ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಬೆಂಗಳೂರು ಇದರ ವತಿಯಿಂದ ದಿನಾಂಕ 13-07-2026 ರಂದು ಬೆಂಗಳೂರು ನಗರದ 1&4 ವಲಯದ ಬೆಂಗಳೂರು ಗ್ರಾಮಾಂತರ ಸೌಹಾರ್ದ ಸಹಕಾರಿಗಳ ಅಧ್ಯಕ್ಷರು, ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಮುಖ್ಯಕಾರ್ಯನಿರ್ವಾಹಕರಿಗಾಗಿ ಸಂಪರ್ಕ ಸಭೆ ಕಾರ್ಯಕ್ರಮವನ್ನು ಕದಂಬ ಸಾಮ್ರಾಟ್, ಇಲ್ಲಿ ಹಮ್ಮಿಕೊಳ್ಳಲಾಯಿತು.
ದಿನಾಂಕ 14.07.2026 ರಂದು ಬೆಂಗಳೂರು ನಗರ ವಲಯ 2 & 3 ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿರುವ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರುಗಳ " ಸಂಪರ್ಕ ಸಭೆಯನ್ನು* ಉದಯ ಸೌಹಾರ್ದ ಸಹಕಾರಿ ಸಂಘ ಹನುಮಂತನಗರ, ಮೌಂಟ್ ಜಾಯ್ ರಸ್ತೆ, ಬೆಂಗಳೂರು ಇಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಬೆಂಗಳೂರು ಇದರ ವತಿಯಿಂದ ದಿನಾಂಕ 13&14 ಜುಲೈ 2026ರಂದು ಆಯೋಜಿಸಿದ್ದ ರಾಜ್ಯದ ಸೌಹಾರ್ದ ಸಹಕಾರಿಗಳ ನಿರ್ದೇಶಕರುಗಳಿಗಾಗಿ ಆಡಳಿತ ಪರಿಣಿತಿ ಹಾಗೂ ವ್ಯವಹಾರ ಅಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಸೌಹಾರ್ದ ಸಹಕಾರಿ ಸೌಧ ಮಲ್ಲೇಶ್ವರ ಬೆಂಗಳೂರು ಇಲ್ಲಿ ಆಯೋಜಿಸಲಾಗಿತ್ತು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಬೆಂಗಳೂರು ಇದರ ವತಿಯಿಂದ ದಿನಾಂಕ 09-07-2026 ರಂದು ತುಮಕೂರು ಜಿಲ್ಲೆಯ ಸೌಹಾರ್ದ ಸಹಕಾರಿಗಳ ಅಧ್ಯಕ್ಷರು, ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಮುಖ್ಯಕಾರ್ಯನಿರ್ವಾಹಕರಿಗಾಗಿ ಸಂಪರ್ಕ ಸಭೆ ಕಾರ್ಯಕ್ರಮವನ್ನು ಸ್ನೇಹ ಸಂಗಮ ಕನ್ವೆನ್ಷನ್ ಹಾಲ್ ಸಭಾಂಗಣ, ತುಮಕೂರು ಇಲ್ಲಿ ಹಮ್ಮಿಕೊಳ್ಳಲಾಯಿತು.
ದಿನಾಂಕ 22-6-2026 ರಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು ಪ್ರಾಂತದ ವತಿಯಿಂದ ಚಿತ್ರದುರ್ಗ ಜಿಲ್ಲೆಯ ಸೌಹಾರ್ದ ಸಹಕಾರಿಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕರಿಗೆ ಹಾಗೂ ಸಾಲ ವಿತರಣಾ ವಿಭಾಗದ ಸಿಬ್ಬಂದಿಗಳಿಗೆ ವಿಷಯಾಧಾರಿತ ತರಬೇತಿ ಕಾರ್ಯಕ್ರಮವನ್ನು ಹೋಟೆಲ್ ಐಶ್ವರ್ಯ ಪೋರ್ಟ್ ನಲ್ಲಿ ನಡೆಯಿತು.
ದಿನಾಂಕ 19.06.2026 ರಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ ಬೆಂಗಳೂರು ಕಲಬುರ್ಗಿಯ ಪ್ರಾಂತೀಯ ಕಚೇರಿಯ ವತಿಯಿಂದ ಕಲಬುರ್ಗಿ ಜಿಲ್ಲಾ ಸೌಹಾರ್ದ ಸಹಕಾರಿಗಳ ಮುಖ್ಯ ಕಾರ್ಯನಿರ್ವಾಹಕರಿಗೆ ಹಾಗೂ ಆಡಳಿತ ಮಂಡಳಿಯ ಸದಸ್ಯರಿಗಾಗಿ ವಿಷಯಾಧಾರಿತ ತರಬೇತಿಯನ್ನು ಹಮ್ಮಿಕೊಳ್ಳಲಾಯಿತು
ದಿನಾಂಕ 09.06.2026 ರಂದು ಕ.ರಾ.ಸೌ.ಸಂ.ಸ ನಿ., ಪ್ರಾಂತೀಯ ಕಚೇರಿ ಕಲಬುರಗಿ ವತಿಯಿಂದ "ಪರಿಷ್ಕೃತ ಸಂಯುಕ್ತ ಸಹಕಾರಿಯ ಸುತ್ತೋಲೆಗಳು ಹಾಗೂ ಲೆಕ್ಕಪರಿಶೋಧನ ವರದಿ ಪೂರ್ವ ಸಿದ್ಧತೆ" ಕುರಿತ ವಿಷಯಾಧಾರಿತ ತರಬೇತಿ ಕಾರ್ಯಕ್ರಮವು ಮಾನವಿಯ ಶ್ರೀ ವಿರೂಪಾಕ್ಷೇಶ್ವರ ಪತ್ತಿನ ಸೌಹಾರ್ದ ಸಹಕಾರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಬೆಂಗಳೂರು ಇದರ ವತಿಯಿಂದ ದಿನಾಂಕ 08.06.2026ರಂದು ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕುಗಳಿಗಾಗಿ ಆರ್.ಬಿ.ಐ ನೀಡಿರುವ ಮಾರ್ಗಸೂಚಿಗಳ ವಿಷಯದ ಕುರಿತು ಅಧ್ಯಕ್ಷರು/ನಿರ್ದೇಶಕರು ಹಾಗೂ ಮುಖ್ಯಕಾರ್ಯನಿರ್ವಾಹಕರುಗಳಿಗಾಗಿ ವಿಶೇಷ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ದಿನಾಂಕ 05.06.2026 ರಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಬೆಳಗಾವಿ ಪ್ರಾಂತ ಇದರ ವತಿಯಿಂದ ವಿಜಯಪುರ ಜಿಲ್ಲೆಯ ಸೌಹಾರ್ದ ಸಹಕಾರಿಗಳ ಮುಖ್ಯಕಾರ್ಯನಿರ್ವಾಹಕರಿಗೆ ವಿಷಯಾಧಾರಿತ ತರಬೇತಿಯನ್ನು ಶ್ರೀ ಶಾಂತೇಶ್ವರ ವಿವಿಧ ಉದ್ದೇಶಗಳ ಸಹಕಾರ ಸಂಘ ನಿಯಮಿತ., ವಿಜಯಪುರ ಇಲ್ಲಿ ಆಯೋಜಿಸಲಾಗಿತ್ತು.
ದಿನಾಂಕ 29.05.2026 ರಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಷ್ಟ ಹೊಂದಿರುವ ಸೌಹಾರ್ದ ಸಹಕರಿಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರುಗಳ "ವಿಷಯಾಧಾರಿತ ತರಬೇತಿಯನ್ನು ಸಂಯುಕ್ತ ಸಹಕಾರಿಯ ಕೇಂದ್ರ ಕಛೇರಿ ಸಭಾಂಗಣದಲ್ಲಿಆಯೋಜಿಸಲಾಗಿತ್ತು.
ದಿನಾಂಕ:29.05.2026ರಂದು ಕಲಬುರಗಿ ಪ್ರಾಂತೀಯ ಕಛೇರಿಯ ವತಿಯಿಂದ ಕೊಪ್ಪಳ ಜಿಲ್ಲೆಯ ಕೊಪ್ಪಳ, ಕುಷ್ಟಗಿ, ಯಲಬುರ್ಗಾ ಹಾಗೂ ಕುಕನೂರ ತಾಲೂಕುಗಳ ಸೌಹಾರ್ದ ಸಹಕಾರಿಗಳ ಅಧ್ಯಕ್ಷರು ಹಾಗೂ ಮುಖ್ಯಕಾರ್ಯನಿರ್ವಾಹಕರಿಗಾಗಿವಿಷಯಾಧಾರಿತ ತರಬೇತಿ ಕಾರ್ಯಕ್ರಮವನ್ನು ವೀರಮಾಹೇಶ್ವರ ಸಮುದಾಯ ಭವನ ಕೊಪ್ಪಳ ದಲ್ಲಿ ಆಯೋಜಿಸಲಾಗಿತ್ತು.
ಬೆಳಗಾವಿ ಪ್ರಾಂತದ ವತಿಯಿಂದ ಬೆಳಗಾವಿ ಜಿಲ್ಲೆಯ ಬೈಲಹೊಂಗಲ.ಚನ್ನಮ್ಮನ ಕಿತ್ತೂರ,ಸವದತ್ತಿ,ಯರಗಟ್ಟಿ,ರಾಮದುರ್ಗ,ಮತ್ತು ಗೋಕಾಕ ತಾಲೂಕಿನ ಸೌಹಾರ್ದ ಸಹಕಾರಿಗಳ ಮುಖ್ಯ ಕಾರ್ಯನಿರ್ವಾಹಕರುಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ವಿಷಯಾಧಾರಿತ ತರಬೇತಿ ಕಾರ್ಯಕ್ರಮವು ದಿನಾಂಕ 27-05-2026 ರಂದು ಬೆಳಗಾವಿಯ ಆಟೋನಗರದಲ್ಲಿ ಯಶಸ್ವಿಯಾಗಿ ಜರುಗಿಸಲಾಯಿತ್ತು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಬೆಳಗಾವಿ ಪ್ರಾಂತ ಇದರ ವತಿಯಿಂದ ಬಾಗಲಕೋಟ ಜಿಲ್ಲೆಯ ಮುಧೋಳ, ಜಮಖಂಡಿ , ರಬಕವಿ - ಬನಹಟ್ಟಿ ಹಾಗೂ ತೇರದಾಳ ತಾಲ್ಲೂಕುಗಳ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ದಿನಾಂಕ 27-05-2026 ರಂದು ಬೆಳಗ್ಗೆ 10.30 ಗಂಟೆಗೆ ಮುಧೋಳ ಇಲ್ಲಿ *ವಿಷಯಾಧಾರಿತ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಬೆಳಗಾವಿ ಪ್ರಾಂತ ಇದರ ವತಿಯಿಂದ ಬೆಳಗಾವಿ ಹಾಗೂ ಖಾನಾಪುರ ತಾಲ್ಲಕುಗಳ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ದಿನಾಂಕ 26-05-2026 ರಂದು ಬೆಳಗ್ಗೆ 10.30 ಗಂಟೆಗೆ ಮಹಾಂತ ಭವನ. ಮಹಾಂತೇಶ ನಗರ ಬೆಳಗಾವಿ ಇಲ್ಲಿ *ವಿಷಯಾಧಾರಿತ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಬೆಂಗಳೂರು, ಮೈಸೂರು ಪ್ರಾಂತೀಯ ಕಛೇರಿ ವತಿಯಿಂದ ಹಾಸನ ಜಿಲ್ಲೆಯ ಸೌಹಾರ್ದ ಸಹಕಾರಿಗಳ ಮುಖ್ಯ ಕಾರ್ಯನಿರ್ವಾಹಕರುಗಳಿಗಾಗಿ "ವಿಷಯಾಧಾರಿತ ತರಬೇತಿ ಕಾರ್ಯಕ್ರಮ" ವನ್ನು ದಿನಾಂಕ 26/05/2026 ಬೆಳಿಗ್ಗೆ 10 ಗಂಟೆಗೆ ಹೋಟೆಲ್ ಜ್ಯುವೆಲ್ ರಾಕ್, ಬಿ.ಎಂ ರಸ್ತೆ, ಹಾಸನ ಇಲ್ಲಿ ಆಯೋಜಿಸಿಲಾಗಿತ್ತು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಬೆಳಗಾವಿ ಪ್ರಾಂತದ ವತಿಯಿಂದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸೌಹಾರ್ದ ಸಹಕಾರಿಗಳ ಮುಖ್ಯ ಕಾರ್ಯನಿರ್ವಾಹಕರುಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ವಿಷಯಾಧಾರಿತ ತರಬೇತಿ ಕಾರ್ಯಕ್ರಮವು ದಿನಾಂಕ 26-05-2026 ರಂದು ಬೆಳಗಾವಿಯ ಆಟೋನಗರದ ಹರ್ಷಾ ಕ್ಲೋವರ್ ಕನ್ವೆಂಷನಹಾಲ್ನಲ್ಲಿ ಜರುಗಿಸಲಾಯಿತ್ತು.
ದಿನಾಂಕ 26.05.2026 ರಂದು2024-25 & 2025-26ನೇ ಸಾಲಿನಲ್ಲಿ ನೋಂದಣಿಗೊಂಡ ಹೊಸ ಸಹಕಾರಿಗಳಿಗಾಗಿ ಪ್ರವೇಶ ತರಬೇತಿಯನ್ನು ಸಂಯುಕ್ತ ಸಹಕಾರಿಯ ಕೇಂದ್ರ ಕಛೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ತರಬೇತಿಯ ಉದ್ಘಾಟನೆ ಯನ್ನು ಮಾನ್ಯ ನಿರ್ದೇಶಕರಾದ ಶ್ರೀ BH ಕೃಷ್ಣಾರೆಡ್ಡಿ ನೆರವೇರಿಸಿದರು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಬೆಳಗಾವಿ ಪ್ರಾಂತ ಇದರ ವತಿಯಿಂದ ಬಾಗಲಕೋಟ ಜಿಲ್ಲೆಯ ಬಾಗಲಕೋಟ, ಬೀಳಗಿ, ಹುನಗುಂದ, ಇಳಕಲ್ , ಬಾದಾಮಿ ಮತ್ತು ಗುಳೇದಗುಡ್ಡ ತಾಲ್ಲೂಕುಗಳ ಮುಖ್ಯಕಾರ್ಯನಿರ್ವಾಹಕರುಗಳಿಗೆ ದಿನಾಂಕ 26-05-2026 ರಂದು ಬಾಗಲಕೋಟೆ ಇಲ್ಲಿ *ವಿಷಯಾಧಾರಿತ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಬೆಂಗಳೂರು ಇದರ ವತಿಯಿಂದ ದಿನಾಂಕ 22.05.2026 ರಿಂದ 24.05.2026 ರವರೆಗೆ ಸಂಯುಕ್ತ ಸಹಕಾರಿಯ ಸಿಬ್ಬಂದಿಯವರಿಗಾಗಿ ಕೌಶಲ್ಯ ಅಭಿವೃದ್ಧಿ ಹಾಗೂ ವೃತ್ತಿಪರತೆ ತರಬೇತಿ ಕಾರ್ಯಕ್ರಮವನ್ನು ರಾಜೇಶ್ವರಿ ನ್ಯಾಷನಲ್ ಸ್ಕೂಲ್ ಕಾರ್ಕಳ ಇಲ್ಲಿ ಆಯೋಜಿಸಲಾಗಿದೆ.