@prakashraaj ಫಾದರ್ ನಾಟಕದಲ್ಲಿ ನಿಮ್ಮ ನಟನೆ ನೋಡಿದ್ದೆ,ತಮಿಳು ಚಿತ್ರರಂಗದಲ್ಲಿ ಹೆಸರು ಗಳಿಸಿದಾಗ ಓರ್ವ ಕನ್ನಡಿಗನಾಗಿ ಹೆಮ್ಮೆ ಪಟ್ಟಿದ್ದೆ. ಭಾಗ್ ಮಿಲ್ಖಾ..ದಲ್ಲಿ ನಿಮ್ಮ ಸಹಜ ನಟನೆ ಮೆಚ್ಚುಗೆ ಮೂಡಿಸಿತ್ತು.ಆದರೆ ಈಗೀಗಿನ ನಿಮ್ಮ ವರ್ತನೆ,ಅಸಂಬದ್ಧ ಮಾತು,ಜಿರಳೆತನ ಜಿಗುಪ್ಸೆ ಹುಟ್ಟಿಸುತ್ತಿವೆ.ಆತ್ಮಗೌರವ ಉಳಿಸಿಕೊಳ್ಳಿ.
@nabilajamal_ Is he happy for not finding his name in the voters list after SIR !? Then why is he laughing like a lunatic ? This great fool though an actor, can not imitate a great leader. I am also a Bengaluriga and know his many versions very well.
@krishnabgowda ಅಂತೂ ಮೇಲಿನಿಂದ ಗೂಟ ಬಡಿದಾಗ ಮಾತ್ರ ಕೆಲಸ, ಉಳಿದಂತೆ ಗಿಂಬಳ ಗಿಂಜೋದೇ ಇವರ 'ಕಾಯಕ' ಎನ್ನುವುದು ಸಾಬೀತಾಗಿದೆ. ಇಷ್ಟು ವರ್ಷ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಅನ್ನೋದು ಇವರ ಗಮನಕ್ಕೆ ಬಾರದೇ ಇರೋದೇ ಚಿದಂಬರ ರಹಸ್ಯ.
@DKShivakumar ಫಲವತ್ತಾದ ಭೂಮಿಯನ್ನು ನುಂಗುತ್ತಾ ಹೊರಟರೆ ನಾಳೆ ತಿನ್ನುವ ಅನ್ನ ಮೇವಿಗೆ ತತ್ವಾರ ಆಗುವುದಿಲ್ಲವೇ? ಸದ್ಯದ ಲಾಭ/ಅನುಕೂಲತೆಗಳಿಗಿಂತ ಭವಿಷ್ಯದ ನೆಮ್ಮದಿಯ ಕುರಿತು ಆಲೋಚಿಸಿ.
@krishnabgowda ಇದೊಂದು ಅಭೂತಪೂರ್ವ ಯೋಜನೆ. ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ವಿಶಿಷ್ಟವಾಗಿ, ಯಶಸ್ಸು ಹೊಂದಲಿ. ಮಾನ್ಯ ಸಚಿವರ ದೂರಗಾಮಿ ದೃಷ್ಟಿ, ಸರಳತೆಯನ್ನು ಅಭಿನಂದಿಸಲೇಬೇಕು 👏👏
@krishnabgowda ಆಂಗ್ಲರಿಂದ ಸ್ವಾತಂತ್ರ್ಯ ದೊರಕಿಸಿಕೊಂಡರೂ, ಆಂಗ್ಲ ಭಾಷೆಗಿಂತ ಸಾವಿರಾರು ವರ್ಷಗಳ ಹಿಂದಿನ ನಮ್ಮ ಕನ್ನಡದ ಮೇಲೆ ಆಂಗ್ಲ ಸವಾರಿಯಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿಯೇ ಇಲ್ಲ. ಕನ್ನಡದಲ್ಲಿಯೇ ಸುಂದರ,ಸುಲಲಿತ ಪದಗಳಿದ್ದಾಗಲೂ ಪಾಯಸದ ಮಧ್ಯೆ ಕಲ್ಲುಹರಳುಗಳಂತೆ ಆಂಗ್ಲ ಪದಗಳೇಕೆ?ಉದಯವಾಯಿತೇ ನಮ್ಮ ಚೆಲುವ ಕನ್ನಡ ನಾಡು?