ಇಂದು ನಮ್ಮ ಹಾನಗಲ್ ತಾಲೂಕಿನಲ್ಲಿ ಪ್ರವಾಸ ಕೈಗೊಂಡಿರುವ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಶ್ರೀ ಎನ್.ಎಸ್.ಭೋಸರಾಜು ಅವರೊಂದಿಗೆ ಚಿಕ್ಕಹುಲ್ಲಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದಿಢೀರ್ ಭೇಟಿ ನೀಡಲಾಯಿತು.
ಈ ವೇಳೆ ನೇರವಾಗಿ ಬಿಸಿಯೂಟದ ಕೊಠಡಿಗೆ ತೆರಳಿ ಅಡುಗೆ, ಮೊಟ್ಟೆಯ ಗುಣಮಟ್ಟ ಪರೀಕ್ಷಿಸಿದೆವು.
ಇಂದು ರಾಣೇಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿ ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕಂಚಿನ ಪುತ್ಥಳಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾದ ಶ್ರೀ @siddaramaiah ಅವರೊಂದಿಗೆ ಭಾಗವಹಿಸಿದೆನು.
ಇದೇ ಸಂದರ್ಭದಲ್ಲಿ ಕನಕ ಭವನದ ಉದ್ಘಾಟನಾ ಸಮಾರಂಭ ನಡೆಯಿತು. ಇದಕ್ಕೂ ಮೊದಲು ಶ್ರೀ ಮಾಲತೇಶ ದೇವರ ದರ್ಶನ ಪಡೆದೆನು.
ಮುಖ್ಯಮಂತ್ರಿಗಳಾದ ಶ್ರೀ @siddaramaiah ಅವರ ವಿರುದ್ಧ ಪ್ರಾಸಿಕ್ಯೂಷನಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಖಂಡಿಸಿ ಇಂದು ನಮ್ಮ ಹಾನಗಲ್ಲಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಬೃಹತ್ ತಮಟೆ ಚಳವಳಿ ನಡೆಸಲಾಯಿತು.
ಕುರಿಗಳ ಹಿಂಡೂ ಸಹ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.
#ನಾನು_ಸಿದ್ದರಾಮಯ್ಯ_ಪರ#kpcc#karnatakacongress
ಪ್ರಜಾಪ್ರಭುತ್ವದ ಯುವ ರಾಜಕೀಯ ಸಂಘಟನೆ ಎನಿಸಿಕೊಂಡಿರುವ ಭಾರತೀಯ ಯುವ ಕಾಂಗ್ರೆಸ್ ಸಂಸ್ಥಾಪನಾ ದಿನದ ಶುಭಾಶಯಗಳು. ಸಮಾಜದಲ್ಲಿ ಸಮಾನತೆ ಹಾಗೂ ನ್ಯಾಯಕ್ಕಾಗಿ ಹೋರಾಡುತ್ತಿರುವ ತಮ್ಮೆಲ್ಲರಿಗೂ ಅಭಿನಂದನೆಗಳು. #iycfoundationday
'ಬದ್ಧತೆ ಎನ್ನುವುದು ಒಬ್ಬ ಮನುಷ್ಯನಿಗೆ ಇರಬಹುದಾದ ಅತಿದೊಡ್ಡ ಶಕ್ತಿ. ದೃಢವಿಶ್ವಾಸವನ್ನು ಇದು ಬೆಳೆಸುತ್ತದೆ. ನಮ್ಮ ಮೇಲೆ ನಾವು ಇರಿಸಿಕೊಳ್ಳುವ ದೃಢವಿಶ್ವಾಸವೇ ನಮ್ಮೆಲ್ಲ ಯಶಸ್ಸಿನ ಮೂಲವೂ ಆಗಿರುತ್ತದೆ.'
ಮಾಜಿ ರಾಷ್ಟ್ರಪತಿ, ಭಾರತ ರತ್ನ ಡಾ. ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಸ್ಮೃತಿ ದಿನದಂದು ಗೌರವ ಪೂರ್ವಕ ಪ್ರಣಾಮಗಳು.#APJAbdulKalam
ಕಾರ್ಗಿಲ್ ಯುದ್ಧದಲ್ಲಿ ಭಾರತ ವಿಜಯ ಪತಾಕೆಯನ್ನು ಹಾರಿಸಿದ ಹಾಗೂ ಯುದ್ಧದಲ್ಲಿ ಹುತಾತ್ಮರಾದ ಸೈನಿಕರನ್ನು ಸ್ಮರಿಸಲು ದೇಶದಲ್ಲಿ ಪ್ರತಿ ವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯ ದಿವಸ್ ಆಚರಿಸಲಾಗುತ್ತದೆ. ದೇಶಕ್ಕಾಗಿ ಪ್ರಾಣತೆತ್ತ ವೀರಯೋಧರಿಗೆ ನಮನಗಳು.. #KargilVijayDiwas
ಕೇಂದ್ರ ವಿತ್ತ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ನಲ್ಲಿ ಕರ್ನಾಟಕವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಉದ್ದೇಶಪೂರ್ವಕವಾಗಿ ತಾರತಮ್ಯ ಮಾಡಲಾಗಿದೆ. ಈ ಮಹಾಮೋಸವನ್ನು ಕನ್ನಡಿಗರು ಕ್ಷಮಿಸಲಾರರು.
ಜನಮನ ಗೆದ್ದ ಕನ್ನಡದ ಖ್ಯಾತ ನಿರೂಪಕಿ ಶ್ರೀಮತಿ ಅಪರ್ಣಾ ವಸ್ತಾರೆ ವಿಧಿವಶರಾಗಿರುವ ಸುದ್ದಿ ಆಘಾತ ತರಿಸಿದೆ. ಅವರ ಅಗಲಿಕೆಯ ನೋವು ತಡೆದುಕೊಳ್ಳುವ ಶಕ್ತಿ ಕುಟುಂಬ ಸದಸ್ಯರಿಗೆ ಭಗವಂತ ನೀಡಲಿ ಎಂದು ಪ್ರಾರ್ಥಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತೇನೆ.
ಆರೋಗ್ಯಕರ ಮತ್ತು ಅಪಾಯ-ಮುಕ್ತ ಜೀವನವನ್ನು ನಡೆಸಲು ನಮಗೆ ಅವಕಾಶ ನೀಡಿದ ವೈದ್ಯರಿಗೆ ಧನ್ಯವಾದಗಳು. ವೈದ್ಯೋ ನಾರಯಣ ಹರಿಯಾಗಿ, ದೇವರ ಸ್ವರೂಪದಲ್ಲಿ ಕೋಟ್ಯಂತರ ಜೀವಗಳನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿರುವ ನಮ್ಮ ಎಲ್ಲ ವೈದ್ಯರಿಗೆ ಕೃತಜ್ಞತೆ ಸಲ್ಲಿಸೋಣ.
#nationaldoctorsday2024
ಹಾವೇರಿ ಜಿಲ್ಲೆಯ ಗುಂಡನಹಳ್ಳಿ ಕ್ರಾಸ್ ಬಳಿಯಲ್ಲಿ ಸಂಭವಿಸಿದ ದಾರುಣ ಅಪಘಾತದಲ್ಲಿ ಶಿವಮೊಗ್ಗ ಮೂಲದ 13 ಜನರು ಮೃತಪಟ್ಟಿದ್ದಾರೆ ಎಂಬ ವಿಚಾರ ನನಗೆ ಅತೀವ ನೋವನ್ನುಂಟು ಮಾಡಿದೆ. ಮೃತರ ಆತ್ಮಕ್ಕೆ ಸದ್ಗತಿ ದೊರೆಯಲಿ. ಗಾಯಾಳುಗಳು ಶೀಘ್ರದಲ್ಲಿಯೇ ಚೇತರಿಕೆ ಕಾಣುವಂತಾಗಲಿ ಎಂದು ಹಾರೈಸುತ್ತೇನೆ.
ಶುಭವಾಗಲಿ ಇಂಡಿಯಾ.....
ಉತ್ಸಾಹದಿಂದ ಆಟವಾಡಿ, ಹೆಮ್ಮೆಯಿಂದ ಆಟವಾಡಿ. ಅದ್ಭುತ ಪ್ರದರ್ಶನಗಳು ಮತ್ತು ಅರ್ಹವಾದ ವಿಜಯಗಳಿ೦ದ ತುಂಬಿದ ವಿಶ್ವಕಪ್ ಗಾಗಿ ಟೀಮ್ ಇಂಡಿಯಾಗೆ ಶುಭವಾಗಲಿ..
#teamindiacricket#worldcup2024
ಕರ್ನಾಟಕ ಬೀದಿ ನಾಟಕ ಅಕಾಡೆಮಿಯಿಂದ ಕೊಡಮಾಡುವ 'ಸಿ.ಜಿ.ಕೆ. ಕರ್ನಾಟಕ ಬೀದಿ ನಾಟಕ ಅಕಾಡೆಮಿ ಪ್ರಶಸ್ತಿ'ಗೆ ಪಾತ್ರರಾಗಿರುವ ಶೇಷಗಿರಿಯ ಹೆಮ್ಮೆಯ ಕಲಾವಿದರಾದ ಶ್ರೀ ಸಿದ್ದು ಎಸ್. ಕೊಂಡೋಜಿ ಅವರಿಗೆ ಅಭಿನಂದನೆಗಳು...
ವ್ಯಾಪಾರಿಗಳಿಗೆ , ಜನಸಾಮಾನ್ಯರಿಗೆ ಹೀಗೆ ಪ್ರತಿಯೊಬ್ಬರಿಗೂ ಅನುಕೂಲವಾಗುವಂತಹ ರೀತಿಯಲ್ಲಿ ಯೋಜನಾಬದ್ಧವಾಗಿ ಬೆಂಗಳೂರನ್ನು ನಿರ್ಮಿಸಿಕೊಟ್ಟ ಸಮರ್ಥ ನಾಯಕ ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿಯ ಶುಭ ಸ್ಮರಣೆಗಳು. #Kempegowdajayanthi
ಕಾಂಗ್ರೆಸ್ ಪಕ್ಷದ ಮುಖಂಡರು, ಜನಸಾಮಾನ್ಯರ ನೆಚ್ಚಿನ ನಾಯಕರಾದ ಶ್ರೀ ರಾಹುಲ್ ಗಾಂಧಿಯವರು ವಿರೋಧಪಕ್ಷದ ನಾಯಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತಮಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತಾ, ತಮ್ಮ ನೂತನ ಹುದ್ದೆಯನ್ನು ಅತ್ಯುತ್ತಮ ರೀತಿಯಲ್ಲಿ ನಿರ್ವಹಿಸಲು ಭಗವಂತನು ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇನೆ.
@RahulGandhi
ಮುಖ್ಯೋಪಾಧ್ಯಾಯರ ಬದಲಾವಣೆ ಹಾಗೂ ಕನ್ನಡ ಭಾಷಾ ಶಿಕ್ಷಕರ ಮರು ನಿಯೋಜನೆಗೆ ಒತ್ತಾಯಿಸಿ ತರಗತಿ ಬಹಿಷ್ಕರಿಸಿ ಪ್ರತಿಭಟಿಸುತ್ತಿದ್ದ ನಮ್ಮ ಹಾನಗಲ್ ತಾಲೂಕಿನ ಶೇಷಗಿರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳ ಮನವೊಲಿಸಿದೆನು.
ಹಿರಿಯ ಲೇಖಕಿ, ಸಂಶೋಧಕರಾದ ಡಾ. ಕಮಲಾ ಹಂಪನಾ ಅವರು ನಿಧನ ಹೊಂದಿದ್ದು ಅಪಾರ ದುಃಖ ತಂದಿದೆ. ಭಗವಂತನು ಮೃತರ ಆತ್ಮಕ್ಕೆ ಶಾಂತಿಯನ್ನು ನೀಡಲಿ, ಕುಟುಂಬವರ್ಗಕ್ಕೆ ನೋವು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ನಾಡಿನ ಸಮಸ್ತ ಜನತೆಗೆ "ವಿಶ್ವ ಯೋಗ ದಿನದ" ಹಾರ್ದಿಕ ಶುಭಾಶಯಗಳು.
ಸ್ವಸ್ಥ ಮನಸ್ಸು ಹಾಗೂ ಸದೃಢ ದೇಹಕ್ಕಾಗಿ ಯೋಗಾಭ್ಯಾಸ ಮಾಡೋಣ, ಆರೋಗ್ಯಕರ ಸಮಾಜ ನಿರ್ಮಿಸೋಣ.
#InternationalYogaDay#yogaday2024
ನಮ್ಮ ಹಾನಗಲ್ ತಾಲೂಕಿನ ತಿಳವಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಿನಾಂಕ 21.6.2024 ರಂದು ಶುಕ್ರವಾರ ಬೆಳಗ್ಗೆ 9 ಗಂಟೆಯಿಂದ ಉಚಿತ ಕಣ್ಣಿನ ಪೊರೆ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ. ಶಿಬಿರದ ಸದುಪಯೋಗ ಪಡಿಸಿಕೊಳ್ಳಲು ಕೋರಿದೆ.