Very rare indeed are these three things and happen only due to the utmost grace of God - a human birth, a burning desire for liberation, and the blessed refuge of an illuminated Master.
ಅರಿಶಿಣ ಕುಂಕುಮಕ್ಕ ಬರುದು ನೆವಾ ಅಷ್ಟೇ ರಿ.
ಆದ್ರ ಕೊರಳಾಗಿನ ಸರ, ಹೊಸ ಸೀರಿ, ಕೈಯಾಗಿನ ಬಳಿ ಯಾರದು ಭಾರಿ ಅದ ಅಂತ ಪ್ರದರ್ಶನ ಮಾಡುದು ಅದರ ಹಿಂದಿನ ಉದ್ದೇಶ😆
ವಿ.ಸೂ: ಎಲ್ಲರಿಗೂ ಅನ್ವಯಿ��ುವುದಿಲ್ಲ
#ವಿಚಿತ್ರ_ವಿಶ್ವಾಮಿತ್ರ
ನಮ್ಮ ಸಮಾಜಕ್ಕೂ ಕಠೋರ ನಿಂದನೆ ಆಗುತ್ತ. ಆದ್ರ ನಾವ್ ಯಾವ ಚಿಟಿ ಕೇಸ್ ಹಾಕುದಿಲ್ಲ
ಆ ನಿಂದನೆ ನಮ್ಮ ಬೆಳವಣಿಗೆಯ ನೋಡಿ ಉರಿದುಕೊಂಡು ಬಂದದ್ದು ಅಂತ ನಮಗ ಚೆನ್ನಾಗಿ ಗೊತ್ತು.
#ProudBrahmin
ರಾವಣ
ದುಷ್ಟ ದುರುಳ ಇದ್ದಾ,
ಆದ್ರೂ ಅವನ ನಡತೆ, ಗಾಂಭೀರ್ಯ, ಮುಖದ ಮೇಲಿನ ಕಳೆ, ವಿದ್ವತ್ಭರಿತ ತೇಜಸ್ಸು ಇವು ಅವನ ಪಾತ್ರಕ್ಕೆ ಶೋಭೆ ಕೊಡುತ್ತವೆ. ಸ್ಪೈಕ್ ಹೇರ್ ಅಥವಾ ಟೀಷರ್ಟ್ ಹಾಕೊಂಡ ವೇಷ ಭೂಷಣ ಅಲ್ಲ. ಹಿಂಗ ತೋರಿಸಿದ್ರ ಅವನಿಗೆ ರಾವಣ ಅನ್ನಲ್ಲ
ಅಲಾವುದಿನ್ ಖಿಲ್ಜಿ ಅಂತಾರ.
#ವಿಚಿತ್ರ_ವಿಶ್ವಾಮಿತ್ರ
ಮಹತ್ತರ ಪರೀಕ್ಷೆಗಳು.
ಪುತ್ರನ ಪರೀಕ್ಷೆ ವಿವಾಹದ ನಂತರ
ಪುತ್ರಿಯ ಪರೀಕ್ಷೆ ಯೌವನದಲ್ಲಿ
ಪತಿಯ ಪರೀಕ್ಷೆ ಪತ್ನಿಯ ಅನಾರೋಗ್ಯದಲ್ಲಿ
ಪತ್ನಿಯ ಪರೀಕ್ಷೆ ಪತಿಯ ಬಡತನದಲ್ಲಿ
ಮಿತ್ರನ ಪರೀಕ್ಷೆ ಸಂಕಷ್ಟ ಕಾಲದಲ್ಲಿ
ಸಹೋದರನ ಪರೀಕ್ಷೆ ಬದುಕಿನ ಯುದ್ಧದಲ್ಲಿ ಸಹೋದರಿಯ ಪರೀಕ್ಷೆ ಆಸ್ತಿ ಹಂಚಿಕೆಯಲ್ಲಿ
ಮೊಮ್ಮಕ್ಕಳ ಪರೀಕ್ಷೆ ತಾತನ ಮುಪ್ಪಿನಲ್ಲಿ
#karna
ದೇವಪೂಜಾನಿಯಮಗಳು
ನಮಸ್ಕಾರ - ದೇವರ ಬಲಭಾಗದಲ್ಲಿ ನಮಸ್ಕರಿಸಬೇಕು. ಪುರುಷರು ಸಾಷ್ಟಾಂಗ ನಮಸ್ಕಾರವನ್ನೂ, ಸ್ತ್ರೀಯರು ಪಂಚಾಂಗನಮಸ್ಕಾರವನ್ನೂ ಮಾಡಬೇಕು. ನಮಸ್ಕರಿ- ಸುವಾತನ ಮತ್ತು ದೇವರ ಮಧ್ಯೆ ಯಾರೂ ಹಾದುಹೋಗಕೂಡದು. ನಮಸ್ಕಾರ ಮಾಡುವಾಗ ಉತ್ತರೀಯವು ಸೊಂಟದಲ್ಲಿರಬೇಕು.
#ಕರ್ಣ
ದೇವಪೂಜಾನಿಯಮಗಳು
ಪೂಜೆಯಾದ ಮೇಲೆ ಆರತಿಯ ಜ್ಯೋತಿಯನ್ನು ಕಣ್ಣಿಗಾನಿಸಿಕೊಳ್ಳುವುದಕ್ಕೆ 'ಆರತಿ ತೆಗೆದುಕೊಳ್ಳುವುದು' ಎಂದು ಹೆಸ���ು. ಆರತಿಯನ್ನು ಎರಡೂ ಕೈಯಿಂದ ತೆಗೆದುಕೊಳ್ಳಕೂಡದು. ಬಲಗೈಯಿಂದ ಆರತಿಯ ಬಿಸಿಯನ್ನು ತೆಗೆದುಕೊಂಡು ಕಣ್ಣಿಗಾನಿಸಿಕೊಂಡು ಕೈತೊಳೆದುಕೊಳ್ಳಬೇಕು.
#ಕರ್ಣ
ದೇವಪೂಜಾನಿಯಮಗಳು
ಆರತಿ ಮಾಡುವಾಗ ಬತ್ತಿಯು ಜಾರಿ ಕೆಳಗೆ ಬಿದ್ದರೆ, ಅಥವಾ ಆರಿ ಹೋದರೆ ಮತ್ತೆ ಉರಿಸಿ ಅದೇ ಬತ್ತಿಯನ್ನು ಉಪಯೋಗಿಸಕೂಡದು. ಬೇರೆ ಬತ್ತಿಯಿಂದ ಆರತಿ ಮಾಡಿ ಪೂಜಾಂತ್ಯದ ಕ್ಷಮಾಪನಕಾಲದಲ್ಲಿ ಜಿತಂತೇಸ್ತೋತ್ರವನ್ನು ಪಠಿಸಬೇಕು.
#ಕರ್ಣ