ಧನ್ಯವಾದಗಳು @rotary3192.
ಸಮಾಜ ಕಲ್ಯಾಣ ಇಲಾಖೆಯ ಅಂಗಸಂಸ್ಥೆಯಾದ ಕ್ರೈಸ್, ಇಂದಿರಾಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರ, ಆದಿಜಾಂಬವ ಅಭಿವೃದ್ಧಿ ನಿಗಮ, ಭೋವಿ ನಿಗಮ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕೇಂದ್ರ ಪರಿಹಾರ ಸಮಿತಿ ಹಾಗೂ ಅಲೆಮರಿ ನಿಗಮ(ಅಲೆಮಾರಿ ಮತ್ತು ಅರೆ ಅಲೆಮಾರಿ)ಗಳಿಗೆ ಪ್ರತಿಷ್ಠಿತ ರೋಟರಿ DEI (DEI- Diversity, Equity, and Inclusion) ಪ್ರಶಸ್ತಿ ಲಭಿಸಿದೆ.
ರೋಟರಿ ಡಿಸ್ಟ್ರಿಕ್ಟ್ 3192 ವತಿಯಲ್ಲಿ ನಿನ್ನೆ ನಡೆದ ದಕ್ಷಿಣ ಏಷ್ಯಾ ಅಂತರರಾಷ್ಟ್ರೀಯ ಶಾಂತಿ ಸಮ್ಮೇಳನ (South Asia International Peace Conference 2025) ಕಾರ್ಯಕ್ರಮದಲ್ಲಿ ಹಲವು ಸೇವಾ ಮನೋಭಾವವುಳ್ಳ ಸಂಸ್ಥೆಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶ್ರಮ, ಸೇವೆ ಮತ್ತು ಬದ್ಧತೆಯುಳ್ಳ ಸಂಸ್ಥೆಗಳನ್ನು ಗುರುತಿಸಿ ಕೊಡ ಮಾಡುವ ಈ ಪ್ರಶಸ್ತಿಯನ್ನು ಪಡೆಯುವ ಮೂಲಕ ನಮ್ಮ ಕ್ರೈಸ್ ಮತ್ತು ನಿಗಮಗಳು ನಮಗೆ ಹೆಮ್ಮೆ ತಂದಿವೆ. ಸಮುದಾಯಗಳ ಏಳಿಗೆಗಾಗಿ ಸದಾ ಬದ್ಧರಾಗಿರುವ ಇಡೀ ಅಧಿಕಾರಿ ವರ್ಗಕ್ಕೆ ಹಾಗೂ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಇಡೀ ತಂಡಕ್ಕೆ ಅಭಿನಂದನೆಗಳು.
#SocialWelfare_Karnataka
#RotaryDEIawards