“ಅರಿಯದ ಚಿಕ್ಕ ಮನಗಳಿಗೆ ಕನಸುಗಳು ಆಕಾಶದ ನಕ್ಷತ್ರಗಳಷ್ಟು ಎತ್ತರವಾಗಿರಬೇಕು ಎಂದು ಒತ್ತಿ ಹೇಳಿದವರು ಹಲವರು.
ಆದರೆ, ಅವತ್ತೇ ಇವೆಲ್ಲಾ ಕೇವಲ ಅಭಿಪ್ರೇರಣೆಯ ಮಾತುಗಳೂ ಆಗಿರಬಹುದು ಎಂದು ತಿಳಿಸುವ ಒಂದು ವರ್ಗ ಇದ್ದಿದ್ದರೆ, ಬದುಕಿನ ದಾರಿ ಬಹುಶಃ ಬೇರೆಯೇ ಆಗಿರುತ್ತಿತ್ತೇನೋ…!”
“ರಾಜಕೀಯದಲ್ಲಿ ನೈತಿಕತೆ ಸತ್ತ ದಿನವೇ ಸಮಾಜದಲ್ಲಿ ನಂಬಿಕೆ ಸಮಾಧಿಯಾಯಿತು.
ನಂಬಿಕೆ ಕಳೆದುಕೊಂಡ ಜನರು ಬೀದಿಗಿಳಿದು ಹೋರಾಡಿದರು.
ಆದರೆ ಜನರ ಆಕ್ರೋಶದಲ್ಲಿರುವ ನೋವನ್ನು ನೋಡುವ ದೃಷ್ಟಿ ಕಳೆದುಕೊಂಡ ನಾಯಕರು, ಅದನ್ನೂ ವಿರೋಧಿಗಳ ಪಿತೂರಿ ಎಂದು ಕರೆಯುತ್ತಲೇ ಉಳಿದರು.”
“ಪ್ರೀತಿ, ನಂಬಿಕೆ, ಭಾವನೆಗಳಿಂದ ಕಟ್ಟಿದ ಸಾಮ್ರಾಜ್ಯವನ್ನು ಸ್ವಾತಂತ್ರ್ಯದ ಹೆಸರಿನಲ್ಲಿ ಸಮಾಧಿ ಮಾಡಿ, ಹೊಸ ಆಸೆಗಳ ಬೆನ್ನಟ್ಟುವವರು ಪ್ರೀತಿಯ ಅರ್ಥವನ್ನಲ್ಲ, ಅದರ ಮುಖವಾಡವನ್ನಷ್ಟೇ ಅರಿತವರು.”
#ಆಧುನಿಕ_ಪ್ರೇಮವಿವಾಹಗಳು#ಪ್ರೀತಿ#ಸಂಬಂಧಗಳು
ರೋಗ ಹರಡಿದಾಗ ಸೋಂಕಿತ ಪ್ರದೇಶವನ್ನು ಸೀಲ್ ಮಾಡುತ್ತಾರೆ; ಅದು ಸ್ವಾತಂತ್ರ್ಯದ ವಿರುದ್ಧವಲ್ಲ, ಹೆಚ್ಚಿನ ಹಾನಿ ತಡೆಯುವ ಕ್ರಮ.
ಔಷಧಿ ಗಾಯಕ್ಕೆ ಹಚ್ಚಬೇಕೆ ಹೊರತು ದೇಹದ ತುಂಬೆಲ್ಲಾ ಅಲ್ಲ……!
#Teligrama_Ban
“ವೈದ್ಯರ ಕೊರತೆಯಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಬಡ ರೋಗಿಗಳು ಸಾವನ್ನಪ್ಪುತ್ತಿದ್ದಾರೆ ಎಂಬ ಸುದ್ದಿ ಕೇಳಿದಾಗ ಒಂದು ಪ್ರಶ್ನೆ ಕಾಡುತ್ತದೆ,
ಲಕ್ಷಾಂತರ ವಿದ್ಯಾರ್ಥಿಗಳು NEET ಬರೆದು ವೈದ್ಯರಾಗಲು ಹೋರಾಡುತ್ತಿದ್ದಾರೆ.ಆ ಭವಿಷ್ಯದ ವೈದ್ಯರೆಲ್ಲ ಹೋಗುತ್ತಿರುವುದಾದರೂ ಎಲ್ಲಿ?
ಸಮಸ್ಯೆ ವಿದ್ಯಾರ್ಥಿಗಳ ಕೊರತೆಯದ್ದಲ್ಲ, ವ್ಯವಸ್ಥೆಯದ್ದೇನೋ!”
“ಬಿಡದಿ ಟೌನ್ಶಿಪ್ ನಿಲ್ಲಿಸಲು ರಾಹುಲ್ ಗಾಂಧಿಗೆ ಪತ್ರ ಬರೆದ ಮಾನ್ಯ @BYVijayendra ಸರ್ಗೂ, RSS ನೋಂದಣಿ ಮಾಹಿತಿ ಕೇಳಲು Mohan Bhagwat ಅವರಿಗೆ ಪತ್ರ ಬರೆದ ಗೃಹಮಂತ್ರಿಗಳಿಗೂ ಹೆಚ್ಚಿನ ವ್ಯತ್ಯಾಸವೇನಿಲ್ಲ.
ಇಬ್ಬರೂ ಉತ್ತರದಾಯಿತ್ವ ಇರುವ ಜಾಗವನ್ನು ಬಿಟ್ಟು, ಉತ್ತರ ಇಲ್ಲದ ವಿಳಾಸಕ್ಕೆ ಪತ್ರ ಬರೆದಂತಾಗಿದೆ!”
“ಈ ಟೆಲಿಗ್ರಾಂ ಅನ್ನು ಶಾಶ್ವತವಾಗಿಯೇ ಬ್ಯಾನ್ ಮಾಡಿದರೆ ನಿರುದ್ಯೋಗವೂ ಸ್ವಲ್ಪ ಕಡಿಮೆಯಾಗಬಹುದೇನೋ…!
ಯಾಕೆಂದರೆ ಮಾಹಿತಿ ನೀಡುವ ಹೆಸರಿನಲ್ಲಿ ಗುಂಪುಗಳನ್ನು ಕಟ್ಟಿ, ಅರ್ಹತೆಗಿಂತ ಅಭಿಪ್ರೇರಣೆಯನ್ನೇ ಮಾರಾಟ ಮಾಡುತ್ತಾ, ಯುವಕರನ್ನು ವರ್ಷಗಳ ಕಾಲ ಪರೀಕ್ಷೆಗಳ ಸುತ್ತ ತಿರುಗಿಸುವ ‘ನಿರುದ್ಯೋಗ ಫ್ಯಾಕ್ಟರಿ’ಗಳಾಗಿ ಅದನ್ನು ಬಳಸುತ್ತಿದ್ದಾರೆ…!”