ಸರ್, ಡಾ. ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದ್ದು ನಿಮ್ಮ ಅವಧಿಯ ಸಚಿವ ಸಂಪುಟ. ಹಾಗಾಗಿ ಅವರ ಅಮೃತ ಮಹೋತ್ಸವ ಸಮಾರಂಭದಲ್ಲಿ ನಿಮ್ಮನ್ನು ಗೌರವಿಸಬೇಕು ಎಂಬ ಆಸೆಯಿದೆ. ತಾವು ಬಿಡುವು ಮಾಡಿಕೊಂಡು ಬರಬೇಕು ಎಂದು ವಿನಂತಿಸಿದೆ. ಮೊದಲಿಗೆ 'ಆಗುವುದಿಲ್ಲ' ಎಂದರೂ, ಸುಮಾರು ಐದಾರು ನಿಮಿಷಗಳ ಮಾತುಕತೆಯ ನಂತರ ಬರಲು ಒಪ್ಪಿಕೊಂಡರು. ಸಿದ್ದರಾಮಯ್ಯನವರು ಹೀಗೆ ಆರಾಮಾಗಿ ಮಾತಿಗೆ ಸಿಕ್ಕಿದ್ದು ಇದೇ ಮೊದಲನೇ ಬಾರಿ. ತುಂಬಾ ರಿಲ್ಯಾಕ್ಸ್ಡ್ ಆಗಿ ಕಾಣುತ್ತಿದ್ದರು!
ಸೆಪ್ಟೆಂಬರ್ 27
ನಂದಿ ಲಿಂಕ್ ಗ್ರೌಂಡ್, ನಾಯಂಡಹಳ್ಳಿ, ಬೆಂಗಳೂರು
ಬೆಳಗ್ಗೆ ಆರರಿಂದ ರಾತ್ರಿ ಹನ್ನೆರಡರ ತನಕ.
ನಿಮ್ಮ
ವೀರಕಪುತ್ರಶ್ರೀನಿವಾಸ
ಚೆನ್ನೈಗೆ ಹೋಗುವಾಗಲೇ ಸುಹಾಸಿನಿ ಮೇಡಂ ಅವರಿಗೆ ನೂರು ಗುಲಾಬಿ ಹೂವುಗಳನ್ನು ಕೊಡಬೇಕು ಅಂತ ನಿರ್ಧರಿಸಿದ್ದೆ. ಈ ವಿಚಾರವನ್ನು ರಾಜೇಂದ್ರ ಸಿಂಗ್ ಬಾಬು ಸರ್ ಅವರಿಗೂ ಹೇಳಿದ್ದೆ. ಯಾಕೆಂದರೆ ಬಂಧನ ಸಿನಿಮಾದಲ್ಲಿ ಯಜಮಾನ್ರು ಒಂದು ಗುಲಾಬಿ ಕೊಟ್ಟಿದ್ದರು. ನಾನದನ್ನು ನೂರಕ್ಕೆ ಏರಿಸಿ ಆ ದೃಶ್ಯವನ್ನು ಮತ್ತೆ ನೆನಪಿಸಬೇಕಿತ್ತು. ಆದರೆ ನನ್ನ ಆಸೆಗೆ ಚೆನ್ನೈ, ಇಲ್ಲೈ ಅಂದುಬಿಟ್ಟಿತು.
ಚೆನೈನಲ್ಲಿ ಒಂದು ಗುಲಾಬಿಗೆ ನೂರೈವತ್ತು ರೂಪಾಯಿ. ಲೆಕ್ಕ ಹಾಕಿದರೆ ನೂರು ಗುಲಾಬಿಗೆ ಹದಿನೈದು ಸಾವಿರ. ಅದರ ಜೊತೆಗೆ ಬೇರೆ ಖರ್ಚುಗಳು ಸೇರಿ ಹದಿನಾರು ಸಾವಿರ ದಾಟುತ್ತದೆ. ದುಬಾರಿ ಕಾರಣಕ್ಕೆ ಗಾಬರಿಯೂ ಆಯಿತು. ವಿಚಾರಿಸಿದಾಗ ತಿಳಿದಿದ್ದು, ಚೆನ್ನೈನ ಬಿಸಿಲು ಬೇರೆ ಲೆವೆಲ್. ಹೂಗಳನ್ನು ಬೆಂಗಳೂರಿನಂತೆ ಹೊರಗಿಟ್ಟರೆ ಅರ್ಧ ಗಂಟೆಯಲ್ಲೇ ಹೂವುಗಳು ಬಾಡಲು ಶುರುವಾಗುತ್ತವೆ. ಹೂವುಗಳನ್ನು ಉಳಿಸಿಕೊಳ್ಳಬೇಕೆಂದರೆ ಏಸಿ ಹಾಲ್ನಲ್ಲಿ ಇಡಬೇಕು. ಅದೂ ಒಂದು ದಿನಕ್ಕಿಂತ ಹೆಚ್ಚು ಉಳಿಸಿಕೊಳ್ಳುವುದು ಕಷ್ಟ. ಹಾಗಾಗಿ ಅಲ್ಲಿ ಗುಲಾಬಿ ದುಬಾರಿ!
ಆಸೆಗಳು ಖುಷಿಯನ್ನು ನುಂಗುವಂತಾದಾಗ, ಆಸೆಯನ್ನು ಬಿಡಬೇಕೇ ಹೊರತು ಖುಷಿಯನ್ನಲ್ಲ! ಹಾಗಾಗಿ ನೂರು ಹೂವುಗಳ ಆಸೆಯನ್ನು ಬಿಟ್ಟು, ಕೊನೆಗೆ 25 ಗುಲಾಬಿಗಳ ಹೂಗುಚ್ಚ ಮಾಡಿಸಿದೆ. ಮೇಡಂ, ನಮ್ಮ ವಿಷ್ಣು ಸರ್ ಬಂಧನ ಸಿನಿಮಾದಲ್ಲಿ, ಪ್ರೀತಿಗಾಗಿ ಒಂದು ಗುಲಾಬಿ ಕೊಟ್ಟಿದ್ದರು. ನಾವು ಅಭಿಮಾನಕ್ಕಾಗಿ ಅದಕ್ಕಿಂತ ಹೆಚ್ಚು ಕೊಟ್ಟಿದ್ದೇವೆ ಅಂತ ತಮಾಷೆಯಾಗಿ ಹೇಳಿದೆ. ಅವರು ಅದನ್ನು ಕೇಳಿ ಜೋರಾಗಿ ನಕ್ಕರು. ಅವರ ನಗು ಎಷ್ಟು ಪ್ರಸಿದ್ಧವೋ ಅಷ್ಟೇ ಆಪ್ತವೂ ಹೌದು. ಆ ಕ್ಷಣಕ್ಕೆ ಅಲ್ಲಿ ಆಪ್ತ ವಾತಾವರಣ ಸೃಷ್ಟಿಯಾಯಿತು. ಹೌದಲ್ಲವಾ...ಪ್ರೀತಿಗಿಂತ ಅಭಿಮಾನವೇ ಶ್ರೇಷ್ಠ!
ಇದೀಗ ಅಸಲಿ ವಿಷ್ಯವೇನೆಂದರೆ, ಸುಹಾಸಿನಿ ಮೇಡಂ ಅವರು ನಮ್ಮ ಡಾ.ವಿಷ್ಣುವರ್ಧನ ಅಮೃತ ಮಹೋತ್ಸವಕ್ಕೆ ಬರುತ್ತಿದ್ದಾರೆ. ಅಂದು ಅವರಿಗೆ ನೂರಲ್ಲ ಅದಕ್ಕಿಂತ ಹೆಚ್ಚಿನ ಗುಲಾಬಿಗಳನ್ನು ನೀಡಿ ಬರಮಾಡಿಕೊಳ್ಳುವ ಆಸೆಯಿದೆ.
ಅವರೆಲ್ಲಾ ಬರುವಾಗ
ನೀವೆಲ್ಲಾ ಇರಬೇಕಷ್ಟೇ!
ಡಾ.ವಿಷ್ಣುವರ್ಧನ ಅಮೃತ ಮಹೋತ್ಸವ
ಸೆಪ್ಟೆಂಬರ್ 27th
ನಂದಿ ಲಿಂಕ್ ಗ್ರೌಂಡ್, ನಾಯಂಡಹಳ್ಳಿ, ಬೆಂಗಳೂರು
ಬೆಳಗ್ಗೆ ಆರರಿಂದ ರಾತ್ರಿ ಹನ್ನೆರಡು
#ಯಜಮಾನ್ರು #ಅಮೃತಮಹೋತ್ಸವ #ಸುಹಾಸಿನಿ
ನಿಮ್ಮ
#ವೀರಕಪುತ್ರಶ್ರೀನಿವಾಸ
ವಿಷ್ಣು ಸೇನಾನಿಗಳಿಂದ ಅದ್ಧೂರಿ ಅಮೃತ ಮಹೋತ್ಸವ
ಅರ್ಧ ಕಿಲೋಮೀಟರ್ ಉದ್ದದ ಬೃಹತ್ ಧ್ವಜದೊಂದಿಗೆ ಮಹಾ ಮೆರವಣಿಗೆ
ಸೆಪ್ಟೆಂಬರ್ 27ರಂದು ಬೆಳಗ್ಗೆ 6ರಿಂದ ರಾತ್ರಿ 12ರವರೆಗೆ 18 ಗಂಟೆಗಳ ಸಂಭ್ರಮ
ಬೆಂಗಳೂರು: ಕನ್ನಡ ಚಿತ್ರರಂಗದ ಮೇರುನಟ, ಅಭಿಮಾನಿಗಳ ಪ್ರೀತಿಯ ‘ಯಜಮಾನ’ ಡಾ. ವಿಷ್ಣುವರ್ಧನ್ ಅವರ ಅಮೃತ ಮಹೋತ್ಸವವನ್ನು ಐತಿಹಾಸಿಕವಾಗಿ ಆಚರಿಸಲು ವಿಷ್ಣು ಸೇನಾನಿಗಳು ಸಜ್ಜಾಗುತ್ತಿದ್ದಾರೆ.
ಸುಮಾರು ಒಂದು ಕೋಟಿಗೂ ಮಿಗಿಲಾದ ವೆಚ್ಚದಲ್ಲಿ, ಬರೋಬ್ಬರಿ 18 ಗಂಟೆಗಳ ಕಾಲ ನಡೆಯಲಿರುವ ಈ ಬೃಹತ್ ಮಹೋತ್ಸವಕ್ಕೆ ಈಗಾಗಲೇ ಸಿದ್ಧತೆಗಳು ಆರಂಭವಾಗಿವೆ. ನೂರಾರು ಜನರ ಶ್ರಮ, ಸಾವಿರಾರು ಅಭಿಮಾನಿಗಳ ಸಹಕಾರ ಹಾಗೂ ತಿಂಗಳುಗಳ ಪೂರ್ವತಯಾರಿಯೊಂದಿಗೆ ಈ ಮಹೋತ್ಸವವನ್ನು ಅತ್ಯಂತ ಅದ್ಧೂರಿಯಾಗಿ ರೂಪಿಸಲಾಗುತ್ತಿದೆ.
ಮಹೋತ್ಸವದ ಮೊದಲ ಪ್ರಮುಖ ಆಕರ್ಷಣೆಯಾಗಿ ಅರ್ಧ ಕಿಲೋಮೀಟರ್ ಉದ್ದದ ಬೃಹತ್ ಧ್ವಜದ ಮೆರವಣಿಗೆ ನಡೆಯಲಿದೆ.
ಸೆಪ್ಟೆಂಬರ್ 27ರಂದು ಬೆಳಗ್ಗೆ 6 ಗಂಟೆಗೆ ಬೆಂಗಳೂರಿನ ಟೌನ್ ಹಾಲ್ನಿಂದ ಆರಂಭವಾಗುವ ಮೆರವಣಿಗೆ ನಾಯಂಡಹಳ್ಳಿಯವರೆಗೆ ಸಾಗಲಿದೆ. ಅರ್ಧ ಕಿಲೋಮೀಟರ್ ಉದ್ದದ ಬೃಹತ್ ಧ್ವಜವನ್ನು ಸಾವಿರಾರು ವಿಷ್ಣುವರ್ಧನ್ ಅಭಿಮಾನಿಗಳು ಹೆಮ್ಮೆಯಿಂದ ಹೊತ್ತು ಸಾಗಲಿದ್ದಾರೆ. ಇದು ಅಮೃತ ಮಹೋತ್ಸವದ ಅತ್ಯಂತ ವಿಶೇಷ ಹಾಗೂ ಸ್ಮರಣೀಯ ಕ್ಷಣಗಳಲ್ಲಿ ಒಂದಾಗಲಿದೆ.
ಮೆರವಣಿಗೆಯ ನಂತರ ನಾಯಂಡಹಳ್ಳಿಯ ನಂದಿ ಲಿಂಕ್ ಗ್ರೌಂಡ್ನಲ್ಲಿ ದಿನವಿಡೀ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಬೆಳಗ್ಗೆ 6 ಗಂಟೆಗೆ ಆರಂಭವಾಗುವ ಸಂಭ್ರಮ ರಾತ್ರಿ 12 ಗಂಟೆಯವರೆಗೂ ಮುಂದುವರಿಯಲಿದೆ.
“ಆ ದಿನ ವಿಷ್ಣು ಸೇನಾನಿಗಳು ಕೇವಲ ಒಂದು ಕಾರ್ಯಕ್ರಮವನ್ನು ಮಾಡುವುದಿಲ್ಲ. ಒಬ್ಬ ಮಹಾನ್ ಕಲಾವಿದನ ಮೇಲಿನ ಅಭಿಮಾನ ಹೇಗಿರುತ್ತದೆ ಎಂಬುದನ್ನು ಇಡೀ ನಾಡಿಗೆ ತೋರಿಸಲಿದ್ದಾರೆ. ಈ ಅಮೃತ ಮಹೋತ್ಸವ ಅಭಿಮಾನಿಗಳ ಪಾಲಿಗೆ ಒಂದು ಐತಿಹಾಸಿಕ ಕ್ಷಣವಾಗಬೇಕು ಎಂಬ ಕನಸಿನಿಂದ ಪ್ರತಿಯೊಂದು ಹೆಜ್ಜೆಯನ್ನೂ ರೂಪಿಸುತ್ತಿದ್ದೇವೆ” ಎಂದು ವೀರಕಪುತ್ರ ಶ್ರೀನಿವಾಸ್ ತಿಳಿಸಿದ್ದಾರೆ.
ಕಾರ್ಯಕ್ರಮದ ವಿವರ
ದಿನಾಂಕ: ಸೆಪ್ಟೆಂಬರ್ 27
ಸಮಯ: ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ
ಮೆರವಣಿಗೆ: ಟೌನ್ ಹಾಲ್ನಿಂದ ನಾಯಂಡಹಳ್ಳಿವರೆಗೆ
ಮುಖ್ಯ ಕಾರ್ಯಕ್ರಮದ ಸ್ಥಳ: ನಂದಿ ಲಿಂಕ್ ಗ್ರೌಂಡ್, ನಾಯಂಡಹಳ್ಳಿ, ಬೆಂಗಳೂರು
@VeerakaputraSri
Hey guys!
Been running around with promotions for #Sardar2 and realised it’s been a while since we’ve chatted with you & that it’s time for a Q&A which I looove doing with you ☺️
#AskMalavika at 2 PM today? ♥️
See you 🥰
ಆ ದಿನ ವಿಷ್ಣು ಸೇನಾನಿಗಳು ಕೇವಲ ಕಾರ್ಯಕ್ರಮ ಮಾಡುವುದಿಲ್ಲ...
ಇವತ್ತಿನಿಂದ ಅಮೃತ ಮಹೋತ್ಸವದ ಸಿದ್ಧತೆ, ಅದರ ಹಿಂದೆ ನಡೆಯುತ್ತಿರುವ ಕೆಲಸ ಮತ್ತು ಕಾರ್ಯಕ್ರಮದ ಪ್ರತಿಯೊಂದು ಹೆಜ್ಜೆಯನ್ನೂ ನಿಮ್ಮೊಂದಿಗೆ ಹಂಚಿಕೊಳ್ಳುತ್ತಾ ಹೋಗುತ್ತೇನೆ. ಯಾಕೆಂದರೆ… ಇದು ಮತ್ತೊಂದು ಕಾರ್ಯಕ್ರಮವಲ್ಲ. ಇದು ಅಭಿಮಾನಿಗಳ ಪಾಲಿಗೆ ಒಂದು ಐತಿಹಾಸಿಕ ಕ್ಷಣವಾಗಬೇಕು ಎಂಬ ಕನಸಿನಿಂದ ರೂಪುಗೊಳ್ಳುತ್ತಿರುವ ಮಹೋತ್ಸವ! ಸುಮಾರು ಒಂದು ಕೋಟಿಗೂ ಮಿಗಿಲಾದ ವೆಚ್ಚ, ಬರೋಬ್ಬರಿ 18 ಗಂಟೆಗಳ ಕಾರ್ಯಕ್ರಮ. ಬೆಳಗ್ಗೆ 6 ಗಂಟೆಗೆ ಆರಂಭವಾಗಿ ರಾತ್ರಿ 12 ಗಂಟೆಯವರೆಗೆ ಸಾಗುವ ಇಂತಹ ಒಂದು ಬೃಹತ್ ಕಾರ್ಯಕ್ರಮವನ್ನು ರೂಪಿಸುವುದು ಮಾತಿನಲ್ಲಿ ಹೇಳುವಷ್ಟು ಸುಲಭವಲ್ಲ. ಅದರ ಹಿಂದೆ ನೂರಾರು ಜನರ ಶ್ರಮ, ಸಾವಿರಾರು ಅಭಿಮಾನಿಗಳ ಪ್ರೀತಿ ಮತ್ತು ತಿಂಗಳುಗಳ ತಯಾರಿ ಇದೆ.
ಇದರ ಮೊದಲ ಅದ್ಧೂರಿ ಅಧ್ಯಾಯವೇ,
ಅರ್ಧ ಕಿಲೋಮೀಟರ್ ಉದ್ದದ ಬೃಹತ್ ಧ್ವಜ!
ಸೆಪ್ಟೆಂಬರ್ 27ರಂದು ಬೆಳಗ್ಗೆ 6 ಗಂಟೆಗೆ ಟೌನ್ ಹಾಲ್ನಿಂದ ಆರಂಭವಾಗುವ ಮೆರವಣಿಗೆ… ನಾಯಂಡಹಳ್ಳಿಯವರೆಗೆ ಸಾಗಲಿದೆ. ಆ ಅರ್ಧ ಕಿಲೋಮೀಟರ್ ಉದ್ದದ ಧ್ವಜವನ್ನು ಸಾವಿರಾರು ಅಭಿಮಾನಿಗಳು ಹೆಮ್ಮೆಯಿಂದ ಹೊತ್ತು ಸಾಗಲಿದ್ದಾರೆ.
ಹಾಗಾಗಿ ಸೆಪ್ಟೆಂಬರ್ 27 ರಂದು ಬೆಳಗ್ಗೆ 6 ಗಂಟೆಗೆ ಟೌನ್ ಹಾಲ್ ಬಳಿ ಬಂದು ಬಿಟ್ಟರೆ, ನೀವು ಮನೆಗೆ ಹೋಗುವುದು ರಾತ್ರಿ 12 ಗಂಟೆ ನಂತರವೇ! ಆ ಮಟ್ಟದಲ್ಲಿ ನಡೆಯಲಿದೆ ಈ ಕಾರ್ಯಕ್ರಮ.
ಕೊನೆಮಾತು:
ಆ ದಿನ ವಿಷ್ಣು ಸೇನಾನಿಗಳು ಒಂದು ಕಾರ್ಯಕ್ರಮವನ್ನು ಮಾತ್ರ ಮಾಡುವುದಿಲ್ಲ! ಒಬ್ಬ ಮಹಾನ್ ಕಲಾವಿದನ ಮೇಲಿನ ಅಭಿಮಾನ ಹೇಗಿರುತ್ತದೆ ಎನ್ನುವುದನ್ನು ಇಡೀ ನಾಡಿಗೆ ತೋರಿಸಲಿದ್ದಾರೆ.
#ಯಜಮಾನ್ರು #ಅಮೃತಮಹೋತ್ಸವ
ಸೆಪ್ಟೆಂಬರ್ 27
ಬೆಳಗ್ಗೆ 6 ಗಂಟೆಯಿಂದ ರಾತ್ರಿ 12ರ ತನಕ.
ನಂದಿ ಲಿಂಕ್ ಗ್ರೌಂಡ್, ನಾಯಂಡಹಳ್ಳಿ, ಬೆಂಗಳೂರು
ನಿಮ್ಮ
ವೀರಕಪುತ್ರಶ್ರೀನಿವಾಸ