80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಇಂದು ನನ್ನ ಅಧಿಕೃತ ನಿವಾಸದಲ್ಲಿ ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯೋತ್ಸವದ ಶುಭ ಹಾರೈಸಿದೆ.
ದಶಕಗಳ ಹಿಂದೆ ಕೋಟ್ಯಂತರ ಭಾರತೀಯರ ಕನಸಾಗಿದ್ದ, ಲಕ್ಷಾಂತರ ದೇಶಪ್ರೇಮಿಗಳ ತ್ಯಾಗ - ಬಲಿದಾನದ ಫಲವಾಗಿ ದೊರೆತಿರುವ ಈ ಸ್ವಾತಂತ್ರ್ಯವನ್ನು ನಮ್ಮ ಮತ್ತು ಸಮಾಜದ ಒಳಿತಿಗಾಗಿ ಬಳಸೋಣ. ಜಾತಿ, ಧರ್ಮ, ಲಿಂಗ, ಮತ ಭೇದವಿಲ್ಲದೆ ಸರ್ವರಿಗೂ ಸಮಾನತೆ ಮತ್ತು ಘನತೆಯ ಬದುಕು ದೊರೆತಾಗ ನಮಗೆ ಸಿಕ್ಕಿರುವ ಈ ಸ್ವಾತಂತ್ರ್ಯವು ಅರ್ಥಪೂರ್ಣವಾಗಲಿದೆ. ಅಂತಹ ಸಮಾಜ ಕಟ್ಟಲು ಜೊತೆಯಾಗಿ ಶ್ರಮಿಸೋಣ.