3 ವರ್ಷಗಳಲ್ಲಿ ನಮ್ಮದಾಗಲಿದೆ ದೇಶದಲ್ಲೇ ಅತ್ಯುತ್ತಮ ಸರ್ಕಾರಿ ಶಾಲಾ ವ್ಯವಸ್ಥೆ
ಸದೃಢ ಸಮಾಜಕ್ಕಾಗಿ ಶಿಕ್ಷಣದ ಗ್ಯಾರಂಟಿಗಳು
ಗ್ಯಾರಂಟಿ 6 - ಶೈಕ್ಷಣಿಕೇತರ ಹೊರೆ ಮುಕ್ತಿ : ಶಿಕ್ಷಕರು ಬೋಧನೆಗಷ್ಟೇ ಸೀಮಿತ, ಬೋಧನೆಯ ಹೊರತಾದ ಕೆಲಸಗಳಿಗೆ ಪ್ರತ್ಯೇಕ ಸಿಬ್ಬಂದಿಗಳ ನೇಮಕ
#EducationForAll#GuaranteeSarkara
ಸರಳ ಸಜ್ಜನಿಕೆಯ ಸಾಕಾರಮೂರ್ತಿ, ಕೆಪಿಸಿಸಿ ಮಾಜಿ ಕಾರ್ಯಾಧ್ಯಕ್ಷರು, ಆತ್ಮೀಯರಾಗಿದ್ದ ಮಾಜಿ ಸಂಸದ ಶ್ರೀ ಆರ್. ಧ್ರುವನಾರಾಯಣ್ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು.
ಜನಸಾಮಾನ್ಯರ ಧ್ವನಿಯಾಗಿ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಏಳಿಗೆಗಾಗಿ ನಿರಂತರ ಕಾರ್ಯ ನಿರ್ವಹಿಸುತ್ತಿದ್ದ ಅವರ ಸಾರ್ವಜನಿಕ ಸೇವೆ ಹಾಗೂ ಆದರ್ಶಗಳು ನಮ್ಮೆಲ್ಲರಿಗೂ ಸದಾ ದಾರಿದೀಪ.
ಸಚಿವ ಸಂಪುಟ ಸಹೋದ್ಯೋಗಿಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ ಮಧು ಬಂಗಾರಪ್ಪ (@Madhu_Bangarapp) ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ತಮ್ಮ ಜನ್ಮದಿನವನ್ನು ಅದ್ಧೂರಿಯಾಗಿ ಆಚರಣೆ ಮಾಡದೆ, ಅದೇ ಹಣದಲ್ಲಿ ಶಿವಮೊಗ್ಗದ ಶ್ರಮಜೀವಿ ಪೌರಕಾರ್ಮಿಕರನ್ನು ಹಾಗೂ ಶೈಕ್ಷಣಿಕವಾಗಿ ಸಾಧನೆ ಮಾಡಿದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳನ್ನು ವಿಮಾನದ ಮೂಲಕ ಪ್ರವಾಸಕ್ಕೆ ಕಳುಹಿಸಿಕೊಟ್ಟಿರುವ ಅವರ ನಡೆ ಮಾದರಿಯಾದುದ್ದು.
ಮಧು ಬಂಗಾರಪ್ಪ ಅವರ ಜನಸೇವೆಯ ಆಶಯಕ್ಕೆ ಭಗವಂತ ಆಯಸ್ಸು, ಆರೋಗ್ಯವನ್ನು ನೀಡಿ ಬಲತುಂಬಲಿ ಎಂದು ಹಾರೈಸುತ್ತೇನೆ.