ಜನಸೇವೆಯಲ್ಲಿ 4399 ದಿನಗಳ ಐತಿಹಾಸಿಕ ದಾಖಲೆ ಮಾಡಿದ ಪ್ರಧಾನಸೇವಕ ❤
ಅತ್ಯಂತ ದೀರ್ಘಾವಧಿ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಮಂತ್ರಿಯಾಗಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು💐
ದೇವರು ನಿಮಗೆ ಆಯುರಾರೋಗ್ಯ ಕೊಟ್ಟು ಕಾಪಾಡಲಿ 🙏
#12YearsOfSeva#LongestServingElectedPMModi
ಅಣ್ಣಾಮಲೈ ಸರ್ ಅವರು ಸ್ವಂತ ಪಕ್ಷ ಕಟ್ಟುವ ನಿರ್ಧಾರ ಮಾಡಿದ್ದರೆ ಅವರ ಮುಂದಿನ ರಾಜಕೀಯ ಜೀವನದಲ್ಲಿ ಯಶಸ್ವಿ ಆಗಲಿ 💐🙏
ಕೆಲವೊಮ್ಮೆ ಕೆಲ ನಿರ್ಧಾರಗಳು ಅನಿವಾರ್ಯ ಯೋಗ್ಯತೆ ಇಲ್ಲದ ಯಾರ್ಯಾರಿಗೋ ಅವಕಾಶ ಸಿಗುವಾಗ ಇವರಂತಹ ನಿಷ್ಟವಂತ ನಿಷ್ಕಲ್ಮಶ ಅರ್ಹ ವ್ಯಕ್ತಿಗೆ ಅವಕಾಶ ಸಿಗಬೇಕು
ನೀವು ಯಾವಾಗಲೂ ನಮ್ಮ ಹೆಮ್ಮೆಯ ಸಿಂಗಂ ಸರ್ 😊
ರಾಜ್ಯ ನೋಡಿದ ಮುಖ್ಯಮಂತ್ರಿಗಳಲ್ಲಿ ಕುಮಾರಸ್ವಾಮಿ ಅವರೂ ಕೂಡ ಪ್ರಮುಖರೂ. ಅದಕ್ಕೆ ಕಾರಣ
1) ರೈತರ ಸಾಲ ಮನ್ನಾ
2) ಸಾರಾಯಿ ನಿಷೇಧ
3)ಲಾಟರಿ ನಿಷೇಧ
4) ಗ್ರಾಮ ವಾಸ್ತವ್ಯ
5) ಜನತಾ ದರ್ಶನ. ಜನರು ಸರಕಾರ ನಡೆಸಲು ಒಮ್ಮೆ ಸಂಪೂರ್ಣ ಬಹುಮತ ನೀಡಿದರೆ ಸಾಕು, ಬದಲಾವಣೆಯ ಪರ್ವವೇ ಶುರುವಾಗುತ್ತದೆ.
ಅನಂತಕುಮಾರ್ ಹೆಗಡೆಯವರು ಸಿದ್ದರಾಮಯ್ಯ ವಿರುದ್ಧ ಮಾತನಾಡುವಾಗ ಕಾಂಗ್ರೆಸ್ಸಿನವರಿಗೆ ಮಿರ್ಚಿ ಇಟ್ಟಂತೆ ಆಗುತ್ತಿತ್ತು. ಅವರ ಪಕ್ಷದ ನಾಯಕನ ಬಗ್ಗೆ ಕಟುವಾಗಿ ಮಾತನಾಡಿದ್ರೆ ಅವರಿಗೆ ಕೋಪಬರೋದು ಸ್ವಾಭಾವಿಕ. ಆದ್ರೆ ಇವರಾಡುವ ಮಾತುಗಳಿಂದ ಬಿಜೆಪಿಯಲ್ಲಿಯೇ ಇದ್ದ ಕೆಲವು ಅಡ್ಜಸ್ಟ್ಮೆಂಟ್ ಗಿರಾಕಿಗಳಿಗೆ ಇನ್ನೂ ಹೆಚ್ಚಿನ ನೋವಾಗುತ್ತಿತ್ತು.
ಮೋದಿಜಿ ಅವರನ್ನು 'ನರಹಂತಕ' ಎಂದು ಕರೆದಿದ್ದ ಸಿದ್ದರಾಮಯ್ಯರನ್ನು ಕೌಂಟರ್ ಮಾಡುವ ಧೈರ್ಯ ವಿರೋಧಪಕ್ಷದಲ್ಲಿ ವಿರಳವಾಗಿತ್ತು. ಆದ್ರೆ ಅನಂತಕುಮಾರ ಹೆಗಡೆ, ಈಶ್ವರಪ್ಪ, ಯತ್ನಾಳ್, ಪ್ರತಾಪ್ ಸಿಂಹ ರಂತಹ ಬೆರಳೆಣಿಕೆಯಷ್ಟು ನಾಯಕರು ಸಿದ್ದರಾಮಯ್ಯನವರ ತಪ್ಪುಗಳಬಗ್ಗೆ ಲೀಲಾಜಾಲವಾಗಿ ಟೀಕಿಸುತ್ತಿದ್ದರು.
ಆದರೆ ದುರ್ದೈವ ಏನೆಂದರೆ ಸಿದ್ದರಾಮಯ್ಯನವರ ವಿರುದ್ಧ ಮಾತನಾಡುವ ಹಿಂದುತ್ವದ ನಾಯಕರನ್ನು ಬಿಜೆಪಿ ವ್ಯವಸ್ಥಿತವಾಗಿ ಸೈಡ್ಲೈನ್ ಮಾಡುತ್ತಾ ಬಂದಿತು. ಇದರ ಪರಿಣಾಮ ಸಿದ್ದರಾಮಯ್ಯ ನಡೆದಿದ್ದೇ ದಾರಿ ಎನ್ನುವ ಪರಿಸ್ಥಿತಿ ನಿರ್ಮಾಣವಾಯಿತು. ವಿರೋಧಪಕ್ಷದವರನ್ನು ನಂಬಿಕೊಂಡ್ರೆ ಕೆಲಸವಾಗಲ್ಲ ಎನ್ನುವುದನ್ನು ಅರಿತ ಡಿಕೆ ಸಾಹೇಬ್ರು ಖುದ್ದಾಗಿ ಕಾರ್ಯೋನ್ಮುಖರಾಗಿ ಯಶಸ್ವಿಯಾದರು.
ಮುಡಾ ಹಗರಣ, ವಾಲ್ಮೀಕಿ ಹಗರಣ, ಅಭಿವೃದ್ಧಿ ಶೂನ್ಯತೆ ಹೀಗೆ ಸಿದ್ದರಾಮಯ್ಯನವರ ರಾಜೀನಾಮೆ ಪಡೆಯಲು ಸಾಕಷ್ಟು ಅಸ್ತ್ರಗಳು ಸಿಕ್ಕಿದ್ದರೂ ನಿಷ್ಕ್ರಿಯ ಹಾಗೂ ನಾಮಮಾತ್ರ ವಿರೋಧಪಕ್ಷದ ನಾಯಕರು ಸಿದ್ದಣ್ಣನ ಕುರ್ಚಿಯನ್ನು ಕಿತ್ತುಕೊಳ್ಳುವುದು ಪಕ್ಕಕ್ಕಿರಲಿ, ಅವರ ಒಂದು ಕೂದಲನ್ನೂ ಅಲುಗಾಡಿಸಲು ಸಾಧ್ಯವಾಗಲಿಲ್ಲ. ಹೆಗಡೆ, ಯತ್ನಾಳ್, ಈಶ್ವರಪ್ಪರಂತಹ ಅಸಲಿ ಹೋರಾಟಗಾರರನ್ನು ಮೂಲೆಗುಂಪುಮಾಡಿದ ಅಡ್ಜಸ್ಟ್ಮೆಂಟ್ ಗಿರಾಕಿಗಳಿಗೆ ಸಿದ್ದಣ್ಣನ ವಿರುದ್ಧ ಗುಡುಗುವ ಧೈರ್ಯ ಕಿಂಚಿತ್ತೂ ಇರಲಿಲ್ಲ.
ಸಿದ್ದರಾಮಯ್ಯನವರ ವಿಕೆಟ್ ಉರುಳಿಸಲು ಸಾಕಷ್ಟು ಅವಕಾಶಗಳು ಸಿಕ್ಕಿದ್ದರೂ ವಿಜಯೇಂದ್ರ-ಅಶೋಕ್ ತಂಡದಿಂದ ಸಾಧ್ಯವಾಗಲಿಲ್ಲ. ಕೊನೆಗೂ ಅವರೇ ಖುದ್ದಾಗಿ ಹಿಟ್ ವಿಕೆಟ್ ಮಾಡಿಕೊಂಡು ಹುದ್ದರಿ ಒಪ್ಪಿಸಿದರು. ಅವರ ರಾಜೀನಾಮೆಯಿಂದ 'ಲಡ್ಡು ಬಾಯಿಗೆ ಬಿತ್ತು' ಎನ್ನುತ್ತಾ ಕೆಲವರು ಮುಂಬರುವ ವಿಧಾನಸಭಾ ಚುನಾವಣೆಯನ್ನು ಸುಲಭವಾಗಿ ಗೆಲ್ಲುವ ಕನಸುಕಾಣುತ್ತಿದ್ದಾರೆ. ಆದರೆ ಇಂತಹ ಕನಸು ನನಸಾಗುವುದು ಇನ್ನಷ್ಟು ದುಸ್ಥರವಾಗಿದೆ.
ಸಿದ್ದರಾಮಯ್ಯನಾದರೋ ಒಳ್ಳೆಯ ಆಡಳಿತಗಾರನಷ್ಟೆ. ಆದರೆ ಡಿಕೆಶಿ ಅಪ್ರತಿಮ ತಂತ್ರಗಾರ. ವಿರೋಧಪಕ್ಷದ ತಂತ್ರಗಳನ್ನು ಮೀರಿಸುವ ಪ್ರತಿತಂತ್ರ ರೂಪಿಸುವ ಕಲೆ ಅವರಿಗೆ ಚೆನ್ನಾಗಿ ಕರಗತವಾಗಿದೆ. ಇಂದಿನ ವಿರೋಧಪಕ್ಷದ ನಾಮಕಾವಸ್ಥೆಯ ಹೋರಾಟಗಳನ್ನು ನ್ಯೂಟ್ರಲೈಸ್ ಮಾಡುವುದು ಅವರಿಗೆ ಏನೂಅಲ್ಲ.
"ಸಿದ್ದರಾಮಯ್ಯ ಹಿಂದೂವಿರೋಧಿ, ಡಿಕೆಶಿಯ ಸಾಫ್ಟ್ ಹಿಂದುತ್ವ ರಾಜಕೀಯದ ನಾಟಕ" ಎಂದು ಆರೋಪಿಸುವ ಇಂದಿನ ರಾಜ್ಯ ಬಿಜೆಪಿ ನಾಯಕರು ತಮಗೆ ಅಧಿಕಾರ ಸಿಕ್ಕಾಗ ಏನೇನುಮಾಡಿದ್ದಾರೆ? ಹಿಂದೂಗಳು, ಹಿಂದೂಪರ ಕಾರ್ಯಕರ್ತರು ಹೆಮ್ಮೆಯಿಂದ ಎದೆತಟ್ಟಿ ಹೇಳಿಕೊಳ್ಳುವ ಒಂದೇಒಂದು ಕೆಲಸವನ್ನು ಇವರು ಮಾಡಿದ್ದಿದ್ರೆ ಹೇಳಿಬಿಡಿ ನೋಡೋಣ.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಬಿಟ್ಟಿಭಾಗ್ಯಗಳ ಕಾರಣಗಳಿಂದ ಅಧಿಕಾರಕ್ಕೆ ಬಂದಿದೆ ಎನ್ನುವುದು ಕೆಲವರ ಅಭಿಪ್ರಾಯ. ಆದ್ರೆ ನನ್ನ ಪ್ರಕಾರ ಕಾಂಗ್ರೆಸ್ಸಿನ ಗೆಲುವಿನಲ್ಲಿ ಬಿಟ್ಟಿಭಾಗ್ಯಗಳ ಪಾಲು ಕೇವಲ 10% ಇರಬಹುದು. ಮಿಕ್ಕ 90% ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಮತದಾರರು ಹೊಂದಿದ್ದ ಬೇಸರ ಹಾಗೂ ಕೋಪ ಕಾಂಗ್ರೆಸ್ಸಿಗೆ ವರವಾಗಿ ಪರಿಣಮಿಸಿತ್ತು.
ರಾಜ್ಯ ಬಿಜೆಪಿಯ ಮುಂದಾಳತ್ವವನ್ನು ಅನಂತಕುಮಾರ ಹೆಗಡೆಯವರಂತಹ ಸಮರ್ಥ ಹಾಗೂ ಕಳಂಕರಹಿತ ಕಟ್ಟರ್ ಹಿಂದುತ್ವವಾದಿ ನಾಯಕರಿಗೆ ನೀಡಿದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಬಹುದು. ಇಲ್ಲವಾದರೆ 2028ರಲ್ಲಿ ಡಿಕೆಶಿ ಅವರನ್ನು ಎದುರಿಸುವುದು ಬಿಜೆಪಿಗೆ ಕಠಿಣ ಸವಾಲಾಗುವುದರಲ್ಲಿ ಸಂಶಯವಿಲ್ಲ.
ಮನೆ ಕಟ್ಟಿಸುವುದು ಪ್ರತಿಯೊಬ್ಬರ ಜೀವನದ ದೊಡ್ಡ ಕನಸು ಮತ್ತು ಸಾಧನೆ. ಇದು ಕೇವಲ ಇಟ್ಟಿಗೆ ಮತ್ತು ಸಿಮೆಂಟಿನ ಕಟ್ಟಡವಲ್ಲ, ಬದಲಿಗೆ ನೆಮ್ಮದಿ, ಭದ್ರತೆ ಮತ್ತು ಪ್ರೀತಿಯ ಸಂಕೇತವಾಗಿರುತ್ತದೆ.
#Mane_Kathe