ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸ್ಪೂರ್ತಿ ಇನ್ಸ್ಟಿಟ್ಯೂಷನ್ನಲ್ಲಿ ಮಾದಕ ವಸ್ತುಗಳ ಸೇವನೆ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಾನ್ಯ ಪೋಲಿಸ್ ನಿರೀಕ್ಷಕರು ವಿದ್ಯಾರ್ಥಿಗಳಿಗೆ ಡ್ರಗ್ಸ್ ಬಗ್ಗೆ ಅರಿವು ಮೂಡಿಸಿರುತ್ತಾರೆ ಮತ್ತು ಡ್ರಗ್ಸ್ ಮುಕ್ತ ಸಮಾಜ ನಮ್ಮ ಗುರಿ ಎಂದು ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಿರುತ್ತಾರೆ
ಈ ದಿನ ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾನ್ಯ ಪೊಲೀಸ್ ಆರಕ್ಷಕ ನಿರೀಕ್ಷಕರು ಠಾಣಾ ವ್ಯಾಪ್ತಿಯಲ್ಲಿನ ರೌಡಿ ಶೀಟರ್ ಗಳ ಮನೆಗೆ ತೆರಳಿ ಚೆಕ್ ಮಾಡಿರುತ್ತಾರೆ. ಇನ್ನು ಮುಂದೆ ಯಾವುದೇ ರೀತಿಯ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಸೂಕ್ತ ಎಚ್ಚರಿಕೆ ಮತ್ತು ತಿಳುವಳಿಕೆಯನ್ನು ನೀಡಿರುತ್ತಾರೆ.
📢 ಶಾಲೆಗಳು ಮತ್ತು ಕಾಲೇಜುಗಳ ಸಮೀಪ ಸಿಗರೇಟ್ ಮಾರಾಟ ಕಾನೂನುಬಾಹಿರ!
❌ ಶಿಕ್ಷಣ ಸಂಸ್ಥೆಗಳಿಂದ 100 ಗಜಗಳ ವ್ಯಾಪ್ತಿಯಲ್ಲಿ ಸಿಗರೇಟ್ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ.
ಪ್ಯಾಕ್ನಲ್ಲಿಯೇ ಮಾರಾಟ ಮಾಡಬೇಕು.
⚖️ ನಿಯಮ ಉಲ್ಲಂಘಿಸುವವರ ವಿರುದ್ಧ COTPA ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
ಟಾಸ್ಕ್ ಸ್ಕ್ಯಾಮ್ಗಳ ಬಗ್ಗೆ ಎಚ್ಚರಿಕೆ ...
ಮೋಸಗಾರರು ವೀಡಿಯೊಗಳಿಗೆ ಲೈಕ್ ಮಾಡುವುದು, ಉತ್ಪನ್ನಗಳಿಗೆ ರೇಟಿಂಗ್ ನೀಡುವುದು ಅಥವಾ ವಿಮರ್ಶೆಗಳನ್ನು ಬರೆಯುವಂತಹ ಸುಲಭ ಆನ್ಲೈನ್ ಕಾರ್ಯಗಳನ್ನು ನೀಡಿ ತ್ವರಿತ ಆದಾಯದ ಭರವಸೆ ನೀಡುತ್ತಾರೆ. ನಂಬಿಕೆ ಗಳಿಸಿದ ನಂತರ ಹೆಚ್ಚಿನ ಕಮಿಷನ್ ಪಡೆಯಲು ಹಣ ಪಾವತಿಸುವಂತೆ ಕೇಳಿ ಹಣ ವಂಚನೆ ಮಾಡುತ್ತಾರೆ.
ಅಪರಿಚಿತ ಅಥವಾ ಉಚಿತ Wi-Fi ಸಂಪರ್ಕಗಳ ಹೆಸರಿನಲ್ಲಿ ಸೈಬರ್ ವಂಚಕರು ನಕಲಿ ಜಾಲಗಳನ್ನು ಸೃಷ್ಟಿಸಿ ಸಾರ್ವಜನಿಕರನ್ನು ಬಲೆಗೆ ಬೀಳಿಸುತ್ತಾರೆ. ಇಂತಹ ಜಾಲಗಳಿಗೆ ಸಂಪರ್ಕಿಸಿದರೆ ನಿಮ್ಮ ಬ್ಯಾಂಕ್ ಖಾತೆ ವಿವರಗಳು, ಸಾಮಾಜಿಕ ಜಾಲತಾಣಗಳ ಪಾಸ್ವರ್ಡ್ಗಳು ಹಾಗೂ ವೈಯಕ್ತಿಕ ಮಾಹಿತಿಗಳು ದುರುಪಯೋಗಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ.
ಕಾರು ಬಾಗಿಲು ತೆರೆಯುವ ಮೊದಲು ರಸ್ತೆಯ ಹಿಂಭಾಗವನ್ನು ಒಮ್ಮೆ ನೋಡಿ!
ಒಂದು ಕ್ಷಣದ ನಿರ್ಲಕ್ಷ್ಯವು ಬೈಕ್ ಸವಾರರು, ಸೈಕಲ್ ಸವಾರರು ಹಾಗೂ ಪಾದಚಾರಿಗಳ ಜೀವಕ್ಕೆ ಅಪಾಯ ಉಂಟುಮಾಡಬಹುದು.
✅ ಬಾಗಿಲು ತೆರೆಯುವ ಮೊದಲು ಹಿಂಭಾಗವನ್ನು ಗಮನಿಸಿ.
✅ ಸೈಡ್ ಮಿರರ್ ಪರಿಶೀಲಿಸಿ.
✅ ನಿಧಾನವಾಗಿ ಮತ್ತು ಎಚ್ಚರಿಕೆಯಿಂದ ಬಾಗಿಲು ತೆರೆಯಿರಿ.@bngdistpol
Yoga is not about touching your toes; it's about what you learn on the way down.Healthy Citizens, Strong Nation — Practice Yoga Every Day.
Yoga Builds Discipline, Strength, and Mental Resilience.
Fit Mind, Fit Body, Safe Society.
#InternationalYogaDay#YogaDay2026
ಸೂರ್ಯನಗರ ಪೊಲೀಸ್ ಠಾಣೆಯ e lost complaint number 1847403/2025ನಲ್ಲಿ ಪತ್ತೆಯಾದ realme 14x 5g ಮೊಬೈಲ್ ಅನ್ನು ಪತ್ತೆಮಾಡಿ ಅರ್ಜಿದಾರರಿಗೆ ಹಿಂತಿರುಗಿಸಿರುತ್ತೆ.
ನಿಮ್ಮ ಮೊಬೈಲ್ ಕಳೆದುಹೋದರೆ ಮೊದಲು KSP ಆಪ್ ನಲ್ಲಿ E-lost ರಿಪೋರ್ಟ್ ದಾಖಲಿಸಿ ನಂತರ CEIR ಪೋರ್ಟಲ್ ನಲ್ಲಿ ದೂರು ದಾಖಲಿಸಿ.
ಈ ದಿನ ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ಮಾನ್ಯ ಪೋಲಿಸ್ ನಿರೀಕ್ಷಕರು ಮೊಹರಂ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರನ್ನು ಠಾಣೆಗೆ ಕರೆಸಿ ಶಾಂತಿ ಸಭೆಯನ್ನು ನಡೆಸಿರುತ್ತಾರೆ. ಕಾನೂನು ಶಾಂತಿಸುವ ವ್ಯವಸ್ಥೆಯನ್ನು ಕಾಪಾಡಿಕೊಂಡು ಹಬ್ಬವನ್ನು ಆಚರಿಸಬೇಕೆಂದು ತಿಳಿಸಿರುತ್ತಾರೆ.
ಜಿಲ್ಲೆಯ ಎಲ್ಲಾ ಅಧಿಕಾರಿ ಸಿಬ್ಬಂದಿರವರುಗಳಿಗೆ ವಾರದ ಕವಾಯತನ್ನು ಕೈಗೊಂಡು ಪರಿಣಾಮಕಾರಿಯಾಗಿ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವ ಸಲುವಾಗಿ ಸೂಕ್ತ ರೀತಿಯ ಸಲಹೆ ಸೂಚನೆಗಳನ್ನು ನೀಡಲಾಯಿತು.
ಮಾದಕವಸ್ತು ಮುಕ್ತ ಕರ್ನಾಟಕ 🚫
ಮಾದಕವಸ್ತುಗಳ ವಿರುದ್ಧದ ಹೋರಾಟದಲ್ಲಿ ನಿಮ್ಮ ಸಹಕಾರ ಅತ್ಯಂತ ಮಹತ್ವದ್ದು. ನಿಮ್ಮ ಒಂದು ಮಾಹಿತಿ ಹಲವಾರು ಜೀವಗಳನ್ನು ರಕ್ಷಿಸಬಹುದು.
• KSP App ನ "Drug-Free Karnataka" ಆಯ್ಕೆಯನ್ನು ಬಳಸಿ ಮಾದಕವಸ್ತು ಮಾರಾಟ, ಸಾಗಣೆ ಅಥವಾ ಅಕ್ರಮ ಚಟುವಟಿಕೆಗಳ ಕುರಿತು ಮಾಹಿತಿ ನೀಡಿ.
📱 ಸೈಬರ್ ಸುರಕ್ಷತಾ ಸಲಹೆ
ಸಂದೇಹಾಸ್ಪದ ಸಂಖ್ಯೆಯಿಂದ ಕರೆ ಅಥವಾ ಸಂದೇಶ ಬಂದಿದೆಯೇ?
❌ ವಾದಕ್ಕೆ ಇಳಿಯಬೇಡಿ
❌ ಪ್ರತಿಕ್ರಿಯಿಸಬೇಡಿ
✅ ಬ್ಲಾಕ್ ಮಾಡಿ ಮತ್ತು ವರದಿ ಮಾಡಿ
ಎಚ್ಚರಿಕೆಯಿಂದಿರಿ. ಸುರಕ್ಷಿತವಾಗಿರಿ. ಸೈಬರ್ ವಂಚನೆಯಿಂದ ಜಾಗೃತರಾಗಿರಿ.
ಸೂರ್ಯ ನಗರ ಪೊಲೀಸ್ ಠಾಣಾ ಸಿಬ್ಬಂದಿಗಳು ಗ್ರಾಮ ಗಸ್ತಿಗೆ ತೆರಳಿ ಗ್ರಾಮಸ್ಥರಿಗೆ ಮನೆ ಮನೆ ಪೊಲೀಸ್ ಬಗ್ಗೆ ಅರಿವು ಮೂಡಿಸಿರುತ್ತಾರೆ ಮತ್ತು ಹಿರಿಯ ನಾಗರಿಕರುಗಳನ್ನು ಭೇಟಿ ಮಾಡಿ ಕುಂದುಕೊರತೆಗಳನ್ನು ವಿಚಾರಿಸಿರುತ್ತಾರೆ ಯಾವುದೇ ತುರ್ತು ಸಮಯದಲ್ಲಿ 112 ಗೆ ಕರೆ ಮಾಡಿ ಎಂದು ಗ್ರಾಮಸ್ಥರಲ್ಲಿ ಅರಿವು ಮೂಡಿಸಿರುತ್ತಾರೆ.
ಈ ದಿನ ಸೂರ್ಯ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೀಟ್ ಗ್ರಾಮಗಳಿಗೆ ತೆರಳಿ ಬೀಟ್ ಸಿಬ್ಬಂದಿಯು ಗ್ರಾಮಸ್ಥರನ್ನು ಭೇಟಿ ಮಾಡಿ ಮನೆಮನೆ ಪೊಲೀಸ್ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಿರುತ್ತಾರೆ ಮತ್ತು ಹಿರಿಯ ನಾಗರಿಕರನ್ನು ಭೇಟಿ ಮಾಡಿ ಅವರ ಕುಂದುಕೊರತೆಗಳನ್ನು ವಿಚಾರಿಸುತ್ತಾರೆ.
ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಸರೆ ಕಾರ್ಯಕ್ರಮದ ಅಡಿಯಲ್ಲಿ ಗುರುತಿಸಲಾದ ಹಿರಿಯ ನಾಗರಿಕರ ಮನೆಗಳಿಗೆ ಭೇಟಿ ನೀಡಿ ಪಾಯಿಂಟ್ ಪುಸ್ತಕಗಳನ್ನು ನೀಡಿರುತ್ತದೆ.ಗ್ರಾಮ ಗಸ್ತಿಗೆ ತೆರಳಿದ ಬೀಟ್ ಸಿಬ್ಬಂದಿಗಳು ಮತ್ತು ಹಿರಿಯ ಅಧಿಕಾರಿಗಳು ಭೇಟಿ ಮಾಡಿ ಅವರ ಕುಂದು ಕೊರತೆಗಳನ್ನು ವಿಚಾರಿಸಿ ಪಾಯಿಂಟ್ ಪುಸ್ತಕದಲ್ಲಿ ದಾಖಲು ಮಾಡುತ್ತಾರೆ