Saw this today..
Income Tax: A fine you pay because you are a productive member of your country.
Freebies: A reward you get because you are not a productive member of your country.
Agree?
🚆 ಮಂಗಳೂರು ರೈಲ್ವೆ ವ್ಯಾಪ್ತಿಯನ್ನು ನೈರುತ್ಯ ರೈಲ್ವೆಗೆ ಹಸ್ತಾಂತರಿಸುವುದು — ದಕ್ಷಿಣ ಕನ್ನಡಕ್ಕೆ ಹೊಸ ಆರಂಭ 🚆
ಮಂಗಳೂರು ರೈಲ್ವೆ ವ್ಯಾಪ್ತಿಯನ್ನು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದಿಂದ ನೈರುತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಹಸ್ತಾಂತರಿಸುವ ಐತಿಹಾಸಿಕ ನಿರ್ಧಾರವನ್ನು ನಾವು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ, ಬೆಂಬಲಿಸುತ್ತೇವೆ ಮತ್ತು ಸಂಭ್ರಮಿಸುತ್ತೇವೆ. ಇದು ಕೇವಲ ಆಡಳಿತಾತ್ಮಕ ಬದಲಾವಣೆಯಷ್ಟೇ ಅಲ್ಲ; ಮಂಗಳೂರು ಮತ್ತು ಕರಾವಳಿ ಕರ್ನಾಟಕದ ರೈಲ್ವೆ ಅಭಿವೃದ್ಧಿಗೆ ಬಹುಕಾಲದಿಂದ ಕಾಯುತ್ತಿದ್ದ ಹೊಸ ಆರಂಭದ ಅವಕಾಶವಾಗಿದೆ.
ಹಲವು ದಶಕಗಳಿಂದ, ಈ ಭಾಗದಿಂದ ಅಗಾಧ ಪ್ರಮಾಣದ ಆದಾಯ ಸಂಗ್ರಹವಾಗುತ್ತಿದ್ದರೂ ಪಾಲಕ್ಕಾಡ್ ವಿಭಾಗವು ಮಂಗಳೂರು ಪ್ರದೇಶವನ್ನು ಕಡೆಗಣಿಸುತ್ತಲೇ ಬಂದಿದೆ. ಮಂಗಳೂರು ದಕ್ಷಿಣ ರೈಲ್ವೆ ವಲಯದ ವ್ಯಾಪ್ತಿಯಲ್ಲೇ ಅತಿ ಹೆಚ್ಚು ಆದಾಯ ತಂದುಕೊಡುವ ಪ್ರದೇಶಗಳಲ್ಲಿ ಒಂದಾಗಿದೆ. ಇಲ್ಲಿಂದ ಸಂಗ್ರಹವಾಗುವ ಸಂಪನ್ಮೂಲಗಳನ್ನು ಮಂಗಳೂರಿನ ರೈಲ್ವೆ ನಿಲ್ದಾಣಗಳು ಮತ್ತು ಮೂಲಸೌಕರ್ಯಗಳನ್ನು ವಿಶ್ವದರ್ಜೆಯ ಮಟ್ಟಕ್ಕೆ ಅಭಿವೃದ್ಧಿಪಡಿಸಲು ಬಳಸಿಕೊಳ್ಳಬಹುದಿತ್ತು. ಆದರೆ, ರೈಲ್ವೆ ಅಭಿವೃದ್ಧಿಯ ವಿಚಾರಕ್ಕೆ ಬಂದಾಗ ಮಂಗಳೂರಿಗೆ ನಿರಂತರವಾಗಿ ಮಲತಾಯಿ ಧೋರಣೆ ಮತ್ತು ನಿರ್ಲಕ್ಷ್ಯವೇ ಎದುರಾಗಿದೆ.
ಇದಕ್ಕೊಂದು ಸ್ಪಷ್ಟ ಉದಾಹರಣೆಯೆಂದರೆ ರೈಲು ಸಂಖ್ಯೆ 12133/34 ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಮುಂಬೈ–ಮಂಗಳೂರು ಜಂಕ್ಷನ್ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್. ಈ ರೈಲು ಸೇವೆಯನ್ನು ಕಾರವಾರ ಬದಲು ಮಂಗಳೂರು ತನಕ ಒಡಿಸಬೇಕೆಂಬ ಬೇಡಿಕೆ ಬಂದಾಗ, ಅದನ್ನು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಮುಂಬೈ ಹಾಗೂ ಮಂಗಳೂರು ಸೆಂಟ್ರಲ್ ನಡುವೆ ಓಡಿಸಬೇಕೆಂಬುದು ಬೇಡಿಕೆಯಾಗಿತ್ತು. ಆದರೆ ಪಾಲಕ್ಕಾಡ್ ವಿಭಾಗವು ಮಂಗಳೂರು ಸೆಂಟ್ರಲ್ನಲ್ಲಿ ಪ್ಲಾಟ್ಫಾರ್ಮ್ ಕೊರತೆಯನ್ನು ನೆಪವಾಗಿಟ್ಟು ಈ ಪ್ರಸ್ತಾವನೆಯನ್ನು ತಿರಸ್ಕರಿಸಿ ರೈಲನ್ನು ಮಂಗಳೂರು ಜಂಕ್ಷನ್ಗೆ ಸೀಮಿತಗೊಳಿಸಿತು. ಆ ಸಮಯದಲ್ಲಿ ಮಂಗಳೂರು ಸೆಂಟ್ರಲ್ನಲ್ಲಿ ಕೇವಲ ಮೂರು ಪ್ಲಾಟ್ಫಾರ್ಮ್ಗಳಿದ್ದ ಕಾರಣ ಈ ಪರಿಸ್ಥಿತಿಯನ್ನು ನಾವು ಅರ್ಥಮಾಡಿಕೊಳ್ಳಬಹುದಿತ್ತು. ಆದರೆ ಅಚ್ಚರಿಯೆಂದರೆ, ಅದೇ ಪಾಲಕ್ಕಾಡ್ ವಿಭಾಗವು ನಂತರ ರೈಲು ಸಂಖ್ಯೆ 22609/10 ಮಂಗಳೂರು ಸೆಂಟ್ರಲ್–ಕೊಯಮತ್ತೂರು ಇಂಟರ್ಸಿಟಿ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲನ್ನು ಆರಂಭಿಸಿ ಅದಕ್ಕೆ ಪ್ಲಾಟ್ಫಾರ್ಮ್ ಮಂಜೂರು ಮಾಡಿತು. ಹಾಗಾದರೆ ಸಹಜವಾಗಿಯೇ ಉದ್ಭವಿಸುವ ಪ್ರಶ್ನೆಯೆಂದರೆ: "ಗೋಮಟೇಶ್ವರ ಎಕ್ಸ್ಪ್ರೆಸ್ಗೆ ಪ್ಲಾಟ್ಫಾರ್ಮ್ ಲಭ್ಯವಿಲ್ಲದಿದ್ದರೆ, ಕೊಯಮತ್ತೂರು ಇಂಟರ್ಸಿಟಿಗೆ ಹೇಗೆ ಲಭ್ಯವಾಯಿತು?" ಎಂದು! ಅದೇ ರೀತಿ 2017ರಲ್ಲಿ ಆರಂಭಗೊಂಡ ರೈಲು ಸಂಖ್ಯೆ 16575/76 ಯಶವಂತಪುರ-ಮಂಗಳೂರು ಜಂಕ್ಷನ್ ಗೋಮಟೇಶ್ವರ ಎಕ್ಸ್ಪ್ರೆಸ್ ರೈಲನ್ನು ಮಂಗಳೂರು ಸೆಂಟ್ರಲ್ ತನಕ ಓಡಿಸಬೇಕೆಂಬುದು ಬೇಡಿಕೆಯಾಗಿದ್ದರೂ ಪಾಲಕ್ಕಾಡ್ ವಿಭಾಗ ಅದನ್ನು ಮಂಗಳೂರು ಜಂಕ್ಷನ್ ಸೀಮಿತಗೊಳಿಸಿತು. ಈಗಲೂ ಈ ಎರಡು ರೈಲುಗಳನ್ನು ಮಂಗಳೂರು ಸೆಂಟ್ರಲ್ ತನಕ ವಿಸ್ತರಿಸಲು ಹೋರಾಟ ಮಾಡಲಾಗುತ್ತಿದೆ. ಹೀಗಾಗಿ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಕೇರಳ ರೈಲುಗಳಿಗೆ ಸಿಗುವ ಆದ್ಯತೆ ಕರ್ನಾಟಕ, ಕೊಂಕಣ್ ಭಾಗದ ರೈಲುಗಳಿಗೆ ಏಕೆ ಸಿಗುವುದಿಲ್ಲ ಎಂಬ ಪ್ರಶ್ನೆ ಖಂಡಿತವಾಗಿಯೂ ಬರುತ್ತದೆ.
ಮಂಗಳೂರು ಸೆಂಟ್ರಲ್ ನಗರದ ಪ್ರಮುಖ ರೈಲ್ವೆ ನಿಲ್ದಾಣವಾಗಿದ್ದು, ಭಾರತದ ಐದು "ಸೆಂಟ್ರಲ್" ರೈಲ್ವೆ ನಿಲ್ದಾಣಗಳಲ್ಲಿ ಒಂದಾಗಿದೆ. ಆದರೂ ಅಭಿವೃದ್ಧಿಯ ವಿಷಯದಲ್ಲಿ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ದುರದೃಷ್ಟಕರ. ಭಾರತದಲ್ಲಿರುವ ಎಲ್ಲಾ ಐದು ಸೆಂಟ್ರಲ್ ರೈಲು ನಿಲ್ದಾಣಗಳಲ್ಲಿ ಏನು ಅಭಿವೃದ್ಧಿ ಕಾಣದ ಇರುವ ಸೆಂಟ್ರಲ್ ರೈಲು ನಿಲ್ದಾಣವೆಂದರೆ ಅದು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣವಾಗಿರುವುದು ನಿಜಕ್ಕೂ ಬೇಸರದ ಸಂಗತಿ. ಮಂಗಳೂರು ಸೆಂಟ್ರಲ್ ಅನ್ನು ವಿಶ್ವದರ್ಜೆಯ ರೈಲ್ವೆ ನಿಲ್ದಾಣವಾಗಿ ಅಭಿವೃದ್ಧಿಪಡಿಸುವ ಪ್ರಸ್ತಾವನೆಗಳಿದ್ದರೂ, ವರ್ಷಗಳು ಕಳೆದರೂ ಮಂಗಳೂರಿನಂತಹ ಪ್ರಮುಖ ನಗರಕ್ಕೆ ಸಿಗಬೇಕಾದ ಕಾಯಕಲ್ಪ ಇನ್ನೂ ಸಿಕ್ಕಿಲ್ಲ. ರೈಲ್ವೆಗೆ ಇಷ್ಟೊಂದು ಆದಾಯ ತಂದುಕೊಡುವ ನಗರದ ಮುಖ್ಯ ರೈಲು ನಿಲ್ದಾಣ ಹೀಗೆ ಹಿಂದುಳಿಯಬಾರದು.
ಮಂಗಳೂರು ಕರ್ನಾಟಕದಲ್ಲಿದ್ದರೂ, ರಾಜ್ಯದ ಇತರ ನಗರಗಳೊಂದಿಗೆ ಸೂಕ್ತ ರೈಲ್ವೆ ಸಂಪರ್ಕ ಇಲ್ಲವಾಗಿದೆ. ಮಂಗಳೂರು ಸೆಂಟ್ರಲ್ನಿಂದ ಸಂಚರಿಸುವ ಸುಮಾರು 35 ರೈಲುಗಳಲ್ಲಿ, ಸರಿಸುಮಾರು 23 ರೈಲುಗಳು ಕೇರಳದ ಕಡೆಗೆ ಓಡುತ್ತಿದ್ದರೆ, ಕರ್ನಾಟಕ ಮತ್ತು ಕೊಂಕಣ ಭಾಗದ ಕಡೆಗೆ ಕ್ರಮವಾಗಿ ಕೇವಲ ಆರರಷ್ಟು ಮಾತ್ರ ಇವೆ. ಇದು ಮಂಗಳೂರಿನ ದುಸ್ಥಿತಿ! ಮಂಗಳೂರು ಕರ್ನಾಟಕದ ಪ್ರಮುಖ ನಗರವಾಗಿದ್ದರೂ, ಇಲ್ಲಿನ ಮುಖ್ಯ ನಿಲ್ದಾಣವಾದ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಹೆಚ್ಚಾಗಿ ಕೇರಳ ಕೇಂದ್ರಿತ ಸಂಪರ್ಕವನ್ನು ಹೊಂದಿದ್ದು, ಕರ್ನಾಟಕದೊಂದಿಗಿನ ಸಂಪರ್ಕವು ಕನಿಷ್ಠ ಮಟ್ಟದಲ್ಲಿದೆ. ಮಂಗಳೂರಿನಿಂದ ಬೆಂಗಳೂರು, ಮೈಸೂರು, ಹಾಸನ, ಶಿವಮೊಗ್ಗ, ಹುಬ್ಬಳ್ಳಿ, ಬೆಳಗಾವಿ, ಬಳ್ಳಾರಿ ಮತ್ತು ಕರ್ನಾಟಕದ ಇತರ ನಗರಗಳಿಗೆ ಗಮನಾರ್ಹವಾಗಿ ಹೆಚ್ಚಿನ ನೇರ ರೈಲುಗಳ ಅಗತ್ಯವಿದೆ, ಜೊತೆಗೆ ಕೊಂಕಣ ಭಾಗಕ್ಕೂ ಉತ್ತಮ ಸಂಪರ್ಕ ಬೇಕಿದೆ.
ಮಂಗಳೂರಿಗೆ ನಾಗರ್ಕೋಯಿಲ್ನಿಂದ ಅಮೃತ್ ಭಾರತ್ ಎಕ್ಸ್ಪ್ರೆಸ್ ದೊರೆತಿದೆ. ಮಂಗಳೂರಿಗೆ ಅಮೃತ್ ಭಾರತ್ ಎಕ್ಸ್ಪ್ರೆಸ್ ರೈಲು ಸಿಕ್ಕಿರುವುದು ಸಂತಸದ ವಿಷಯವಾದರೂ ಇದು ಕೇವಲ ಹೆಸರಿಗಷ್ಟೇ ಸೀಮಿತವಾಗಿದೆ. ಮಂಗಳೂರಿಗೆ ನಾಗರಕೋಯಲಿನಿಂದ ಮುಂಜಾನೆ 4ಗಂಟೆಗೆ ತಲುಪಿ ಬೆಳಗ್ಗೆ 8 ಗಂಟೆಗೆ ಮಂಗಳೂರಿನಿಂದ ನಿರ್ಗಮಿಸುವ ಅಸಮರ್ಪಕ ಮತ್ತು ಅನಾನುಕೂಲಕರ ಸಮಯದಲ್ಲಿ ರೈಲು ಓಡಿದರೆ ಯಾರು ಪ್ರಯಾಣಿಸುತ್ತಾರೆ? ಮಂಗಳೂರಿಗೆ ನಿಜವಾದ ಪ್ರಯಾಣಿಕ ಸ್ನೇಹಿ ಮತ್ತು ಪ್ರಾಯೋಗಿಕ ಸಮಯದ ರೈಲು ಸೇವೆಗಳ ಅಗತ್ಯವಿದೆ.
ದಕ್ಷಿಣ ರೈಲ್ವೆ ವಲಯವು ಕೊರೊನಾ ಲಾಕ್ಡೌನ್ ಸಮಯದಲ್ಲಿ ರದ್ದುಗೊಂಡ ರೈಲು ಸಂಖ್ಯೆ 16687/88 ಮಂಗಳೂರು ಸೆಂಟ್ರಲ್–ಶ್ರೀ ಮಾತಾ ವೈಷ್ಣೋದೇವಿ ಕತ್ರಾ ನವಯುಗ್ ಎಕ್ಸ್ಪ್ರೆಸ್ ಅನ್ನು ಇನ್ನು ಮರುಪ್ರಾರಂಭಿಸಲಿಲ್ಲ. ಬದಲಾಗಿ, ನವಯುಗ್ ಎಕ್ಸ್ಪ್ರೆಸ್ ಹೆಸರನ್ನು ರೈಲು ಸಂಖ್ಯೆ 16787/88 ತಿರುನೆಲ್ವೇಲಿ–ಶ್ರೀ ಮಾತಾ ವೈಷ್ಣೋದೇವಿ ಕತ್ರಾ ಎಕ್ಸ್ಪ್ರೆಸ್ ರೈಲಿಗೆ ನೀಡಿ ಓಡಿಸುತ್ತಿದೆ. ಈ ರೈಲು ಹಿಂದೆ ಮಂಗಳೂರು ಸೆಂಟ್ರಲ್–ಕತ್ರಾ ನವಯುಗ್ ಎಕ್ಸ್ಪ್ರೆಸ್ನ ಲಿಂಕ್/ಸ್ಲಿಪ್ ಭಾಗವಾಗಿ ಓಡುತ್ತಿತ್ತು ಎಂಬುದು ಇಲ್ಲಿ ಗಮನಿಸಲೇಬೇಕು. ಮಂಗಳೂರು ಸೆಂಟ್ರಲ್ ಅನ್ನು ಉತ್ತರ ಭಾರತದೊಂದಿಗೆ ಸಂಪರ್ಕಿಸುತ್ತಿದ್ದ ಇಂತಹ ಪ್ರತಿಷ್ಠಿತ ದೂರದ ರೈಲು ಸೇವೆ ಮಂಗಳೂರಿನಿಂದ ಕಣ್ಮರೆಯಾಗಬಾರದಿತ್ತು. ಈ ಪ್ರಮುಖ ಸಂಪರ್ಕವನ್ನು ಮತ್ತೆ ಆರಂಭಿಸಬೇಕೆಂಬ ಬೇಡಿಕೆ ಹಾಗೆಯೇ ಉಳಿದಿದೆ.
ಮಂಗಳೂರು ರೈಲು ನಿಲ್ದಾಣಗಳಲ್ಲಿ ಅದರಲ್ಲೂ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಮತ್ತೊಂದು ಪ್ರಮುಖ ಸಮಸ್ಯೆಯೆಂದರೆ, ಈ ನೆಲದ ಭಾಷೆಗಳಾದ ಕನ್ನಡ ಮತ್ತು ತುಳು ಭಾಷೆಗಳಿಗೆ ತಕ್ಕ ಪ್ರಾಮುಖ್ಯತೆ ನೀಡದಿರುವುದು. ಇಂದಿಗೂ ಕ್ಯಾಟರಿಂಗ್ ಮಳಿಗೆಗಳು, ಉಪಹಾರ ಗೃಹಗಳು ಮತ್ತು ಟಿಕೆಟ್ ಕೌಂಟರ್ಗಳಲ್ಲಿ ನಿಯೋಜಿಸಲಾದ ಸಿಬ್ಬಂದಿಗೆ ಕನ್ನಡ ಅಥವಾ ತುಳು ತಿಳಿದಿರುವುದಿಲ್ಲ. ನಾಮಫಲಕಗಳು, ಜಾಹೀರಾತುಗಳು, ಬೋರ್ಡ್ಗಳು ಮತ್ತು ಸೂಚನಾ ಫಲಕಗಳಲ್ಲಿ ಸ್ಥಳೀಯ ಭಾಷೆಗಳಿಗಿಂತ ಮಲಯಾಳಂಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ. ನಾವು ಮಲಯಾಳಂ ಭಾಷೆಗಾಗಲಿ ಅಥವಾ ಕೇರಳದ ಜನರಿಗಾಗಲಿ ವಿರೋಧಿಗಳಲ್ಲ, ಆದರೆ ಮಂಗಳೂರು ಕರ್ನಾಟಕದಲ್ಲಿರುವಾಗ ಕನ್ನಡ ಮತ್ತು ತುಳು ಭಾಷೆಗಳಿಗೆ ಸಿಗಬೇಕಾದ ನ್ಯಾಯಯುತ ಸ್ಥಾನಮಾನ ದೊರೆಯಲೇಬೇಕು. ಮಂಗಳೂರಿನ ರೈಲ್ವೆ ನಿಲ್ದಾಣಗಳು ಈ ಭಾಗದ ಭಾಷೆ ಮತ್ತು ಅಸ್ಮಿತೆಯನ್ನು ಪ್ರತಿಬಿಂಬಿಸಬೇಕು.
ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ನಡುವಿನ ಹಾಲಿ ದ್ವಿಪಥ (Doubling) ಮಾಡುವುದು ಗಮನಹರಿಸಬೇಕಾದ ಮತ್ತೊಂದು ದೀರ್ಘಕಾಲದ ಬೇಡಿಕೆಯಾಗಿದೆ. ಕೇವಲ ಸಾಮರ್ಥ್ಯ ಮತ್ತು ಕಾರ್ಯಾಚರಣೆಯ ಅಡೆತಡೆಗಳನ್ನು ನೆಪವಾಗಿ ಮುಂದಿಡುವ ಬದಲು, ಮಂಗಳೂರಿನ ಪ್ರಸ್ತುತ ಮತ್ತು ಭವಿಷ್ಯದ ಅಗತ್ಯಗಳಿಗೆ ತಕ್ಕಂತೆ ರೈಲ್ವೆ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಬೇಕು.
ಈಗ ಮಂಗಳೂರು ರೈಲ್ವೆ ವ್ಯಾಪ್ತಿಯು ನೈರುತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳ್ಳುತ್ತಿರುವುದರಿಂದ, ಮಂಗಳೂರು ಸೆಂಟ್ರಲ್, ಮಂಗಳೂರು ಜಂಕ್ಷನ್, ಕರ್ನಾಟಕ ಮತ್ತು ಕೊಂಕಣ ಭಾಗದಿಂದ ಮಂಗಳೂರು ಸೆಂಟ್ರಲ್ಗೆ ಹೆಚ್ಚಿನ ರೈಲುಗಳು ಹಾಗೂ ಎರಡೂ ನಿಲ್ದಾಣಗಳ ನಡುವಿನ ಮೂಲಸೌಕರ್ಯ ಬಲವರ್ಧನೆ ಸೇರಿದಂತೆ ಇಡೀ ಮಂಗಳೂರು ರೈಲ್ವೆ ಪ್ರದೇಶದ ಸಮಗ್ರ ಅಭಿವೃದ್ಧಿಯ ಬಗ್ಗೆ ದಕ್ಷಿಣ ಕನ್ನಡದ ಜನರಲ್ಲಿ ಭಾರಿ ಭರವಸೆ ಮೂಡಿದೆ.
ಆದಾಗ್ಯೂ, ನೈರುತ್ಯ ರೈಲ್ವೆ ವಲಯ ಮಂಗಳೂರು ಸೆಂಟ್ರಲ್ ನಿಲ್ದಾಣವನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು ಎಂದು ನಾವು ಬಲವಾಗಿ ಒತ್ತಾಯಿಸುತ್ತೇವೆ. ಇದು ಮಂಗಳೂರು ನಗರದ ಪ್ರಮುಖ ರೈಲ್ವೆ ನಿಲ್ದಾಣವಾಗಿದ್ದು, ಕರಾವಳಿ ಕರ್ನಾಟಕ ಭಾಗದಲ್ಲಿ ಮೈಸೂರು ವಿಭಾಗದ ಪ್ರವೇಶ ದ್ವಾರ ಹಾಗೂ ಪ್ರಮುಖ ಟರ್ಮಿನಲ್ ರೈಲು ನಿಲ್ದಾಣವಾಗಿ (ರೈಲುಗಳ ಆರಂಭಿಕ ಮತ್ತು ಅಂತಿಮ ತಾಣ) ಇನ್ನಷ್ಟು ಮಹತ್ವ ಪಡೆಯಲಿದೆ.
ಅದೇ ಸಮಯದಲ್ಲಿ, ಮಂಗಳೂರಿನ ಮುಖ್ಯ ನಿಲ್ದಾಣಗಳಿಗೆ ಸಂಪರ್ಕ ನೀಡದೆ ಕರ್ನಾಟಕ ಮತ್ತು ಕೊಂಕಣ ನಡುವೆ ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ರೈಲು ನಿಲ್ದಾಣಗಳಿಗೆ ಬಾರದೆ ಪಡೀಲ್ ಬೈಪಾಸ್ ಮೂಲಕ ರೈಲುಗಳನ್ನು ಓಡಿಸುವ ಯಾವುದೇ ಪ್ರಯತ್ನವನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ. ಈ ಹಿಂದೆ, ಕರ್ನಾಟಕದಿಂದ ಕೊಂಕಣ ಕಡೆಗೆ ಹೋಗುವ ರೈಲುಗಳು, ವಿಶೇಷವಾಗಿ ರೈಲು ಸಂಖ್ಯೆ 16585/86 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು–ಮುರ್ಡೇಶ್ವರ ಎಕ್ಸ್ಪ್ರೆಸ್ ಸೇರಿದಂತೆ ಇತರ ರೈಲುಗಳು ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ಎರಡನ್ನೂ ಬೈಪಾಸ್ ಮಾಡುವ ಪ್ರಯತ್ನಗಳು ನಡೆದಿದ್ದವು; ಅದನ್ನು ನಾವು ಬಲವಾಗಿ ವಿರೋಧಿಸಿದ್ದೆವು ಹಾಗೂ ಈಗಲೂ ವಿರೋಧಿಸುತ್ತೇವೆ.
ಮಂಗಳೂರಿನ ಮುಖ್ಯ ನಿಲ್ದಾಣಗಳನ್ನು ನಿರಂತರವಾಗಿ ಬೈಪಾಸ್ ಮಾಡುವುದರಿಂದ ಅವುಗಳ ಮಹತ್ವ ಕುಸಿಯುತ್ತದೆ ಮತ್ತು ಮಂಗಳೂರು ಸೆಂಟ್ರಲ್ ಹಾಗೂ ಮಂಗಳೂರು ಜಂಕ್ಷನ್ನಲ್ಲಿ ಕರ್ನಾಟಕದಿಂದ ಹೊರಡುವ ರೈಲುಗಳು ಮತ್ತು ಕರ್ನಾಟಕದ ಪ್ರಯಾಣಿಕರ ಸಂಖ್ಯೆಯು ಕಡಿಮೆಯಾಗುತ್ತದೆ. ಅಂತಿಮವಾಗಿ ಇದು ಕರಾವಳಿ ಕರ್ನಾಟಕದ ರೈಲು ಸಂಪರ್ಕವನ್ನು ದುರ್ಬಲಗೊಳಿಸಿ, ಕನ್ನಡಿಗರ ಮೇಲೆ ಕೇರಳದ ರೈಲ್ವೆ ಹಿತಾಸಕ್ತಿಗಳೇ ಮತ್ತೆ ಪ್ರಾಬಲ್ಯ ಸಾಧಿಸಲು ಕಾರಣವಾಗಬಹುದು. ಮಂಗಳೂರನ್ನು ಕೇವಲ ರೈಲುಗಳು ಹಾದುಹೋಗುವ ಒಂದು ಸ್ಥಳವನ್ನಾಗಿ ಪರಿವರ್ತಿಸಬಾರದು.
ಆದ್ದರಿಂದ, ಭವಿಷ್ಯದ ರೈಲುಗಳು, ವಿಶೇಷವಾಗಿ ಯಾವುದೇ ವಂದೇ ಭಾರತ್ ಎಕ್ಸ್ಪ್ರೆಸ್, ಬೆಂಗಳೂರಿನಿಂದ ಮಂಗಳೂರು ಸೆಂಟ್ರಲ್ವರೆಗೆ ಮೀಸಲಾದ ನೇರ ರೈಲು ಸೇವೆಯಾಗಿ ಓಡಬೇಕು. ಕರ್ನಾಟಕದ ವಿವಿಧ ನಗರಗಳಿಂದ ಬರುವ ಇತರ ಪ್ರಯಾಣಿಕ ಮತ್ತು ಎಕ್ಸ್ಪ್ರೆಸ್ ರೈಲುಗಳು ಮಂಗಳೂರು ಸೆಂಟ್ರಲ್ನಲ್ಲೇ ಪ್ರಾರಂಭ ಅಥವಾ ಅಂತ್ಯಗೊಳ್ಳಬೇಕು; ಮಂಗಳೂರಿನ ಮಹತ್ವವನ್ನು ಕುಗ್ಗಿಸಿ ಅವುಗಳನ್ನು ಕೇರಳ ಅಥವಾ ಕೊಂಕಣ ಭಾಗಕ್ಕೆ ವಿಸ್ತರಿಸುವುದಾಗಲಿ ಅಥವಾ ಬೈಪಾಸ್ ಮೂಲಕ ತಿರುಗಿಸುವುದಾಗಲಿ ಮಾಡಬಾರದು. ಮಂಗಳೂರಿಗೆ ಕರ್ನಾಟಕ ಮೂಲದ ಹೆಚ್ಚಿನ ರೈಲುಗಳು ಮತ್ತು ರಾಜ್ಯದೊಳಗೆ ವಿವಿಧ ನಗರಳಿಗೆ ಹೆಚ್ಚಿನ ನೇರ ರೈಲು ಸಂಪರ್ಕದ ಅಗತ್ಯವಿದೆ.
ಈ ಬೇಡಿಕೆಯು ಕೇರಳ ಅಥವಾ ಕೇರಳದ ಜನರ ವಿರುದ್ಧವಲ್ಲ ಎಂಬುದನ್ನು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ. ಮಂಗಳೂರು ಕರ್ನಾಟಕದಲ್ಲಿದ್ದು, ಅಪಾರ ರೈಲ್ವೆ ಆದಾಯ ತಂದುಕೊಡುತ್ತಿದ್ದರೂ, ಇಲ್ಲಿನ ಹಿತಾಸಕ್ತಿಯನ್ನು ಮತ್ತೆ ಕೇರಳ ಕೇಂದ್ರಿತ ರೈಲ್ವೆ ಸೇವೆಗಳಿಗೆ ಮೀಸಲಿಡಬಾರದು ಎಂಬುದು ನಮ್ಮ ಕಳಕಳಿ. ನಾವು ಎಲ್ಲರನ್ನೂ ಗೌರವಿಸುತ್ತೇವೆ, ಆದರೆ ಮಂಗಳೂರಿನ ರೈಲ್ವೆ ಅಭಿವೃದ್ಧಿಯು ಪ್ರಾಥಮಿಕವಾಗಿ ಮಂಗಳೂರು ಮತ್ತು ಕರ್ನಾಟಕದ ಜನರ ಅಗತ್ಯಗಳಿಗೆ ಸ್ಪಂದಿಸಬೇಕು.
ಮಂಗಳೂರು ರೈಲ್ವೆ ವ್ಯವಸ್ಥೆಗೆ ಸಿಕ್ಕ ನಿಧಿ.! ಮಂಗಳೂರು ರೈಲ್ವೆ ಇಲಾಖೆಗೆ ಅಪಾರ ಸರಕು ಸಾಗಣೆಯನ್ನು ಒದಗಿಸುವ ಪ್ರದೇಶ, ಪ್ರಮುಖ ಬಂದರು ಸಂಪರ್ಕ ಹೊಂದಿರುವ ಜಾಗ ಹಾಗೂ ಕರ್ನಾಟಕ, ಕೇರಳ, ಕೊಂಕಣ ಮತ್ತು ದೇಶದ ಇತರ ಭಾಗಗಳ ನಡುವಿನ ಕಾರ್ಯತಂತ್ರದ ಪ್ರವೇಶ ದ್ವಾರವಾಗಿದೆ. ಮಂಗಳೂರಿನ ಸಾಮರ್ಥ್ಯ ಅಗಾಧವಾಗಿದ್ದು, ಈ ಸಾಮರ್ಥ್ಯವನ್ನು ಕೊನೆಗೂ ಮಂಗಳೂರು ಮತ್ತು ಕರಾವಳಿ ಕರ್ನಾಟಕದ ಅಭಿವೃದ್ಧಿಗೆ ಬಳಸಿಕೊಳ್ಳಬೇಕಿದೆ.
ಆದ್ದರಿಂದ ಮಂಗಳೂರು ರೈಲ್ವೆ ವ್ಯಾಪ್ತಿಯನ್ನು ನೈರುತ್ಯ ರೈಲ್ವೆ ಮತ್ತು ಮೈಸೂರು ವಿಭಾಗಕ್ಕೆ ವರ್ಗಾಯಿಸುವುದನ್ನು ನಾವು ಬಲವಾಗಿ ಬೆಂಬಲಿಸಿ ಸಂಭ್ರಮಿಸುತ್ತೇವೆ. ಆದರೆ ಈ ವರ್ಗಾವಣೆ ಕೇವಲ ರೈಲ್ವೆ ನಕಾಶೆಯನ್ನು ಬದಲಾಯಿಸುವುದಕ್ಕೆ ಸೀಮಿತವಾಗಬಾರದು. ಅದು ಅಭಿವೃದ್ಧಿಯಲ್ಲಿ ನಿಜವಾದ ಬದಲಾವಣೆಯನ್ನು ತರಬೇಕು. ಮಂಗಳೂರು ಸೆಂಟ್ರಲ್ ಅನ್ನು ವಿಶ್ವದರ್ಜೆಯ ನಿಲ್ದಾಣವನ್ನಾಗಿ ಮಾಡುವುದು, ಮಂಗಳೂರು ಜಂಕ್ಷನ್ ಮೇಲ್ದರ್ಜೆಗೇರಿಸುವುದು, ಮಂಗಳೂರು ಸೆಂಟ್ರಲ್–ಜಂಕ್ಷನ್ ನಡುವಿನ ಹಳಿ ಡಬ್ಲಿಂಗ್ ಕಾಮಗಾರಿ ಕೈಗೆತ್ತಿಕೊಳ್ಳುವುದು, ಕರ್ನಾಟಕ ಮತ್ತು ಕೊಂಕಣಕ್ಕೆ ಹೆಚ್ಚಿನ ಸಂಪರ್ಕ ಕಲ್ಪಿಸುವುದು, ಪ್ರಮುಖ ದೂರದ ರೈಲುಗಳನ್ನು ಪುನರಾರಂಭಿಸುವುದು, ಪ್ರಯಾಣಿಕ ಸ್ನೇಹಿ ರೈಲುಗಳ ವೇಳಾಪಟ್ಟಿ ನಿಗದಿಪಡಿಸುವುದು, ಕನ್ನಡ ಮತ್ತು ತುಳು ಭಾಷೆಗಳಿಗೆ ಪ್ರಾಮುಖ್ಯತೆ ನೀಡುವುದು ಹಾಗೂ ಕರಾವಳಿ ಕರ್ನಾಟಕ ಭಾಗಕ್ಕೆ ಬರುವ ರೈಲುಗಳು ಮಂಗಳೂರಿನ ಮುಖ್ಯ ನಿಲ್ದಾಣಗಳಾದ ಮಂಗಳೂರು ಸೆಂಟ್ರಲ್ ಹಾಗೂ ಮಂಗಳೂರು ಜಂಕ್ಷನ್ ರೈಲು ನಿಲ್ದಾಣಗಳನ್ನು ಬೈಪಾಸ್ ಮಾಡದಂತೆ ರೈಲುಗಳನ್ನು ಓಡಿಸುವುದನ್ನು ನಾವು ನಿರೀಕ್ಷಿಸುತ್ತೇವೆ.
ದಕ್ಷಿಣ ಕನ್ನಡದ ಜನರು ದಶಕಗಳಿಂದ ಕಾಯುತ್ತಿದ್ದಾರೆ. ಈಗ ಮಂಗಳೂರಿನ ರೈಲ್ವೆ ಅಭಿವೃದ್ಧಿಗೆ ಸೂಕ್ತ ಸಮಯ!
🚆 ಮಂಗಳೂರು ಸೆಂಟ್ರಲ್ ಅನ್ನು ಮತ್ತೆ ನಿರ್ಲಕ್ಷಿಸಬೇಡಿ!
🚆 ಮಂಗಳೂರು ಜಂಕ್ಷನ್ ಅನ್ನು ಮತ್ತೆ ನಿರ್ಲಕ್ಷಿಸಬೇಡಿ!
🚆 ಮಂಗಳೂರಿನ ಮುಖ್ಯ ನಿಲ್ದಾಣಗಳಾದ ಮಂಗಳೂರು ಸೆಂಟ್ರಲ್ ಹಾಗೂ ಮಂಗಳೂರು ಜಂಕ್ಷನ್ ರೈಲು ನಿಲ್ದಾಣಗಳನ್ನು ಬಿಟ್ಟು ಪಡೀಲ್ ಮೂಲಕ ಮಂಗಳೂರನ್ನು ಬೈಪಾಸ್ ಮಾಡಬೇಡಿ!
🚆 ಮಂಗಳೂರು ಸೆಂಟ್ರಲ್ಗೆ ಕರ್ನಾಟಕದಿಂದ ಉತ್ತಮ ರೈಲು ಸಂಪರ್ಕ ಸಿಗಲಿ!
🚆 ಮಂಗಳೂರು ಸೆಂಟ್ರಲ್ ಅಭಿವೃದ್ಧಿಪಡಿಸಿ. ಮಂಗಳೂರು ಜಂಕ್ಷನ್ ಅಭಿವೃದ್ಧಿಪಡಿಸಿ. ಮಂಗಳೂರು ರೈಲ್ವೆಯನ್ನು ಅಭಿವೃದ್ಧಿಪಡಿಸಿ!
ಮಂಗಳೂರು ಕರ್ನಾಟಕದ ಕರಾವಳಿ ಹೆಬ್ಬಾಗಿಲು — ಈಗ ಮಂಗಳೂರಿನ ರೈಲ್ವೆ ವ್ಯವಸ್ಥೆಯೂ ಅದೇ ಮಹತ್ವವನ್ನು ಪ್ರತಿಬಿಂಬಿಸಲಿ!
-ದಕ್ಷಿಣ ಕನ್ನಡ ಜಿಲ್ಲಾ ರೈಲು ಬಳಕೆದಾರರ ಸಮಿತಿ
🚆 MANGALURU RAILWAY JURISDICTION TRANSFER TO SOUTH WESTERN RAILWAY — A NEW BEGINNING FOR DAKSHINA KANNADA 🚆
We wholeheartedly welcome, strongly support and celebrate the historic decision to transfer the Mangaluru railway jurisdiction from Southern Railway's Palakkad Division to the Mysuru Division of South Western Railway (SWR). This is not merely an administrative change; for Mangaluru and Coastal Karnataka, it is a long-awaited opportunity for a new beginning in railway development.
For many decades, the Palakkad Division has ignored the Mangaluru region despite the enormous revenue generated here. Mangaluru has been one of the highest revenue-generating areas under Southern Railway and the resources generated from this region could have been utilised to develop Mangaluru's railway stations and infrastructure to world-class standards. Instead, Mangaluru has repeatedly received step-motherly treatment and remained neglected when it came to railway development.
One of the best examples is Train No. 16575/76 Yesvantpur–Mangaluru Junction Gomateshwara Express. When this train was introduced, the initial demand was to run it between Yesvantpur and Mangaluru Central, but Palakkad Division did not accept the proposal and the train was made to terminate at Mangaluru Junction citing platform constraints at Mangaluru Central. At that time, we could perhaps understand the situation because Mangaluru Central had only three platforms. But surprisingly, the same Palakkad Division subsequently introduced Train No. 22609/10 Mangaluru Central–Coimbatore Intercity Superfast Express and allocated a platform for it. So the question naturally arises: if a platform was not available for the Gomateshwara Express, how was a platform available for the Coimbatore Intercity? Why was a Bengaluru–Mangaluru service not given the same priority to Mangaluru Central?
Mangaluru Central is the main railway station of Mangaluru city and one of the five "Central" railway stations in India, yet it is unfortunate that it has remained among the most neglected in terms of development. There have been proposals to develop Mangaluru Central as a world-class railway station, but even after years, the station has not received the transformation that a major city like Mangaluru deserves. A city that generates so much railway revenue should not have its main railway terminal left behind like this.
Even though Mangaluru is in Karnataka, proper railway connectivity with various cities of Karnataka is still inadequate. If we look at the trains operating from Mangaluru Central, out of around 35 trains, approximately 23 are towards the Kerala side, while only around six each are towards Karnataka and the Konkan side. This is the fate of Mangaluru! Mangaluru is a major city of Karnataka, yet its principal railway station has predominantly Kerala-bound connectivity while Karnataka-bound connectivity remains comparatively poor. We need substantially more direct trains from Mangaluru to Bengaluru, Mysuru, Hassan, Shivamogga, Hubballi,Belagavi,Ballari and other cities of Karnataka, along with better connectivity towards Konkan.
Mangaluru received an Amrit Bharat Express from Nagercoil, and we welcome every useful new service, but a train should not be introduced merely for the sake of its name. Who will travel if it runs at odd and inconvenient timings? Mangaluru needs useful, practical and passenger-friendly train timings and services.
Southern Railway also did not resume Train No. 16687/88 Mangaluru Central–Shri Mata Vaishno Devi Katra Navyug Express. Instead, the Navyug Express name continued with Train No. 16787/88 Tirunelveli–Shri Mata Vaishno Devi Katra Express, which was once running as the slip/link part of the Mangaluru Central–Katra Navyug Express. A prestigious long-distance service that once connected Mangaluru Central with North India should not have disappeared from Mangaluru. The demand for restoration of this important connectivity remains.
Another major issue is the complete lack of adequate importance given to Kannada and Tulu, the languages of this land. Even today, there are concerns about insufficient staff at catering stalls, restaurants and ticket counters, while staff posted at various locations of the station premises may not know Kannada or Tulu. Signboards, advertisements, name boards and instruction boards have also frequently given more prominence to Malayalam than to the local languages. We are not against Malayalam or the people of Kerala, but when Mangaluru is in Karnataka, Kannada and Tulu must receive their rightful importance. Railway stations in Mangaluru should reflect the language and identity of the region.
The long-pending doubling between Mangaluru Central and Mangaluru Junction is another issue that must finally receive attention. Mangaluru's railway infrastructure must be developed according to its present and future requirements instead of repeatedly citing capacity and operational constraints.
Now that Mangaluru railway jurisdiction is being transferred to Mysuru Division, SWR, there are huge hopes among the people of Dakshina Kannada for development of the entire Mangaluru railway area, including Mangaluru Central, Mangaluru Junction, more trains from Karnataka and Konkan to Mangaluru Central and strengthening of the railway infrastructure between the two stations.
However, we strongly urge South Western Railway not to neglect Mangaluru Central, which is the main railway station of Mangaluru city and will now also assume even greater importance as the gateway and principal terminal(starting and ending point for trains) of the Mysuru Division on the Coastal Karnataka side.
At the same time, we strongly oppose any future attempt to bypass Mangaluru Central and Mangaluru Junction through Padil bypass for the sake of running trains between Karnataka and Konkan without serving Mangaluru's principal stations. In the past, efforts were made to bypass both Mangaluru Central and Mangaluru Junction, particularly for trains from Karnataka towards Konkan, including Train No. 16585/86 SMVT Bengaluru–Murdeshwar Express and we have strongly opposed such moves.
We oppose this even now because repeatedly bypassing Mangaluru's main stations will reduce their importance and will also reduce the presence of Karnataka-originating trains and Karnataka passengers at Mangaluru Central and Mangaluru Junction. Ultimately, this could once again result in Kerala-bound railway interests/services gaining further prominence at the expense of Karnataka-originating connectivity, while Karnataka's own connectivity to its coastal city gets weakened. Mangaluru must not be reduced to a place through which trains simply pass without serving the city.
Therefore, future trains, especially any Vande Bharat Express, should run from Bengaluru to Mangaluru Central as a dedicated and meaningful service, wherever operationally feasible. Other dedicated passenger and express trains from various cities of Karnataka should also originate or terminate at Mangaluru Central and should not be extended towards Kerala or Konkan or routed through bypasses at the cost of Mangaluru's importance. Mangaluru needs more Karnataka-originating services and stronger direct connectivity with Karnataka.
We want to make it clear that this demand is not against Kerala or the people of Kerala. Our concern is that Mangaluru, despite being in Karnataka and generating enormous railway revenue, should not once again be made secondary to Kerala-bound railway interests. We respect everyone, but Mangaluru's railway development must primarily serve the people and needs of Mangaluru and Karnataka.
Mangaluru is a treasure for the railway system. It is a major passenger and freight-generating region, an important port-connected area and a strategic gateway between Karnataka, Kerala, Konkan and the rest of the country. The potential of Mangaluru is enormous and this potential should finally be utilised for the development of Mangaluru and Coastal Karnataka.
We therefore strongly support and celebrate the transfer of Mangaluru railway jurisdiction to South Western Railway and Mysuru Division. But this transfer should not merely change the railway map. It must bring a real change in development. We expect Mangaluru Central to be developed as a world-class railway station, Mangaluru Junction to be upgraded, doubling between Mangaluru Central and Mangaluru Junction to be taken up, more Karnataka and Konkan connectivity to be provided, important long-distance services to be restored, practical train timings to be introduced, Kannada and Tulu to receive their rightful place and Mangaluru's main railway stations to be protected from unnecessary bypassing.
The people of Dakshina Kannada have waited for decades. Now is the time for Mangaluru's railway development!
🚆 MANGALURU CENTRAL MUST NOT BE NEGLECTED AGAIN!
🚆 MANGALURU JUNCTION MUST NOT BE NEGLECTED AGAIN!
🚆 MANGALURU MUST NOT BE BYPASSED THROUGH PADIL AT THE COST OF ITS MAIN STATIONS!
🚆 KARNATAKA MUST GET BETTER CONNECTIVITY TO MANGALURU CENTRAL!
🚆 DEVELOP MANGALURU CENTRAL. DEVELOP MANGALURU JUNCTION. DEVELOP MANGALURU RAILWAYS!
MANGALURU IS KARNATAKA'S GATEWAY TO THE COAST — NOW LET ITS RAILWAYS REFLECT ITS IMPORTANCE!
Attention Karnataka people 🚨
Listen to coastal Karnataka railway activist Hanumanth Kamath.See how badly the Kerala lobby in the Palakkad Division neglected and treated coastal Karnataka railway stations.
Mangalore stations generated around ₹1,000 crore in revenue for the Palakkad Division about 80% of the division’s total revenue.
From that Mangalore revenue, they developed stations across Kerala in the Palakkad Division and carried out doubling and tripling of railway lines within Kerala.
Meanwhile, Kannadigas had to beg for the installation of lifts at Mangalore stations.
It took them 14 years just to double one kilometre of track in Mangalore.
There were also operational biases: trains on the Karnataka and Mumbai routes were often stopped at Mangalore Junction instead of Mangalore Central, while Kerala-bound trains were allowed to stop at Mangalore Central.
In a nutshell, the Palakkad Division collected money from Mangalore but worked for Malayalis and Kerala.
PM Rajiv Gandhi addressed Joint session of US Congress in 1985
His wit, vision, humor made everyone fall in love with India back then.
His historic “India is an old country but a young nation” remains one of the most powerful address ever.
Remembering Rajiv Gandhi everyday.
ಮಾನ್ಯ ಡಿ. ಕೆ. ಶಿವಕುಮಾರ್ ಅವರೇ !
@DKShivakumar
ಇತಿಹಾಸ ನಿರ್ಮಿಸಬೇಕು ಎಂಬುದು ನಿಮ್ಮ ಕನಸಾಗಿದ್ದರೆ,
೧) ಎರಡು ನುಡಿ ಸೂತ್ರವನ್ನು ಜಾರಿಗೆ ತನ್ನಿ
೨) ಕನ್ನಡಿಗರ ಉದ್ದಿಮೆಗಳಿಗೆ ಸಹಕಾರ ನೀಡಿ
೩) ಕನ್ನಡಪರ ಯೋಜನೆಗಳನ್ನು ಜಾರಿಗೆ ತನ್ನಿ
೪) ಬೆಂಗಳೂರನ್ನು ಕನ್ನಡ ನಗರವಾಗಿಸಿ
Noida's brand-new airport gets waterlogged after rain.
If this was Bengaluru Airport, social media would have declared it a national disaster by now.
Funny how outrage often depends on pincodes, which city is trending and which name generates more traction.
Around 233 shops encroaching on the footpath between the Historic Bengaluru Fort, Victoria Hospital and KR Market were cleared today by the BLR Central Corporation.
Many of these were permanent metal-fabricated structures erected using forged documents purportedly issued by the erstwhile BBMP, completely blocking the view of the Historic Fort and leaving no space for pedestrians in one of Bengaluru’s busiest corridors.
After finding the documents to be bogus, the Hon’ble High Court directed the occupants to vacate within 15 days. Authorities waited 20 days before carrying out the clearance today, marking a major victory for the lakhs of citizens who use every day.
Dear Gen Z,
No, you do not have to respect your PM by default. In fact, you do not have to respect anyone just because they are older than you or hold a position of authority.
Judge the person in that position. Watch their actions carefully, and then decide whether they have earned your respect.
BMTC ಬಸ್ ಹಿಂದೆ “ಕನ್ನಡಿಗ” ಅಂತ ಅಭಿಮಾನದಿಂದ ಹಾಕಿದ್ದ ಸ್ಟಿಕರ್ ತೆಗಿಸಿದ ಕಣ್ಣಳ್ಳಿ ಡಿಪೋ-35 ರ ವ್ಯವಸ್ಥಾಪಕ ಎತ್ತಂಗಡಿ ಆಗ್ಲೇಬೇಕು!
ಕನ್ನಡಿಗರು ಕನ್ನಡದ ಪಾಠ ಮಾಡ್ಬೇಕು 😡😞😔
#kannada#kannadiga#bmtc#viral#trending
ಕರ್ನಾಟಕದಲ್ಲೇ "ಕನ್ನಡಿಗ" ಅನ್ನೋ ಪದಕ್ಕೆ ಜಾಗವಿಲ್ಲವೇ ?
BMTC ಬಸ್ಸಿನ ಮೇಲೆ ಅಂಟಿಸಿದ್ದ 'ಕನ್ನಡಿಗ' ಸ್ಟಿಕರ್ ತೆರವುಗೊಳಿಸಲು ಪಟ್ಟು ಹಿಡಿದ ಅಧಿಕಾರಿಯ ಈ ಕನ್ನಡ ವಿರೋಧಿ ಧೋರಣೆಯನ್ನು @JanataDal_S ಪಕ್ಷವು ಉಗ್ರವಾಗಿ ಖಂಡಿಸುತ್ತದೆ
ಖಾಸಗಿ ಸಂಸ್ಥೆಗಳ ಜಾಹೀರಾತುಗಳಿಗೆ ಜಾಗ ಕೊಡುವ ಸರ್ಕಾರಕ್ಕೆ, 'ಕನ್ನಡಿಗ' ಎನ್ನುವ ಹೆಮ್ಮೆಯ ಸಾಲು ನಿಷೇಧವೇ ?
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ಕನ್ನಡಿಗರ ಸರ್ಕಾರವೋ ಅಥವಾ ಕನ್ನಡ ವಿರೋಧಿ ಸರ್ಕಾರವೋ?
ರಾಜ್ಯ ಸರ್ಕಾರ ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಈ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸುತ್ತೇವೆ.
@CMofKarnataka@INCKarnataka
#SaveKannada #Karnataka
#BMTC #BMTCBus