9ನೇ ತರಗತಿಯ ಸಮಾಜವಿಜ್ಞಾನ ಪಠ್ಯದಲ್ಲಿನ ವಿಧಾನಸಭೆ ಎನ್ನುವ ಕಲಿಕಾoಶವನ್ನು ಚಟುವಟಿಕೆ ರೂಪದಲ್ಲಿ "ಅಣಕು ವಿಧಾನಸಭೆ ಅಧಿವೇಶನ" ಮಾಡುವ ಮೂಲಕ ರಾವೂರ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯ 9ನೇ ತರಗತಿ ಮಕ್ಕಳು ತಮ್ಮ ಸಾಮಾರ್ಥ್ಯಗಳನ್ನು ಪ್ರದರ್ಶಿಸಿದರು. ಆ ಮೂಲಕ ಮಕ್ಕಳು ಕಲಿಕೆಯನ್ನು ಮನದಟ್ಟು ಮಾಡಿಕೊಂಡರು.
ಬೆಂಗಳೂರಿನಲ್ಲಿ ಇಂದು ನಡೆಯುತ್ತಿರುವ ಪ್ರೌಢಶಾಲಾ ವಿದ್ಯಾರ್ಥಿಗಳ ರಾಜ್ಯಮಟ್ಟದ ಯುವ ಸಂಸತ್ ಸ್ಪರ್ಧೆ ಯಲ್ಲಿ ಭಾಗವಹಿಸಿರುವ ರಾವೂರ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯ ವಿದ್ಯಾರ್ಥಿ ಕು.ನಾಗರಾಜ ಮತ್ತು ಸರಕಾರಿ ಪ್ರೌಢ ಶಾಲೆ ಫರಹತಬಾದ್ ನ ವಿದ್ಯಾರ್ಥಿನಿ ಕು. ಸ್ಫೂರ್ತಿ.
ಲುoಬಿನಿ ಉದ್ಯಾನವನಕ್ಕೆ ರಾವೂರ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯ ಮಕ್ಕಳ ಭೇಟಿ....
ವನ್ಯಜೀವಿ ಸಪ್ತಾಹದ ಕಾರ್ಯಕ್ರಮದ ಅಂಗವಾಗಿ ಅರಣ್ಯಅಧಿಕಾರಿ ಶ್ರೀ ವಿಜಯಕುಮಾರ ಬಡಿಗೇರ್ ಅವರ ಮನವಿಯ ಮೇರೆಗೆ 45 ವಿದ್ಯಾರ್ಥಿ /ನಿಯರ ತಂಡ ಗುಂಡಗರ್ತಿಯ ಲುoಬಿನಿ ಟ್ರಿ ಪಾರ್ಕ್ ಗೆ ಭೇಟಿ ನೀಡಿ ಒಂದಷ್ಟು ಮರ, ಪ್ರಾಣಿ, ಪಕ್ಷಿಗಳ ಬಗ್ಗೆ ಮಾಹಿತಿ ಪಡೆದರು.
ಇಂದು ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ಮಕ್ಕಳಿಗೆ ಚುನಾವಣೆ ಕುರಿತು ಅರಿವು ಮೂಡಿಸಲು ಹಮ್ಮಿಕೊಂಡಿದ್ದ ಮಕ್ಕಳ ಅಣಕು ಚುನಾವಣೆ ಯಶಸ್ವಿಯಾಯಿತು. ಮಕ್ಕಳು ತಮ್ಮ ತರಗತಿ ನಾಯಕರನ್ನು ತಾವೇ ಮತಯಂತ್ರದಲ್ಲಿ ಮತ ಹಾಕುವ ಮುಲಕ ತಮ್ಮ ಹಕ್ಕು ಚಲಾಯಿಸಿದರು.
ಭಾರತೀಯ ವಿದ್ಯಾಕೇಂದ್ರ ಸಿರನೂರ ಶಾಲೆಯಲ್ಲಿ ನಡೆದ ಚೈತನ್ಯ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದೆ. ಜೊತೆಗೆ ಶಿಕ್ಷಣತಜ್ಞರು ಮಾರ್ಗದರ್ಶಕರಾದ ಶ್ರೀ ಬಸವರಾಜ ಪಾಟೀಲ್ ಸೇಡಂ ಅವರೊಂದಿಗೆ ಪ್ರಸ್ತುತ ಶಿಕ್ಷಣ ವ್ಯವಸ್ಥೆ ಕುರಿತು ಸಂವಾದ ಮಾಡಿದ್ದು ಖುಷಿ ಕೊಟ್ಟಿತು.
ಕಲ್ಯಾಣ ಕರ್ನಾಟಕದ ಜಾಗೃತ ಮಠವಾಗಿರುವ ನಾಲವಾರದ ಕೊರಿಸಿದ್ದೇಶ್ವರ ಸಂಸ್ಥಾನ ಮಠದಲ್ಲಿ ಚಟ್ಟಿ ಅಮಾವಾಸ್ಯೆಯಂದು ನಡೆದ ಶಿವಾನುಭವಗೋಷ್ಟಿ ಕಾರ್ಯಕ್ರಮದಲ್ಲಿ ನಮ್ಮ ಕ. ಸಾ. ಪ ಅಧ್ಯಕ್ಷರಾದ ಶ್ರೀ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ ಅವರ ನೇತೃತ್ವದಲ್ಲಿ ಪಾಲ್ಗೊಂಡಾಗ ಪರಮಪೂಜ್ಯ ಡಾ. ಸಿದ್ಧತೋಟೇoದ್ರ ಶಿವಾಚಾರ್ಯರು ಸತ್ಕರಿಸಿದರು.
ಇಂದು ಮಕ್ಕಳು ಶಿಕ್ಷಕರಾಗಿ ತಾವೇ ಪಾಠ ಬೋಧನೆ ಮಾಡಿ ಶಿಕ್ಷಕರಿಂದ ಸೈ ಎನಿಸಿಕೊಂಡರು......
ರಾವೂರ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ಅಂತರಾಷ್ಟ್ರೀಯ ಮಕ್ಕಳ ಹಕ್ಕುಗಳ ದಿನದ ಅಂಗವಾಗಿ ಮಕ್ಕಳಲ್ಲಿರುವ ಬೋಧನಾ ಕೌಶಲ್ಯ, ತರಗತಿ ನಿರ್ವಹಣೆ ಸಾಮರ್ಥ್ಯವನ್ನು ಗುರುತಿಸಿ ಶಿಕ್ಷಕರು ನೀಡಿದ ತರಬೇತಿ ಪಡೆದು ಮಕ್ಕಳು ಪಾಠ ಹೇಳಿದರು.
ಕಲಬುರಗಿಯ ರಂಗಯಣಕ್ಕೆ ರಾವೂರ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯ ಮಕ್ಕಳೊಂದಿಗೆ ಭೇಟಿ ಮಾಡಿ ನೂತನ ರಂಗಾಯಣ ನಿರ್ದೇಶಕಿಯಾಗಿ ನೇಮಕವಾಗಿರುವ ಡಾ. ಸುಜಾತಾ ಜಂಗಮಶೆಟ್ಟಿ ಅವರನ್ನು ಸತ್ಕರಿಸಿ ಸoವಾದ ನಡೆಸಲಾಯಿತು.