ಕರ್ನಾಟಕದಲ್ಲಿ ನಡೆಯುತ್ತಿರುವ ಬಡ ಬಾಣಂತಿಯರ ಮತ್ತು ಮಕ್ಕಳ ಸರಣಿ ಸಾವುಗಳಿಗೆ, ರಾಜ್ಯಸರ್ಕಾರದ ವೈದ್ಯಕೀಯ ಆಡಳಿತದ ವೈಫಲ್ಯವೇ ಕಾರಣ.
ಈ ಸರಣಿ ಸಾವಿನಲ್ಲಿ, ಸರ್ಕಾರವು ಗಮನಿಸಬೇಕಾದ ಮುಖ್ಯ ಅಂಶಗಳು ಮತ್ತು ನಾವು ಎತ್ತಿರುವ ಕೆಲವೊಂದು ಪ್ರಶ್ನೆಗಳು .
📌
೧) ಬಳ್ಳಾರಿ ಆಸ್ಪತ್ರೆಯಲ್ಲಿ ಮಾತ್ರವಲ್ಲದೇ ಬೆಳಗಾವಿ, ಹುಬ್ಬಳ್ಳಿಯಂತಹ ಇತರ ಆಸ್ಪತ್ರೆಗಳಲ್ಲೂ ಸಾವುಗಳು ವರದಿಯಾಗಿವೆ. ಆದ್ದರಿಂದ Ringer's lactate injection ಒಂದರಿಂದಲೇ ಎಲ್ಲಾ ಕಡೆಯೂ ಸಾವುಗಳು ಆಗಿಲ್ಲ ಎಂದು ಹೇಳಬಹುದು.
೨) ದೋಷಪೂರಿತ Ringer's lactate injection ಬ್ಯಾಚಿನ ಔಷಧಿಗಳನ್ನು ಯಾವ ಯಾವ ಆಸ್ಪತ್ರೆಗಳಿಗೆ ಕಳಿಸಲಾಗಿತ್ತು? ಆ ಎಲ್ಲಾ ಆಸ್ಪತ್ರೆಗಳಲ್ಲೂ ಹೀಗೆಯೇ ಸಾವುಗಳು ಆಗಿದ್ದಾವೆಯೇ?
೩) ಮಹಿಳಾ ಆಯೋಗದ ಅಧ್ಯಕ್ಷೆಯವರು ಬಳ್ಳಾರಿಯ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಶುಚಿತ್ವದ ಬಗ್ಗೆ ಹೌಹಾರಿ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಆದ್ದರಿಂದ, ಬಾಣಂತಿಯರಿಗೆ ಸೋಂಕು ತಗಲುವಲ್ಲಿ ಇನ್ನೂ ಹೆಚ್ಚಿನ ಕಾರಣಗಳಿವೆ ಎಂದಾಯಿತು. ಅವುಗಳು ಮರುಕಳಿಸದಂತೆ ಮಾಡಬೇಕು,
೪) ಔಷಧ ನಿಯಂತ್ರಣ ಇಲಾಖೆ ಮತ್ತು ಆಹಾರ ಸುರಕ್ಷತಾ ಇಲಾಖೆಗಳನ್ನು ವಿಲೀನ ಮಾಡಿದ್ದು ಒಳ್ಳೆಯದಾಯಿತು. ಆದರೆ, ಆಯುಕ್ತರು ಔಷಧತಜ್ಙರಾಗಿರಲಿ. ಇದು ಪ್ರಪಂಚದಾದ್ಯಂತ ಇರುವ best practice ಆಗಿದೆ.
೫) ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದ ಕಾರ್ಯವೈಖರಿಯ ಬಗ್ಗೆ ಹಲವಾರು ಆಕ್ಷೇಪಗಳಿವೆ. ಇದನ್ನು ತಮಿಳುನಾಡು ಮಾದರಿಯಲ್ಲಿ ಮಾಡಲಾಗಿತ್ತಾದರೂ ಅಲ್ಲಿರುವಂತಹ ಪಾರದರ್ಶಕತೆ ಮತ್ತು ಕಾರ್ಯದಕ್ಷತೆಗಳು ಕರ್ನಾಟಕದ ನಿಗಮದಲ್ಲಿ ಇಲ್ಲ ಎಂಬ ಟೀಕೆಯಿದೆ. ಕರ್ನಾಟಕ ಸರ್ಕಾರವು ಈ ನಿಟ್ಟಿನಲ್ಲಿ ಗಂಭೀರವಾಗಿ ಕೆಲಸ ಮಾಡಬೇಕಿದೆ,
೬) ಪಶ್ಚಿಮ ಬಂಗಾ ಕಂಪನಿಯ Ringer's lactate injection ಅನ್ನು ಕರ್ನಾಟಕದಲ್ಲಿ ಪರೀಕ್ಷಿಸಿದಾಗ ಫೇಲ್ ಆಗಿತ್ತು. Central Drugs Testing lab ನವರು ಪರೀಕ್ಷಿಸಿದಾಗ ಪಾಸ್ ಆಯಿತು. ಔಷಧ ನಿಯಂತ್ರಕರು Drugs and Cosmetics Act ಪ್ರಕಾರವೇ ಕೆಲಸ ಮಾಡಬೇಕು. ಈ ಕಾಯಿದೆಯ ಪ್ರಕಾರ Central Drugs Testing Lab ನವರು ಪರೀಕ್ಷಿಸಿ ಕೊಡುವ ಫಲಿತಾಂಶದ ವಿರುದ್ಧವಾಗಿ ಔಷಧ ನಿಯಂತ್ರಕರು ಏನೂ ಮಾಡುವಂತಿಲ್ಲ. ಇದೇ Central Drugs Testing Lab ನವರು ತೀರಾ ಇತ್ತೀಚೆಗೆ ಪಶ್ಚಿಮ್ ಬಂಗಾ ಕಂಪನಿಯ Ringer's lactate injection ಅನ್ನು ಮತ್ತೆ ಪರೀಕ್ಷಿಸಿ ದೋಷಪೂರಿತವಾಗಿದೆಯೆಂಬ ವರದಿಯನ್ನು ಕೊಟ್ಟಿರುವ ಕಾರಣ ಕೇಂದ್ರ ಔಷಧ ನಿಯಂತ್ರಣ ಸಂಸ್ಥೆಯು ಆ ಕಂಪನಿಗೆ ಬೀಗ ಜಡಿದಿದೆ. ಹಾಗಾದರೆ, ಯಾವ lab ಅನ್ನು ನಂಬಬೇಕು? ಇವುಗಳ ವಿಶ್ವಾಸಾರ್ಹತೆ ಏನು?
೭) ಕರ್ನಾಟಕದ ಔಷಧ ನಿಯಂತ್ರಕರನ್ನು ಅಮಾನತ್ತಿನಲ್ಲಿಟ್ಟ ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದ ಮುಖ್ಯಸ್ಥರು ಮತ್ತು ಬಳ್ಳಾರಿಯ ಆಸ್ಪತ್ರೆಯ ಮುಖ್ಯಸ್ಥರ ಮೇಲೆ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ಇದರಿಂದಾಗಿ ಔಷಧ ನಿಯಂತ್ರಕರು ಮಾತ್ರ ಜವಾಬ್ದಾರಿ ತಪ್ಪಿದ್ದಾರೆ ಎಂಬಂತೆ ಬಿಂಬಿಸಲಾಗುತ್ತಿದೆ. ರಾಜ್ಯ ಸರ್ಕಾರವು ಸಮಗ್ರವಾಗಿ ಯೋಚಿಸಿ ಕ್ರಮವನ್ನು ಕೈಗೊಳ್ಳಬೇಕು?
#ಅಮ್ಮಂದಿರನ್ನು_ಉಳಿಸಿ
#Save_Mothers
#ReformKarnatakaHealthcare
#ನಮ್ಮನಾಡು_ನಮ್ಮಆಳ್ವಿಕೆ
@dineshgrao@osd_cmkarnataka@CMofKarnataka
@NorthKA_Rises ನೀನು ಒಂದು ಆರ್ಎಸ್ಎಸ್ ಸಂಘಿ ಆಗಿರ್ತಿ? ಇಲ್ಲ ಮೂರಡಿ chimpaji ಮರಾಠಿ ಕಡೆಯವನು ಆಗಿರ್ತಿ, ಇಲ್ಲ ಕೊಂಕಣಿ ಆಗಿರ್ತಿ, ಇಲ್ಲ ತಾಯಿಗಂಡ ಆಗಿರ್ತಿ ಕನ್ನಡದವನು ಅಗಿರಾಕ ಸದ್ಯ ಇಲ್ಲಲೇ