಾರ ಬದ್ಧವಿದೆ.
ನಮ್ಮ ಸರ್ಕಾರ ಇಷ್ಟೆಲ್ಲಾ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿರುವಾಗ, ಬಿಜೆಪಿಯವರ ಸಾಧನೆಯೇನು? ಅಡುಗೆ ಅನಿಲದ ಬೆಲೆ ಇಂದು ಗಗನಕ್ಕೆ ಹೋಗಿದೆ. ಜಿಎಸ್ಟಿ ಹೆಸರಿನಲ್ಲಿ ತರಕಾರಿ, ಎಳನೀರು ಮಾರುವವನಿಗೂ ನೋಟಿಸ್ ನೀಡಲಾಗುತ್ತಿದೆ. ಬಿಜೆಪಿಯವರು ಜಿಎಸ್ಟಿ ತಂದು ಬಡವರಿಗೆ ತೊಂದರೆ ಕೊಡುವ ಕೆಲಸ ಮಾಡುತ್ತಿದ್ದಾರೆ.
ಇಂದು ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾನ್ಯ ಕಂದಾಯ ಇಲಾಖೆ ಸಚಿವರಾದ @krishnabgowda ಅವರ ಅಧ್ಯಕ್ಷತೆಯಲ್ಲಿ ನಡೇದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದೇ. ಸಭೆಯ ನಂತರ ಶಿರೂರು ಗುಡ್ಡ ಕುಸಿತ ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸಿದ ಅಧಿಕಾರಿಗಳಿಗೆ ಪ್ರಶಂಸಪತ್ರ ನೀಡಿ ಗೌರವಿಸಲಾಯಿತು. @INCKarnataka
ನಾಡಿನ ಸಮಸ್ತ ಕ್ರೈಸ್ತ ಬಾಂಧವರಿಗೆ ಕ್ರಿಸ್ ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು.
ಈ ಪವಿತ್ರ ದಿನದಂದು ಎಲ್ಲರ ಬಾಳಲ್ಲಿ ಸಂತೋಷ, ಪ್ರೀತಿ ಹಾಗೂ ಸೌಹಾರ್ದತೆ ತುಂಬಿರಲಿ. #MerryChristmas#Christmas2023
ನನ್ನ ಬದುಕು ಮತ್ತು ಸಿದ್ಧಾಂತ, ನಮ್ಮ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಮೆಚ್ಚಿಕೊಂಡಿರುವ ಯುವ ಮನಸ್ಸುಗಳು ಇಂದು ಅವನ್ನೆಲ್ಲಾ ಸೇರಿಸಿ, ಅವುಗಳಿಗೆ ಹಾಡು-ನೃತ್ಯದ ರೂಪುಕೊಟ್ಟು ನನ್ನೆದುರು ಪ್ರದರ್ಶಿಸಿದಾಗ ಕೆಲಕ್ಷಣ ಭಾವುಕನಾದೆ.
ನನ್ನನ್ನು ವಿರೋಧಿಸುವ ಜನರಿಗಿಂತ ಪ್ರೀತಿಸುವ ಜನರ ಸಂಖ್ಯೆ ನೂರುಪಟ್ಟು ಹೆಚ್ಚಿದೆ.
ಈ ನನ್ನ ಜನರೇ ನಾನು ಗಳಿಸಿದ ಆಸ್ತಿ.
ಯುವ ಕಲಾವಿದರಿಗೆ ಶುಭ ಹಾರೈಕೆಗಳು.
ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ರಾಜ್ಯದಲ್ಲಿರುವ ಅತಿಥಿ ಶಿಕ್ಷಕರನ್ನು ಖಾಯಂಗೊಳಿಸುವಂತೆ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ @siddaramaiah ಅವರನ್ನು ಒತ್ತಾಯಿಸಿದ ಬಗ್ಗೆ ಇಂದಿನ ಕರಾವಳಿ ಮುಂಜಾವು ದಿನಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿ. @INCKarnataka
ಜನಸಾಮಾನ್ಯರ ಜನಜೀವನಕ್ಕೆ ಮಾರಕವಾಗುವ ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿ ಜಾರಿಗೆ ತರಲು ರಾಜ್ಯ ಸರ್ಕಾರ ಅವಕಾಶ ನೀಡಬಾರದು ಎಂದು ಜಿಲ್ಲಾ ಉಸ್ತುವಾರಿ ಮಂತ್ರಿ ಶ್ರೀ @MankalSVaidya , ಶಿರಸಿ -ಸಿದ್ದಾಪುರ ಕ್ಷೇತ್ರದ ಶಾಸಕರಾದ ಶ್ರೀ @BhimannaNaik1 , ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷರಾದ ಶ್ರೀ ರವೀಂದ್ರ ನಾಯ್ಕ ಅವರೊಡನೆ ಮಾನ್ಯ ಮುಖ್ಯಮಂತ್ರಿ ಶ್ರೀ @siddaramaiah , ಮಾನ್ಯ ಉಪ ಮುಖ್ಯಮಂತ್ರಿ ಶ್ರೀ @DKShivakumar , ಮಾನ್ಯ ಅರಣ್ಯ ಸಚಿವರಾದ ಶ್ರೀ @eshwar_khandre ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. @INCKarnataka
ಇಂಧನ ಸಚಿವರಾದ ಶ್ರೀ @thekjgeorge ಅವರ ಅಧ್ಯಕ್ಷತೆಯಲ್ಲಿ ಬೆಳಗಾವಿಯ ಸುವರ್ಣ ಸೌಧದ ಸಭಾಂಗಣದಲ್ಲಿ ಜರುಗಿದ #ಹೆಸ್ಕಾಂ ವ್ಯಾಪ್ತಿಯ ಎಲ್ಲಾ ಜಿಲ್ಲೆಗಳ ಸಚಿವರು, ಶಾಸಕರ ಸಭೆಯಲ್ಲಿ ಪಾಲ್ಗೊಂಡಿದ್ದೆ.
ಹೆಸ್ಕಾಂ ವ್ಯಾಪ್ತಿಯ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಚರ್ಚೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಇಂಧನ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.
@INCKarnataka
ತಮ್ಮ ಬದ್ಧತೆ ಹಾಗೂ ಸಮರ್ಪಣಾ ಭಾವದ ಮೂಲಕ ನಮ್ಮೆಲ್ಲರಿಗೂ ಸ್ಪೂರ್ತಿಯಾಗಿರುವ ಕಾಂಗ್ರೆಸ್ ಪಕ್ಷದ ಮುತ್ಸದ್ಧಿ ನಾಯಕಿ ಶ್ರೀಮತಿ ಸೋನಿಯಾಗಾಂಧಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಭಗವಂತನು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
ನಿಮ್ಮ ಮಾರ್ಗದರ್ಶನ ಪಕ್ಷಕ್ಕೆ ನಿರಂತರವಾಗಿರಲಿ.
#SoniaGandhi @INCIndia@INCKarnataka
ನಿನ್ನೆ ಬೆಳಗಾವಿಯ ಖಾಸಗಿ ಹೋಟೆಲ್ ನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯಲ್ಲಿ ಭಾಗವಹಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರು ಅಧ್ಯಕ್ಷತೆ ವಹಿಸಿದ್ದರು. ಸಚಿವರು,ಶಾಸಕರು ವಿಧಾನ ಪರಿಷತ್ ಸದಸ್ಯರು, ಪಕ್ಷದ ಮುಖಂಡರು ಉಪಸ್ಥಿತರಿದ್ದರು. @INCKarnataka
Heartiest congratulations to @INCTelangana , Shri @revanth_anumula and other congress candidate’s on their resounding victory in the Telangana elections.
May your government bring prosperity, progress, and justice to the people of Telangana.
#TelanganaElections2023 #INCVictory #Congress #RevanthReddy