ಆಳಂದ ಪಟ್ಟಣದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಕೌಶಲ್ಯ ಕೇಂದ್ರದ ಉಪಕರಣಗಳ ವಿತರಣಾ ಕಾರ್ಯಕ್ಕೆ ಆಳಂದ ಶಾಸಕ ಸುಭಾಷ್ ಅರ್ ಗುತ್ತೇದಾರ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರುದ್ರವಾಡಿ ಫಲಾನುಭವಿಗಳಾದ "ಕಾಂಚನ ಗುರು ಡಿಗ್ಗಿ" ಅವರಿಗೆ ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ ಉಪಕರಣಗಳನ್ನು ವಿತರಿಸಿದರು.