ಶ್ರೀ ಕೃಪಾಲ್ ಗೌಡ ಮುತ್ತಿನಕೊಪ್ಪ ಅವರು 'ನೇಚರ್ ನೆಸ್ಟ್' ಹೆಸರಿನ ನರ್ಸರಿ ಆರಂಭಿಸಿದ್ದಾರೆ. ಇಂದು ನನ್ನ ಅನುಪಸ್ಥಿತಿಯಲ್ಲಿ ನನ್ನ ಧರ್ಮಪತ್ನಿ ಶ್ರೀಮತಿ ಪುಷ್ಪಾ ರಾಜೇಗೌಡರು ನರ್ಸರಿಯ ಉದ್ಘಾಟನೆ ನೆರವೇರಿಸಿದರು. ನೂತನ ನರ್ಸರಿಗೆ ಶುಭವಾಗಲಿ. ಮಲೆನಾಡಿನ ಸಸ್ಯ ವೈಭವಕ್ಕೆ ನೇಚರ್ ನೆಸ್ಟ್ ಇನ್ನಷ್ಟು ಕೊಡುಗೆ ನೀಡಲಿ ಎಂದು ಹಾರೈಸುತ್ತೇನೆ.
ಮಲೆನಾಡಿನ ರೈತರ ಹಿತ ಕಾಯಲು ರಾಜ್ಯ ಸರ್ಕಾರ ಬದ್ಧವಾಗಿದ್ದು, ವರದಿಯನ್ನು ಹಿಂಪಡೆಯಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಭರವಸೆ ನಮಗಿದೆ. ಪ್ರಸ್ತುತ ವರದಿಯ ಅನುಷ್ಠಾನವನ್ನು ವಿರೋಧಿಸಿ ನಮ್ಮ ಹೋರಾಟ ಮುಂದುವರಿಯಲಿದೆ
ಇಂದು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ. ಕೆ. ಶಿವಕುಮಾರ್ ಅವರು ಕಸ್ತೂರಿ ರಂಗನ್ ವರದಿಯ ಕುರಿತಂತೆ ಭಾಗವಹಿಸಿದ ಸಾರ್ವಜನಿಕ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದೆ.
.
ಕಸ್ತೂರಿ ರಂಗನ್ ವರದಿಯನ್ನು ಏಳನೇ ಬಾರಿ ಮಲೆನಾಡಿನ ಮೇಲೆ ಹೇರಲು ನಡೆಸುತ್ತಿರುವ ಹುನ್ನಾರದ ವಿರುದ್ಧ ಮುಖ್ಯಮಂತ್ರಿಗಳ ಗಮನ ಸೆಳೆಯಲಾಯಿತು. ಮಾನ್ಯ ಮುಖ್ಯಮಂತ್ರಿಗಳು ಮಲೆನಾಡಿನ ಜನರೊಡನೆ ನಿಲ್ಲುವ ಭರವಸೆ ನೀಡಿದ್ದು, ರಾಜ್ಯ ಸರ್ಕಾರ ನಮ್ಮೊಡನೆ ಇದೆ ಎಂದು ಧೈರ್ಯ ತುಂಬಿದರು.
.
ಕಸ್ತೂರಿ ರಂಗನ್ ವರದಿ ಅನುಷ್ಠಾನ ವಿರೋಧಿಸಿ, ವರದಿಯನ್ನು ಹಿಂಪಡೆಯಲು ಆಗ್ರಹಿಸಿ, ಶೃಂಗೇರಿ ಬಂದ್.
ದಿನಾಂಕ: 21 ಸೆಪ್ಟೆಂಬರ್ 2026
ಸಮಯ: ಬೆಳಿಗ್ಗೆ 10 ಗಂಟೆ
ನಾವೆಲ್ಲರೂ ಒಗ್ಗೂಡಿ ಪ್ರತಿಭಟನೆ ನಡೆಸೋಣ, ಮಲೆನಾಡಿಗರ ಹಕ್ಕನ್ನು ಉಳಿಸಿಕೊಳ್ಳೋಣ. ಮಲೆನಾಡಿನ ಜೀವನ ಉಳಿದರಷ್ಟೇ ಕಾಡು ಉಳಿದೀತು!
ಕಸ್ತೂರಿ ರಂಗನ್ ವರದಿ ಮಲೆನಾಡಿಗೆ ಬಗೆಯುವ ದ್ರೋಹವಾಗಲಿದೆ. ಈ ನಿಟ್ಟಿನಲ್ಲಿ, ಕಸ್ತೂರಿ ರಂಗನ್ ವರದಿಯ ಕುರಿತಂತೆ ಮಲೆನಾಡಿನ ಜನತೆಯೊಡನೆ ಸಮಾಲೋಚಿಸಲು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ. ಕೆ. ಶಿವಕುಮಾರ್ ಅವರು ಬಾಳೆಹೊನ್ನೂರಿಗೆ ಆಗಮಿಸಿ, ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ಈಗಾಗಲೇ ಆರು ಬಾರಿ ತಿರಸ್ಕೃತಗೊಂಡಿರುವ ವರದಿಯನ್ನು ಏಳನೇ ಬಾರಿ ಮಲೆನಾಡಿನ ಮೇಲೆ ಹೇರಲು ನಡೆಸುತ್ತಿರುವ ಹುನ್ನಾರದ ವಿರುದ್ಧ ಮುಖ್ಯಮಂತ್ರಿಗ��� ಗಮನ ಸೆಳೆಯಲಾಯಿತು. ಮಾನ್ಯ ಮುಖ್ಯಮಂತ್ರಿಗಳು ಮಲೆನಾಡಿನ ಜನರೊಡನೆ ನಿಲ್ಲುವ ಭರವಸೆ ನೀಡಿದ್ದು, ರಾಜ್ಯ ಸರ್ಕಾರ ನಮ್ಮೊಡನೆ ಇದೆ ಎಂದು ಧೈರ್ಯ ತುಂಬಿದರು.
ಮಲೆನಾಡಿಗರು ಪರಿಸರ ವಿರೋಧಿಗಳಲ್ಲ. ಆದರೆ, ಕಸ್ತೂರಿ ರಂಗನ್ ವರದಿಯ ಹೇರಿಕೆ ಮಲೆನಾಡಿನ ವಿರೋಧಿ. ಈಗಾಗಲೇ ಆರು ಬಾರಿ ತಿರಸ್ಕೃತವಾದ ವರದಿಯನ್ನು ಏಳನೇ ಬಾರಿಗೆ ನಮ್ಮ ಮೇಲೆ ಹೇರುವ ಹುನ್ನಾರ ನಡೆಯುತ್ತಿದ್ದು, ಇದನ್ನು ಪಕ್ಷಾತೀತವಾಗಿ ತಿರಸ್ಕರಿಸೋಣ.
ಮಲೆನಾಡಿನಲ್ಲಿ ಅಭಿವೃದ್ಧಿ - ಪರಿಸರ ಎರಡೂ ಜೊತೆ ಜೊತೆಯಾಗಿ ಹೆಜ್ಜೆ ಹಾಕಿವೆ. ಈಗ ಮಲೆನಾಡಿನ ಮೇಲೆ ಕಸ್ತೂರಿ ರಂಗನ್ ವರದಿಯನ್ನು ಹೇರಿ, ಸಮತೋಲನ ಹಾಳು ಮಾಡುವ ಪ್ರಯತ್ನವನ್ನು ನಾವು ಒಪ್ಪಲು ಸಾಧ್ಯವಿಲ್ಲ.
ತುಳು ಕರ್ನಾಟಕದ ಎರಡನೇ ಅಧಿಕೃತ ಆಡಳಿತ ಭಾಷೆ
ಕರಾವಳಿ ಪ್ರದೇಶದ ಜನರ ಬಹುಕಾಲದ ಬೇಡಿಕೆಯನ್ನು ಮನಗಂಡು, ತುಳು ಭಾಷೆಗೆ ಎರಡನೇ ಅಧಿಕೃತ ಭಾಷಾ ಸ್ಥಾನಮಾನ ನೀಡಿದ ರಾಜ್ಯ ಸರ್ಕಾರಕ್ಕೆ, ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ. ಕೆ. ಶಿವಕುಮಾರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಈಗಾಗಲೇ ವಿವಿಧ ಕಾನೂನುಗಳಡಿ ಕರ್ನಾಟಕದಲ್ಲಿ ಅತಿಹೆಚ್ಚು ಅರಣ್ಯ ಪ್ರದೇಶವನ್ನು ಗುರುತಿಸಲಾಗಿದೆ. ಈಗ ಕಸ್ತೂರಿ ರಂಗನ್ ವರದಿಯಡಿ ಮಲೆನಾಡಿಗರ ಬದುಕು ಬರಡಾಗಿಸಲು ನಾವು ಬಿಡುವುದಿಲ್ಲ. ಈ ವರದಿ ಯಾವುದೇ ಕಾರಣಕ್ಕೂ ಜಾರಿಯಾಗಲು ಸಾಧ್ಯವಿಲ್ಲ.
ಮಲೆನಾಡಿಗರ ಬದುಕು ಉಳಿಯುವ ನಿಟ್ಟಿನಲ್ಲಿ ನಮ್ಮ ಮೊದಲ ಹೋರಾಟ.
ಮುಖ್ಯಮಂತ್ರಿ ಶ್ರೀ ಡಿ. ಕೆ. ಶಿವಕುಮಾರ್ ಅವ��ು ಸ್ವಯಂಪ್ರೇರಿತರಾಗಿ ಮಲೆನಾಡಿನ ಜನರ ಕಷ್ಟಗಳನ್ನು ಆಲಿಸುವ ಸಲುವಾಗಿ ಆಗಮಿಸುತ್ತಿದ್ದಾರೆ. ಅವರ ಮೂಲಕ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸುವಂತೆ ಕೇಂದ್ರ ಸರ್ಕಾರವನ್ನು ನಾವು ಆಗ್ರಹಿಸುತ್ತೇವೆ.
ಕಸ್ತೂರಿ ರಂಗನ್ ವರದಿ ವಿರೋಧಿಸಿ ಖಾಂಡ್ಯ ಮತ್ತು ಜಾಗರ ವತಿಯಿಂದ ಇಂದು ಸರ್ವ ಪಕ್ಷಗಳು ಹಾಗೂ ಸರ್ವ ಸಂಘಟನೆಗಳು ಹಮ್ಮಿಕೊಂಡಿದ್ದ ಬೃಹತ್ ಪಾದಯಾತ್ರೆಯಲ್ಲಿ ಪಾಲ್ಗೊಂಡೆ. @CMofKarnataka ನಮ್ಮ ಅಹವಾಲನ್ನು ಸ್ವೀಕರಿಸುವವರಿದ್ದು, ವರದಿಯ ತಿರಸ್ಕಾರದ ಕುರಿತು ಕ್ರಮ ಕೈಗೊಳ್ಳುವಂತೆ ಒಕ್ಕೊರಲಿನಿಂದ ಮನವಿ ಮಾಡಿಕೊಳ್ಳಲಿದ್ದೇವೆ.
ಕಸ್ತೂರಿ ರಂಗನ್ ವರದಿ ಜಾರಿಯಾದರೆ ಮಲೆನಾಡು - ಮಲೆನಾಡಿಗರು ಉಳಿಯುವುದಿಲ್ಲ. ನಮ್ಮ ಅಸ್ಮಿತೆ, ನಮ್ಮ ಅಸ��ತಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ವರದಿಯ ಜಾರಿಯನ್ನು ವಿರೋಧಿಸಿ ಹೋರಾಟ ನಡೆಸಬೇಕು.
ಚಿಕ್ಕಮಗ���ೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ರಾವೂರಿನಲ್ಲಿ ಲಭ್ಯವಿರುವ ಮೂರು ಎಕರೆ ಭೂಮಿಯಲ್ಲಿ 64 ಕೋಟಿ ರೂಪಾಯಿ ವೆಚ್ಚದಲ್ಲಿ ಪರಿಸರ ವಿಹಾರ ಧಾಮದ ಅಭಿವೃದ್ಧಿಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹಾಗೂ ಪ್ರವಾಸೋದ್ಯಮ ಸಚಿವರಾದ ಕೆ. ಜೆ. ಜಾರ್ಜ್ ರವರಿಗೆ ಧನ್ಯವಾದಗಳು.