ತುಳು ನಮ್ಮ ಮಾತೃಭಾಷೆ ಮಾತ್ರವಲ್ಲ ನಮ್ಮ ಸಂಸ್ಕೃತಿ, ಪರಂಪರೆ, ನೆಲ ಮತ್ತು ಅಸ್ಮಿತೆಯ ಜೀವನಾಡಿ.
ಕರ್ನಾಟಕ ಮತ್ತು ಕೇರಳದ ಕರಾವಳಿ ಭಾಗಗಳಲ್ಲಿ ಲಕ್ಷಾಂತರ ಜನರ ಬದುಕಿನೊಂದಿಗೆ ಬೆಸೆದುಕೊಂಡಿರುವ ತುಳು ಭಾಷೆಗೆ ಸೂಕ್ತವಾದ ಅಧಿಕೃತ ಮಾನ್ಯತೆ ದೊರೆಯಲಿ
#TuluOfficialinKA_KL
ತುಳುನಾಡಿನಲ್ಲಿ, ತುಳು ಪ್ರತಿಯೊಬ್ಬ ಜನಸಾಮಾನ್ಯನ ಭಾಷೆ. ಜನರು ಭಾಷೆ ಹಾಗೂ ಧರ್ಮದ ಹಂಗಿಲ್ಲದೆ ತುಳುವನ್ನು ಮಾತನಾಡುತ್ತಾರೆ ಹಾಗೂ ಸಂಭ್ರಮಿಸುತ್ತಾರೆ. ಜನರು ಈಗಾಗಲೆ ಗುರುತಿಸಿರುವ ಈ ಭಾಷೆಗೆ ಆಡಳಿತ ಭಾಷೆಯ ಸ್ಥಾನವನ್ನು ಕೊಡಿ.
#TuluOfficialinKA_KL
ಒಂದು ಭಾಗದಲ್ಲಿ ಅತಿ ಹೆಚ್ಚು ಮಾತಾನಾಡುವ ಭಾಷೆಗೆ ಆಡಳಿತಾತ್ಮಕ ಸ್ಥಾನಮಾನ ನೀಡುವುದು ಸರಕಾರದ ಕರ್ತವ್ಯವಾಗಿದೆ. ಇಲ್ಲವಾದರೆ ಆ ಆಡಳಿತಕ್ಕೆ ಅರ್ಥವಿರುವುದಿಲ್ಲ.
#TuluOfficialinKA_KL
ಸಾವಿರಾರು ವರ್ಷಗಳಷ್ಟು ಇತಿಹಾಸ ಹೊಂದಿರುವ ಭಾಷಾಸಂಸ್ಕೃತಿಯೊಂದು ನಷಿಸಿ ಹೋಗುವ ಪಟ್ಟಿಗೆ ಸೇರಬಾರದೆಂದು ಮಾಡುತ್ತಿರುವ ಅಭಿಯಾನವನ್ನು ಗಣನೆಗೆ ತೆಗೆದುಕೊಳ್ಳಿ..#TuluofficialinKA_KL
ಪ್ರತ್ಯೇಕತೆಯ ಕೂಗಿಗೆ ಕಾರಣ ತುಳು ಮತ್ತು ಕೊಡವ ಭಾಷೆಗಳಿಗೆ ಸ್ಥಾನಮಾನತೆ ಸಿಗದೆ ಇದ್ದದ್ದು ಅಷ್ಟೇ.
ತುಳು ಮತ್ತು ಕೊಡವ ಭಾಷೆಗಳಿಗೆ ಮಾನ್ಯತೆ ಸಿಕ್ಕರೆ "ಒಂದು ರಾಜ್ಯ, ಹಲವು ಜಗತ್ತು" ಎಂಬ ಮಾತು ಅರ್ಥಪೂರ್ಣವಾಗಿರುತ್ತದೆ.
"ತುಳುವೆರೆಂಕುಲ್ " ❤️
#TulunadState#BlackDayForTulunad - Nov 1
#KarnatakaRajyotsava